ಬಾಲಿವುಡ್ ನಟಿಗೆ ಕಾಳು ಹಾಕಿ ವೈವಾಹಿಕ ಜೀವನಕ್ಕೆ ಕಾಲಿಡಲು ಸಜ್ಜಾದ ಮೊಹಮ್ಮದ್ ಸಿರಾಜ್, ಯಾರು ನಟಿ ಗೊತ್ತಾ ಇಲ್ಲಿದೆ ನೋಡಿ!!

ಸೆಲೆಬ್ರಿಟಿಗಳೆಂದ ಮೇಲೆ ಕೇಳಬೇಕೇ ಅವರ ವೈಯುಕ್ತಿಕ ಜೀವನ ಕುರಿತು ಸುದ್ದಿಯಾಗುವುದು ಸರ್ವೇ ಸಾಮಾನ್ಯ. ಅದರಲ್ಲಿಯೂ ಸೆಲೆಬ್ರಿಟಿಗಳ ಮದುವೆಯ ಕುರಿತು ಆಗಾಗ ಸುದ್ದಿಯಾಗುವುದಿದೆ. ಆದರೆ ಇದೀಗ ಭಾರತ ಕ್ರಿಕೆಟ್ ತಂಡದ ಸ್ಟಾರ್ ವೇಗಿ ಮೊಹಮ್ಮದ್ ಸಿರಾಜ್ (Mohammed Siraj) ಅವರು ಸದ್ಯದಲ್ಲೇ ವೈವಾಹಿಕ ಜೀವನಕ್ಕೆ ಕಾಲಿಡಲಿದ್ದಾರೆ ಎನ್ನಲಾಗಿದೆ.

ಈ ಬಾರಿಯ ವಿಶ್ವಕಪ್ (World Cup) ನಲ್ಲಿ ಭಾಗಿಯಾಗಿದ್ದ ಮೊಹಮ್ಮದ್ ಸಿರಾಜ್ ಅವರು ಸೋಲುಂಡ ನೋವಿನಲ್ಲಿದ್ದರು. ಆದರೆ ಎರಡು ದಿನ ಕಳೆಯುತ್ತಿದ್ದಂತೆ ಇದೀಗ ವೈವಾಹಿಕ ಜೀವನಕ್ಕೆ ಕಾಲಿಡಲು ಸಜ್ಜಾಗುತ್ತಿದ್ದಾರೆ ಎನ್ನಲಾಗುತ್ತಿದೆ. ವೈವಾಹಿಕ ಜೀವನಕ್ಕೆ ಸಂಬಂಧಪಟ್ಟಂತೆ ಬಹುದೊಡ್ಡ ನಿರ್ಧಾರವನ್ನು ತೆಗೆದುಕೊಳ್ಳಲಿದ್ದಾರೆ.

ಟೀಮ್ ಇಂಡಿಯಾ ಆಟಗಾರ ಮೊಹಮ್ಮದ್ ಸಿರಾಜ್ ಅವರು ಹೈದರಾಬಾದ್ (Hydarbad) ನಲ್ಲಿರುವ ಹುಡುಗಿಯನ್ನೇ ಕೈ ಹಿಡಿಯಲಿದ್ದಾರೆ ಎನ್ನಲಾಗುತ್ತಿದೆ. ಸಿರಾಜ್ ಅವರು ಈ ವರ್ಷದ ಕೊನೆಯಲ್ಲಿ ಅಥವಾ ಮುಂದಿನ ವರ್ಷದ ಮೇ ತಿಂಗಳಲ್ಲಿ ಮದುವೆಯಾಗಲಿದ್ದಾರೆ.

ಆಟಗಾರನ ಮದುವೆಗೆ ಟೀಮ್ ಇಂಡಿಯಾದ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ (Virat Kohli) ಸೇರಿದಂತೆ ಇನ್ನಿತ್ತರರು ಭಾಗಿಯಾಗಲಿದ್ದಾರೆ ಎನ್ನುವ ಮಾಹಿತಿಯೊಂದು ಹೊರಬಿದ್ದಿದೆ. ಆದರೆ ಈ ಹಿಂದೆ ಕೂಡ ಸಿರಾಜ್ ಅವರ ಮದುವೆಯ ಬಗ್ಗೆ ಸುದ್ದಿಗಳು ಕೇಳಿ ಬಂದಿತ್ತು. ಈ ಹಿಂದೆ ತಮ್ಮ ಬಾಲ್ಯದ ಗೆಳತಿಯನ್ನು ಮದುವೆಯಾಗುತ್ತಾರೆ ಎನ್ನುವ ಸುದ್ದಿ ವೈರಲ್ ಆಗಿತ್ತು.ಆದರೆ ಈ ಬಗ್ಗೆ ಸಿರಾಜ್ ಅವರು ಯಾವುದೇ ಪ್ರತಿಕ್ರಿಯೆಯನ್ನು ನೀಡಿರಲಿಲ್ಲ.

ಆದರೆ ಇದೀಗ ಮತ್ತೆ ಸಿರಾಜ್ ಅವರು ಮದುವೆಯಾಗಲಿದ್ದಾರೆ ಎನ್ನುವ ಸುದ್ದಿಯೊಂದು ಹರಿದಾಡುತ್ತಿದ್ದು, ಮದುವೆಯಾಗುವುದು ಪಕ್ಕಾ ಎನ್ನಲಾಗುತ್ತಿದೆಯಾದರೂ ಕೂಡ ಆ ಬಗ್ಗೆ ಯಾವುದೇ ಮಾಹಿತಿಯೂ ಲಭ್ಯವಾಗಿಲ್ಲ. ಸಿರಾಜ್ ಅವರು ತಮ್ಮ ಮದುವೆ ಯ ಬಗ್ಗೆ ಅಧಿಕೃತ ಮಾಹಿತಿಯನ್ನು ನೀಡುವವರೆಗೂ ಕಾಯಬೇಕು ಅಷ್ಟೇ.

Leave a Reply

Your email address will not be published. Required fields are marked *