ಅಮ್ಮನ ಜೊತೆಗೆ ಕಾಣಿಸಿಕೊಂಡ ಚಂದನವನದ ನಟಿ ಮಿಲನಾ ನಾಗರಾಜ್, ಇಲ್ಲಿದೆ ನೋಡಿ ಅಪರೂಪದ ಫೋಟೋ

ಚಂದನವನದ ನಟ ನಟಿಯರನ್ನು ಒಂದೇ ಒಂದು ಸಿನಿಮಾವು ಜನಪ್ರಿಯರನ್ನಾಗಿ ಮಾಡುತ್ತದೆ. ಈಗಾಗಲೇ ಚಂದನವನದಲ್ಲಿ ಒಂದೇ ಒಂದು ಸಿನಿಮಾದ ಮೂಲಕ ನೆಲೆ ಕಂಡುಕೊಂಡವರು ಹಲವರು ಇದ್ದಾರೆ. ಅಂತಹವರ ಸಾಲಿಗೆ ಮಿಲನಾ ನಾಗರಾಜ್ ಕೂಡ ಸೇರಿಕೊಳ್ಳುತ್ತಾರೆ. ನಟಿ ಮಿಲನಾ ನಾಗರಾಜ್ (Milana Nagaraj) ಅವರು ಲವ್ ಮೊಕ್ಟೇಲ್ (Love Mocktail) ಸಿನಿಮಾದ ಮೂಲಕ ಜನಪ್ರಿಯತೆಯನ್ನು ಗಳಿಸಿಕೊಂಡವರು.

ಆದಾದ ಬಳಿಕ ಲವ್​ ಮಾಕ್ಟೇಲ್ ಸಿನಿಮಾದಿಂದ ಯಶಸ್ಸು ಕಂಡ ಈ ಜೋಡಿ ಲವ್ ಮಾಕ್ಟೇಲ್ 2 (Love Mocktail 2) ಸಿನಿಮಾದಲ್ಲಿಯೂ ನಟಿಸಿದರು. ಈ ಸಿನಿಮಾದ ಬಳಿಕ ಸಾಲು ಸಾಲು ಸಿನಿಮಾಗಳಲ್ಲಿ ನಟಿಸಿದ್ದು, ನಟಿಯ ಬೇಡಿಕೆಯ ಜೊತೆಗೆ ಆಫರ್ಸ್ ಗಳು ಬರುತ್ತಿದೆ.ಅದಲ್ಲದೇ ಲವ್ ಮೊಕ್ಟೇಲ್ ಸಿನಿಮಾದಲ್ಲಿ ಸ್ಕ್ರೀನ್ ಶೇರ್ ಮಾಡಿಕೊಂಡಿದ್ದ ಡಾರ್ಲಿಂಗ್ ಕೃಷ್ಣ (Darling Krishna) ನವರನ್ನೇ ಮಿಲನಾನಾಗರಾಜ್ ಪ್ರೀತಿಸಿ ಮದುವೆಯಾದರು. ಇದೀಗ ಲವ್ ಮೊಕ್ಟೇಲ್ ಜೋಡಿ ಸಿನಿ ಕೆರಿಯರ್ ನಲ್ಲಿ ಸಖತ್ ಬ್ಯುಸಿಯಾಗಿದ್ದಾರೆ.

ಅದರಲ್ಲಿ ನಟಿ ಮಿಲನಾ ನಾಗರಾಜ್ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಆಕ್ಟಿವ್ ಇದ್ದು, ಆಗಾಗ ಫೋಟೋ ಹಾಗೂ ವಿಡಿಯೋಗಳನ್ನು ಶೇರ್ ಮಾಡಿಕೊಳ್ಳುತ್ತಿರುತ್ತಾರೆ. ಇದೀಗ ಅಮ್ಮನ ಜೊತೆಗೆ ಕ್ಯಾಮೆರಾಗೆ ಪೋಸ್ ನೀಡಿರುವ ನಟಿಯ ಅಪರೂಪದ ಫೋಟೋವೊಂದು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಈ ಫೋಟೋಗೆ ಏಳುನೂರಕ್ಕೂ ಅಧಿಕ ಲೈಕ್ಸ್ ಬಂದಿದೆ. ಅದಲ್ಲದೇ ನಟಿಯ ಅಮ್ಮನನ್ನು ನೋಡಿ ಫ್ಯಾನ್ಸ್ ಖುಷಿ ಪಟ್ಟಿದ್ದಾರೆ.

ಇತ್ತೀಚೆಗಷ್ಟೇ ಸ್ಯಾಂಡಲ್​ವುಡ್ ಮುದ್ದಾದ ಜೋಡಿ ಮಿಲನಾ ನಾಗರಾಜ್ (Milan Nagaraj) ಹಾಗೂ ಡಾರ್ಲಿಂಗ್ ಕೃಷ್ಣ (Darling Krishna) ಸದ್ಯ ವೆಕೇಷನ್ ಮೋಡ್​ನಲ್ಲಿದ್ದರು. ವಿದೇಶಿ ಪ್ರವಾಸ ಕೈಗೊಂಡಿದ್ದ ಈ ಜೋಡಿ ಸಖತ್ ಎಂಜಾಯ್ ಮಾಡಿದ್ದರು. ಅದಲ್ಲದೇ, ವೈಟ್ & ವೈಟ್ ಆಗಿ ಕಾಣಿಸಿಕೊಂಡಿರುವ ಈ ದಂಪತಿಗಳು ಬಿಸಿಲಿಗೆ ಗಾಗಲ್ಸ್ ಧರಿಸಿ ಸಖತ್ ಆಗಿ ಪೋಸ್ ಕೊಟ್ಟಿದ್ದರು. ನಟಿ ಮಿಲನಾ ಅವರು ವೈಟ್ ಕ್ರಾಪ್ ಟಾಪ್ ಧರಿಸಿ ಅದಕ್ಕೆ ಮ್ಯಾಚ್ ಆಗುವ ವೈಟ್ ಇಯರಿಂಗ್ಸ್ ಧರಿಸಿದ್ದರು. ಈ ಫೋಟೋಗೆ ನಲವತ್ತು ಸಾವಿರಕ್ಕೂ ಅಧಿಕ ಲೈಕ್ಸ್ ಬಂದಿತ್ತು. ಈ ಫೋಟೋ ನೋಡಿದ ನೆಟ್ಟಿಗರು ನೀವು ಬಿಡಿ ಸೂಪರ್ ಜೋಡಿ ಎಂದು ಕಮೆಂಟ್ ಮಾಡಿದ್ದರು. ಈ ಫೋಟೋಗಳು ಸಖತ್ ವೈರಲ್ ಕೂಡ ಆಗಿತ್ತು. ಸದ್ಯಕ್ಕೆ ಡಾರ್ಲಿಂಗ್ ಕೃಷ್ಣ ದಂಪತಿಗಳು ‘ಲವ್​ ಮಾಕ್ಟೇಲ್​ 3’ (Love Mocktail 3) ತೆರೆಗೆ ತರುವಲ್ಲಿ ಬ್ಯುಸಿಯಾಗಿದ್ದಾರೆ.

ಇತ್ತೀಚೆಗಷ್ಟೇ ಡಾರ್ಲಿಂಗ್​ ಕೃಷ್ಣ ಅವರು ಲವ್​ ಮಾಕ್ಟೇಲ್​ 3 ಸಿನಿಮಾದ ಬಗ್ಗೆ ಅಧಿಕೃತವಾಗಿ ಅನೌನ್ಸ್​ ಮಾಡಿದ್ದು, ಫ್ಯಾನ್ಸ್ ಫುಲ್ ಖುಷ್ ಆಗಿದ್ದರು. ಹಬ್ಬದ ದಿನ ಗುಡ್ ನ್ಯೂಸ್ ನೀಡಿದ್ದ ಡಾರ್ಲಿಂಗ್ ಕೃಷ್ಣ, ‘ಲವ್​ ಮಾಕ್ಟೇಲ್​ 3.. ಎಲ್ಲರಿಗೂ ಯುಗಾದಿ ಹಬ್ಬದ ಶುಭಾಶಯಗಳು’ ಎಂದು ಡಾರ್ಲಿಂಗ್​ ಕೃಷ್ಣ ವಿಶ್​ ಮಾಡಿದ್ದರು. ಇತ್ತ ನಟಿ ಮಿಲನಾ ನಾಗರಾಜ್​ (Milana Nagaraj) ಕೂಡ ಈ ಪೋಸ್ಟ್​ ಅನ್ನು ತಮ್ಮ ಇನ್​ಸ್ಟಾಗ್ರಾಮ್​ ಸ್ಟೋರಿಯಲ್ಲಿ ಪೋಸ್ಟ್​ ಮಾಡಿಕೊಂಡಿದ್ದರು. ಈ ಜೋಡಿಯ ಲವ್ ಮೊಕ್ಟೇಲ್ 3 ಸಿನಿಮಾ ಹೇಗಿರುತ್ತದೆ ಎನ್ನುವ ಕುತೂಹಲ ಫ್ಯಾನ್ಸ್ ಗೆ ಇದೆ.

Leave a Reply

Your email address will not be published. Required fields are marked *