ಸಿನಿಮಾರಂಗಕ್ಕೆ ಎಂಟ್ರಿ ಕೊಟ್ಟು ಅದೃಷ್ಟ ಪರೀಕ್ಷೆಗೆ ಇಳಿಯುವುದೆಂದರೆ ಬಹುದೊಡ್ಡದಾದ ಸಾಹಸಕ್ಕೆ ಕೈ ಹಾಕಿದ ಹಾಗೆ ಎನ್ನಬಹುದು. ಸ್ಟಾರ್ ನಟರಾಗಿ ಬೆಳೆಯಬೇಕು ಎಂದು ಬಂದವರು ಎಲ್ಲರೂ ಕೂಡ ಈ ಲೋಕದಲ್ಲಿ ಯಶಸ್ಸು ಕಾಣುವುದಿಲ್ಲ. ಅವಕಾಶದ ಜೊತೆಗೂ ಅದೃಷ್ಟ ಕೈ ಹಿಡಿದರೆ ನೇಮ್ ಫೇಮ್ ಎರಡು ಕೂಡ ಬರುತ್ತದೆ. ಆದರೆ ಒಬ್ಬ ಸೆಲೆಬ್ರಿಟಿಯಾದ ಮೇಲೆ ಗಾಸಿಫ್ ಗಳ ಬಾಯಿಗೂ ತುತ್ತಾಗುವುದು ಸಹಜ.
ಈ ರಂಗದಲ್ಲೂ ಏಳು ಬೀಳುಗಳಿವೆ, ಏಳು ಬೀಳುಗಳನ್ನು ದಾಟಿ ಬದುಕು ಕಟ್ಟಿಕೊಳ್ಳಲು ಸವಾಲು ನಟ ನಟಿಯರಿಗೆ ಇದೆ. ಇನ್ನು, ಕನ್ನಡ ಸಿನಿಮಾರಂಗದತ್ತ ಕಣ್ಣು ಹಾಯಿಸಿದರೆ ಸಾಕಷ್ಟು ನಟ ನಟಿಯರು ನಟನೆಯ ಮೂಲಕ ಅಭಿಮಾನಿಗಳನ್ನು ಸಂಪಾದನೆ ಮಾಡಿಕೊಂಡಿದ್ದಾರೆ. ಆದರೆ ಹೆಚ್ಚಿನ ನಟ ನಟಿಯರು ಗಾಸಿಫ್ ಗಳ ಬಾಯಿಗೆ ತುತ್ತಾಗಿದ್ದಾರೆ.
ಅದರ ಜೊತೆಗೆ ತಾವು ಶೇರ್ ಮಾಡಿಕೊಳ್ಳುವ ಫೋಟೋ ಹಾಗೂ ವಿಡಿಯೋಗಳಿಂದ ಟ್ರೋಲ್ ಕೂಡ ಆಗಿದ್ದಾರೆ. ನಟಿ ಮೌನಿ ರಾಯ್ ಸಿನಿಮಾಗಳ ಸಂಖ್ಯೆ ಕಡಿಮೆಯಾದರೂ ಸದಾ ಸುದ್ದಿಯಲ್ಲಿರುತ್ತಾರೆ. ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಆಕ್ಟಿವ್ ಆಗಿರುವ ಬೆಡಗಿ ತಮ್ಮ ಫೋಟೋ ಹಾಗೂ ವಿಡಿಯೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳುತ್ತಾರೆ. ಆದರೆ ಇದೀಗ ನಟಿ ಮೌನಿ ರಾಯ್ ಹಂಚಿಕೊಂಡಿರುವ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ..
ಅಷ್ಟೇ ಅಲ್ಲದೇ ನೆಟ್ಟಿಗರು ನಾನಾ ರೀತಿಯಲ್ಲಿ ಕಾಮೆಂಟ್ ಮಾಡುತ್ತಿದ್ದಾರೆ. ಮೌನಿ ತನ್ನ ಪತಿ ಸೂರಜ್ ನಂಬಿಯಾರ್ ಮತ್ತು ಕೆಲವು ಸ್ನೇಹಿತರೊಂದಿಗೆ ಹೊಸ ವರ್ಷವನ್ನು ಆಚರಿಸಲು ಅಬುಧಾಬಿಯನ್ನು ಆಯ್ಕೆ ಮಾಡಿಕೊಂಡಿದ್ದರು. ಹೀಗಾಗಿ ಮೌನಿ ರಾಯ್ ಮತ್ತು ಅವರ ಪತಿ ಸೂರಜ್ ನಂಬಿಯಾರ್ ಅಬುಧಾಬಿಯಲ್ಲಿ ಹೊಸ ವರ್ಷವನ್ನು ಆಚರಿಸಿದ್ದಾರೆ.
ಹೊಸ ವರ್ಷದ ಆಚರಣೆಯ ಜೊತೆಗೆ, ದಂಪತಿ ರಜಾದಿನಗಳನ್ನು ಸಹ ಸಖತ್ ಎಂಜಾಯ್ ಮಾಡುತ್ತಿದ್ದಾರೆ. ಮೌನಿ ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಅನೇಕ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಈ ಫೋಟೋಗಳಲ್ಲಿ, ಮೌನಿ ರಾಯ್ ಸಖತ್ ಹಾಟ್ ಮತ್ತು ಬೋಲ್ಡ್ ಆವತಾರಗಳಲ್ಲಿ ಕಾಣಿಸಿಕೊಂಡಿದ್ದಾರೆ. ನಟಿ ಮೌನಿ ರಾಯ್ ಅವರ ಸಿಜ್ಲಿಂಗ್ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ.
ಅದೇ ಸಮಯದಲ್ಲಿ, ಅವಳು ತನ್ನ ಪತಿಯೊಂದಿಗೆ ರೊಮ್ಯಾಂಟಿಕ್ ಪೋಸ್ ಸಹ ನೀಡಿದ್ದಾರೆ. ಸ್ನೇಹಿತರ ಜೊತೆಗಿನ ಫೋಟೋಗಳನ್ನು ಶೇರ್ ಮಾಡಿಕೊಂಡಿದ್ದಾರೆ. ಬ್ಲ್ಯಾಕ್ ಬಿಕಿನಿ ಧರಿಸಿ ನೀರಿನಲ್ಲಿ ನಿಂತಿರುವ ಮೌನಿ ರಾಯ್ ಫೋಟೋ ಸಖತ್ ವೈರಲ್ ಆಗುತ್ತಿದೆ. ಕೆಜಿಎಫ್ ಸುಂದರಿಯ ಫೋಟೋಗಳಿಗೆ ಅಭಿಮಾನಿಗಳು ತರಹೇವಾರಿ ಕಾಮೆಂಟ್ ಮಾಡುತ್ತಿದ್ದಾರೆ. ಪ್ರಿಟಿ, ಬ್ಯೂಟಿ, ಹಾಟ್ ಎಂದೆಲ್ಲಾ ಕಾಮೆಂಟ್ ಮಾಡುತ್ತಿದ್ದಾರೆ.
ಇಲ್ಲೊಬ್ಬ ನೆಟ್ಟಿಗರು ‘ಅನಿಮೇಟೆಡ್ ಪಬ್ಜಿ ಗರ್ಲ್’ ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬನು ‘ದಯವಿಟ್ಟು ಯಾರಾದ್ರೂ ಆಕೆಗೆ ಏನಾದರೂ ಆಹಾರವನ್ನು ತಿನ್ನಿಸಿ’ ಎಂದಿದ್ದಾನೆ. ಮೌನಿ ರಾಯ್ ಅವರ ಈ ಹಾಟ್ ಫೋಟೋಗೆ ಸಿಕ್ಕಾಪಟ್ಟೆ ಲೈಕ್ಸ್ ಕೂಡ ಹರಿದುಬಂದಿದೆ. ನಟಿ ಮೌನಿ ರಾಯ್ ಅವರ ಹಿನ್ನಲೆ ಗಮನಿಸುವುದಾದರೆ, ಟಿವಿ ಧಾರಾವಾಹಿಗಳಲ್ಲಿ ಮತ್ತು ಬಾಲಿವುಡ್ ಚಲನಚಿತ್ರಗಳಲ್ಲಿ ಕೆಲಸ ಮಾಡಿದ ಅನುಭವ ಇವರಿಗಿದೆ.
ಕನ್ನಡದ ಸೂಪರ್ ಹಿಟ್ ಕೆಜಿಎಫ್‌ನಲ್ಲಿ ಸೊಂಟ ಬಳುಕಿಸಿ ಸಿಕ್ಕಾಪಟ್ಟೆ ಫೇಮಸ್ ಆಗಿದ್ದಾರೆ. ಸಾಸ್ ಭಿ ಕಭಿ ಬಹು ಥಿ ಎಂಬ ಟಿವಿ ಶೋ ಮೂಲಕ ನಟನಾ ವೃತ್ತಿ ಪ್ರಾರಂಭಿಸಿದರು. ಮೌನಿ ನಟಿಸಿದ್ದ ಸಿನಿಮಾಗಳ ಸಂಖ್ಯೆ ಕಡಿಮೆಯಾದರೂ ಕೂಡ ಸಿಕ್ಕಾಪಟ್ಟೆ ಫೇಮಸ್ ಆಗಿದ್ದಾರೆ ಎನ್ನಬಹುದು. ಕೆಜಿಎಫ್-1 ಸಿನಿಮಾದ ಗಲಿ ಗಲಿ..ಹಾಡಿಗೆ ರಾಕಿಂಗ್ ಸ್ಟಾರ್ ಯಶ್ ಜೊತೆ ಸ್ಟೆಪ್ ಹಾಕಿದ ನಂತರ ಇವರ ಬೇಡಿಕೆ ಕೂಡ ಹೆಚ್ಚಾಯಿತು.
ನ್ಯೂ ಇಯರ್ ಪಾರ್ಟಿಯಲ್ಲಿ ನಟಿ ತಮನ್ನಾ ತುಟಿಗೆ ಕಿಸ್ ಕೊಟ್ಟು ಸಿಹಿ ಜೇನು ಸವಿದ ಖ್ಯಾತ ನಟ! ವಿಡಿಯೋ ಸಿಕ್ಕಾಪಟ್ಟೆ ಸೌಂಡ್!!
ಬಳಿಕ ಕೆಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. ಇನ್ನು, ಮೌನಿ ರಾಯ್ 2022 ರಲ್ಲಿ, ಬ್ರಹ್ಮಾಸ್ತ್ರ ಚಿತ್ರದಲ್ಲಿ ಕಾಣಿಸಿಕೊಂಡರು. ರಣಬೀರ್ ಕಪೂರ್-ಆಲಿಯಾ ಭಟ್ ಚಿತ್ರದಲ್ಲಿ ಮೌನಿ ಅವರದ್ದು ನೆಗೆಟಿವ್ ಪಾತ್ರದಲ್ಲಿ ಮಿಂಚಿದರು. ಬ್ರಹ್ಮಾಸ್ತ್ರ ಸಿನಿಮಾದ ಸೂಪರ್ ಸಕ್ಸಸ್ ಬಳಿಕ ಮೌನಿ ರಾಯ್ ಪ್ರವಾಸದಲ್ಲಿ ಬ್ಯುಸಿಯಾಗಿದ್ದಾರೆ ನಟಿ ಮೌನಿ ರಾಯ್ ಅವರು ಮುಂಬರುವ ದಿನಗಳಲ್ಲಿ ಯಾವ ಸಿನಿಮಾಗಳಲ್ಲಿ ಕಾಣಿಸಿಕೊಳ್ಳುತ್ತಾರೆ ಎನ್ನುವುದನ್ನು ಕಾದು ನೋಡಬೇಕು.