ಹೆಂಡತಿಯ ತಾಯಿಯಿಂದ ಅಪಹಾಸ್ಯಕ್ಕೊಳಗಾಗುತ್ತಿದ್ದ ಗಂಡ. ಅತ್ತೆಗೆ ಚಾಲೆಂಜ್ ಮಾಡಿ ಒಂದು ದಿನ ಹೆಂಡತಿ ಕಾಲೇಜು ಸಹಪಾಠಿಯೊಂದಿಗೆ ಅ-ನೈತಿಕ ಸಂಬಂಧ ಹೊಂದಿದ್ದ ವಿಷಯವನ್ನು ಬಯಲು ಮಾಡಿ ಮಾಡಿದ್ದೇನು ನೋಡಿ!!!

Man chaallenged mother in law : ಇತ್ತೀಚೆಗಿನ ದಿನಗಳಲ್ಲಿ ಸಂಬಂಧಗಳು ತನ್ನ ಮೌಲ್ಯವನ್ನು ಕಳೆದುಕೊಳ್ಳುತ್ತಿದೆ. ಮನುಷ್ಯನು ಬುದ್ದಿವಂತನಾಗುತ್ತಿದ್ದಂತೆ ಸಂಬಂಧಕ್ಕೆ ಸರಿಯಾದ ಬೆಲೆಯನ್ನು ನೀಡುತ್ತಿಲ್ಲ. ಅದರಲ್ಲಿಯೂ ಮದುವೆಯ ಸಂಬಂಧವು ಹೆಚ್ಚು ದಿನ ಉಳಿಯುತ್ತಿಲ್ಲ. ದಂಪತಿಗಳ ನಡುವೆ ಭಿನ್ನಾಭಿಪ್ರಾಯಗಳು ತಲೆದೂರುತ್ತಿವೆ. ಅದರ ಜೊತೆಗೆ ಅಕ್ರಮ ಸಂಬಂಧಗಳು ಕೂಡ ಹೆಚ್ಚಾಗುತ್ತಿದೆ.

ಆದರೆ ಇಲ್ಲೊಬ್ಬ ವ್ಯಕ್ತಿಯೂ ಕಾವಲು ಕಾಯ್ದುಕೊಂಡು ಕೊನೆಗೆ ತನ್ನ ಪತ್ನಿಯನ್ನು ಮತ್ತೊಬ್ಬ ಪುರುಷನೊಂದಿಗೆ ರೆಡ್ ಹ್ಯಾಂಡ್ ಆಗಿ ಹಿಡಿದಿದ್ದಾರೆ. ಈ ಮೂಲಕ ತನ್ನ ಪತ್ನಿಯ ಅಕ್ರಮ ಸಂಬಂಧವನ್ನು ಬಯಲಿಗೆಳೆದಿದ್ದಾರೆ. ಇಂತಹ ಘಟನೆಯು ತೆಲಂಗಾಣದ ಮುಲುಗ್ ಜಿಲ್ಲೆಯಲ್ಲಿ ನಡೆದಿದೆ. ಮುಲುಗ್ ಜಿಲ್ಲೆಯ ದೊಡ್ಲಾ ಫಾರೆಸ್ಟ್ ಬೀಟ್ ಆಫೀಸರ್ ಆಗಿ ಕಾರ್ಯನಿರ್ವಹಿಸುತ್ತಿರುವ ಚಿಮಲಾ ಸುಮಲತಾ ಅವರು ಚರ್ಲಾದಲ್ಲಿ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸುತ್ತಿರುವ ಪಾಯಂ ಪುರುಷೋತ್ತಮ್ ಒಬ್ಬರನ್ನೊಬ್ಬರು ಪ್ರೀತಿಸುತ್ತಿದ್ದರು.

8 ವರ್ಷಗಳ ಹಿಂದೆ ವಿವಾಹವಾಗಿದ್ದು, ಕೆಲಸದ ನಿಮಿತ್ತ ಸುಮಲತಾ ಚಿನ್ನಬೋಯನಪಲ್ಲಿಯಲ್ಲಿ ವಾಸವಿದ್ದು, ಪುರುಷೋತ್ತಮ್ ಚಾರ್ಲದಲ್ಲಿ ನೆಲೆಸಿದ್ದರು. ಆದರೆ, ಪತ್ನಿಯನ್ನು ಪತಿಯೂ ಅನುಮಾನಿಸಲು ಆರಂಭಿಸಿದ್ದು, ಇದರಿಂದ ದಂಪತಿ ನಡುವೆ ಆಗಾಗ ಜಗಳ ನಡೆಯುತ್ತಿತ್ತು.

ಸುಮಲತಾ ತನ್ನ ಕಾಲೇಜಿನ ಸಹಪಾಠಿ ಲಿಂಗರಾಜು ಎಂಬಾತನೊಂದಿಗೆ ಹೊಂದಿದ್ದ ನಿಕಟ ಸಂಬಂಧವೇ ಇದಕ್ಕೆ ಕಾರಣ ಎನ್ನಲಾಗಿದೆ. ಹೆಂಡತಿಯನ್ನು ತಿದ್ದಿಕೊಳ್ಳುವಂತೆ ಎಚ್ಚರಿಸಿದರೂ ಸುಮಲತಾ ಬದಲಾಗಲಿಲ್ಲ. ಈ ಕುರಿತು ಗ್ರಾಮದ ಹಿರಿಯರ ಬಳಿ ತೆರಳಿ ಇಬ್ಬರಿಗೂ ಸಲಹೆ ನೀಡಿದರೂ ಪ್ರಯೋಜನವಾಗಿರಲಿಲ್ಲ.

ಕೊನೆಗೆ ಪಂಚಾಯ್ತಿ ಸಭೆಯೊಂದರಲ್ಲಿ, ಸುಮಲತಾ ಅವರ ತಾಯಿ ಪುರುಷೋತ್ತಮ್ ಅವರನ್ನು ವ್ಯಂಗ್ಯವಾಡಿದ್ದರು. ಅವನಿಗೆ ಅವಳ ಮೇಲೆ ಅನುಮಾನ ಹೊಂದಿದ್ದರೆ ಅವನು ಅವಳನ್ನು ರೆಡ್ ಹ್ಯಾಂಡ್ ಆಗಿ ಹಿಡಿದು, ಅವಳು ಸಂಬಂಧ ಹೊಂದಿದ್ದಾಳೆಯೇ ಎಂದು ಸಾಬೀತುಪಡಿಸಬೇಕು ಎಂದು ಹೇಳಿದ್ದಳು ಆತನ ಅತ್ತೆ.

Man chaallenged mother in law
Man chaallenged mother in law

ಅತ್ತೆಯ ಮಾತುಗಳನ್ನು ಗಂಭೀರವಾಗಿ ಪರಿಗಣಿಸಿದ ಅವನು ತನ್ನ ಹೆಂಡತಿಯ ಚಲನವನಗಳ ಮೇಲೆ ಕಣ್ಣು ಇಟ್ಟಿದ್ದನು. ಕೊನೆಗೂ ಭದಾದ್ರಿ ಕೊತಗುಡೆಂನ ನರಸಪುರದಲ್ಲಿ ಲಿಂಗರಾಜು ಮತ್ತು ಸುಮಲತಾ ಅವರನ್ನು ರೆಡ್ ಹ್ಯಾಂಡ್ ಆಗಿ ಹಿಡಿಯುವಲ್ಲಿ ಅವರು ಯಶಸ್ವಿಯಾಗಿದ್ದಾನೆ.

ಪುರುಷೋತ್ತಮ್ ಅವರ ಮಾತನ್ನು ನಿಜವಾಗಿಸಿ ಸುಮಲತಾ ಅವಳನ್ನು ಕುಟುಂಬ ಸದಸ್ಯರು ಮತ್ತು ಗ್ರಾಮದ ಹಿರಿಯರ ಸಮ್ಮುಖದಲ್ಲಿ ಪೊಲೀಸರಿಗೆ ಒಪ್ಪಿಸಿದ್ದಾರೆ. ಪತಿಯ ಜೊತೆಗೆ ಸುಖವಾಗಿ ಬದುಕಬೇಕಾಗಿದ್ದ ಪತ್ನಿ ಅಕ್ರಮ ಸಂಬಂಧದ ಹಿನ್ನಲೆಯಲ್ಲಿ ಪೊಲೀಸರ ಅತಿಥಿಯಾಗಿದ್ದಾಳೆ ಎನ್ನುವುದು ನಿಜಕ್ಕೂ ವಿಪರ್ಯಾಸ.

Leave a Reply

Your email address will not be published. Required fields are marked *