ಚಿಕ್ಕ ಹುಡುಗಿಯಂತೆ ಕಾಣುವ ಮೀರಾ ಜಾಸ್ಮಿನ್ ಅವರ ನಿಜವಾದ ವಯಸ್ಸೆಷ್ಟು ಗೊತ್ತಾ?

ನಮ್ಮ ಕನ್ನಡ ಚಿತ್ರರಂಗದಲ್ಲಿ ಅದೊಂದು ಕಾಲದಲ್ಲಿ ಕೇವಲ ಪರಭಾಷೆ ನಟಿಯರದ್ದೇ ಹಾವಳಿ ಇತ್ತು. ಪ್ರತಿಯೊಂದು ಸ್ಟಾರ್ ನಟರ ಸಿನಿಮಾಗಳಲ್ಲೂ ಕೂಡ ಹೊರಗಿನ ನಟಿಯರನ್ನೇ ಕರೆತರಲಾಗುತ್ತಿತ್ತು. ಅವರಲ್ಲಿ ಕೆಲವರು ಕನ್ನಡಿಗರ ಮನಸ್ಸನ್ನು ಗೆಲ್ಲಲು ಯಶಸ್ವಿ ಆದರೆ ಇನ್ನೂ ಕೆಲವರು ಬಂದ ಹಾಗೆ ಅದೇ ದಾರಿಯಲ್ಲಿ ವಾಪಾಸು ಹೋಗಿದ್ದಾರೆ. ಆದರೆ ಕನ್ನಡ ಚಿತ್ರರಂಗದಲ್ಲಿ ಇದ್ದು ಹಲವಾರು ಸಿನಿಮಾಗಳಲ್ಲಿ ನಟಿಸಿ ಹೆಸರು ಮಾಡಿದವರಲ್ಲಿ ನಟಿ ಮೀರಾ ಜಾಸ್ಮಿನ್ ಅವರು ಕೂಡ ಒಬ್ಬರಾಗಿದ್ದಾರೆ.

ಕೇವಲ ಕನ್ನಡ ಚಿತ್ರರಂಗದಲ್ಲಿ ಮಾತ್ರವಲ್ಲದೆ ತಮಿಳು ತೆಲುಗು ಹಾಗೂ ಮಲಯಾಳಂ ಚಿತ್ರರಂಗದಲ್ಲಿ ಕೂಡ ಮೀರಾ ಜಾಸ್ಮಿನ್ ಅವರು ಬಹು ಬೇಡಿಕೆಯ ನಾಯಕ ನಟಿಯಾಗಿ ಕಾಣಿಸಿಕೊಂಡಿದ್ದರು. ಎಲ್ಲಕ್ಕಿಂತ ವಿಚಿತ್ರವಾಗಿದ್ದು ಏನೆಂದರೆ ಚಿತ್ರರಂಗದಲ್ಲಿ ಬೇಡಿಕೆಯಲ್ಲಿ ಇದ್ದ ಸಂದರ್ಭದಲ್ಲಿಯೇ ಚಿತ್ರರಂಗವನ್ನು ತೊರೆದು ಮದುವೆ ಆಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಕೆಲವೊಂದು ಸುದ್ದಿಗಳ ಪ್ರಕಾರ ಈಗ ತಮ್ಮ ಪತಿಯಿಂದ ಕೂಡ ಅವರು ದೂರವಿದ್ದಾರೆ ಎಂಬುದಾಗಿ ತಿಳಿದು ಬಂದಿದ್ದು ಮತ್ತೆ ಚಿತ್ರರಂಗದಲ್ಲಿ ನಟಿಸಲು ಈಗ ತಯಾರಿಯನ್ನು ನಡೆಸಿಕೊಳ್ಳುತ್ತಿದ್ದಾರೆ.

ಇನ್ನು ನಟಿ ಮೀರಾ ಜಾಸ್ಮಿನ್ ಅವರು ಇತ್ತೀಚಿಗಷ್ಟೇ ತಮ್ಮ ಸೋಶಿಯಲ್ ಮೀಡಿಯಾ ಹ್ಯಾಂಡಲ್ಗಳಲ್ಲಿ ಗ್ಲಾಮರಸ್ ಫೋಟೋಶೂಟ್ ಮಾಡಿಸಿ ಪೋಸ್ಟ್ ಮಾಡಿ ಪಡ್ಡೆ ಹೈಕಳ ನಿದ್ದೆಯನ್ನು ಕೆಡಿಸುತ್ತಿದ್ದಾರೆ ಎಂದರೆ ತಪ್ಪಾಗಲಾರದು. ಮುಂದಿನ ದಿನಗಳಲ್ಲಿ ಯಾವ ಸಿನಿಮಾದಲ್ಲಿ ನಟಿಸುತ್ತಾರೆ ಎಂಬುದರ ಕುರಿತಂತೆ ಮೀರಾ ಜಾಸ್ಮಿನ್ ಅವರ ಅಭಿಮಾನಿಗಳು ಸಾಕಷ್ಟು ಕಾತರರಾಗಿದ್ದಾರೆ ಎನ್ನಬಹುದಾಗಿದೆ. ಈಗಲೂ ಕೂಡ ಒಂದಲ್ಲ ಒಂದು ವಿಚಾರದಿಂದ ನಟಿ ಮೀರಾ ಜಾಸ್ಮಿನ್ ಅವರು ಸುದ್ದಿ ಆಗುತ್ತಲೇ ಇರುತ್ತಾರೆ. ನೋಡೋದಕ್ಕೆ ಈಗಲೂ ಕೂಡ 18ರ ಹರಯದ ಯುವತಿಯಂತೆ ಕಾಣಿಸುವ ನಟಿ ಮೀರಾ ಜಾಸ್ಮಿನ್ ಅವರ ವಯಸ್ಸೆಷ್ಟು ಎನ್ನುವುದರ ಕುರಿತಂತೆ ಅವರ ಅಭಿಮಾನಿಗಳಲ್ಲಿ ಕುತೂಹಲವಿದೆ.

ಹೌದು ಮಿತ್ರರೇ ಹಲವಾರು ವರ್ಷಗಳಿಂದ ದಕ್ಷಿಣ ಭಾರತ ಚಿತ್ರರಂಗದಲ್ಲಿ ನಾಯಕ ನಟಿಯಾಗಿ ಯಶಸ್ವಿ ಸಿನಿಮಾ ಕರಿಯರ್ ಅನ್ನು ಹೊಂದಿರುವ ನಟಿ ಮೀರಾ ಜಾಸ್ಮಿನ್ ಅವರ ನಿಜವಾದ ವಯಸ್ಸು 40 ವರ್ಷ ವಯಸ್ಸಾಗಿದೆ. ಈ ಹಿಂದೆ ಸತತ ಸಿನಿಮಾಗಳಲ್ಲಿ ನಟಿಸುತ್ತಾ ಬಂದಂತೆ ಇನ್ನು ಮುಂದೆ ಕೂಡ ಅವರಿಗೆ ಸಿನಿಮಾದಲ್ಲಿ ನಟಿಸಲು ಅವಕಾಶ ಸಿಗಲಿ ಎಂಬುದಾಗಿ ಹಾರೈಸೋಣ. ನಟಿ ಮೀರಾ ಜಾಸ್ಮಿನ್ ಅವರ ಕುರಿತಂತೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ತಪ್ಪದೆ ಕಾಮೆಂಟ್ ಮಾಡುವ ಮೂಲಕ ನಮ್ಮೊಂದಿಗೆ ಹಂಚಿಕೊಳ್ಳಿ.

Leave a Reply

Your email address will not be published. Required fields are marked *