4 ವರ್ಷದ ಮಗನನ್ನೇ ಕೊಂ ದು ಬ್ಯಾಗ್ ನಲ್ಲಿ ತುಂಬಿದ ಬೆಂಗಳೂರು ಸಿಇಒ. ತನಿಖೆಯಿಂದ ಬಯಲಿಗೆ ಬಂತು ಈ ಹೆಂಗಸಿನ ಅಸಲಿ ಮುಖ..

ಜಗತ್ತಿನಲ್ಲಿ ಕೆಟ್ಟ ಮಕ್ಕಳು ಇರುತ್ತಾರೆ, ಆದರೆ ಕೆಟ್ಟ ತಾಯಿ ಇರಲು ಸಾಧ್ಯವಿಲ್ಲ ಎನ್ನುವ ಮಾತಿದೆ. ಆದರೆ ಈ ಮಾತನ್ನು ಸುಳ್ಳು ಮಾಡುವಂತಹ ಘಟನೆಗಳು ನಡೆಯುತ್ತಿವೆ. ಹೌದು ತಾಯಿಯೇ ತಾನು ಒಂಬತ್ತು ಹೊತ್ತು ಬೆಳೆಸಿದ ಮಕ್ಕಳ ಕಥೆ ಮುಗಿಸುವುದು ಎಂದರೆ ಮನುಷ್ಯನ ಮನಸ್ಥಿತಿಗಳು ಎಷ್ಟು ಬದಲಾಗುತ್ತಿವೆ ಎನ್ನುವುದನ್ನು ಸಾರಿ ಸಾರಿ ಹೇಳುತ್ತಿವೆ. ಹೌದು, ನಾಲ್ಕು ವರ್ಷದ ಮಗನನ್ನು ಕೊಂ-ದು, ಮಗುವಿನ ಮೃ-ತದೇಹವನ್ನು ಬ್ಯಾಗ್ ನಲ್ಲಿ ಸಾಗಿಸುತ್ತಿದ್ದ 39 ವರ್ಷದ ಸ್ಟಾರ್ಟ್ ಅಪ್ ಸಂಸ್ಥಾಪಕಿ ಸಿಕ್ಕಿಬಿದ್ದ ಘಟನೆಯು ಚಿತ್ರದುರ್ಗ (Chitradurga) ದಲ್ಲಿ ನಡೆದಿದೆ.

ಆರ್ಟಿಫಿಶಲ್ ಇಂಟಲಿಜೆನ್ಸ್ ಸ್ಟಾರ್ಟ್ ಅಪ್ ಮೈಂಡ್ ಫುಲ್ ಅಲ್ ಲ್ಯಾಬ್ಸ್ ಸಂಸ್ಥಾಪಕಿ ಸುಚಾನಾಳೇ ಈ ಖ-ತರ್ನಾಕ್ ಲೇಡಿ. ಗೋವಾದ ಕ್ಯಾಂಡೊಲಿಮ್ ನ ಅಪಾರ್ಟ್ ಮೆಂಟ್ ನಲ್ಲಿ ವಾಸವಿದ್ದ ಸುಚನಾ (Suchana) ಹೆತ್ತ ಮಗನನ್ನು ಕೊಂ-ದು ಬ್ಯಾಗ್ ನಲ್ಲಿ ತುಂಬಿ ಶವ ಸಾಗಿಸುತ್ತಿದ್ದ ವೇಳೆಯಲ್ಲಿ ಚಿತ್ರದುರ್ಗದಲ್ಲಿ ಸಿಕ್ಕಿ ಬಿದ್ದಿದ್ದಾಳೆ. ಈಕೆಯು ಸೋಲ್ ಬನಿಯಾನ್ ಗ್ರ್ಯಾಂಡ್ ಎಂಬ ಹೋಟೆಲ್ ನಲ್ಲಿ ವಾಸವಾಗಿದ್ದಳು. ಆದರೆ ಹೋಟೆಲ್ ಸಿಬ್ಬಂದಿಗೆ ತಾನು ಬೆಂಗಳೂರಿ (Banglore) ಗೆ ಹೋಗುತ್ತಿದ್ದು, ಟ್ಯಾಕ್ಸಿ ಬುಕ್ ಮಾಡುವಂತೆ ಹೇಳಿದ್ದಾಳೆ.

ಹೋಟೆಲ್ ಸಿಬ್ಬಂದಿ ವಿಮಾನದಲ್ಲಿ ಟಿಕೆಟ್ ಬುಕ್ ಮಾಡುವುದಾಗಿ ಹೇಳಿದ್ದು, ಆದರೆ ಆಕೆ ಮಾತ್ರ ವಿಮಾನ ಟಿಕೆಟ್ ಬೇಡ ಎಂದು ಹೇಳಿದ್ದಳು. ಕೊನೆಗೆ ಕಾರಿನಲ್ಲಿಯೇ ಬೆಂಗಳೂರಿಗೆ ತೆರಳಿದ್ದಳು. ಈಕೆಯ ಈ ರೀತಿಯ ನಡೆಯು ಹೋಟೆಲ್ ಸಿಬ್ಬಂದಿಗೆ ಅ-ನುಮಾನವನ್ನು ಉಂಟು ಮಾಡಿತ್ತು. ಆದರೆ ಈಕೆಯ ಜೊತೆಗೆ ಮಗ ಇರುವುದನ್ನು ನೋಡಿದ ಹೋಟೆಲ್ ಸಿಬ್ಬಂದಿ ಈ ಬಗ್ಗೆ ಹೋಟೆಲ್ ಮ್ಯಾನೇಜ್ ಮೆಂಟ್ ಗೆ ಮಾಹಿತಿಯನ್ನು ನೀಡಿದ್ದನು.

ಆದರೆ, ಕಾರಿನಲ್ಲಿ ಬೆಂಗಳೂರಿಗೆ ಹೊರಟ ಬಳಿಕ ಕಾರಿನಲ್ಲಿ ರ-ಕ್ತದ ಕಲೆಗಳು ಕಾಣಿಸಿದ್ದು, ಕಾರು ಚಾಲಕ ಪೊಲೀಸರಿಗೆ ಮಾಹಿತಿಯನ್ನು ನೀಡಿದ್ದನು. ಆ ಕೂಡಲೇ ಕಾರು ಚಾಲಕನ ಸಂಪೂರ್ಣ ಮಾಹಿತಿಯನ್ನು ಕಲೆ ಹಾಕಿ, ಆ ಬಳಿಕ ಪೊಲೀಸರು ಸುಚನಾಳನ್ನು ಸಂಪರ್ಕ ಮಾಡಿದ್ದಾರೆ. ಆದರೆ ಪೊಲೀಸರ ಬಳಿ ಮಗ ಸ್ನೇಹಿತರ ಮನೆಗೆ ಹೋಗಿದ್ದು, ಅವರ ಮನೆ ವಿಳಾಸ ಕೊಟ್ಟು, ಇಲ್ಲಿ ವಿಚಾರಿಸಿ ಎಂದು ಹೇಳಿದ್ದಾರೆ.ಆದರೆ ಲೇ-ಡಿ ಕೊಟ್ಟ ವಿಳಾಸ ಫೇಕ್ ಆಗಿದ್ದು, ಆ ಕೂಡಲೇ ಪೊಲೀಸರು ಕಾರು ಚಾಲಕನನ್ನು ಸಂಪರ್ಕ ಮಾಡಿದ್ದಾರೆ.

ಕೊನೆಗೆ ಕಾರು ಚಾಲಕನ ಬಳಿ ಪೊಲೀಸರು ಕೊಂಕಣಿ (Konkani) ಭಾಷೆಯಲ್ಲಿ ಮಾತನಾಡಿ, ಚಿತ್ರದುರ್ಗ ಸಮೀಪದ ಪೊಲೀಸ್ ಠಾಣೆಗೆ ಕಾರು ತೆಗೆದುಕೊಂಡು ಹೋಗುವಂತೆ ಹೇಳಿದ್ದಾರೆ. ಪೊಲೀಸರು ಹೇಳಿದಂತೆ ಚಾಲಕ ಮಾಡಿದ್ದು, ಮಹಿಳೆಯು ಚಿತ್ರದುರ್ಗ ಪೊಲೀಸರ ಕೈಯಲ್ಲಿ ಸಿಕ್ಕಿ ಬಿದ್ದಿದ್ದಾಳೆ. ಆಕೆಯನ್ನು ವ-ಶಕ್ಕೆ ಪಡೆದುಕೊಂಡು ಬ್ಯಾಗ್ ತಪಾಸಣೆ ಮಾಡಿದಾಗ ಮಗುವಿನ ಮೃ-ತದೇಹವು ಬ್ಯಾಗ್ ನಲ್ಲಿ ಪತ್ತೆಯಾಗಿದ್ದು ಪೊಲೀಸರು ಶಾ-ಕ್ ಆಗಿದ್ದಾರೆ.

ನಾಲ್ಕು ವರ್ಷದ ಮುದ್ದಾದ ಮಗು ಚಿನ್ಮಯ್ (Chinmay)ನನ್ನು ಹ-ತ್ಯೆ ಮಾಡಿರುವ ಪ್ರಕರಣದಲ್ಲಿ ಮಗುವಿನ ಮ-ರಣೋತ್ತರ ಪರೀಕ್ಷೆ ಚಿತ್ರದುರ್ಗದ ಹಿರಿಯೂರಿನಲ್ಲಿ ನಡೆದಿದೆ. ಮಗುವಿನ ಮ-ರಣೋತ್ತರ ಪರೀಕ್ಷೆ ಬಳಿಕ ಕುಮಾರ ನಾಯ್ಕ್ (Kumar Naik) ಮಾತನಾಡಿದ್ದು, ’36 ಗಂಟೆಗಳ ಹಿಂದೆಯೇ ಮಗುವಿನ ಹ-ತ್ಯೆಯಾಗಿದೆ. ಕೈಯಿಂದ ಕತ್ತು ಹಿ-ಸುಕಿ ಹ-ತ್ಯೆ ಮಾಡಿಲ್ಲ. ತಲೆ ದಿಂಬು ಅಥವಾ ಬೇರೆ ವಸ್ತು ಬಳಸಿ ಉಸಿರುಗಟ್ಟಿಸಿ ಕೊ-ಲೆ ಮಾಡಲಾಗಿದೆ. ಉಸಿರುಗಟ್ಟಿಸಿದ ಕಾರಣ ಮಗುವಿನ ಮುಖ, ಎದೆಭಾಗ ಊದಿಕೊಂಡಿದೆ. ಹೀಗಾಗಿ ಮಗುವಿನ ಮೂಗಿನಿಂದ ರ-ಕ್ತಸ್ರಾವವಾಗಿದೆ’ ಎಂದಿದ್ದಾರೆ.

ಇತ್ತ ತನಿಖೆಯ ವೇಳೆ ಸತ್ಯ ಬಾಯಿ ಬಿಟ್ಟಿರುವ ಸುಚಾನಾ, ‘ಗಂಡನಿಗೆ ಮಗುವನ್ನು ತೋರಿಸುವುದಕ್ಕೆ ಇಷ್ಟ ಇರಲಿಲ್ಲ. ನನ್ನ ಮಗು ಕಂಡರೆ ನನಗೂ ಕೂಡ ಬಹಳ ಪ್ರೀತಿ. ಹೀಗಾಗಿ ನಾನು ಮಗುವಿನ ಪ್ರಜ್ಞೆ ತಪ್ಪಿಸಲು ದಿಂಬಿನಿಂದ ಒತ್ತಿ ಹಿಡಿದೆ. ಮಗು ಪ್ರಜ್ಞೆ ತಪ್ಪಿದೆ ಎಂದುಕೊಂಡಿದ್ದೆ. ಆದರೆ ಮಗು ಸಾ-ವನ್ನಪ್ಪಿತ್ತು. ಇದೇ ನೋವಿನಲ್ಲಿ ಕೈ ಕು-ಯ್ದ ಆ-ತ್ಮಹತ್ಯೆಗೆ ಯತ್ನಿಸಿದೆ, ಆದರೆ ಅದು ಸಾಧ್ಯವಾಗಿಲ್ಲ. ಗಾ-ಬರಿಯಲ್ಲಿ ಏನು ಮಾಡಬೇಕೆಂದು ತೋಚದೆ ಸೂಟ್ ಕೇಸ್ ನಲ್ಲಿ ಮಗುವಿನ ಬಾ-ಡಿ ಹಾಕಿ ಪ-ರಾರಿಯಾಗಲು ಯತ್ನಿಸಿದೆ ಎಂದಿದ್ದಾರೆ. ಮಗುವಿನ ತಂದೆ ವೆಂಕಟರಾಮನ್ (Venkataraman) ಇಂಡೋನೇಷ್ಯಾ (Indonesia) ದಿಂದ ಇಂದು ಆಗಮಿಸಿದ್ದು ಬೆಂಗಳೂರಿನಲ್ಲಿ ಅಂ- ತ್ಯ ಸಂಸ್ಕಾರವು ನಡೆಯಲಿದೆ.

Leave a Reply

Your email address will not be published. Required fields are marked *