ಎರಡನೇ ಮದುವೆಯ ಕುರಿತು ಸ್ಪಷ್ಟನೆ ನೀಡಿದ ಮೇಘನಾ ರಾಜ್, ನಟಿ ಖಡಕ್ ಆಗಿ ಹೇಳಿದ್ದೇನು ಗೊತ್ತಾ?

ನಟಿ ಮೇಘನಾ ರಾಜ್ (Meghana Raj) ಅವರು ಚಂದನವನದ ಪ್ರತಿಭಾವಂತ ನಟಿಮಣಿಯರಲ್ಲಿ ಒಬ್ಬರು. ಬದುಕಿನಲ್ಲಿ ನಡೆದ ಕೆಟ್ಟ ಘಟನೆಯನ್ನು ರಾಯನ್ ರಾಜ್ ಸರ್ಜಾ (Rayan Raj Sarja) ನಿಗಾಗಿ ಬದುಕುತ್ತಿದ್ದಾರೆ. ಸದ್ಯಕ್ಕೆ ತತ್ಸಮ ತದ್ಭವ (Tatsama Tadbhava) ಸಿನಿಮಾ ಮೂಲಕ ಕಮ್ ಬ್ಯಾಕ್ ಮಾಡಿದ್ದು ಈಗಾಗಲೇ ನಟಿ ಮೇಘನಾ ರಾಜ್ ಅವರು ಸಿನಿಮಾ ಶೂಟಿಂಗ್ ಕೆಲಸವನ್ನು ಮುಗಿಸಿದ್ದಾರೆ. ಆದರೆ ಇದೀಗ ತಮ್ಮ ಜೀವನದ ಒಂದು ಮುಖ್ಯವಾದ ವಿಚಾರದ ಬಗ್ಗೆ ಸ್ಪಷ್ಟನೆ ಕೊಟ್ಟಿದ್ದು, ಈ ಮೂಲಕ ಸುದ್ದಿಯಾಗಿದ್ದಾರೆ.

ಚಿರು ಅ-ಗಲಿದ ಬಳಿಕ ನಟಿ ಮೇಘನಾ ರಾಜ್ ಪಾಲಿಗೆ ಮಗನೇ ತನ್ನ ಪ್ರಪಂಚವಾಗಿದ್ದಾನೆ. ಆದರೆ, ಚಿರಂಜೀವಿ ಸರ್ಜಾ ಅಗಲಿದ ಮೇಲೆ ಮೇಘನಾ ಎರಡನೇ ಮದುವೆ ಆಗುತ್ತಾರೆ ಹೀಗೆ ನಾನಾ ರೀತಿಯ ಸುದ್ದಿಗಳು ಹರಿದಾಡುತ್ತಲೇ ಇದೆ. ಆದರೆ ಈ ಬಗ್ಗೆ ಯಾವುದೇ ಕಾರಣಕ್ಕೂ ಉತ್ತರ ಕೊಟ್ಟಿರಲಿಲ್ಲ. ಆದರೆ ಇದೀಗ ತನ್ನ ಎರಡನೇ ಮದುವೆಯ ಬಗ್ಗೆ ಮೌನ ಮುರಿದಿದ್ದು, ಸ್ವತಃ ಮೇಘನಾ ರಾಜ್ ಅವರೇ ಸ್ಪಷ್ಟನೆ ನೀಡಿದ್ದು, ಈ ವೈರಲ್ ಆಗಿವೆ.

ಕನ್ನಡ ವಾಹಿನಿಯೊಂದರ ಸಂದರ್ಶನ (Interview) ದಲ್ಲಿ ನಟಿ ಮೇಘನಾ ರಾಜ್ ಅವರು ಎರಡನೇ ಮದುವೆಯ ಬಗ್ಗೆ ಸ್ಪಷ್ಟನೆ ನೀಡಿದ್ದು, “ನಿಜ ಹೇಳಬೇಕು ಅಂದ್ರೆ ಎರಡನೇ ಮದುವೆ ಬಗ್ಗೆ ನಾನು ಯೊಚನೆ ಕೂಡ ಮಾಡಿಲ್ಲ. ನಿಜ ಹೇಳಬೇಕು ಅಂದ್ರೆ ಈ ತರ ಒಂದು ಅಯ್ಕೆ ಇದೆ ಅನ್ನೋ ಯೋಚನೆ ಕೂಡ ನನಗೆ ಬಂದಿಲ್ಲ ಈ ವಿಚಾರದ ಬಗ್ಗೆ ಯಾರೂ ನನ್ನ ಜೊತೆ ಚರ್ಚೆ ಮಾಡಿಲ್ಲ. ಎರಡನೇ ಮದುವೆ ಬಗ್ಗೆ ಯೋಚನೆ ಮಾಡಿಲ್ಲ ಮಾಡೋದು ಇಲ್ಲ” ಎಂದಿದ್ದಾರೆ.

“ಒಂದು ವಿಚಾರದ ಬಗ್ಗೆ ತುಂಬಾ ಕ್ಲಿಯರ್ ಆಗಿರುವ ನನ್ನ ಜೀವನದಲ್ಲಿ ನನಗೆ ನನ್ನ ಮಗ ಮುಖ್ಯವಾಗುತ್ತಾನೆ ನನ್ನ ಗಮನ ಇರುವುದು ಅವನ ಮೇಲೆ ಮಾತ್ರ ಇದಕ್ಕಿಂತ ಸಿಂಪಲ್ ಆಗು ಏನೂ ಹೇಳಲು ಆಗಲ್ಲ. ನನ್ನ ಜೀವನ ಇರುವುದೇ ರಾಯನ್ ರಾಜ್ ಸರ್ಜಾನಿಗೆ ಅದಾದ ಮೇಲೆ ನನಗೆ ಯಾವುದು ಮುಖ್ಯವಲ್ಲ ನನ್ನ ಜೀವನದಲ್ಲಿ. ನನ್ನ ಮಗನೇ ನನ್ನ ಓನ್ ಆಂಡ್ ಆಲ್’ ಎಂದು ಹೇಳಿದ್ದಾರೆ ನಟಿ ಮೇಘನಾ ರಾಜ್.

ನಟಿ ಮೇಘನಾ ರಾಜ್ ಅವರು ತತ್ಸಮ ತದ್ಭವ (Tatsama Tadbhava) ಸಿನಿಮಾದ ಮೂಲಕ ಸೆಕೆಂಡ್ ಇನ್ನಿಂಗ್ಸ್ ಆರಂಭಿಸಿದ್ದಾರೆ. ಈ ಸಿನಿಮಾದಲ್ಲಿ ಮೇಘನಾ ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಹಿರಿಯ ನಟಿ ಶ್ರುತಿ (Senior Actor Shruti) , ಪ್ರಜ್ವಲ್ ದೇವರಾಜ್ (Prajwal Devaraj) ಸೇರಿದಂತೆ ಅನೇಕರು ಸ್ಕ್ರೀನ್ ಶೇರ್ ಮಾಡಿಕೊಂಡಿದ್ದು, ಈಗಾಗಲೇ ಶೂಟಿಂಗ್ ಕೂಡ ಮುಕ್ತಾಯವಾಗಿದೆ. ನಟಿ ಮೇಘನಾ ರಾಜ್ ಅವರನ್ನು ತೆರೆ ಮೇಲೆ ನೋಡಲು ಫ್ಯಾನ್ಸ್ ಕಾತುರರಾಗಿದ್ದಾರೆ.

Leave a Reply

Your email address will not be published. Required fields are marked *