ನಾನು ಕೂಡ ಬಾಡಿ ಶೇಮಿಂಗ್ ಗೆ ಒಳಗಾಗಿದ್ದೆ ಎಂದ ನಟಿ ಮೇಘನಾ ರಾಜ್! ಸತ್ಯ ಹೊರಹಾಕಿದ ನಟಿ ಮೇಘನಾ ಹೇಳಿದ್ದೇನು ನೋಡಿ!!

ಮೇಘನಾ ರಾಜ್ ಚಂದನವನದ ಪ್ರತಿಭಾವಂತ ನಟಿ. ಸದ್ಯಕ್ಕೆ ನಟಿ ಮೇಘನಾ ರಾಜ್ ಬದುಕಿನಲ್ಲಿ ಘಟಿಸಿದ ಘಟನೆಯಿಂದ ಚೇತರಿಸಿಕೊಂಡು ಮೇಘನಾ ರಾಜ್ ವೃತ್ತಿ ಜೀವನದ ಕಡೆಗೆ ಗಮನ ಹರಿಸಿದ್ದಾರೆ. ನಟಿ ಮೇಘನಾ ರಾಜ್ ಅವರು ತನ್ನ ಮಗ ರಾಯನ್ ಗಾಗಿಯೇ ಸಿನಿಮಾ ಬದುಕಿನಲ್ಲಿ ಸಕ್ರಿಯರಾಗಿದ್ದಾರೆ. ಹೌದು ಮೇಘನಾ ರಾಜ್ ಪಾಲಿಗೆ ರಾಯನ್ ನೇ ಪ್ರಪಂಚ. ಹೀಗಾಗಿ ಮಗನ ಖುಷಿಯಲ್ಲಿ ಮೇಘನಾ ರಾಜ್ ಅವರು ತನ್ನ ಖುಷಿ ಕಾಣುತ್ತಿದ್ದಾರೆ.

ಹೌದು, ಕಿರುತೆರೆ ಲೋಕದ ಡ್ಯಾನ್ಸಿಂಗ್ ಚಾಂಪಿಯನ್ ಶೋನಲ್ಲಿ ತೀರ್ಪುಗಾರರಾಗಿ ಕಾಣಿಸಿಕೊಂಡಿದ್ದರು. ಹೀಗಿರುವಾಗ ಮೇಘನಾ ರಾಜ್ ಪಾಲಿಗೆ ಸಿನಿಮಾದಲ್ಲಿ ಅವಕಾಶಗಳು ಬಂದವು. ಚಿರಂಜೀವಿ ಸರ್ಜಾ ಕಂಡಿದ್ದ ಕನಸುಗಳನ್ನು ಈಡೇರಿಸಬೇಕಾಗಿರುವುದು ಮೇಘನಾ ರಾಜ್ ಅವರ ಕರ್ತವ್ಯ. ಅದರಲ್ಲಿಯೂ ಮಗನ ಬಗ್ಗೆ ಸಾಕಷ್ಟು ಕನಸುಗಳನ್ನು ಕಂಡಿದ್ದರು ಚಿರಂಜೀವಿ ಸರ್ಜಾ. ತನ್ನ ಮಗನಿಗಾಗಿ ವೃತ್ತಿ ಜೀವನದ ಕಡೆಗೆ ಗಮನ ಹರಿಸುತ್ತಿದ್ದೂ, ಈಗಾಗಲೇ ಕೆಲವು ಸಿನಿಮಾಗಳನ್ನು ಒಪ್ಪಿಕೊಂಡಿದ್ದು, ಸಿನಿಮಾ ಶೂಟಿಂಗ್ ಎಂದು ಬ್ಯುಸಿಯಾಗಿದ್ದಾರೆ.

ಇತ್ತೀಚೆಗಷ್ಟೇ ಸಂದರ್ಶನವೊಂದರಲ್ಲಿ ಸಿನಿ ಕುಟುಂಬದಿಂದಲೇ ಬಂದು ಬಾಡಿ ಶೇಮಿಂಗ್ ಗೆ ಒಳಗಾಗಿದ್ದ ನಟಿ ಮೇಘನಾರಾಜ್ ಈ ಬಗ್ಗೆ ಮಾತನಾಡಿದ್ದಾರೆ. ಸಿನಿ ಜರ್ನಿ ಬಗ್ಗೆ ಮಾತನಾಡುತ್ತಾ, ನಟಿ ಮೇಘನಾ ಸರ್ಜಾ ತನ್ನ ಸಿನಿ ಬದುಕಿನ ಕಹಿ ನೆನಪುಗಳನ್ನು ಬಿಚ್ಚಿಟ್ಟಿದ್ದಾರೆ. ಮುಕ್ತವಾಗಿ ಮಾತನಾಡಿದ ಮೇಘನಾ ರಾಜ್, ” ನಾನು ಸಿನಿಕುಟುಂಬದಿಂದಲೇ ಬಂದವಳು. ನೋಡಲು ಮುದ್ದು ಮುದ್ದಾಗಿದ್ದೆ.

ಎಲ್ಲರೂ ನನ್ನನ್ನು ರಾಜಕುಮಾರಿಯಂತೆ ಕಂಡರು. ಆದರೆ ನಾನು ಸಿನಿಮಾ ರಂಗಕ್ಕೆ ಕಾಲಿಟ್ಟಾಗ ನನ್ನ ದೇಹದ ತೂಕ, ಬಣ್ಣ, ಸ್ಕಿನ್ ಹಾಗೂ ಕೂದಲು ಸೇರಿದಂತೆ ಎಲ್ಲದಕ್ಕೂ ನನ್ನನ್ನು ಟೀಕಿಸಿದರು ಎಂದಿದ್ದಾರೆ. ನನಗೆ ನೆನಪಿರುವಂತೆ ನನ್ನ ಮೊದಲ ಪೋಟೋಶೂಟ್ ಬಳಿಕ ನಾನು ಅಕ್ಷರಷಃ ಕಣ್ಣೀರಿಟ್ಟಿದ್ದೆ. ಯಾಕೆಂದರೇ ನನ್ನ ಕೂದಲು, ಚರ್ಮ ಹಾಗೂ ಬಣ್ಣದ ಕಾರಣಕ್ಕೆ ನಾನು ಅಷ್ಟೊಂದು ಟೀಕೆಗಳನ್ನು ಎದುರಿಸಿದೆ ಎಂದಿದ್ದಾರೆ.

ಮಾತು ಮುಂದುವರೆಸಿದ ನಟಿ ಮೇಘನಾ ರಾಜ್, ” ಮಾತ್ರವಲ್ಲ ತಮಗೆ ಅವಕಾಶ ಸಿಕ್ಕಿದ್ದಕ್ಕೆ ನಾನು ಮಲೆಯಾಳಂ ಮತ್ತು ತಮಿಳು ಇಂಡಸ್ಟ್ರಿಗೆ ತೆರಳಿದ್ದೆ. ಆದರೆ ಅದಕ್ಕೂ ಕೂಡ ನಾನು ಟೀಕೆಗಳನ್ನು ಎದುರಿಸಬೇಕಾಯಿತು.‌ನೋಡಿ ತಮ್ಮ ಮಾತೃಭಾಷೆ ಬಿಟ್ಟು ಬೇರೆ ಭಾಷೆಗೆ ಹೋಗ್ತಿದ್ದಾರೆ. ಹಾಗಿದ್ದರೇ ಅವರಿಗೆ ತಮ್ಮ ಭಾಷೆಯ ಮೇಲೆ ಪ್ರೀತಿ ಇಲ್ಲವೇ ಎಂದೆಲ್ಲ ಟೀಕಿಸಿದರು ಎಂದಿದ್ದಾರೆ. ಅಲ್ಲದೇ ಒಂದು ಕಾಲದಲ್ಲಿ ಸ್ಯಾಂಡಲ್ ವುಡ್ ನಲ್ಲಿ ಮುಂಬೈ ಬೆಡಗಿಯರ ಹಾವಳಿ ಜೋರಿತ್ತು.

ಅವರ ಫಿಟ್ ಆಯಂಡ್ ಫೈನ್ ಮೈಕಟ್ಟಿನ ಕಾರಣಕ್ಕೆ ಸೌತ್ ನ ನಟಿಮಣಿಯರು ಅವಕಾಶವೆ ಎಲ್ಲದಂತೆ ಕಾದಿದ್ದ ಸ್ಥಿತಿಯೂ ನಿರ್ಮಾಣವಾಗಿತ್ತು. ಈಗ ಎಲ್ಲ ಟೀಕೆಗಳನ್ನು ಎದುರಿಸಿ ಬಂದಿರೋ ಮೇಘನಾ ಮತ್ತೆ ಕನ್ನಡದಲ್ಲಿ ಸಿನಿಮಾವೊಂದಕ್ಕೆ ನಾಯಕಿಯಾಗಿದ್ದು, ಚಿರು ಕನಸಿನಂತೆ ಪ್ರೊಡಕ್ಷನ್ ಹೌಸ್ ಆರಂಭಿಸಿರೋ ಪನ್ನಗಾ ನಿರ್ಮಾಣದ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ತಮ್ಮ ನೋವಿನ ವೈಯಕ್ತಿಕ ಬದುಕಿನ ಬಗ್ಗೆಯೂ ಮಾತನಾಡಿದ ಮೇಘನಾ ಒಂದು ಕಾಲದಲ್ಲಿ ನಾನು ಜೋರಾಗಿ ನಗುವುದಕ್ಕೂ ಯೋಚ್ನೇ ಮಾಡುತ್ತಿದ್ದೇ” ಎಂದು ಹೇಳಿಕೊಂಡಿದ್ದಾರೆ.

ಸದ್ಯಕ್ಕೆ ಮೇಘನಾ ರಾಜ್ ಅವರು ಸಿನಿ ಕೆರಿಯರ್ ನಲ್ಲಿ ಬ್ಯುಸಿಯಾಗಿದ್ದು, ಸಿನಿಮಾ ಚಿತ್ರೀಕರಣದಲ್ಲಿ ಸಕ್ರಿಯರಾಗಿದ್ದಾರೆ. ಇನ್ನು ನಟಿಯಾಗಿ ಕಾಣಿಸಿಕೊಳ್ಳುವುದರ ಜೊತೆಗೆ ಒಂದು ಹಂತ ಮುಂದೆ ಹೋಗಿ ನಿರ್ಮಾಪಕಿಯಾಗಿ ಮತ್ತೊಂದು ಜವಾಬ್ದಾರಿಯನ್ನು ಹೊತ್ತು ಕೊಂಡಿದ್ದಾರೆ. ಬಹಳ ವರ್ಷಗಳ ಬಳಿಕ ಸಿನಿಮಾದಲ್ಲಿ ನಟಿಸುತ್ತಿರುವ ಮೇಘನಾ ರಾಜ್ ಅವರನ್ನು ತೆರೆ ಮೇಲೆ ನೋಡಲು ಅಭಿಮಾನಿಗಳು ಕಾತುರರಾಗಿದ್ದಾರೆ.

Leave a Reply

Your email address will not be published. Required fields are marked *