ಹೀರೋ ರೀತಿಯಲ್ಲಿ ಹಾರಿ ಬೈಕ್ ಸವಾರನ ಜೀವ ಉಳಿಸಿದ ಯುವಕ! ವಿಡಿಯೋ ನೋಡಿದ್ರೆ ಮೈ ಜುಮ್ ಅನ್ನುತ್ತೆ ನೋಡಿ!!

ಇದೊಂದು ಪ್ರೇರಕ ಘಟನೆ. ಕೆಲವೊಮ್ಮೆ ಜಗತ್ತು ಸರಿ ಇಲ್ಲಾ ಎಂದ್ ಕೈ ಚೆಲ್ಲಿ ಕುಳಿತುಕೊಳ್ಳುತ್ತೇವಲ್ಲ, ಅಂತಹ ಅಸಮಯದಲ್ಲಿ ಇಂತಹ ಕೆಲವು ಘಟನೆಗಳು ನಮ್ಮಲ್ಲಿ ಪಾಸಿಟಿವ್ ಎನರ್ಜಿನನ್ನು ತುಂಬುತ್ತವೆ. ಮಾನವೀಯತೆ ಇದೆ ಎಂದು ಅನ್ನಿಸುವುದೇ ಇಲ್ಲ ಅಲ್ವೇ. ಆದರೂ ಇನ್ನು ಮಾನವೀಯತೆ, ಬೇರೆಯವರನ್ನು ಉಳಿಸಬೇಕು ಎನ್ನುವಂತಹ ಮನೋಭಾವ ಕೆಲವರ ಎದೆಯಲ್ಲಿ ಇರುತ್ತೆ ಎನ್ನುವುದಕ್ಕೆ ಕೆಲವು ಘಟನೆಗಳು ಸಾಕ್ಷಿಯಾಗುತ್ತವೆ. ಇಂತಹ ಒಂದು ಘಟನೆ ನಡೆದಿದ್ದು ಸದ್ಯ ಸೋಶಿಯಲ್ ಮೀಡಿಯಾ (Social Media) ದಲ್ಲಿ ವಿಡಿಯೋ ವೈರಲ್ (Video Viral)ಆಗುತ್ತಿದೆ.

ಒಬ್ಬ ವ್ಯಕ್ತಿ ಕಾರ್ ನಲ್ಲಿ ಹೋಗುತ್ತಿರುತ್ತಾನೆ. ಆಗ ಆತನಿಗೆ ಸ್ವಲ್ಪ ದೂರದಿಂದ ಎರಡು ಚಕ್ರದ ಗಡಿ ಉರುಳಿ ಬರುತ್ತಿರುವುದು ಕಾಣಿಸುತ್ತದೆ. ತಕ್ಷಣ ಕಾರನ್ನು ರಸ್ತೆ ಬದಿಯಲ್ಲಿ ನಿಲ್ಲಿಸುತ್ತಾನೆ. ಅಲ್ಲಿಯೇ ಇದ್ದವರಿಗೂ ಹಾಗೂ ರಸ್ತೆಯಲ್ಲಿ ವಾಹನದಲ್ಲಿ ಒಡದುವವವರು ಕೂಡ ಇದನ್ನು ಗಮನಿಸುವುದಿಲ್ಲ. ಆದರೆ ಆತ ತಕ್ಷಣ ನೋಡುತ್ತಾನೆ. ಒಂದು ವೇಳೆ ಆತ ಅದನ್ನು ಗಮನಿಸಿಯೂ ತನ್ನ ಪಾಡಿಗೆ ತಾನು ಹೋಗಿದ್ದರೆ ಎನಾಗುತ್ತಿತ್ತು ಗೊತ್ತೇ?

ಹೌದು, ಆ ಯುವಕ ಕಾರನ್ನು ನಿಲ್ಲಿಸಿ, ತಕ್ಷಣವೇ ಆ ಚಕ್ರಗಳು ಉರುಳಿ ರಸ್ತೆಯ ಕಡೆ ಬರುವುದನ್ನು ತಡೆಯಲು ತನ್ನ ಜೀವವನ್ನೇ ಪಣಕ್ಕಿಟ್ಟು ರಸ್ತೆಯಲ್ಲಿ ಓಡಾಡುವ ಜನರನ್ನು ಕೂಡ ಕಾಪಾಡುತ್ತಾನೆ. ಆತ ಬಾರದೆ ಇದ್ದಿದ್ದರೆ ರಸ್ತೆಯಲ್ಲಿ ವಾಹನದಲ್ಲಿ ಸಂಚರಿಸುವವರ ಗತಿ ಏನಾಗುತ್ತಿತ್ತು ಊಹಿಸಿ. ಯಾಕೆಂದರೆ ಆ ಚಕ್ರಗಳು ಬಹಳ ರಭಸವಾಗಿ ರಸ್ತೆ ಕಡೆಗೆ ಬಂದವು.

ಅದೇ ಸಮಯಕ್ಕೆ ಒಂದು ಬೈಕ್ ಕೂಡ ರಸ್ತೆಯ ಮೇಲೆ ಹೋಗುತ್ತಿತ್ತು. ಇನ್ನೊಂದು ಕಡೆಯಿಂದಲೂ ವಾಹನ ಬರುತ್ತಿತ್ತು. ಸೂಪರ್ ಮ್ಯಾನ್ ತರ ಬಂದ ಆ ಯುವಕ ಚಕ್ರಗಳು ಬರುತ್ತಿರುವುದನ್ನು ಬೈಕ್ ಸವಾರನಿಗೆ ಎಚ್ಚರಿಸಿ, ಚಕ್ರಗಳನ್ನು ಕೂಡ ಆಚೆ ಹೋಗುವಂತೆ ಮಾಡುತ್ತಾನೆ. ತಾನೂ ಹೋಗೆ ಬಚವಾಗುತ್ತಾನೆ.

ನಿಜಕ್ಕೂ ಆ ವ್ಯಕ್ತಿಯ ಸಮಯ ಪ್ರಜ್ಞೆ ಹಾಗೂ ಬುದ್ಧಿವಂತಿಕೆ ಜೊತೆಗೆ ಸಹಾಯ ಮಾಡುವ ಮನೋಭಾವ ಎಲ್ಲವನ್ನೂ ಮೆಚ್ಚಲೇ ಬೇಕು. ಸದ್ಯ ಆ ಯುವಕನ ಸಾಹಸದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಈ ವಿಡಿಯಿವನ್ನು Rajesh.meena ಎನ್ನುವ ಇನ್ಸ್ಟಾ ಖಾತೆಯಲ್ಲಿ ಶೇರ್ ಮಾಡಲಾಗಿದ್ದು ಸಾವಿರಾರು ಲೈಕ್ಸ್ ಹಾಘೂ ಶೇರ್ ನ್ನು ಪಡೆದುಕೊಂಡಿದೆ.

 

Leave a Reply

Your email address will not be published. Required fields are marked *