ಬಾಲಿವುಡ್ ನಟ ಖ್ಯಾತ ನಟಿಯರಲ್ಲಿ ಮಲೈಕಾ ಅರೋರ (Malaika Arora)ಕೂಡ ಒಬ್ಬರಾಗಿದ್ದು ಸದಾ ಸುದ್ದಿಯಲ್ಲಿರುವಾಕೆ. ನಟಿ ಮಲೈಕಾ ಅರೋರ ವಯಸ್ಸು 49 ದಾಟಿದರೂ ಕೂಡಾ ಇನ್ನು ಯುವತಿಯರನ್ನು ನಾಚಿಸುವಂತೆ ಇದ್ದಾರೆ. ಐಟಂ ಸಾಂಗ್ ಗಳಿಗೆ ಭರ್ಜರಿ ನೃತ್ಯ ಮಾಡಿರುವ ಮಲೈಕಾ ಅರೋರ ತಮ್ಮ ಫಿಟ್ ನೆಸ್ (Fitness)ಮತ್ತು ಬಳುಕುವ ದೇಹದಿಂದಾಗಿ ಹಾಗೂ ತನ್ನ ಡಾನ್ಸ್ ಗಳಿಂದಲೇ ಪಡ್ಡೆ ಹೈಕಳ ನಿದ್ದೆ ಕೆಡಿಸುತ್ತಾರೆ. ಅಂದಹಾಗೆ, ಬಾಲಿವುಡ್ ನಟಿಯ ಫಿಟ್ ನೆಸ್ ಮಂತ್ರದ ಬಗ್ಗೆ ಅನೇಕರಿಗೆ ಬಹಳ ಕುತೂಹಲವಿರಬಹುದು.
ಮಲೈಕಾ ಅರೋರಾ (Malaika Arora)ರವರು ತಮ್ಮ ಫಿಟ್ ನೆಸ್ (Fitness) ಮತ್ತು ತ್ವಚೆಯ (Skin) ಆರೋಗ್ಯದ (Health) ಗುಟ್ಟನ್ನು ಬಿಟ್ಟುಕೊಟ್ಟಿದ್ದಾರೆ. ತಮ್ಮ ಇನ್ ಸ್ಟಾಗ್ರಾಮ್ ಖಾತೆಯಲ್ಲಿ ಗುಟ್ಟು ಬಿಟ್ಟುಕೊಂಡಿರುವ ನಟಿಯೂ “ದಿನವೂ ಬೆಳಗ್ಗೆ ಬಿಸಿನೀರು (Warm Water), ಲಿಂಬೆರಸ (Lemon) ಹಾಗೂ ಜೇನುತುಪ್ಪವನ್ನು (Honey) ಬೆರೆಸಿ ಸೇವಿಸುವುದೊಂದಿಗೆ ದಿನಚರಿ ಆರಂಭಿಸುತ್ತೇನೆʼ ಎಂದವರು ಹೇಳಿದ್ದಾರೆ. “ಇದು ಎಂದಿನಿಂದಲೂ ಬಳಕೆಯಲ್ಲಿರುವ ಪದ್ಧತಿಯಾಗಿದ್ದು, ನಮ್ಮ ದೇಹದಿಂದ ವಿಷಕಾರಿ (Toxic) ಅಂಶವನ್ನು ಹೊರದೂಡಲು ಸಹಕಾರಿಯಾಗಿದೆ. ಹಾಗೂ ದೀರ್ಘಾವಧಿಯಲ್ಲಿ ನಮ್ಮ ತೂಕವನ್ನು (Weight) ನಿಯಂತ್ರಿಸಲು ಕಾರಣವಾಗುತ್ತದೆʼ ಎಂದೂ ಬರೆದುಕೊಂಡಿದ್ದಾರೆ.
ನಟಿ ಮಲೈಕಾ ಅವರು ದಿನವೂ ಬೆಳಗ್ಗೆ ಬಿಸಿನೀರಿನೊಂದಿಗೆ ಜೇನುತುಪ್ಪ ಸೇವನೆ ಮಾಡುತ್ತಾರೆ. ಇದರಿಂದ ದೇಹದಲ್ಲಿ ಶೇಖರವಾಗುವ ಹೆಚ್ಚುವರಿ ಕೊಬ್ಬು (Fat) ಕರಗುತ್ತದೆ. ಅದರ ಜೊತೆಗೆ ಈ ಲಿಂಬೆಯಲ್ಲಿ ವಿಟಮಿನ್ ಸಿ ಆಂಟಿಆಕ್ಸಿಡಂಟ್ಸ್ ಇದೆ. ಇದು ಸಹ ದೇಹವನ್ನು ಶುದ್ಧೀಕರಿಸುತ್ತದೆ.
ಜೇನುತುಪ್ಪದಲ್ಲಿ ರೋಗನಿರೋಧಕ ಶಕ್ತಿಯೂ ಹೆಚ್ಚಿದೆ. ಅದಲ್ಲದೆ ಮಲೈಕಾ ಅರೋರಾ ದಿನವೂ ಯೋಗಾಭ್ಯಾಸ (Yoga) ಮಾಡುತ್ತಾರೆ. ಈ ಹಿಂದೆ, ಪ್ರತಿದಿನ ಕನಿಷ್ಠ 20 ನಿಮಿಷಗಳ ಕಾಲ ಯೋಗಾಭ್ಯಾಸ ಮಾಡುತ್ತಾರೆ. ತೂಕ ಇಳಿಸಿಕೊಳ್ಳಲು ಇಷ್ಟಪಡುವವರಿಗೆ ಅವರು ಹೇಳುವುದು ಒಂದೇ ಬದ್ಧತೆಯಿಂದ (Commitment) ಇರಿ ಎಂದು. ನಿರಂತರ ಬದ್ಧತೆ ಹಾಗೂ ಶ್ರಮ ಎರಡೂ ಅಗತ್ಯ. ಗುರಿ ಕೇಂದ್ರೀಕೃತವಾಗಿದ್ದು, ಸತತವಾಗಿ ಪ್ರಯತ್ನಿಸಬೇಕು. ಹಾಗಾದರೆ ಮಾತ್ರ ನೀವು ತೂಕ ಇಳಿಸಿಕೊಳ್ಳಬಹುದು ಎನ್ನುತ್ತಾರೆ.
ಅದಲ್ಲದೇ, ತ್ವಚೆಯ ಬಗೆಗೂ ಅವರ ಕಾಳಜಿಯನ್ನು ಹೊಂದಿದ್ದು, . ಚರ್ಮದ ಆರೋಗ್ಯ ಚೆನ್ನಾಗಿರಬೇಕೆಂದು ದಿನವೂ ಹೆಚ್ಚು ನೀರು ಕುಡಿಯುತ್ತಾರೆ. ಅದರ ಜೊತೆಗೆ ರಾತ್ರಿ ಮಲಗುವ ಸಮಯದಲ್ಲಿ ಕಣ್ಣಿನ ರೆಪ್ಪೆಗಳಿಗೆ ಹರಳೆಣ್ಣೆಯನ್ನು (Castor Oil) ಸವರಿಕೊಳ್ಳುತ್ತಾರೆ. ಮಲೈಕಾ ಅವರ ಅರೋಗ್ಯ ಗುಟ್ಟು ಎಂದರೆ ಅದುವೇ (Swimming). ಶೂಟಿಂಗ್ ನಲ್ಲಿ ಬ್ಯುಸಿ ಯಾಗಿರುವ ವ್ಯಾಯಾಮ (Exercise) ಮಾಡಲು ಆಗುವುದಿಲ್ಲ. ಆ ವೇಳೆಯಲ್ಲಿ ಈಜುವ ಮೂಲಕ ಅರೋಗ್ಯವನ್ನು ಕಾಪಾಡಿಕೊಳ್ಳುತ್ತಾರೆ.
View this post on Instagram