ಉತ್ತರ ಕರ್ನಾಟಕದ ಜನರ ನಡೆದಾಡುವ ದೇವರು ಎಂದೇ ಖ್ಯಾತಿ ಗಳಿಸಿರುವ ಈ ಯುವಕನ ಬಗ್ಗೆ ನಿಮಗೆಷ್ಟು ಗೊತ್ತು? ಇಷ್ಟು ಚಿಕ್ಕ ವಯಸ್ಸಿಗೇ ಯಾವ ಸ್ಟಾರ್ ನಟಿನಿಗೂ ಇಲ್ಲದ ಕ್ರೇಜ್!!

ಇತ್ತೀಚಿನ ದಿನಗಳಲ್ಲಿ ಸೋಷಿಯಲ್ ಮೀಡಿಯಾ (Social Media) ದಿಂದ ಸ್ಟಾರ್ ಪಟ್ಟವನ್ನು ಗಳಿಸುವವರನ್ನು ಕಾಣುತ್ತೇವೆ. ಸೋಶಿಯಲ್ ಮೀಡಿಯಾದ ಟ್ರೆಂಡ್ ಹೇಗಿದೆ ಎಂದು ಹೇಳುವುದಾದರೆ, ರಾತ್ರಿ ಬೆಳಗಾಗುವುದರೊಳಗೆ ಸ್ಟಾರ್‌ಗಳು ಹುಟ್ಟಿಕೊಳ್ಳುತ್ತಾರೆ. ಅಂತಹವರ ಉದಾಹರಣೆಗಳು ಸಾಕಷ್ಟು ಇವೆ. ಹೌದು, ಮಲ್ಲಿಕಾರ್ಜುನ ಮುತ್ಯಾ (Mallikarjuna Muttyaa) ಎಂಬ ಯುವಕ ಸಾಮಾಜಿಕ ಜಾಲತಾಣದಲ್ಲಿ ಜನಪ್ರಿಯತೆಯನ್ನು ಗಳಿಸಿಕೊಳ್ಳುತ್ತಿರುವವರು.

ಸೋಶಿಯಲ್ ಮೀಡಿಯಾದಲ್ಲಿ ಇತ್ತೀಚಿಗೆ ಒಬ್ಬ ಯುವಕನ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಈ ಯುವಕನನ್ನು ನಡೆದಾಡುವ ದೇವರು ಎಂದೇ ಭಾವಿಸಿದ್ದಾರೆ. ಈ ಹುಡುಗನ ಜನಪ್ರಿಯತೆಯನ್ನು ನೋಡಿದರೆ ಶಾಕ್ ಆಗುವುದು ಪಕ್ಕಾ. ಹಾಗಾದರೆ ಮಲ್ಲಿಕಾರ್ಜುನ ಮುತ್ಯಾ ಎನ್ನುವ ಯುವಕನ ಅಸಲಿ ವಿಚಾರ ಏನು ಎನ್ನುವುದನ್ನು ನೀವಿಲ್ಲಿ ತಿಳಿದುಕೊಳ್ಳಬಹುದು.

ಉತ್ತರ ಕರ್ನಾಟಕ ಪ್ರದೇಶದ ಜನರಿಗೆ ಆಧ್ಯಾತ್ಮಿಕ ಹಾಗೂ ದೇವರಲ್ಲಿ ಹೆಚ್ಚು ನಂಬಿಕೆಯಿದೆ. ಹೀಗಾಗಿ ಇಂತಹದ್ದೇ ಘಟನೆಯೊಂದು ಉತ್ತರ ಪ್ರದೇಶದಲ್ಲಿ ನಡೆದಿದೆ. ಉತ್ತರ ಕರ್ನಾಟಕದ ಯಾದಗಿರಿ ಜಿಲ್ಲೆ (Yadagiri Distric) ಯ ಶಹಾಪುರ (Shahapura) ದಲ್ಲಿ ಈ ನಡೆದಾಡುವ ದೇವಪುರುಷರ ಮಠವಿದ್ದು, ಇಲ್ಲಿನ ಜನರಿಗೆ ನಡೆದಾಡುವ ದೇವರಿದ್ದಾರೆ. ಈ ನಡೆದಾಡುವ ದೇವರಿಗೆ ಬಹುದೊಡ್ಡ ಸಂಖ್ಯೆಯಲ್ಲಿ ಅಭಿಮಾನಿಗಳಿದ್ದಾರೆ. ಯಾದವಗಿರಿ ಜಿಲ್ಲೆಯ ಬಳಿ ಇರುವ ಮಠಕ್ಕೆ ದಿನಕ್ಕೆ ಸಾವಿರಾರು ಸಂಖ್ಯೆಗಳಲ್ಲಿ ಭಕ್ತರು ಬಂದು, ನಡೆದಾಡುವ ದೇವರನ್ನು ಭೇಟಿಯಾಗುತ್ತಾರೆ.

ಈ ಯುವಕನ ಊರು ಯಾದಗಿರಿ ಜಿಲ್ಲೆಯ ಶಹಾಪುರದ ಮೊಹಲ್ಲಾ ರೋಜಾ (Mohalla Roja) . ಈ ಪುಟ್ಟ ಹಳ್ಳಿಯಿಂದ ಬಂದ ಮಲ್ಲಿಕಾರ್ಜುನ ಮುತ್ಯಾನಿಗೆ ದೊಡ್ಡ ಸಂಖ್ಯೆಯಲ್ಲಿ ಅಭಿಮಾನಿಗಳು ಹುಟ್ಟಿಕೊಂಡದ್ದು ವಿಶೇಷ. ದೊಡ್ಡ ಸಂಖ್ಯೆಯಲ್ಲಿ ಅಭಿಮಾನಿಗಳನ್ನು ಹೊಂದಿರುವ ಮಲ್ಲಿಕಾರ್ಜುನ ಮುತ್ಯಾ ಅವರ ತಂದೆ ಹನುಮಂತರಾಯ ಮುತ್ಯಾ.

ನಡೆದಾಡುವ ದೇವರು ಎಂದೇ ಹೆಸರಾಗಿರುವ ಮಲ್ಲಿಕಾರ್ಜುನ ಮುತ್ಯಾ ಭವಿಷ್ಯವಾಣಿ ನುಡಿಯುವುದು ಮಾತ್ರವಲ್ಲದೆ, ಜೊತೆಗೆ ಕಷ್ಟ ಎಂದು ಕೊಂಡು ಬರುವ ಜನರಿಗೆ ಸ್ಪಂದಿಸಿ ಸಾಂತ್ವನ ಹೇಳುತ್ತಾರೆ. ಅಂದಹಾಗೆ , ಹನುಮಂತರಾಯ ಮುತ್ಯಾ (Hanumantaraya Muttya) ರ ಮರಣದ ನಂತರದಲ್ಲಿ ಅವರ ಎರಡನೇ ಮಗನಾದ ಮಲ್ಲಿಕಾರ್ಜುನ ಮುತ್ಯಾ ಅಪ್ಪನ ಹಾದಿಯಲ್ಲಿ ಸಾಗುತ್ತಿದ್ದಾರೆ.

ಹೌದು, ಅಪ್ಪನ ಹಾದಿಯಲ್ಲಿಯೇ ಸಾಗಿ ಭವಿಷ್ಯಗಳನ್ನು ನುಡಿಯುತ್ತಾ ಕಷ್ಟ ಎನ್ನುವರಿಗೆ ಸಮಾಧಾನ ಮಾಡುತ್ತಾ ಬಂದಿದ್ದಾರೆ. ಅದರ ಜೊತೆಗೆ, ಮುತ್ಯಾನ ಮತ್ತೊಂದು ವಿಶೇಷದ ಬಗ್ಗೆ ಹೇಳುವುದಾದರೆ, ಹಗಲು ರಾತ್ರಿಮಠಕ್ಕೆ ಬರುವ ಭಕ್ತರಿಗೆ ಊಟದ ವ್ಯವಸ್ಥೆಯಿದೆ. ದೊಡ್ಡ ಸಂಖ್ಯೆಯಲ್ಲಿ ಅಭಿಮಾನಿ ಬಳಗವನ್ನು ಸೃಷ್ಟಿಸಿಕೊಂಡು ಉತ್ತರ ಕರ್ನಾಟಕ ಜನರ ಪಾಲಿನ ನಡೆದಾಡುವ ದೇವರಾಗಿರುವುದು ವಿಶೇಷ. 

Leave a Reply

Your email address will not be published. Required fields are marked *