ಇದೇ ತಿಂಗಳ ಕೊನೆಯಲ್ಲಿ ಧನು ರಾಶಿಯಲ್ಲಿ ಬುಧ ಸಂಕ್ರಮಣ, ಈ ಆರು ರಾಶಿಗಳಿಗೆ ಬಂಪರ್, ಇಲ್ಲಿದೆ ನೋಡಿ!!

ರಾಶಿಚಕ್ರಗಳ ಬದಲಾವಣೆಯೂ ಹನ್ನೆರಡು ರಾಶಿಗಳ ಮೇಲೆ ಧನಾತ್ಮಕ ಹಾಗೂ ಋಣಾತ್ಮಕ ಪರಿಣಾಮ (Positive and Negative Effect) ಗಳನ್ನು ಬೀರಬಹುದು. ಇದೇ ನವೆಂಬರ್ 27 ರಂದು ಧನು ರಾಶಿಯಲ್ಲಿ ಬುಧ ಸಂಕ್ರಮಣ ನಡೆಯಲಿದ್ದು, ಇದರ ಪರಿಣಾಮವಾಗಿ 12 ರಾಶಿಚಕ್ರಗಳ ಮೇಲೆ ಪರಿಣಾಮವನ್ನು ಬೀರಲಿದೆ. ಹೀಗಾಗಿ ಧನು ರಾಶಿಯಲ್ಲಿ ಬುಧ ಸಂಕ್ರಮಣದಿಂದ ಯಾವೆಲ್ಲಾ ರಾಶಿಯವರಿಗೆ ಶುಭ ಫಲ (Positive Effect) ಗಳಿವೆ ಎನ್ನುವುದನ್ನು ಈ ಲೇಖನದಲ್ಲಿ ತಿಳಿದುಕೊಳ್ಳಬಹುದು.

ಮೇಷ ರಾಶಿ : ಮೇಷ ರಾಶಿಯವರಿಗೆ ಬುಧ ಸಂಕ್ರಮಣದಿಂದಾಗಿ ಸಾಕಷ್ಟು ಬದಲಾವಣೆಗಳು ಆಗಲಿವೆ. ಈ ಸಮಯದಲ್ಲಿ ಈ ರಾಶಿಯವರ ಮಾತು ತುಂಬಾ ಪ್ರಭಾವಶಾಲಿಯಾಗಿದ್ದು, ಬೇರೆಯವರ ಮೇಲೆ ಪರಿಣಾಮವನ್ನು ಬೀರುತ್ತದೆ. ಈ ರಾಶಿಯರಿಗೆ ಹಣದ ಮೂಲವು ಅಧಿಕವಾಗಲಿದ್ದು ಹಣವು ಹರಿದು ಬರಲಿದೆ. ಕುಟುಂಬದ ಸದಸ್ಯರಿಗೆ ಸರ್ಕಾರಿ ಉದ್ಯೋಗವೂ ಸಿಗುವ ಸಾಧ್ಯತೆಯೂ ಅಧಿಕವಾಗಿದೆ. ಈ ರಾಶಿಯವರು ಕುಟುಂಬದವರ ಜೊತೆಗೆ ಧಾರ್ಮಿಕ ಕಾರ್ಯಗಳಲ್ಲಿ ತೊಡಗಿಕೊಂಡು ಸಮಯ ಕಳೆಯುವರು.

ಮಿಥುನ ರಾಶಿ: ಈ ರಾಶಿಯವರಿಗೂ ಕೂಡ ಬುಧ ಸಂಚಾರವು ಉತ್ತಮ ಫಲಗಳನ್ನು ತಂದುಕೊಡಲಿದೆ. ಮದುವೆಯಾಗದೇ ಇದ್ದವರಿಗೆ ಕಂಕಣಭಾಗ್ಯವು ಕೂಡಿ ಬರಲಿದೆ. ಮದುವೆಯಾದವರ ವೈವಾಹಿಕ ಜೀವನವು ಸುಖಕರವಾಗಿ ಸಂತೋಷದಿಂದ ಕೂಡಿರುತ್ತದೆ. ಹಣ ಹೂಡಿಕೆಯತ್ತ ಗಮನ ಹರಿಸುವುದರಿಂದ ಈ ರಾಶಿಯವರು ಉತ್ತಮ ಲಾಭವನ್ನು ಪಡೆಯಬಹುದು. ಆರ್ಥಿಕ ಸ್ಥಿತಿಯೂ ಸಾಕಷ್ಟು ಸುಧಾರಿಸಲಿದ್ದು ಹಣಕಾಸಿನ ಸಮಸ್ಯೆಗಳು ದೂರವಾಗುತ್ತದೆ.

ಸಿಂಹ ರಾಶಿ: ಬುಧ ಸಂಕ್ರಮಣವು ಈ ರಾಶಿಯವರ ವೃತ್ತಿ ಜೀವನದಲ್ಲಿ ಪ್ರಗತಿಯನ್ನು ಕಾಣಲು ಸಹಾಯ ಮಾಡುತ್ತವೆ. ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ತಯಾರಿ ನಡೆಸುತ್ತಿದ್ದರೆ ಯಶಸ್ಸನ್ನು ಕಾಣುವರು. ವೃತ್ತಿಜೀವನದಲ್ಲಿ ಸಾಕಷ್ಟು ಬದಲಾವಣೆಗಳಾಗಿದ್ದು, ಸಹೋದ್ಯೋಗಿಗಳೊಂದಿಗೆ ಒಳ್ಳೆಯ ಸಂಬಂಧವನ್ನು ಹೊಂದುವರು. ಇನ್ನು ಉಳಿದಂತೆ ಹೂಡಿಕೆಯತ್ತ ಗಮನ ಹರಿಸುವವರು ಉತ್ತಮ ಲಾಭವನ್ನು ಪಡೆಯಲಿದ್ದಾರೆ. ಆರ್ಥಿಕ ಸಮಸ್ಯೆಗಳು ಹಂತ ಹಂತವಾಗಿ ನಿವಾರಣೆಯಾಗಿ ಸುಖ ಜೀವನ ನಡೆಸಲಿದ್ದಾರೆ.

ಕನ್ಯಾ ರಾಶಿ: ಈ ರಾಶಿಯವರಿಗೆ ಬುಧ ಸಂಕ್ರಮಣ ಒಂದೊಳ್ಳೆ ಜೀವನವನ್ನು ತಂದುಕೊಡಲಿದೆ. ಕೌಟುಂಬಿಕ ಜೀವನವು ಸುಖಕರವಾಗಿರಲಿದ್ದು, ಎಲ್ಲಾ ಸಮಸ್ಯೆಗಳು ದೂರವಾಗಲಿದೆ. ಮನೆಯಿಂದ ಉದ್ಯೋಗ ಮಾಡುವ ಅವಕಾಶಗಳು ಈ ರಾಶಿಯವರಿಗೆ ಒದಗಬಹುದು. ಹೊಸ ವ್ಯವಹಾರವನ್ನು ಆರಂಭಿಸಿ ಲಾಭವನ್ನು ಪಡೆಯಲು ಈ ರಾಶಿಯವರಿಗೆ ಇದೊಂದು ಪರ್ವಕಾಲವಾಗಿದೆ. ಅದಲ್ಲದೇ, ಈ ರಾಶಿಯವರು ತಮ್ಮ ಬುದ್ಧಿವಂತಿಕೆಯಿಂದ ಎಲ್ಲಾ ಸಮಸ್ಯೆಗಳನ್ನು ಪರಿಹರಿಸಿಕೊಂಡು ಜೀವನದಲ್ಲಿ ಯಶಸ್ಸು ಕಾಣುತ್ತಾರೆ.

ಧನು ರಾಶಿ: ಈ ರಾಶಿಯವರಿಗೆ ಬುಧ ಸಂಕ್ರಮಣ ಧನಾತ್ಮಕ ಲಾಭವನ್ನು ತಂದುಕೊಡಲಿದೆ. ಯಾವುದೇ ಕಕೆಲಸ ಕಾರ್ಯಗಳಿಗೆ ಕೈ ಹಾಕಿದರೂ ಕೂಡ ಯಶಸ್ಸು ಲಭಿಸುತ್ತದೆ. ವೈಯುಕ್ತಿಕ ಜೀವನ ಹಾಗೂ ವೃತ್ತಿ ಜೀವನದಲ್ಲಿ ಸಾಕಷ್ಟು ಯಶಸ್ಸು ಕಾಣುವಿರಿ. ವಿದೇಶ ಹೋಗುವ ಪ್ಲಾನ್ ಹಾಕಿಕೊಂಡಿದ್ದರೆ ಈ ಸಮಯವು ಉತ್ತಮವಾಗಿದೆ ಎನ್ನಬಹುದು.

ಮೀನ ರಾಶಿ : ಈ ರಾಶಿಯವರಿಗೆ ಬುಧ ಸಂಚಾರದ ಪ್ರಭಾವದಿಂದ ಜೀವನದಲ್ಲಿ ಭಾರಿ ದೊಡ್ಡ ಬದಲಾವಣೆಗಳಾಗಿವೆ. ಯಾವುದೇ ಕೆಲಸಕ್ಕೆ ಕೈ ಹಾಕಿದರೂ ಈ ಸಮಯದಲ್ಲಿ ಯಶಸ್ಸು ಕಟ್ಟಿಟ್ಟ ಬುತ್ತಿ. ಆರೋಗ್ಯ ಸಮಸ್ಯೆಗಳು ದೂರವಾಗಿ ಆರೋಗ್ಯವು ಸುಧಾರಿಸುತ್ತದೆ. ಆಸ್ತಿಯನ್ನು ಖರೀದಿಸುವ ಸಾಧ್ಯತೆಯೂ ಅಧಿಕವಾಗಿದೆ. ಈ ರಾಶಿಯವರು ಹಣಕಾಸಿನ ವ್ಯವಹಾರಗಳಲ್ಲಿ ಯಶಸ್ಸು ಕಾಣಲಿದ್ದಾರೆ.

Leave a Reply

Your email address will not be published. Required fields are marked *