ಗಂಡನ ಜೋತೆ ವಿದೇಶಿ ಪ್ರವಾಸದಲ್ಲಿ ಜುಮ್ ಅಂತ ಕಂಗಳಿಸುತ್ತಿರುವ ಚೆಲುವೆ.. ಇಲ್ಲಿದೆ ನೋಡಿ ಮಿಲನಾ ನಾಗರಾಜ್ ವಿದೇಶಿ ಟ್ರಿಪ್ ಫೋಟೋಸ್!! ಸ್ಯಾಂಡಲ್ವುಡ್ ಮುದ್ದಾದ ಜೋಡಿ ಮಿಲನಾ ನಾಗರಾಜ್ (Milan Nagaraj) ಹಾಗೂ ಡಾರ್ಲಿಂಗ್ ಕೃಷ್ಣ (Darling Krishna) ಯಾರಿಗೆ ಗೊತ್ತಿಲ್ಲ ಹೇಳಿ? ಇವರಿಬ್ಬರ ಹೆಸರು ಕೇಳಿದ ಕೂಡಲೇ ಲವ್ ಮೊಕ್ಟೇಲ್ ಸಿನಿಮಾ ಕಣ್ಣ ಮುಂದೆ ಬರುತ್ತದೆ. ಡಾರ್ಲಿಂಗ್ ಕೃಷ್ಣ ಮತ್ತು ಮಿಲನಾ ನಾಗರಾಜ್ ಅವರು ಹಲವು ವರ್ಷಗಳಿಂದ ಚಿತ್ರರಂಗದಲ್ಲಿ ಸಕ್ರಿಯರಾಗಿದ್ದಾರೆ.
ಆದರೆ ಇವರಿಬ್ಬರ ಬದುಕಿ ಟರ್ನಿಂಗ್ ಪಾಯಿಂಟ್ ಎಂದರೆ ಅದುವೇ ‘ಲವ್ ಮಾಕ್ಟೇಲ್’ (Love Mocktail) ಸಿನಿಮಾ. ಲವ್ ಮಾಕ್ಟೇಲ್ ಸಿನಿಮಾದಿಂದ ಯಶಸ್ಸು ಕಂಡ ಈ ಜೋಡಿ ಲವ್ ಮಾಕ್ಟೇಲ್ 2 (Love Mocktail 2) ಸಿನಿಮಾವನ್ನು ಕೂಡ ತೆರೆಗೆ ತರುವಲ್ಲಿ ಯಶಸ್ವಿಯಾಯಿತು. ಇದೀಗ ಇಬ್ಬರೂ ಜೋಡಿಯೂ ಸಿನಿಮಾರಂಗದಲ್ಲಿ ಬ್ಯುಸಿಯಾಗಿದ್ದಾರೆ.
ವೃತ್ತಿ ಜೀವನದಲ್ಲಿ ಬ್ಯುಸಿಯಾಗಿರುವ ಡಾರ್ಲಿಂಗ್ ಕೃಷ್ಣ ಹಾಗೂ ಮಿಲನಾ ನಾಗರಾಜ್ ದಂಪತಿ ಸದ್ಯ ವೆಕೇಷನ್ ಮೋಡ್ನಲ್ಲಿದ್ದು ಸಖತ್ ಎಂಜಾಯ್ ಮಾಡುತ್ತಿದ್ದಾರೆ. ಇಬ್ಬರೂ ಸುಂದರವಾದ ಪ್ರವಾಸಿ ತಾಣಗಳಲ್ಲಿ ಸುತ್ತಾಡುತ್ತಿದ್ದು, ಈ ಸುಂದರ ಕ್ಷಣದ ಫೋಟೋಗಳನ್ನು ಶೇರ್ ಮಾಡಿಕೊಳ್ಳುತ್ತಿದ್ದಾರೆ.
ಇತ್ತೀಚೆಗಷ್ಟೇ ಈ ಜೋಡಿ ವೈಟ್ & ವೈಟ್ ಆಗಿ ಕಾಣಿಸಿಕೊಂಡಿರುವ ಜೋಡಿ ಬಿಸಿಲಿಗೆ ಗಾಗಲ್ಸ್ ಧರಿಸಿ ಸಖತ್ ಆಗಿ ಪೋಸ್ ಕೊಟ್ಟಿದ್ದಾರೆ. ನಟಿ ಮಿಲನಾ ಅವರು ವೈಟ್ ಕ್ರಾಪ್ ಟಾಪ್ ಧರಿಸಿ ಅದಕ್ಕೆ ಮ್ಯಾಚ್ ಆಗುವ ವೈಟ್ ಇಯರಿಂಗ್ಸ್ ಧರಿಸಿದ್ದರು. ಈ ಫೋಟೋ ನೋಡಿದ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದರು.
ಅದಲ್ಲದೇ ನಟಿ ಮಿಲನಾ ನಾಗರಾಜ್ ಅವರು ಬಿಳಿ ಬಣ್ಣದ ಉಡುಗೆಯಲ್ಲಿ ತೊಟ್ಟು ಕ್ಯಾಮೆರಾಗೆ ಪೋಸ್ ನೀಡಿರುವ ಫೋಟೋ ಹಂಚಿಕೊಂಡಿದ್ದು, ಈ ಫೋಟೋಗೆ ನಲವತ್ತು ಸಾವಿರಕ್ಕೂ ಅಧಿಕ ವ್ಯೂಸ್ ಬಂದಿದೆ. ಅದಲ್ಲದೇ, ಇಬ್ಬರ ವೆಕೇಷನ್ ಫೋಟೋ ನೋಡಿದ ನೆಟ್ಟಿಗರು ನೀವು ಬಿಡಿ ಸೂಪರ್ ಜೋಡಿ ಎಂದು ಕಮೆಂಟ್ ಮಾಡಿದ್ದು, ಸೋಶಿಯಲ್ ಮೀಡಿಯಾದಲ್ಲಿ ಫೋಟೋಗಳು ಬಾರಿ ವೈರಲ್ ಆಗಿವೆ.
View this post on Instagram
ಸದ್ಯಕ್ಕೆ ಡಾರ್ಲಿಂಗ್ ಕೃಷ್ಣ ದಂಪತಿಗಳು ‘ಲವ್ ಮಾಕ್ಟೇಲ್ 3’ (Love Mocktail 3) ಸಿನಿಮಾ ಮಾಡುವತ್ತ ಗಮನಹರಿಸಿದ್ದಾರೆ. ಇತ್ತೀಚೆಗಷ್ಟೇ ಡಾರ್ಲಿಂಗ್ ಕೃಷ್ಣ ಅವರು ಲವ್ ಮಾಕ್ಟೇಲ್ 3 ಸಿನಿಮಾದ ಬಗ್ಗೆ ಅಧಿಕೃತವಾಗಿ ಅನೌನ್ಸ್ ಮಾಡಿದ್ದರು. ಅವರು ತಮ್ಮ ಅಭಿಮಾನಿಗಳಿಗೆ ಒಂದು ಗುಡ್ ನ್ಯೂಸ್ ನೀಡಿದ್ದು, ‘ಲವ್ ಮಾಕ್ಟೇಲ್ 3.. ಎಲ್ಲರಿಗೂ ಯುಗಾದಿ ಹಬ್ಬದ ಶುಭಾಶಯಗಳು’ ಎಂದು ಡಾರ್ಲಿಂಗ್ ಕೃಷ್ಣವಿಶ್ ಮಾಡಿದ್ದರು. ಇತ್ತ ನಟಿ ಮಿಲನಾ ನಾಗರಾಜ್ (Milana Nagaraj) ಕೂಡ ಈ ಪೋಸ್ಟ್ ಅನ್ನು ತಮ್ಮ ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ ಪೋಸ್ಟ್ ಮಾಡಿಕೊಂಡಿದ್ದು, ಅಭಿಮಾನಿಗಳು ಖುಷಿಯಾಗಿದ್ದರು.