ಬೆಡ್ ರೂಮ್ ವಿಡಿಯೋ ರಿವೀಲ್ ಮಾಡಿದ ನಟಿ ಮೇಘನಾ ರಾಜ್, ನಟಿಯ ಬೆಡ್ ರೂಮ್ ನಲ್ಲಿ ಏನೇನಿದೆ ಗೊತ್ತಾ?

ಚಂದನವನದ ಮುದ್ದಾದ ನಟಿ ಮೇಘನಾ ರಾಜ್‌ (Meghana Raj) ಅವರು ಬದುಕಿನಲ್ಲಿ ನಡೆದ ಕಹಿ ಘಟನೆಗಳನ್ನು ಮರೆತು ಮಗ ರಾಯನ್ ಗಾಗಿ ಜೀವಿಸುತ್ತಿದ್ದಾರೆ. ಮಗನಿಗಾಗಿಯೇ ಬಣ್ಣದ ಲೋಕದಲ್ಲಿ ಸೆಕೆಂಡ್ ಇನ್ನಿಂಗ್ಸ್ ಆರಂಭಿಸಿದ್ದಾರೆ. ಕನ್ನಡ ಕಿರುತೆರೆ ಶೋವೊಂದಕ್ಕೆ ಜಡ್ಜ್ಸ್ ಆಗಿ ಎಂಟ್ರಿ ಕೊಟ್ಟ ಬಳಿಕ ಸಾಲು ಸಾಲು ಸಿನಿಮಾಗಳನ್ನು ಒಪ್ಪಿಕೊಂಡಿದ್ದಾರೆ. ತತ್ಸಮ ತದ್ಭವ (Tatsama Tadhbhava) ಸಿನಿಮಾದ ಮೂಲಕ ಸೆಕೆಂಡ್ ಇನ್ನಿಂಗ್ಸ್ ಆರಂಭಿಸಿದ್ದು ಈಗಾಗಲೇ ಸಿನಿಮಾದ ಚಿತ್ರೀಕರಣವು ಪೂರ್ಣಗೊಂಡಿದೆ.

ವೃತ್ತಿ ಜೀವನದಲ್ಲಿ ಬ್ಯುಸಿಯಿರುವಾಗಲೇ ನಟಿ ಮೇಘನಾ ರಾಜ್ ಅವರು ಗುಡ್ ನ್ಯೂಸ್ ನೀಡಿದ್ದರು. ಅದುವೇ ಯುಟ್ಯೂಬ್ ಚಾನೆಲ್ (Youtube Chanel) ಆರಂಭಿಸುವ ಮೂಲಕ ಫ್ಯಾನ್ಸ್ ಗಳನ್ನು ಖುಷಿ ಪಡಿಸಿದ್ದರು. ಯುಟ್ಯೂಬ್ ಚಾನೆಲ್ ಆರಂಭಿಸಿದ ಕೆಲವೇ ದಿನಗಳಲ್ಲಿ ಸಿಲ್ವರ್ ಪ್ಲೇ ಬಟನ್‌ ಕೂಡ ಗಳಿಸಿಕೊಂಡಿದ್ದಾರೆ. ನಟಿ ಮೇಘನಾ ರಾಜ್ ಅವರು ಆಗಾಗ ರಾಯನ್ ನ ಮುದ್ದಾದ ವಿಡಿಯೋಗಳನ್ನು ಶೇರ್ ಮಾಡಿಕೊಳ್ಳುತ್ತಾರೆ. ಇದೀಗ ಬೆಡ್‌ ರೂಮ್ (Bedroom) ಹೇಗಿದೆ ಎನ್ನುವುದನ್ನು ವಿಡಿಯೋದಲ್ಲಿ ಶೇರ್ ಮಾಡಿಕೊಂಡಿದ್ದಾರೆ.

ಅಂದಹಾಗೆ, ಮೇಘನಾ ರಾಜ್ ಹೊಸ ಮನೆ ಹೇಗಿದೆ? ಬೆಡ್ ರೂಮ್ ಹೇಗಿದೆ? ಹೀಗೆ ನಾನಾ ರೀತಿಯ ಪ್ರಶ್ನೆಗಳು ಫ್ಯಾನ್ಸ್ ಗಳು ಕೇಳುತ್ತಿದ್ದರು. ಕೊನೆಗೂ ಬೆಡ್ ರೂಮ್ ವಿಡಿಯೋ ಶೇರ್ ಮಾಡಿಕೊಳ್ಳುವ ಮೂಲಕ ಅಭಿಮಾನಿಗಳನ್ನು ಖುಷಿಯಾಗಿಸುವ ಪ್ರಯತ್ನ ಮಾಡಿದ್ದಾರೆ. ಈ ವಿಡಿಯೋದ ಆರಂಭದಲ್ಲಿ ರಾಯನ್ ರೂಮ್ ನಲ್ಲಿ ಆಟ ಆಡುತ್ತಿರುವುದು, ಹಾಸಿಗೆಯ ಉರುಳಾಡುತ್ತಿರುವುದು, ತೊದಲ ಮಾತುಗಳನ್ನು ಆಡುವುದು ಇದೆ. ಆದರೆ ಕೊನೆಗೆ ಬೆಡ್ ರೂಮ್ ಅನ್ನು ರಿವೀಲ್ ಮಾಡಿದ್ದಾರೆ.

ಮೇಘನಾ ಹಾಸಿಗೆ ಕೆಳಗೆ ನಾಲ್ಕು ಭಾಗವಿದ್ದು, ಒಂದರಲ್ಲಿ ಚಪ್ಪಲಿ ಮತ್ತೊಂದರಲ್ಲಿ ಬೆಡ್ಶೀಟ್ ಮತ್ತೊಂದು ಕವರ್ ಬಟ್ಟೆ ಹೀಗೆ ಅನೇಕ ವಸ್ತುಗಳನ್ನು ಇಟ್ಟಿದ್ದಾರೆ. ಈ ಹಾಸಿಗೆ ಪಕ್ಕ ರಾಯನ್‌ ತೊಟ್ಟಿಲು ಇದ್ದು, ಅಲ್ಲೇ ಪಕ್ಕದಲ್ಲಿ ವಾಕ್‌ ಇನ್‌ ಕಬೋರ್ಡ್‌ ಅನ್ನು ಕಾಣಬಹುದು. ಈ ಕಬೋರ್ಡ್‌ ವಿಶೇಷತೆಯೆಂದರೆ ಕಬೋರ್ಡ್‌ ಒಳಗೆ ನಡೆದುಕೊಂಡು ಹೋಗಿ ಬಟ್ಟೆ ಸೆಲೆಕ್ಟ್‌ ಮಾಡಿಕೊಳ್ಳಬಹುದಾಗಿದೆ.

ನಟಿ ಮೇಘನಾ ರಾಜ್ ಅವರು ಬೆಡ್ ರೂಮ್ ಹೇಗಿದೆ? ಏನೆಲ್ಲಾ ಇದೆ ಎನ್ನುವುದನ್ನು ರಿವೀಲ್ ಮಾಡುತ್ತಿದ್ದಂತೆ ಫ್ಯಾನ್ಸ್ ನಾನಾ ರೀತಿಯ ಕಾಮೆಂಟ್ ಮಾಡಿದ್ದಾರೆ. ಮಹಿಳೆಯೊಬ್ಬರು ‘ಮೇಘನಾ ರಾಜ್ ಅವರೇ ನಿಮ್ಮ ಜೊತೆ ನಾನು ತುಂಬಾ ಕನೆಕ್ಟ್‌ ಅಗುತ್ತೀನಿ. ನೀವು ಗರ್ಭಿಣಿ ಆದ ಸಮಯದಲ್ಲಿ ನಾನು ಗರ್ಭಿಣಿ ಆಗಿದ್ದು ಹೀಗಾಗಿ ಸದಾ ರಾಯನ್ ಮತ್ತು ನಿಮ್ಮ ಬಗ್ಗೆ ದೇವರಲ್ಲಿ ಪ್ರಾರ್ಥಿಸುತ್ತೇನೆ’ ಎಂದಿದ್ದಾರೆ. ಮತ್ತೊಬ್ಬರು ಫ್ಯಾನ್ಸ್ ನಿಮ್ಮ ಬಗ್ಗೆ ತುಂಬಾ ಹೆಮ್ಮೆ ಇದೆ ಮೇಡಮ್ ನನಗೆ. ಸ್ಟ್ರಾಂಗ್ ಮಹಿಳೆ ನೀವು, ತುಂಬಾ ತುಂಬಾ ಗೌರವ ನಿಮ್ ಮೇಲೆ ನನಗೆ’ ಎಂದಿದ್ದಾರೆ. ನಟಿಯನ್ನು ತತ್ಸಮ ತದ್ಭವದ ಮೂಲಕ ತೆರೆ ಮೇಲೆ ಮೇಘನಾ ರಾಜ್ ಅವರನ್ನು ನೋಡಲು ಕಾತುರರಾಗಿದ್ದಾರೆ.

Leave a Reply

Your email address will not be published. Required fields are marked *