ಹೆಂಡತಿ ಕಾಣೆಯಾಗಿದ್ದಾಳೆ ಎಂದು ದೂರು ಕೊಟ್ಟ ಗಂಡ. ತನಕೆಯಲ್ಲಿ ಗೊತ್ತಾಯ್ತು ಗಂಡನ ಅಸಲಿ ಮುಖ!! ನಿಜಕ್ಕೂ ನಡೆದಿದ್ದೇನು?!!

Manimaran and maithili : ನಾಪತ್ತೆ ದೂರು ದಾಖಲಿಸಿ ಪತಿ ಮಣಿಮಾರನ್‌, ಮೃ ತ ದೇಹ ಪತ್ತೆಯಾಗುತ್ತಿದ್ದಂತೆ ಪೊಲೀಸರಿಂದ ಬಿರುಸಿನ ತನಿಖೆ, ಕೊನೆಗೆ ಈ ನಾಪತ್ತೆಯ ಹಿಂದೆಯೇ ಟ್ವಿಸ್ಟ್, ಇಲ್ಲಿದೆ ನೋಡಿ ಅಸಲಿ ವಿಚಾರ : ದಿನ ಬೆಳಗಾದರೆ ಕೊ-ಲೆ, ಆತ್ಮ-ಹ ತ್ಯೆ ಹಾಗೂ ಅಪಘಾ ತ ಹೀಗೆ ಸಾಲು ಸಾಲು ಸುದ್ದಿಗಳು. ಇತ್ತೀಚೆಗಿನ ಕೆಲವು ವರ್ಷಗಳಿಂದ ಇಂತಹ ಸುದ್ದಿಗಳೇ ಹೆಚ್ಚಾಗುತ್ತಿದೆ.

ಆದರೆ ಮನುಷ್ಯನು ವಿದ್ಯಾವಂತನಾಗುತ್ತಿದ್ದಂತೆ ಯೋಚನೆ ಮಾಡುವ ಸಾಮರ್ಥ್ಯವನ್ನು ಕಳೆದುಕೊಳ್ಳುತ್ತಿದ್ದಾನೆ. ಹೀಗಾಗಿ ಇಂತಹ ಪ್ರಕರಣಗಳು ಹೆಚ್ಚಾಗುತ್ತಿದೆ. ಮಣಿಮಾರನ್ ಚೆನ್ನೈನ ತಿರುವೊಟ್ಟಿಯೂರಿನ ಪರ್ಕವನಪುರಂ ಮೂಲದವರು. ಅವರ ಪತ್ನಿ ಮೈಥಿಲಿ (36). ಗುತ್ತಿಗೆ ಆಧಾರದ ಮೇಲೆ ಪಾಲಿಕೆಯಲ್ಲಿ ಕ್ಲೀನರ್ ಆಗಿ ಕೆಲಸ ಮಾಡುತ್ತಿದ್ದರು.

ಇತ್ತೀಚೆಗಷ್ಟೇ ಮೈಥಿಲಿ ಸಂಬಂಧಿಕರ ಮನೆಗೆ ಹೋಗಿದ್ದು, ಇದ್ದಕ್ಕಿದ್ದಂತೆ ನಾಪತ್ತೆಯಾಗಿದ್ದರು. ಹೀಗಿರುವಾಗ ಮಣಿಮಾರನ್ ಅವರು ತಿರುವೊಟ್ಟಿಯೂರ್ ಪೊಲೀಸ್ ಠಾಣೆಯಲ್ಲಿ ನಾಪತ್ತೆ ದೂರು ದಾಖಲಿಸಿದ್ದಾರೆ. ಪೊಲೀಸರು ಶೋಧ ನಡೆಸುತ್ತಿದ್ದ ವೇಳೆ ಮನಾಲಿಯ ಹೊಸ ಮೇಲ್ಸೇತುವೆ ಬಳಿ ಮೈಥಿಲಿ ಶ-ವವಾಗಿ ಪತ್ತೆಯಾಗಿದ್ದಾಳೆ. ಕೊಲೆ ಮಾಡಿ ಶ-ವವನ್ನು ಅಲ್ಲಿಯೇ ಎಸೆದಿರುವುದು ಬೆಳಕಿಗೆ ಬಂದಿದೆ. ಪೊಲೀಸರು ಮೈಥಿಲಿ ಮೃ-ತದೇಹವನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.

ಪತಿ ಮಣಿಮಾರನ್‌ನನ್ನು ವಿಚಾರಣೆಗೆ ಒಳಪಡಿಸಿದಾಗ ಮೈಥಿಲಿ ಜೈಶಂಕರ್‌ ಜೊತೆ ಅಕ್ರಮ ಸಂಬಂಧ ಹೊಂದಿದ್ದಾಳೆ ಎಂದು ತಿಳಿದುಬಂದಿದೆ. ಜೈಶಂಕರ್ ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಮೈಥಿಲಿ ಕಳೆದ ಬುಧವಾರ ಬೈಕ್ ನಲ್ಲಿ ಆತನೊಂದಿಗೆ ಬಂದಿದ್ದಳು. ಮಣಿಮಾರನ್ ನಮ್ಮನ್ನು ಹನಯಮ್ಮನ ದೇವಸ್ಥಾನದ ಬಳಿ ನೋಡಿದ್ದು..

ನಮ್ಮೊಂದಿಗೆ ಜಗಳಕ್ಕೆ ಇಳಿದಿದ್ದನು. ಕೊನೆಗೆ ನನ್ನ ಬೈಕಿನ ಕೀ ಕಿತ್ತು ಮೈಥಿಲಿಯನ್ನು ಕೋಪದಿಂದ ಕರೆದುಕೊಂಡು ಹೋದ ಎಂದು ಪೊಲೀಸರಿಗೆ ತಿಳಿಸಿದ್ದಾನೆ. ಕೊನೆಗೆ ಮೈಥಿಲಿ ಪತಿ ಮಣಿಮಾರನ್ ಅವರನ್ನು ಗಂಭೀರವಾಗಿ ವಿಚಾರಣೆ ನಡೆಸಲಾಯಿತು. ಆ ವೇಳೆ ಮಣಿಮಾರನ್ ಕೆಲವು ವಿಚಾರಗಳನ್ನು ಬಾಯಿ ಬಿಟ್ಟಿದ್ದಾನೆ.

ನಾನು ಮೈಥಿಲಿಯನ್ನು ಮನಾಲಿಯ ನ್ಯೂ ಮೆಂಪಲಂ ಬಳಿ ಕರೆದೊಯ್ದು ತುಂಬಾ ಸಲಹೆ ನೀಡಿದ್ದೆ. ಆದರೆ ನನ್ನ ಮಾತನ್ನು ಆಕೆ ವಿರೋಧಿಸಿದಳು. ಸಿಟ್ಟಿನಲ್ಲಿ ಮೈಥಿಲಿಯ ಸೀರೆಯಿಂದ ಕತ್ತು ಹಿಸುಕಿದೆ. ಮೃ-ತದೇಹವನ್ನು ಅಲ್ಲೇ ಬಿಟ್ಟು, ಆಕೆಯು ನಾಪತ್ತೆಯಾಗಿರುವಂತೆ ಬಿಂಬಿಸಿದೆ ಎಂದು ಬಾಯಿ ಬಿಟ್ಟಿದ್ದಾನೆ.

ಮಣಿಮಾರನ್ ರನ್ನು ಆಕೆಯ ಮೃ-ತದೇಹ ಪತ್ತೆಯಾದ ಸ್ಥಳಕ್ಕೆ ಕರೆದೊಯ್ದ ಪೊಲೀಸರು ಘಟನೆಯನ್ನು ವಿವರಿಸಿದ್ದಾರೆ. ಕೊನೆಗೆ ಆತನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ಇದೀಗ ಜೈ ಲು ಶಿಕ್ಷೆ ಅನುಭವಿಸುವಂತಾಗಿದೆ. ನೋಡಿ ಸ್ನೇಹಿತರೆ ಗಂಡ ಹೆಂಡತಿಯರ ಮಧ್ಯೆ ಸಂಬಂಧ ಹಾಳಾದರೆ ಒಂದು ಜೀವವು ಕೂಡ ಬ ಲಿಯಾಗಬಹುದು ಎನ್ನುವುದಕ್ಕೆ ಇದೇ ಕಾರಣ..

Leave a Reply

Your email address will not be published. Required fields are marked *