ಕಣ್ಣಿಗೆ ಕಾಣುವ ದೇವರೆಂದರೆ ಅದುವೇ ತಾಯಿ. ಇಡೀ ಜಗತ್ತಿನಲ್ಲಿ ಮೊದಲ ಶ್ರೇಷ್ಠ ಸ್ಥಾನ ತಾಯಿಗೆ ನೀಡಲಾಗಿದೆ. ಭೂಮಿಯ ತೂಕದಷ್ಟು ಸಹನೆ ಹೊಂದಿರುವ ಆಕೆಗಿಂತ ಬೇರೆ ಯಾವ ಬಂಧುವಿಲ್ಲ, ಬಂಧವಿಲ್ಲ. ತಾಯಿಯ ಪ್ರೀತಿಯನ್ನು ಯಾರಿಗೂ ಹೋಲಿಕೆ ಮಾಡಲು ಸಾಧ್ಯವಿಲ್ಲ. ತಾಯಿಗಿಂತ ಮಿಗಿಲಾದ ದೇವರಿಲ್ಲ, ಎಲ್ಲ ಸಂಬಂಧಗಳೂ ಭೂಮಿ ಮೇಲೆ ಬಂದ ಮೇಲೆ ಆಗುವಂತಹದ್ದು.
ಆದರೆ ತಾಯಿ ಸಂಬಂಧ ಆಗಲ್ಲ, ಒಂಭತ್ತು ತಿಂಗಳು ಹೊತ್ತಾಗಿನಿಂದಲೇ ತಾಯಿ ಹಾಗೂ ಮಗುವಿನ ಸಂಬಂಧವು ಬೆಸೆದು ಕೊಳ್ಳುತ್ತದೆ. ಜನುಮ ಕೊಟ್ಟ ತಾಯಿಗೆ ಸಮನಾದ ಇನ್ನೊಂದು ಶಕ್ತಿ ಜಗತ್ತಿನಲ್ಲಿಲ್ಲ. ತಾಯಿ ಎನ್ನುವ ಸಂಬಂಧವನ್ನು ಕಿತ್ತು ಬಿಸಾಡಲು ಸಾಧ್ಯವಿಲ್ಲ. ಹೆತ್ತ ತಾಯಿಗೆ ಹೆಗ್ಗಣ ಮುದ್ದು ಎನ್ನುವ ಮಾತಿದೆ. ಈ ಮಾತಿನಂತೆ ತಾಯಿ ಯಾವತ್ತೂ ಮಕ್ಕಳು ತಪ್ಪು ಮಾಡಿದರು ಎಂದು ಮಕ್ಕಳನ್ನು ಬಿಸಾಡುವುದಿಲ್ಲ.
ಕರುಳ ಸಂಬಂಧವನ್ನು ಕಿತ್ತು ಬಿಸಾಕಲು ಯಾವ ತಾಯಿಗೂ ಕೂಡ ಸಾಧ್ಯವಿಲ್ಲ. ಯಾವುದೇ ತಾಯಿ ಎಂದಿಗೂ ಮಕ್ಕಳನ್ನು ಬಿಟ್ಟುಕೊಡುವುದಿಲ್ಲ. ಇದಕ್ಕೆ ಈ ಪ್ರಪಂಚದಲ್ಲಿ ಕೆಟ್ಟ ಮಕ್ಕಳು ಇರುತ್ತಾರೆ, ಆದರೆ ಕೆಟ್ಟ ತಾಯಿ ಇರಲು ಸಾಧ್ಯವಿಲ್ಲ ಎನ್ನುವ ಮಾತನ್ನು ಕೇಳಿರುತ್ತೇವೆ. ತಾಯಿ ತನ್ನ ಮಗುವಿನ ರಕ್ಷಣೆಗಾಗಿ ಒದ್ದಾಡುತ್ತಾಳೆ.
ತನ್ನ ಕುಟುಂಬ, ಮಕ್ಕಳ ರಕ್ಷಣೆ ಹಾಗೂ ಆರೈಕೆಯಲ್ಲಿ ತನ್ನ ಇಡೀ ಜೀವವನ್ನು ಸವೆಸುತ್ತಾಳೆ. ಆದರೆ ಮಕ್ಕಳ ಶ್ರೇಯಸ್ಸನ್ನೆ ಬಯಸುವ ಈ ತಾಯಿ ಯಾವತ್ತೂ ಮಕ್ಕಳಿಗೆ ಕೆಟ್ಟದಾಗಲಿ ಎಂದು ಬಯಸುವುದಿಲ್ಲ. ಆದರೆ ಪ್ರಪಂಚದಲ್ಲಿ ಕೆಟ್ಟ ತಾಯಿ ಕೂಡ ಇರುತ್ತಾಳಾ ಎಂದು ಪ್ರಶ್ನೆ ಮೂಡುವಂತಹ ಘಟನೆಗಳು ನಡೆಯುತ್ತವೆ.
ಈ ಹಿಂದೆಯಷ್ಟೇ ಪ್ರಿಯಕರನ ಜೊತೆಗಿನ ಸಂಬಂಧಕ್ಕೆ ಅಡ್ಡಿ ಎಂದು ದತ್ತು ಪಡೆದ ಮಗನನ್ನು ಬ-ರ್ಬರವಾಗಿ ಹ-ತ್ಯೆಗೈದ ತಾಯಿ ಬಂಧನ ಪ್ರಕರಣ ಸಂಚಲನ ಮೂಡಿಸಿತ್ತು. ಹೌದು, ಕೊಯಂಬತ್ತೂರಿನ ಕೋವಿಲ್‌ಮೇಡು ಪ್ರದೇಶದಲ್ಲಿ ಪತಿಯಿಂದ ಪ್ರತ್ಯೇಕವಾಗಿ ವಾಸಿಸುತ್ತಿದ್ದ ದಿವ್ಯಾ ಅವರಿಗೆ 6 ವರ್ಷದ ಮಗ ಅಭಿಷೇಕ್ ಮತ್ತು 3 ವರ್ಷದ ಮಗಳಿದ್ದರು.
ಈಕೆಯು ಕಾರು ಚಾಲಕ ರಾಜದೊರೈ ಜೊತೆಗೆ ಸಂಬಂಧ ಹೊಂದಿದ್ದಳು. ಒಂದು ದಿನ ಮಗ ಅಭಿಷೇಕ್ ತಮ್ಮಿಬ್ಬರ ಸಂಬಂಧಕ್ಕೆ ಅಡ್ಡಿಯಾಗುತ್ತಿದ್ದಾನೆ ಎಂದುಕೊಂಡು ಅವರಿಬ್ಬರೂ ಕೂಡ ಹುಡುಗನಿಗೆ ಥ-ಳಿಸಿದ್ದರು. ಈ ವೇಳೆ ಹುಡುಗನ ಪ್ರಾ-ಣ ಪಕ್ಷಿ ಹಾರಿಹೋಗಿತ್ತು. ಆದರೆ ಪೊಲೀಸರ ಕೈಗೆ ಸಿಕ್ಕಿಬೀಳಬಾರದೆಂದು ಅಂಬ್ಯುಲೆನ್ಸ್ ಕರೆಸಿ ಮಗ ಮಹಡಿಯಿಂದ ಕೆಳಗೆ ಬಿದ್ದಿದ್ದಾನೆ ಎಂದು ನಾಟಕವಾಡಿದ್ದರು.
ಆಂಬ್ಯುಲೆನ್ಸ್ ಸಿಬ್ಬಂದಿ ಪರಿಶೀಲಿಸಿದಾಗ ಅದಾಗಲೇ ಬಾಲಕ ಮೃ-ತಪಟ್ಟಿರುವುದು ಕಂಡುಬಂದಿತ್ತು. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ ಸಾಯಿಬಾಬಾ ಕಲಾನಿ ಠಾಣೆ ಪೊಲೀಸರು ಬಾಲಕನ ದೇ-ಹದ ಮೇಲಿರುವ ಗಾ-ಯಗಳು ಅನುಮಾನಾಸ್ಪದವಾಗಿ ಕಂಡು ಬಂದಿತ್ತು.
ಹಾಗಾಗಿ ತಾಯಿಯನ್ನು ತನಿಖೆಗೆ ಒಳಪಡಿಸಿದಾಗ ಮಗನನ್ನೇ ಕೊಂ-ದ ತಾಯಿಯ ವಿ-ಕೃತ ಮುಖ ಬಯಲಾಗಿತ್ತು. ಸತ್ಯ ಹೊರಬೀಳುತ್ತಿದ್ದಂತೆ ಮಹಿಳೆ ಹಾಗೂ ಆಕೆಯ ಪ್ರಿಯಕರನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದರು. ತನ್ನ ಸ್ವಾರ್ಥಕ್ಕಾಗಿ ಮಗನ ಜೀವವನ್ನೇ ಬ-ಲಿ ತೆಗೆದುಕೊಂಡದ್ದನ್ನು ನೋಡಿದರೆ ಈಕೆ ಎಂತಹ ತಾಯಿ ಎಂದೆನಿಸದೇ ಇರದು.