ಟಿಕ್ ಟಾಕ್ ಹುಚ್ಚಿಗೆ ಬಿದ್ದ ಗೃಹಿಣಿ, ಗಂಟೆ ಗಟ್ಟಲೆ ಪರ ಪುರುಷರ ಜೊತೆ ಮೊಬೈಲ್ ನಲ್ಲಿ ಕಳ್ಳಾಟ! ಹೆಂಡತಿಯ ಮೊಬೈಲ್ ಚೆಕ್ ಮಾಡಿದ ಗಂಡ ಏನು ಮಾಡಿದ ನೋಡಿ!!

ಸೋಶಿಯಲ್ ಮೀಡಿಯಾಗಳು ಎಷ್ಟು ಒಳ್ಳೆಯದೋ, ಅಷ್ಟೇ ಕೆಟ್ಟದ್ದು ಕೂಡ. ಸೋಶಿಯಲ್ ಮೀಡಿಯಾದಿಂದ ಬದುಕೇ ಅಂತ್ಯಗೊಳ್ಳುವ ಘಟನೆಗಳು ನಡೆಯುತ್ತಲೇ ಇರುತ್ತದೆ. ಸೋಶಿಯಲ್ ಮೀಡಿಯಾದ ದಾಸಳಾದ ಈ ಯುವತಿಯ ಬದುಕು ಕೊನೆಯಾದ ಘಟನೆಯೊಂದು ಎಲ್ಲರನ್ನು ಬೆಚ್ಚಿ ಬೀಳಿಸಿತ್ತು. ತಮಿಳುನಾಡಿನ ಕಡಲೂರು ಜಿಲ್ಲೆಯ ಬನ್ರುಟ್ಟಿ ಬಳಿಯ ಕಡಂಬುಲಿಯರ್‌ನ ಕಾರು ಚಾಲಕ ಕುಮಾರವೇಲ್, ನೈವೇಲಿ ದಿದಿರ್ ಕುಪ್ಪಂನ ರಾಜೇಶ್ವರಿ ಅವರನ್ನು ಪ್ರೀತಿಸುತ್ತಿದ್ದನು.

ಈ ವಿಚಾರವನ್ನು ಹಿರಿಯರಿಗೆ ತಿಳಿಸಿ ಅವರ ಅನುಮತಿ ಪಡೆದು ಮದುವೆ ಮಾಡಿ ಸುಖ ಜೀವನ ನಡೆಸುತ್ತಿದ್ದರು. ಈ ಡಂಪತಿಗೆ 7 ಮತ್ತು 3 ವರ್ಷದ ಇಬ್ಬರು ಮಕ್ಕಳಿದ್ದರು. ಈ ಕುಮಾರವೇಲ್ ಕಾರು ಚಾಲಕನಾಗಿದ್ದು, ಹೆಚ್ಚಿನ ಸಮಯ ಹೊರಗೆ ಇರುತ್ತಿದ್ದನು. ಇದರಿಂದ ರಾಜೇಶ್ವರಿ ಮನೆಯಲ್ಲಿ ಒಂಟಿಯಾಗಿ ಮಕ್ಕಳೊಂದಿಗೆ ಕಾಲ ಕಳೆಯುತ್ತಿದ್ದಳು.

ಪತಿ ಕುಮಾರ್ ಮನೆಯಲ್ಲಿದ್ದಾಗ ಆತನ ಸ್ಮಾರ್ಟ್‌ಫೋನ್ ತೆಗೆದುಕೊಂಡು ನೋಡುತ್ತಿದ್ದಳು. ಕುಮಾರ್ ಈ ವಿಷಯದ ಬಗ್ಗೆ ಹೆಚ್ಚು ಗಮನ ಹರಿಸಲಿಲ್ಲ. ಸ್ವಲ್ಪ ಸಮಯದ ಹಿಂದೆ ಹೆಚ್ಚಾಗಿ ನೈಟ್ ಡ್ಯೂಟಿ ಮಾಡುತ್ತಿದ್ದ ಕುಮಾರ್ ಹಗಲು ಮನೆಯಲ್ಲೇ ಇರುತ್ತಿದ್ದನು. ಇದರಿಂದಾಗಿ ರಾಜೇಶ್ವರಿ ಹೆಚ್ಚಿನ ಸಮಯವನ್ನು ಆತನ ಸ್ಮಾರ್ಟ್ ಫೋನ್ ನಲ್ಲೇ ಕಳೆಯುತ್ತಿದ್ದಳು.

ಪತ್ನಿಯ ಅತಿಯಾದ ಸ್ಮಾರ್ಟ್ ಫೋನ್ ಬಳಕೆ ಇಷ್ಟವಾಗದೆ ಪತ್ನಿಗೆ ಕುಮಾರ್ ಬೈದಿದ್ದನು. ಸ್ಮಾರ್ಟ್ ಫೋನ್ ಜೊತೆ ಹೆಚ್ಚು ಸಮಯ ಕಳೆಯಬೇಡ. ಆದಷ್ಟು ಸ್ಮಾರ್ಟ್ ಫೋನ್ ನಿಂದ ದೂರವಿರು ಎಂದು ಎಚ್ಚರಿಸಿದ್ದನು. ಆದರೆ ಆಕೆ ಕೇಳದೆ ಪತಿಗೆ ಸ್ಮಾರ್ಟ್ ಫೋನ್ ಕೊಡಿಸುವಂತೆ ಕೇಳಿದ್ದಳು. ಕುಮಾರ್ ರಾಜೇಶ್ವರಿಗೆ ಹೊಸ ಸ್ಮಾರ್ಟ್ ಫೋನ್ ಖರೀದಿಸಿ ಕೊಟ್ಟಿದ್ದನು.

ಆದರೆ ಕೈಗೆ ಸ್ಮಾರ್ಟ್ ಫೋನ್ ಸಿಕ್ಕಾಗ ರಾಜೇಶ್ವರಿಯ ಸಂತೋಷಕ್ಕೆ ಮಿತಿಯೇ ಇರಲಿಲ್ಲ. ಹೀಗಿರುವಾಗ ಸಾಮಾಜಿಕ ಮಾಧ್ಯಮದಲ್ಲಿನ ಟಿಕ್ ಟಾಕ್‌ಗೆ ಎಂಟ್ರಿ ಕೊಟ್ಟಿದ್ದಳು. ಬರುಬರುತ್ತಾ ರಾಜೇಶ್ವರಿ ಟಿಕ್ ಟಾಕ್ ವಿಡಿಯೋಗಳ ಅಭಿಮಾನಿಗಳು ಹೆಚ್ಚಾಗಿದ್ದರು. ಟಿಕ್ ಟಾಕ್‌ನಲ್ಲಿ ಪರಿಚಯವಾದ ಯುವಕರೊಂದಿಗೆ ವಿಡಿಯೋ ಮಾಡಿ ಪೋಸ್ಟ್ ಮಾಡುತ್ತಿದ್ದಳು.

ಹೀಗಿರುವಾಗ ಚಾಲಕರು ರಾಜೇಶ್ವರಿ ಅವರ ಟಿಕ್ ಟಾಕ್ ವೀಡಿಯೊಗಳನ್ನು ಕುಮಾರ್ ಗೆ ತೋರಿಸುತ್ತಿದ್ದರು. ಕುಮಾರ್ ಅವರನ್ನು ನಿಮ್ಮ ಹೆಂಡತಿಯ ಹೆಸರೇನು ಕೇಳಲು ಶುರು ಮಾಡಿದ್ದರು. ಟಿಕ್ ಟಾಕ್‌ನಲ್ಲಿ ಬರುತ್ತಿರುವ ವೀಡಿಯೊಗಳನ್ನು ನೋಡಿದ ಕುಮಾರ್, ಇತರ ಚಾಲಕರು ಕೇಳಿದ ಪ್ರಶ್ನೆಗಳಿಗೆ ಉತ್ತರಿಸಲು ಸಾಧ್ಯವಾಗದೆ ಸೈಲೆಂಟ್ ಆಗಿ ಬಿಟ್ಟಿದ್ದರು.

ಟಿಕ್‌ಟಾಕ್‌ ಹುಚ್ಚಿಗೆ ಬಿದ್ದ ಪತ್ನಿ ರಾಜೇಶ್ವರಿ ತನ್ನ ಮಾತು ಕೇಳುತ್ತಿಲ್ಲ ಎಂದು ಮನಗಂಡ ಕುಮಾರ್‌, ಬೇರೆ ಕಡೆ ಹೋದರೆ ಆಕೆಯಲ್ಲಿ ಬದಲಾವಣೆಯಾಗಬಹುದು ಎಂದುಕೊಂಡಿದ್ದರು..ಹೀಗಾಗಿ ಬೇರೆ ಕಡೆ ಶಿಫ್ಟ್ ಆಗಿದ್ದರು. ಆದರೆ ರಾಜೇಶ್ವರಿ ಟಿಕ್ ಟಾಕ್ ವಿಡಿಯೋಗಳ ಮೂಲಕ ಅದೇ ಪ್ರದೇಶದಲ್ಲಿ ವಾಸಿಸುತ್ತಿದ್ದ ಮುರುಗನ್ ಎಂಬ ವ್ಯಕ್ತಿಯ ಪರಿಚಯವಾಯಿತು.

ಈ ಪರಿಚಯ ಕ್ರಮೇಣ ವಿವಾಹೇತರ ಸಂಬಂಧಕ್ಕೆ ತಿರುಗಿತ್ತು. ತನ್ನ ಫ್ಯಾನ್ಸ್ ಗಳ ಜೊತೆಗೆ ಗಂಟೆಗಟ್ಟಲೆ ಫೋನ್‌ನಲ್ಲಿ ಮಾತನಾಡುತ್ತಿದ್ದಳು. ಅದಲ್ಲದೇ ರಾತ್ರಿ ಡ್ಯೂಟಿಗೆ ತೆರಳಿದ್ದ ಕುಮಾರ್ ಎಷ್ಟು ಬಾರಿ ಕರೆ ಮಾಡಿದರೂ ರಾಜೇಶ್ವರಿ ಅವರ ಫೋನ್ ಎಂಗೇಜ್ ಎಂದು ಬರುತ್ತಿತ್ತು. ಮನೆಗೆ ಹಿಂದಿರುಗಿದ್ದ ಕುಮಾರ್ ತನ್ನ ಹೆಂಡತಿಯನ್ನು ಕೇಳಿದ್ದು, ಪತಿ ಕೇಳಿದಾಗಲೆಲ್ಲ ರಾಜೇಶ್ವರಿ ಏನೇನೋ ಕಥೆ ಹೇಳಿ ಮಾತು ಮರೆಸಿ ಬಿಡುತ್ತಿದ್ದಳು.

ಒಂದು ರಾತ್ರಿ ಡ್ಯೂಟಿ ಮುಗಿಸಿ ಮನೆಗೆ ಹೋದ ಕುಮಾರ್ ಗಾಬರಿಯಾಗಿದ್ದನು. ಪತ್ನಿ ರಾಜೇಶ್ವರಿ ಬೆಡ್‌ರೂಮ್‌ನಲ್ಲಿ ಬೇರೊಬ್ಬ ಪುರುಷನೊಂದಿಗೆ ದೈ-ಹಿಕ ಸಂ-ಪರ್ಕ ಹೊಂದಿದ್ದಳು. ಹೆಂಡತಿಯನ್ನು ಆ ಸ್ಥಿತಿಯಲ್ಲಿ ನೋಡಿದ ಕುಮಾರನಿಗೆ ಸಿಟ್ಟು ನೆತ್ತಿಗೇರಿತ್ತು. ಅವನು ಕೋಪದಿಂದ ಕೂಗಾಡಿದ್ದು, ಅವರ ಮೇಲೆ ಹ-ಲ್ಲೆ ನಡೆಸಿದ್ದನು. ಈ ವೇಳೆ ರಾಜೇಶ್ವರಿಯ ಪ್ರಿಯಕರ ಪರಾರಿಯಾಗಿದ್ದು, ರಾಜೇಶ್ವರಿ ತಲೆಗೆ ತೀವ್ರ ಪೆಟ್ಟಾಗಿತ್ತು. ಕುಮಾರ್ ವೆಲ್ ರ ಏಟಿಗೆ ತೀ-ವ್ರ ರ-ಕ್ತಸ್ರಾವವಾಗಿದ್ದ ರಾಜೇಶ್ವರಿ ಸ್ಥಳದಲ್ಲೇ ಸಾ-ವನ್ನಪ್ಪಿದ್ದಳು.

ರಾಜೇಶ್ವರಿ ಅವರ ತಾಯಿ ಸುಶೀಲಾ ಅವರ ದೂ-ರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಕುಮಾರ್‌ನನ್ನು ಬಂಧಿಸಿದ್ದರು. ಪೊಲೀಸರ ತಪ್ಪೋಪ್ಪಿ ಕೊಂಡಿದ್ದ ಕುಮಾರ್, ” ತನ್ನ ಪತ್ನಿ ಟಿಕ್ ಟಾಕ್ ಗೆ ದಾಸಳಾಗಿದ್ದು, ತನ್ನ ಮಾತು ಕೇಳುತ್ತಿಲ್ಲ. ಸುಮಾರು 300 ಟಿಕ್ ಟಾಕ್ ವಿಡಿಯೋಗಳನ್ನು ಮಾಡಿದ್ದಾಳೆ. ವೀಡಿಯೊಗಳ ಮೂಲಕ ಪರಿಚಯವಾದ ಕೆಲವು ಜನರೊಂದಿಗೆ ತನಗೆ ವಿವಾಹೇತರ ಸಂಬಂಧವನ್ನು ಹೊಂದಿದ್ದಾಳೆ ಎಂದಿದ್ದನು. ಯುವತಿಯೂ ತನ್ನ ಬದುಕಿನ ಅಂ-ತ್ಯಕ್ಕೆ ಈ ಸೋಶಿಯಲ್ ಮೀಡಿಯಾ ಕಾರಣವಾಗಿದ್ದು ನಿಜಕ್ಕೂ ವಿಪರ್ಯಾಸ.

Leave a Reply

Your email address will not be published. Required fields are marked *