ಚಂದನವನದ ಪ್ರತಿಭಾವಂತ ನಟಿ ಮೇಘನಾ ರಾಜ್. ನಟಿ ಮೇಘನಾ ರಾಜ್ ಬದುಕಿನಲ್ಲಿ ಘಟಿಸಿದ ಘಟನೆಯಿಂದ ಚೇತರಿಸಿಕೊಂಡು ಮೇಘನಾ ರಾಜ್ ವೃತ್ತಿ ಜೀವನದ ಕಡೆಗೆ ಗಮನ ಹರಿಸಿದ್ದಾರೆ. ಹೌದು, ಕಿರುತೆರೆ ಲೋಕದ ಡ್ಯಾನ್ಸಿಂಗ್ ಚಾಂಪಿಯನ್ ಶೋನಲ್ಲಿ ತೀರ್ಪುಗಾರರಾಗಿ ಕಾಣಿಸಿಕೊಂಡಿದ್ದರು. ತದನಂತರದಲ್ಲಿ ಡ್ಯಾನ್ಸಿಂಗ್ ಚಾಂಪಿಯನ್ ಶೋ ಮುಕ್ತಾಯವಾಗುತ್ತಿದ್ದಂತೆ ಸಿನಿಮಾಗಳಲ್ಲಿ ಬ್ಯುಸಿಯಾದರು.
ಹೌದು, ಚಿರಂಜೀವಿ ಸರ್ಜಾ ಕಂಡಿದ್ದ ಅದೇಷ್ಟೋ ಕನಸುಗಳನ್ನು ಈಡೇರಿಸಬೇಕಾಗಿರುವ ಜವಾಬ್ದಾರಿ ಈಗ ಮೇಘನಾ ಅವರ ಮೇಲಿದೆ. ಹೀಗಾಗಿ ಮಗನನ್ನು ಚಿರು ಕನಸಿನಂತೆ ಬೆಳೆಸುತ್ತಿದ್ದಾರೆ. ಸಾಕಷ್ಟು ಸಿನಿಮಾಗಳ ಮೂಲಕ ಜನರ ಪ್ರೀತಿಗಳಿಸಿದ್ದ ಮೇಘನಾ ರಾಜ್ ಒಂದಿಷ್ಟು ದಿನ ಸಿನಿಮಾ ಇಂಡಸ್ಟ್ರಿಯಿಂದ ದೂರ ಇದ್ದರು. ಚಿರು ಇಲ್ಲದ ನೋವು, ಮಗುವಿನ ಆರೈಕೆ ಹೀಗೆ ಬಣ್ಣದ ಲೋಕದಿಂದ ಅಂತರ ಕಾಯ್ದುಕೊಂಡಿದ್ದ ಮೇಘನಾ ಈಗ ಕಂಬ್ಯಾಕ್ ಮಾಡಿದ್ದಾರೆ.
ಒಂದೊಂದೇ ಸಿನಿಮಾವನ್ನು ಒಪ್ಪಿಕೊಳ್ಳುತ್ತಿದ್ದು, ಸದ್ಯಕ್ಕೆ ಕೆಲವು ಸಿನಿಮಾಗಳು ಮೇಘನಾ ರಾಜ್ ಕೈಯಲ್ಲಿದೆ. ಹೀಗಾಗಿ ಸಿನಿಮಾ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ನಟಿ ಮೇಘನಾ ರಾಜ್ ಕೆಲವು ದಿನಗಳ ಹಿಂದೆ, ನಿರ್ಮಾಪಕಿಯಾಗಿ ಕಾಣಿಸಿಕೊಳ್ಳುವ ವಿಚಾರವನ್ನು ರಿವೀಲ್ ಮಾಡಿದ್ದಾರೆ. ಈ ಮೂಲಕ ಸಿನಿಮಾರಂಗದಲ್ಲಿ ನಟಿ ಕಮ್ ನಿರ್ಮಾಪಕಿಯಾಗಿ ಬದುಕು ಕಟ್ಟಿಕೊಳ್ಳುತ್ತಿದ್ದಾರೆ.
ಮುಖ್ಯ ಪಾತ್ರದಲ್ಲಿ ಹೌದು, ನಟಿಸುತ್ತಿರುವ ಸಿನಿಮಾ ಒಂದಕ್ಕೆ ನಿರ್ಮಾಪಕಿಯಾಗಿದ್ದಾರೆ. ಮೇಘನಾ ರಾಜ್ ನಟಿಸುತ್ತಿರುವ ಈ ಸಿನಿಮಾದಲ್ಲಿ ಪನ್ನಗಾಭರಣ ಅವರು ಕೂಡ ಮೇಘನಾ ರಾಜ್ ಅವರೊಂದಿಗೆ ನಿರ್ಮಾಣದಲ್ಲಿ ಕೈ ಜೋಡಿಸಿದ್ದು, ಹೀಗಾಗಿ ನಿರ್ಮಾಪಕಿಯಾಗುತ್ತಿದ್ದಾರೆ ಎನ್ನಲಾಗಿದೆ. ಮೇಘನಾ ರಾಜ್, ಪನ್ನಗಾಭರಣ, ವಿಶಾಲ್ ಮತ್ತು ವಾಸುಕಿ ವೈಭವ ಜೊತೆಗಿರುವ ಫೋಟೋ ಒಂದನ್ನು ಕಳೆದ ವರ್ಷವೇ ಸಾಮಾಜಿಕ ಜಾಲತಾಣದಲ್ಲಿ ಮೇಘನಾ ರಾಜ್ ಶೇರ್ ಮಾಡಿದ್ದರು.
ಅದರ ಜೊತೆಗೆ ಮೇಘನಾ ರಾಜ್ ಹೊಸದೊಂದು ಸುದ್ದಿಯನ್ನು ಹಂಚಿಕೊಳ್ಳಲಿದ್ದೇನೆ ಎಂದು ಹೇಳಿಕೊಂಡಿದ್ದರು. ಇತ್ತೀಚಿಗೆ ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಮೇಘನಾ ರಾಜ್ ಅವರು ತಮ್ಮ ಸಿನಿಮಾವನ್ನು ವಿಶಾಲ್ ನಿರ್ದೇಶನ ಮಾಡುತ್ತಿದ್ದಾರೆ. ಪನ್ನಗಾಭರಣ ಅವರ ನಿರ್ಮಾಣವಿದ್ದು ಈ ಚಿತ್ರಕ್ಕೆ ಎಂದು ಪೋಸ್ಟ್ ಹಂಚಿಕೊಂಡಿದ್ದರು.
ಆದಾದ ಬಳಿಕ ಮೂಲಗಳಿಂದ ಈ ಚಿತ್ರದ ನಿರ್ಮಾಣದಲ್ಲಿ ಜೊತೆಯಾಗಿ ಮೇಘನಾ ರಾಜ್ ಕೂಡ ಕೈಜೋಡಿಸಿದ್ದಾರೆ ಎನ್ನಲಾಗಿದ್ದು, ನಟನೆ ಕಮ್ ನಿರ್ಮಾಣ ಎರಡನ್ನು ನಿಭಾಯಿಸಲಿರುವ ಮೇಘನಾ ರಾಜ್ ಈ ಸಿನಿಮಾವು ಮಹಿಳಾ ಪ್ರಧಾನ ಸಿನಿಮವಾಗಿದೆ. ಗಾಯಕ ವಾಸುಕಿ ವೈಭವ್ ಅವರ ಸಂಗೀತ ಸಂಯೋಜನೆ ಈ ಚಿತ್ರಕ್ಕಿದೆ. ಸದ್ಯಕ್ಕೆ ಮೇಘನಾ ರಾಜ್ ಅವರು ಸಿನಿ ಬದುಕಿನಲ್ಲಿ ಸೆಕೆಂಡ್ ಇನ್ನಿಂಗ್ಸ್ ಶುರು ಮಾಡಿದ್ದಾರೆ.
ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿರುವಾಗಲೇ ಇತ್ತೀಚೆಗಷ್ಟೇ ಮೇಘನಾ ರಾಜ್ ಅವರು ವಿದೇಶಕ್ಕೆ ಪ್ರವಾಸ ಕೈಗೊಂಡಿದ್ದರು. ಹೌದು, ತನ್ನ ಸ್ನೇಹಿತೆಯರ ಜೊತೆಗೆ ಮೇಘನಾ ಥೈಲ್ಯಾಂಡ್ ಗೆ ತೆರಳಿದ್ದರು. ಅಲ್ಲಿನ ಕೆಲವು ಚಿತ್ರಗನ್ನು ಸಾಮಾಜಿಕ ಜಾಲತಾಣಗಳಲ್ಲಿ ಅಪ್ ಲೋಡ್ ಮಾಡಿದ್ದರು. ಆದರೆ ಈ ಚಿತ್ರಗಳಿಗೆ ತಂದೆ ತಾಯಿಯ ಬಳಿ ಮಗುವನ್ನು ಬಿಟ್ಟು ಮೇಘನಾ ರಾಜ್ ಥೈಲ್ಯಾಂಡ್ ನಲ್ಲಿ ಮೋಜು ಮಸ್ತಿ ಮಾಡುತ್ತಿದ್ದಾರೆ.
ಎಂಬ ಟೈಟಲ್ ನೀಡಿರುವುದು ತೀವ್ರ ನೋವನ್ನುಂಟು ಮಾಡಿದೆ ಎಂದು ಮೇಘನಾ ತಂದೆ ಸುಂದರ್ ರಾಜ್ ಬೇಸರ ವ್ಯಕ್ತಪಡಿಸಿದ್ದರು. ‘ನಾವು ನೋವಿನಿಂದ ಹೊರ ಬರಲು ಪ್ರಯತ್ನಿಸುತ್ತಿದ್ದೇವೆ. ಆದರೆ ಇಂತಹ ಸಂದರ್ಭದಲ್ಲಿ ಈ ರೀತಿಯಾಗಿ ಬರೆದಿರುವುದು ನಮಗೆ ನೋವನ್ನುಂಟು ಮಾಡಿದೆ ‘ ಎಂದು ಹೇಳಿಕೊಂಡಿದ್ದರು. ಅದೇನೇ ಇದ್ದರೂ ಮೇಘನಾ ರಾಜ್ ಅವರು ಯಾವುದೇ ವಿಚಾರಕ್ಕೆ ತಲೆ ಕೊಡದೇ ಸಿನಿ ಕೆರಿಯರ್ ನಲ್ಲಿ ತೊಡಗಿಸಿ ಕೊಂಡಿದ್ದಾರೆ.