ಈಗಿನ ವಿದ್ಯಾರ್ಥಿಗಳಿಗೆ ಆತ್ಮಸ್ಥೈರ್ಯ ಕಡಿಮೆಯಾಗಿದೆ. ಅದರಲ್ಲೂ ಹೆಚ್ಚಾಗಿ ಇಂಜಿನಿಯರಿಂಗ್ ಮತ್ತು ಎಂಬಿಬಿಎಸ್ ವಿದ್ಯಾರ್ಥಿಗಳು ಚಿಕ್ಕ ಪುಟ್ಟ ವಿಷಯಗಳಿಗೆ ಮಾನಸಿಕ ಒತ್ತಡವನ್ನು ತೆಗೆದುಕೊಂಡು ಮನೋಬಲವನ್ನು ಕುಗ್ಗಿಸಿಕೊಂಡು ತಮ್ಮ ಜೀವವನ್ನು ಬ ಲಿಕೊಡುತ್ತಿದ್ದಾರೆ. ಇದೀಗ ಇಂಥದ್ದೇ ಒಂದು ಘಟನೆ ಮಂಗಳೂರಿನಲ್ಲಿ ನಡೆದಿದೆ. ಮಂಗಳೂರಿನ ಎಂಬಿಬಿಎಸ್ ವಿದ್ಯಾರ್ಥಿನಿಯ ಕಥೆ ಇದು..
ನಾನು ದಪ್ಪ ಗೆ ಇದ್ದೇನೆ ನೋಡೋಕೆ ಚೆನ್ನಾಗಿ ಕಾಣುತ್ತಿಲ್ಲ ಎಂದು ಮನನೊಂದು ಹಾಸ್ಟೆಲ್ ವಿದ್ಯಾರ್ಥಿನಿಯೊಬ್ಬಳು ಹಾಸ್ಟೆಲ್ ಕಟ್ಟಡದ ಮೇಲಿನಿಂದ ಹಾರಿ ಕೆಳಗೆ ಬಿಟ್ಟು ಆತ್ಮಹ ತ್ಯೆ ಮಾಡಿಕೊಂಡಿದ್ದಾಳೆ. ಈಕೆಯ ಹೆಸರು ಪ್ರಕೃತಿ ಶೆಟ್ಟಿ, 20 ವರ್ಷದ ಈ ಹುಡುಗಿ ಎಂಬಿಬಿಎಸ್ ಪದವಿ ಪಡೆಯುತ್ತಿದ್ದಳು..
ನವೆಂಬರ್ 13 ಸೋಮವಾರ ಮುಂಜಾನೆ ಮೂರು ಗಂಟೆಯ ಸುಮಾರಿಗೆ ಹಾಸ್ಟೆಲ್ ಕಟ್ಟಡ 6 ನೇ ಮಹಡಿಯಿಂದ ಜಿಗಿದು ಕೊನೆ ಉಸಿರು ಎಳೆದಿದ್ದಾಳೆ.. ಈ ಹುಡುಗಿಯ ರೂಮ್ನಲ್ಲಿ ಡೆ ತ್ ನೋಟ್ ಒಂದು ಸಿಕ್ಕಿದೆ.. ಇದರಲ್ಲಿ ಆಕೆ ಬರೆದಿಟ್ಟ ನಾಲ್ಕು ಸಾಲುಗಳನ್ನು ನೋಡಿದ ಮೇಲೆ ಪ್ರತಿಯೊಬ್ಬರಿಗೂ ಗೊತ್ತಾಗುತ್ತದೆ ಈಕೆ ದಪ್ಪಗೆ ಇದ್ದಾಳೆ ಆದಕಾರಣ ಜೀವನದಲ್ಲಿ ಈ ರೀತಿ ಮಾಡಿಕೊಂಡಿದ್ದಾಳೆ ಎಂದು..
ʻʻʻನಾನು ದಪ್ಪ ಇದ್ದೇನೆ. ನೋಡಲು ಚೆನ್ನಾಗಿ ಕಾಣ್ತಾ ಇಲ್ಲ.ʼʼ ಎಂದು ದೀರ್ಘ ಸು ಸೈಡ್ ನೋಟ್‌ನಲ್ಲಿ ಅವರು ಹೇಳಿದ್ದಾರೆ. ʻʻಎಂ.ಬಿ.ಬಿಎಸ್. ಮುಗಿಸಬೇಕು ಅಂತ ತುಂಬಾ ಆಸೆ ಇತ್ತು. ಆದರೆ, ನನ್ನ ಸೌಂದರ್ಯಕ್ಕೆ ದಪ್ಪ ಜೀವ ಅಡ್ಡಿಯಾಗಿದೆ. ತೂಕ ಇಳಿಸಲು ಸಾಕಷ್ಟು ಪ್ರಯತ್ನಪಟ್ಟರೂ ಆಗಲಿಲ್ಲ. ಹೀಗಾಗಿ ಜೀವನದಲ್ಲಿ ಜಿಗುಪ್ಸೆಗೊಂಡಿದ್ದೇನ ಎಂದು ಅವರು ಹೇಳಿದ್ದಾರೆ.