Mohammad irfan goa story: ಪ್ರೇಯಸಿಯ ಆಸೆ ತೀರಿಸಲು ಹೋಗಿ ಪೊಲೀಸರ ಅತಿಥಿಯಾದ ಯುವಕ, ಅಷ್ಟಕ್ಕೂ ಆ ಯುವಕ ಮಾಡಿದ್ದೇನು ಗೊತ್ತಾ? ಇಲ್ಲಿದೆ ನೋಡಿ ಅಸಲಿ ವಿಚಾರಪ್ರೀತಿ ಮಾಯೆ ಹುಷಾರು ಕಣ್ಣೀರು ಮಾರೋ ಬಜಾರು ಎನ್ನುವ ಸಿನಿಮಾ ಹಾಡೇ ಇದೆ. ಪ್ರೀತಿ ಮಾಯೆ, ಈ ಪ್ರೀತಿಯಲ್ಲಿ ಬಿದ್ದು ಕಣ್ಣೀರಲ್ಲಿ ಕೈ ತೊಳೆಯುವವರು ಇದ್ದಾರೆ. ಆದರೆ ಈ ಬದುಕಿಗೆ ಪ್ರೀತಿ ಬಹು ಮುಖ್ಯ. ಈ ಪ್ರೀತಿ ಅತಿಯಾದರೆ ವಿಷ ಕೂಡ ಆಗುತ್ತದೆ ಎನ್ನುವುದನ್ನು ಮರೆಯುವಂತಿಲ್ಲ.
ಕೆಲವೊಮ್ಮೆ ಈ ಪ್ರೀತಿಯ ಭಾವನೆ ಉಸಿರು ಗಟ್ಟಿಸುತ್ತದೆ. ಆದರೆ ಈ ಪ್ರೀತಿಯಲ್ಲಿ ಪರಸ್ಪರ ಗೌರವ ನೀಡುವ ನಂಬಿಕೆಯಿಟ್ಟು ಕೊಂಡು ಒಬ್ಬರನ್ನು ಒಬ್ಬರು ಕಾಯುವುದೇ ಪ್ರೀತಿ. ಆದರೆ ಕಣ್ಣಿಗೆ ಕಾಣದ ಪ್ರೀತಿಗೆ ಬೀಳಲು ಕಾರಣವೇ ಬೇಕಿಲ್ಲವಂತೆ. ಪ್ರೇಮ ಚಿಗುರಲು ಯಾವುದೇ ಜಾತಿ, ಧರ್ಮ, ದೇಶ, ಭಾಷೆ ಯಾವುದು ಬೇಕಿಲ್ಲ. ಗಂಡು ಹೆಣ್ಣು ಮನಸ್ಸು ಒಪ್ಪಿದ್ದರೆ ಸಾಕು, ಆ ಪ್ರೀತಿ ಬೇರೆ ಯಾವುದು ಅಡ್ಡಿಯಾಗಲಾಗದು, ಈ ಮಾತು ಸತ್ಯವಾದದ್ದು.
ನನ್ನಿಂದ ನಿನಗೆ ಖುಷಿ ಸಿಗುತ್ತಿಲ್ಲ ನನ್ನನ್ನು ಕ್ಷಮಿಸಿಬಿಡು ಎಂದು ಬರೆದಿಟ್ಟು 2 ತಿಂಗಳ ನವ ವಿವಾಹಿತೆ ಮಾಡಿ ಕೊಂಡಿದ್ದೇನು ನೋಡಿ? ದುಡುಕಿ ಇಂತಹ ಕೆಲಸ ಮಾಡೋದಾ!!!
ಪ್ರತಿಯೊಬ್ಬ ವ್ಯಕ್ತಿಯೂ ಪ್ರೀತಿಗಾಗಿ ಹಾತೊರೆಯುತ್ತಾರೆ. ಯಾವ ಕ್ಷಣದಲ್ಲಾದರೂ ಪ್ರೀತಿ ಹುಟ್ಟಿಕೊಳ್ಳಬಹುದು. ಆದರೆ ಇಲ್ಲೊಬ್ಬ ಪ್ರೀತಿಯಲ್ಲಿ ಬಿದ್ದ ಯುವಕ ಪ್ರೇಯಸಿಯ ಆಸೆ ತೀರಿಸಲು ಹೋಗಿ ಪೊಲೀಸರ ಅತಿಥಿಯಾಗಿದ್ದಾನೆ. ಪೋಲಿಸರ ಅತಿಥಿಯಾಗಿರುವವನ ಹೆಸರು ಮಹಮ್ಮದ್ ಇರ್ಫಾನ್. ಬೆಂಗಳೂರಿನ ಆಡುಗೋಡಿ ನಿವಾಸಿಯಾಗಿದ್ದು, ತಾಯಿ, ಅಣ್ಣ ಹಾಗೂ ಅತ್ತಿಗೆ ಜೊತೆಗೆ ಇದ್ದ ವಾಸವಾಗಿದ್ದನು.

ಒಂಚೂರು ಜವಾಬ್ದಾರಿ ಇಲ್ಲದ ಈತನು ಮೂರು ಹೊತ್ತು ತಿನ್ನುತ್ತಾ , ಪ್ರೇಯಸಿ ಹಿಂದೆ ಸುತ್ತುತ್ತ ಕಾಲ ಕಳೆಯುತ್ತಿದ್ದನು. ಕೈಯಲ್ಲಿ ಒಂದು ಉದ್ಯೋಗ ಹಾಗೂ ಒಂದು ಪೈಸೆ ಹಣ ಇಲ್ಲದೇ ಇದ್ದರೂ ಕೂಡ ಒಮ್ಮೆ ಪ್ರೇಯಸಿಗೆ ಏನು ಬೇಕು ಎಂದು ಕೇಳಿದ್ದಾನೆ. ಈ ವೇಳೆಯಲ್ಲಿ ಪ್ರೇಯಸಿ ಗೋವಾಕ್ಕೆ ಹೋಗುವ ಆಸೆಯನ್ನು ವ್ಯಕ್ತಪಡಿಸಿದ್ದಾಳೆ.
Mohammad irfan goa plan with girlfriend
ಕೈಯಲ್ಲಿ ಹಣಯಿಲ್ಲದೇ ಪ್ರೇಯಸಿಯ ಆಸೆ ತೀರಿಸಲು ಮನೆಗೆ ಕನ್ನ ಹಾಕಿದ್ದಾನೆ. ಹೌದು, ರಾತ್ರಿ ಎಲ್ಲರೂ ಮಲಗಿದ್ದ ವೇಳೆ 103 ಗ್ರಾಮ್ ಚಿನ್ನಾಭರಣ ದೋಚಿದ್ದು, ಚಿನ್ನವನ್ನೆಲ್ಲಾ ಗಿರವಿ ಅಂಗಡಿಯಲ್ಲಿಟ್ಟು, ಲಕ್ಷ ಲಕ್ಷ ಹಣ ಕೈಯಲ್ಲಿಡಿದುಕೊಂಡು ಗೋವಾಕ್ಕೆ ಪ್ರೇಯಸಿ ಜೊತೆಗೆ ತೆರಳಿದ್ದಾನೆ.ಈ ವೇಳೆಯಲ್ಲಿ ಮನೆಯಲ್ಲಿರುವ ಆಭರಣ ಕಾಣದೇ ಇದ್ದಾಗ ಇರ್ಫಾನ್ ಅಣ್ಣ ಪೊಲೀಸರಿಗೆ ದೂರು ನೀಡಿದ್ದಾರೆ.
ಮನೆಗೆ ಬಂದು ತನಿಖೆ ಮಾಡಿದ ಪೊಲೀಸರಿಗೆ, ಮನೆಯಲ್ಲಿ ಕಾಣದ ಇರ್ಫಾನ್ ಮೇಲೆ ಅನುಮಾನವೊಂದು ಶುರುವಾಗಿದೆ. ಮನೆಯವರ ಬಳಿ ಇರ್ಫಾನ್ ಬಗ್ಗೆ ಕೇಳಿದಾಗ ಆಗ ಮನೆಯವರು ಗೆಳೆಯರ ಜೊತೆ ಗೋವಾಕ್ಕೆ ಹೋಗಿರುವುದಾಗಿ ತಿಳಿಸಿದ್ದಾರೆ. ಆಗ ಪೊಲೀಸರ ಅನುಮಾನ ಮತ್ತಷ್ಟು ಬಲವಾಗಿದ್ದು, ತಕ್ಷಣವೇ. ಪೊಲೀಸರು ತಂಡ ರಚನೆ ಮಾಡಿ ಗೋವಾಕ್ಕೆ ತೆರಳಿದ್ದಾರೆ.
ಕೊನೆಗೂ ಪೊಲೀಸರು ಪ್ರೇಯಸಿ ಜೊತೆ ಗೋವಾ ಬೀಚ್‌ನಲ್ಲಿ ಅಲೆದಾಡುತ್ತಿದ್ದ ಇರ್ಫಾನ್ ನನ್ನು ತಮ್ಮ ವಶಕ್ಕೆ ಪಡೆದುಕೊಂಡಿದ್ದಾರೆ. ಪೊಲೀಸರ ಕೈಗೆ ತಗಲಿ ಹಾಕಿಕೊಂಡ ಇರ್ಫಾನ್ ನನ್ನು ಕರೆತಂದ ಪೊಲೀಸರು, ಆತ ಗಿರವಿಯಿಟ್ಟಿದ್ದ ಚಿನ್ನವನ್ನು ಪಡೆದುಕೊಂಡಿದ್ದಾರೆ. ಆದರೆ ಪ್ರೇಯಸಿಯ ಆಸೆ ತೀರಿಸಲು ಈ ಪ್ರೇಮಿ ಪೊಲೀಸರ ಅತಿಥಿಯಾದದ್ದು ನಿಜಕ್ಕೂ ವಿಪರ್ಯಾಸ ಎನ್ನಬಹುದು.