ಕೆಲವೊಂದು ಘಟನೆಗಳು ಇದೇನಪ್ಪಾ ಹೀಗಾಯಿತು ಎನ್ನುವ ಭಾವವೊಂದನ್ನು ಮನಸ್ಸಿನಲ್ಲಿ ಬಿತ್ತುತ್ತವೆ. ಹೌದು, ಸಮಾಜದಲ್ಲಿ ನಡೆಯುವ ಕೆಲವು ಘಟನೆಗಳು ಇಂದಿನ ಜನರ ಮನಸ್ಥಿತಿಯನ್ನು ಕೂಡ ಸಾರಿ ಹೇಳುವಂತೆ ಇದೆ. ಇತ್ತೀಚೆಗಷ್ಟೇ ಹಾಸ್ಟೆಲ್ (Hostel) ನಿಂದ ಪ್ಯಾರಾ ಮೆಡಿಕಲ್ ವಿದ್ಯಾರ್ಥಿನಿ (Para medical student) ಯೊಬ್ಬಳು ಕಾ-ಣೆಯಾಗಿದ್ದಳು.
ಆದರೆ ಕಾಣೆಯಾಗಿದ್ದ ವಿದ್ಯಾರ್ಥಿನಿಯು ಅನುಮಾಮಾಸ್ಪದ ಸ್ಥಿತಿಯಲ್ಲಿ ಶ-ವವಾಗಿ ಪ-ತ್ತೆಯಾಗಿದ್ದಾಳೆ. ಈ ಘಟನೆಯು ಬಾಗಲಕೋಟೆಯ (Bagalakote) ಶಿಗಿಕೇರಿ ಕ್ರಾಸ್ ನ ರೇಲ್ವೆ ಬ್ರಿಡ್ಜ್ ಬಳಿ ನಡೆದಿದ್ದು ಸ್ಥಳೀಯರನ್ನು ಬೆಚ್ಚಿ ಬೀಳಿಸಿದೆ. ಸುಮನ್ ಮನೋಹರ್ ಪತ್ತಾರ (Suman Manohar Pattara) ಎನ್ನುವ ವಿದ್ಯಾರ್ಥಿನಿಯು ಮೃ-ತಪಟ್ಟಿರುವ ವಿದ್ಯಾರ್ಥಿನಿ ಎಂದು ಗುರುತಿಸಲಾಗಿದ್ದು, ಇಳಕಲ್ (Ilkal) ಮೂಲದ ನಿವಾಸಿಯಾಗಿದ್ದಳು.

ಆಕೆಯು ಬಾಗಲಕೋಟೆ ಕುಮಾರೇಶ್ವರ್ ಮೆಡಿಕಲ್ ಕಾಲೇಜಿನಲ್ಲಿ (Bagalakot Kumareshwar Medical College) ಫಿಜಿಯೋಥೆರಪಿಸ್ಟ್ 3ನೇ ವರ್ಷದಲ್ಲಿ ಓದುತ್ತಿದ್ದಳು. ಆದರೆ ಸಡನ್ ಆಗಿ ಕಳೆದ ಕೆಲವು ದಿನಗಳ ಹಿಂದೆಯಷ್ಟೇ ಬೆಳಗ್ಗೆ ವೇಳೆಯಲ್ಲಿ ಹಾಸ್ಟೆಲ್ನಿಂದ ಕಾ-ಣೆಯಾಗಿ ಬಿಟ್ಟಿದ್ದಳು. ಹಾಸ್ಟೆಲ್ ನಿಂದ ಮಗಳು ಸುಮನ್ ಮನೋಹರ್ ಪತ್ತಾರ ಕಾಣೆಯಾಗಿರುವುದರ ಬಗ್ಗೆ ಆಕೆಯ ಪೋಷಕರು ದೂರು ನೀಡಿದ್ದರು.
ಆದರೆ ಸೆಪ್ಟೆಂಬರ್ 16 ರಂದು ಶಿಗಿಕೇರಿ ಕ್ರಾಸ್ನ ರೇಲ್ವೆ ಬ್ರಿಡ್ಜ್ ಕಳಗೆ ಮುಳ್ಳುಕಂಟಿಯಲ್ಲಿ ಶ-ವ ಪ-ತ್ತೆಯಾಗಿದೆ. ಆ ಕೂಡಲೇ ಸ್ಥಳಕ್ಕೆ ಬಾಗಲಕೋಟೆ ರೇಲ್ವೆ ಹಾಗೂ ಗ್ರಾಮೀಣ ಪೊಲೀಸರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮೃ-ತದೇಹದ ಮ-ರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ತನಿಖೆ ಬಳಿಕವಷ್ಟೇ ಈ ಘಟನೆಯ ಬಗ್ಗೆ ಅಸಲಿ ವಿಚಾರವು ಬೆಳಕಿಗೆ ಬರಬೇಕಾಗಿದೆ.
ಘಟನೆಯ ಕುರಿತು ಎಸ್ಪಿ ಅಮರನಾಥ ರೆಡ್ಡಿ (SP Amaranatha Reddy) ಪ್ರತಿಕ್ರಿಯೆ ನೀಡಿದ್ದು, “14ನೇ ತಾರೀಖು ಸಂಜೆ 5 ಗಂಟೆ ವೇಳೆಗೆ ಮಹಿಳಾ ಪೊಲೀಸ್ ಠಾಣೆಗೆ ಆಗಮಿಸಿ ದೂರು ದಾಖಲಿಸಿದ್ದರು. ದೂರಿನಲ್ಲಿ 13ನೇ ತಾರೀಖು ಬೆಳಗ್ಗೆ ಹಾಸ್ಟೆಲ್ ವಾರ್ಡನ್ ಬಳಿ ತೆರಳಿದ್ದ ಮೃತ ವಿದ್ಯಾರ್ಥಿನಿ ನನಗೆ ಪಾರ್ಸೆಲ್ ಒಂದು ಬಂದಿದೆ, ಎಪಿಎಂಸಿ ಕ್ರಾಸ್ ಬಳಿ ಹೋಗಿ ಬರ್ತೀನಿ ಅಂತ ಹೇಳಿ ತೆರಳಿದ್ದರಂತೆ. ಆದರೆ ಆ ಬಳಿಕ ವಿದ್ಯಾರ್ಥಿನಿ ಹಾಸ್ಟೆಲ್ ವಾಪಸ್ ಆಗಿರುವುದಿಲ್ಲ” ಎಂದಿದ್ದಾರೆ.
“ಇದರಿಂದ ಪೋಷಕರು ಠಾಣೆಗೆ ಬಂದು ದೂರು ದಾಖಲಿಸಿದ್ದರು. ತನಿಖೆ ನಡೆಯುತ್ತಿದ್ದ ವೇಳೆ ಇಂದು ವಿದ್ಯಾರ್ಥಿನಿ ಮೃತ ದೇಹ ರೈಲ್ವೆ ಟ್ರ್ಯಾಕ್ ಪಕ್ಕ ಪತ್ತೆಯಾಗಿದೆ. ಮೃತ ಪೋಷಕರು ನೀಡುವ ದೂರು ಹಾಗೂ ವಿದ್ಯಾರ್ಥಿನಿಯ ಮೃತದೇಹ ಮರಣೋತ್ತರ ಪರೀಕ್ಷೆಯ ವರದಿ ಮಾಹಿತಿಯಂತೆ ನಾವು ಮುಂದಿನ ಕ್ರಮಕೈಗೊಳ್ಳುತ್ತೇವೆ ಎಂದು ತಿಳಿಸಿದ್ದಾರೆ.