ಇನ್ಸ್ಟಾಗ್ರಾಮ್ ನಲ್ಲಿ ಪರಿಚಯವಾಗಿ ಪ್ರೀತಿಸಿ ಮದುವೆಯಾದ ಜೋಡಿ, ಆದರೆ ಈ ಖತರ್ನಾಕ್ ಯುವತಿಯ ಸಂಬಂಧ ಎಷ್ಟು ಜನರ ಜೋತೆ ಇತ್ತು ಗೊತ್ತಾಗಿ ಪತಿರಾಯ ಶಾಕ್, ಇಲ್ಲಿದೆ ನೋಡಿ!!

ಮದುವೆ (Marriage) ಎನ್ನುವುದು ಸ್ವರ್ಗದಲ್ಲಿ ನಿಶ್ಚಯವಾಗಿರುತ್ತದೆ ಎನ್ನಲಾಗುತ್ತದೆ. ಹೀಗಾಗಿ ಈ ಮಾತಿನಂತೆ ಹಿಂದಿನ ಕಾಲದವರು ದಾಂಪತ್ಯ ಜೀವನದಲ್ಲಿ ಅದೆಷ್ಟೇ ಕಷ್ಟ ಬಂದರೂ ಸಹಿಸಿಕೊಂಡು ಹೋಗುತ್ತಿದ್ದಾರೆ. ಆದರೆ ಇತ್ತೀಚೆಗಿನ ದಿನಗಳಲ್ಲಿ ಗಂಡ ಹೆಂಡತಿ ಸಂಬಂಧಕ್ಕೆ ಯಾವುದೇ ಅರ್ಥವನ್ನು ಕಳೆದುಕೊಳ್ಳುತ್ತಿದೆ. ಅಷ್ಟೇ ಅಲ್ಲದೆ ಸಂಬಂಧದಲ್ಲಿ ಮೋ-ಸ ಮಾಡುತ್ತಿರುವವರ ಸಂಖ್ಯೆ ಹಾಗೂ ಮೋ-ಸ ಹೋಗುತ್ತಿರುವವರ ಸಂಖ್ಯೆಯು ಹೆಚ್ಚಾಗುತ್ತಿದೆ. ಇದೀಗ ಇಂತಹದೊಂದು ಘಟನೆಯು ನಡೆದಿದೆ.

ಅಂದಹಾಗೆ, ಗರ್ಭಿಣಿ ಪತ್ನಿ (Wife) ವಾಪಸ್‌ ಬಂದಿಲ್ಲ, ನಾಪತ್ತೆಯಾಗಿದ್ದಾಳೆ ಎಂದು ದಾವಣಗೆರೆ (Davanagere) ಕೆಟಿಜೆ ನಗರ ಪೊಲೀಸ್‌ ಠಾಣೆ (KTJ Police Station) ಯಲ್ಲಿ ಪತಿಯು ದೂರು ನೀಡಿದ್ದಾಳೆ. ಆದರೆ ಆತನಿಗೆ ಪತ್ನಿಯು ಮಾಡಿದ ಕೆಲಸವನ್ನು ಕೇಳಿ ಶಾಕ್ ಆಗಿದೆ. ಕಳೆದ ವರ್ಷ ಮಂಡ್ಯ (Mandya) ಜಿಲ್ಲೆ ಪಾಂಡವಪುರ ತಾಲೂಕಿನ ನರಹಳ್ಳಿ ಗ್ರಾಮದ‌ ಯುವತಿಯನ್ನು ದಾವಣಗೆರೆಯ ಪ್ರಶಾಂತ್ (Prashanth) ಎನ್ನುವವನು ಮದುವೆ ಮಾಡಿಕೊಂಡಿದ್ದನು.

ಇಬ್ಬರು ಪರಿಚಯವಾದದ್ದು ಇನ್‌ ಸ್ಟಾಗ್ರಾಮ್‌ (Instagram) ಮೂಲಕ. ಈ ಪರಿಚಯವು ಪ್ರೀತಿಗೆ ತಿರುಗಿ ಕೊನೆಗೆ ಇಬ್ಬರೂ ಸ್ವಇಚ್ಛೆಯಿಂದ ವೈವಾಹಿಕ ಜೀವನಕ್ಕೆ ಕಾಲಿಟ್ಟರು. ಮದುವೆಯಾಗಿ ಮೂರು ತಿಂಗಳು ಸಂಸಾರ ಮಾಡಿದ ಆಕೆಯು ತನ್ನ ತವರು ಮನೆಗೆ ಹೋಗಿದ್ದಾಳೆ. ಅಲ್ಲಿ ತಾನು ಗರ್ಭಿಣಿ ಎಂದು ಹೇಳಿದ್ದು, ವಾಪಸ್‌ ಬಂದಿಲ್ಲ. ಹೀಗಾಗಿ ತನ್ನ ಪತ್ನಿ ಬಂದಿದ್ದ ಎಂದು ದೂ-ರು ನೀಡಿದ ಬಳಿಕ ಪತಿಗೆ, ಪತ್ನಿಯು ನಾಲ್ಕನೇ ಮದುವೆ ಸುದ್ದಿಯೊಂದು ಕಿವಿಗೆ ಬಿದ್ದಿದೆ.

ಈ ಯುವತಿಯು ಈಗಾಗಲೇ ಹೆಸರು ಬದಲಾಯಿಸಿಕೊಂಡು ಮೂವರನ್ನು ಮದುವೆಯಾಗಿ ವಂ-ಚಿಸಿದ್ದಾಳೆ. ಅದರಲ್ಲಿ ತಾನು ಒಬ್ಬ ಎನ್ನುವುದು ಆತನಿಗೆ ತಿಳಿದು ಶಾ-ಕ್ ಆಗಿದ್ದಾನೆ. ಈ ಹಿಂದೆ, ಮೈಸೂರು ಹತ್ತಿರದ ಬೆಳಗೊಳ ಬಳಿ ಒಬ್ಬ ವ್ಯಕ್ತಿಯ ಜೊತೆಗೆ ಮದುವೆಯಾಗಿದ್ದಳು. ನಂತರದಲ್ಲಿ ದಾವಣಗೆರೆ ಪ್ರಶಾಂತ್ (Prashanth) ಹಾಗೂ ಬೆಂಗಳೂರು ರಘು (Raghu) ಎಂಬುವವರನ್ನು ಮದುವೆಯಾಗಿ ಮೋ-ಸ ಮಾಡಿದ್ದಾಳೆ.

ಇಷ್ಟಕ್ಕೂ ಸುಮ್ಮನಾಗದ ಈಕೆಯು ಮಂಡ್ಯದ ಇನ್ನೊಬ್ಬ ಯುವಕನನ್ನು ಪ್ರೀತಿಸುತ್ತಿದ್ದಾಳೆ. ಆತನನ್ನು ಮದುವೆಯಾಗಿದ್ದಾಳೆ ಎನ್ನುವ ವಿಚಾರವು ಬೆಳಕಿಗೆ ಬಂದಿದೆ. ಈ ವಿಚಾರವು ತಿಳಿಯುತ್ತಿದ್ದಂತೆ ಮೋ-ಸ ಹೋಗಿರುವ ಪ್ರಶಾಂತ್ ತನ್ನ ಅಳಲನ್ನು ತೋಡಿಕೊಂಡಿದ್ದಾನೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಪ್ರಶಾಂತ್, “ಮದುವೆಯಾಗಿ ವಂ-ಚಿಸುವುದನ್ನು ಕಾಯಕ‌ ಮಾಡಿಕೊಂಡಿರುವ ಮಹಿಳೆ ಇನ್‌ಸ್ಟಾಗ್ರಾಮ್ ರೀಲ್ಸ್‌ನಲ್ಲಿ ಎಕ್ಸ್‌ಪರ್ಟ್‌ ಆಗಿ ಹುಡುಗರನ್ನು ಯಾಮಾರಿಸುವ ಕೆಲಸ ಮಾಡುತ್ತಿದ್ದಾಳೆ. ಈಕೆ ವಿರುದ್ಧ ಕ್ರಮ ಕೈಗೊಳ್ಳಿ” ಎಂದಿದ್ದಾನೆ. ಈ ಘಟನೆಯನ್ನು ನೋಡಿದ ಮೇಲೆ ಸೋಶಿಯಲ್ ಮೀಡಿಯಾದಲ್ಲಿ ಪರಿಚಯವಾಗಿ ಪ್ರೀತಿಗೆ ಬಿದ್ದು ಮದುವೆಯಾಗುವ ಮುನ್ನ ಸಾವಿರ ಸಲ ಯೋಚಿಸುವುದು ಒಳ್ಳೆಯದು.

Leave a Reply

Your email address will not be published. Required fields are marked *