ಕುತ್ತಾರು ಕೊರಗಜ್ಜನ ಆದಿಸ್ಥಳಕ್ಕೆ ಮಗಳ ಜೊತೆಗೆ ಭೇಟಿ ನೀಡಿದ್ದ ನಟಿ ಮಾಲಾಶ್ರೀ, ಫೋಟೋಸ್ ಶೇರ್ ಮಾಡಿಕೊಂಡ ನಟಿ ರಾಧನಾ ರಾಮ್!!

ಲೆಬ್ರಿಟಿಗಳು ತುಳುನಾಡಿನ ದೈವ ದೇವರುಗಳ ಮೇಲೆ ಅಪಾರವಾದ ಭಕ್ತಿಯಿದೆ. ಹೀಗಾಗಿ ತುಳುನಾಡಿಗೆ ಭೇಟಿ ಕೊಟ್ಟಗಲೆಲ್ಲಾ ಕೊರಗಜ್ಜ ದೈವಸ್ಥಾನ (Koragajja Daivastana) ಸೇರಿದಂತೆ ಇನ್ನಿತರ ದೈವಸ್ಥಾನ ಹಾಗೂ ದೇವಸ್ಥಾನಗಳಿಗೆ ಭೇಟಿ ದೇವರ ಕೃಪೆಗೆ ಪಾತ್ರರಾಗುತ್ತಾರೆ. ಇದೀಗ ಸ್ಯಾಂಡಲ್​ವುಡ್ ಖ್ಯಾತ ನಟಿ ಮಾಲಾಶ್ರೀ ಕುತ್ತಾರು ಕೊರಗಜ್ಜನ ಆದಿಸ್ಥಳಕ್ಕೆ ಬಂದಿದ್ದಾರೆ. ಬೇಡಿಕೆ ಈಡೇರಿಸಿದ್ದಕ್ಕೆ ಸ್ಯಾಂಡಲ್ ವುಡ್ ಖ್ಯಾತ ನಟಿ ಮಾಲಾಶ್ರೀ (Malashree) ಹಾಗೂ ಅವರ ಪುತ್ರಿ ರಾಧನಾ (Radhana) ಭೇಟಿ ನೀಡಿ ಹರಕೆ ತೀರಿಸಿದ್ದಾರೆ.

ಹರಕೆ ತೀರಿಸಿದ ಬಳಿಕ ನಟಿ ಮಾಲಾಶ್ರೀಯವರು, ಮೂರು ತಿಂಗಳ ಹಿಂದಷ್ಟೇ ಕೊರಗಜ್ಜನ ಕಟ್ಟೆಗೆ ಬಂದು ಬೇಡಿಕೊಂಡಿದ್ದೆವು. ಎಲ್ಲವೂ ಅಂದುಕೊಂಡಂತೆ ನಡೆದು ಹೋಯಿತು. ಕ್ಷೇತ್ರದ ಶಕ್ತಿಯನ್ನು ಹೇಳತೀರದು. ಬಹಳಷ್ಟು ಪಾಸಿಟಿವ್ ಎನರ್ಜಿ ಕ್ಷೇತ್ರದಲ್ಲಿದೆ. ಒಳಗೆ ಹೋಗುವಾಗಲೇ ಸಾನಿಧ್ಯದ ಶಕ್ತಿ ಭಾಸವಾಗುತ್ತದೆ.

ಬೇಡಿಕೆ ಈಡೇರಿದ ಹಾಗೆ ಹರಕೆ ತೀರಿಸಿ ಮತ್ತೆ ಆಶೀರ್ವಾದ ಪಡೆಯುವ ಉದ್ದೇಶದಿಂದ ಕುಟುಂಬ ಹಾಗೂ ಸ್ನೇಹಿತರ ಜೊತೆಗೆ ಬಂದಿದ್ದೇನೆ. ಮುಂದೆಯೂ ಬರುತ್ತೇನೆ ಎಂದಿದ್ದಾರೆ. ಈ ಸಂದರ್ಭದಲ್ಲಿ ಶ್ರೀ ಪಂಜಂದಾಯ ಬಂಟ ವೈದ್ಯನಾಥ ಆದಿ ಕೊರಗತನಿಯ ಸೇವಾ ಸಮಿತಿಯ ಟ್ರಸ್ಟಿಗಳು ನಟಿ ಮಾಲಾಶ್ರೀ ಹಾಗೂ ಪುತ್ರಿಯನ್ನು ಸನ್ಮಾನಿಸಿದ್ದರು.

ನಟಿ ಮಾಲಾಶ್ರೀಯವರ ಮಗಳು ರಾಧನಾ ರಾಮ್ (Radhana Ram) ಈ ಫೋಟೋಗಳನ್ನು ತಮ್ಮ ಇನ್ಸ್ಟಾಗ್ರಾಮ್ ಖಾತೆ (Instagram Account) ಯಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಈ ಫೋಟೋಗಳನ್ನು ಶೇರ್ ಮಾಡಿಕೊಳ್ಳುತ್ತಿದ್ದಂತೆ ಎರಡೂವರೇ ಸಾವಿರಕ್ಕೂ ಅಧಿಕ ಲೈಕ್ಸ್ ಗಳು ಬಂದಿವೆ. ಚಾಲೆಂಜಿಂಗ್ ಸ್ಟಾರ್ ಅಭಿನಯದ ‘ಕಾಟೇರ’ (Katera) ಸಿನಿಮಾದಲ್ಲಿ ನಾಯಕಿಯಾಗಿ ಮಾಲಾಶ್ರೀ ಅವರ ಮಗಳು ರಾಧನಾ ರಾಮ್ ಅವರು ನಾಯಕಿಯಾಗಿದ್ದಾರೆ. ಯುಗಾದಿ ಹಬ್ಬದ ಸಂಭ್ರಮದಲ್ಲಿ ಚಿತ್ರದ ನಾಯಕಿ ಫಸ್ಟ್ ಲುಕ್ ರಿವೀಲ್ ಆಗಿತ್ತು.

ಈ ಚಿತ್ರದಲ್ಲಿ ಪ್ರಭಾವತಿ ಎನ್ನುವ ಹಳ್ಳಿ ಹುಡುಗಿಯ ಪಾತ್ರದಲ್ಲಿ ರಾಧನಾ ಮಿಂಚಿದ್ದರು. ಲಂಗಾ ದಾವಣಿ ತೊಟ್ಟು ಒಂದು ಕೈಯಲ್ಲಿ ಕುಡುಗೋಲು ಮತ್ತೊಂದು ಕೈಯಲ್ಲಿ ಪುಸ್ತಕ ಹಿಡಿದು ಕಾಣಿಸಿಕೊಂಡಿದ್ದರು. ರಾಧನಾ ರಾಮ್ ಅವರ ಪ್ರಭಾವತಿ ಫಸ್ಟ್ ಲುಕ್ ಪೋಸ್ಟರ್ ವೈರಲ್ ಆಗಿತ್ತು. ರಾಕ್‌ಲೈನ್‌ ವೆಂಕಟೇಶ್ (Rockline Venkatesh) ನಿರ್ಮಾಣದ ಈ ಸಿನಿಮಾದ ಬಗ್ಗೆ ಬಾರಿ ನಿರೀಕ್ಷೆಯಿದೆ.

Leave a Reply

Your email address will not be published. Required fields are marked *