ಟೊಮೊಟೊ ಮಾರಾಟ ಮಾಡಿ ಕೋಟ್ಯಾಧಿಪತಿಯಾದ ಮಹಾರಾಷ್ಟ್ರದ ರೈತ ದಂಪತಿಗಳು, ಇಲ್ಲಿದೆ ನೋಡಿ ರೈತನ ಯಶೋಗಾಥೆ

ಮಾರುಕಟ್ಟೆಯಲ್ಲಿ ಟೊಮೊಟೊ (Tomoto) ಚಿನ್ನದಂತೆ ದುಬಾರಿಯಾಗುತ್ತಿದೆ. ದಿನ ಕಳೆದಂತೆ ಟೊಮೊಟೊದ ಬೆಲೆಯು ಗಗನಕ್ಕೆ ಟೊಮ್ಯಾಟೋ ಬೆಲೆ ಗಗನಕ್ಕೇರುತ್ತಿದೆ. ಟೊಮೊಟೊ ಬೆಲೆಯು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಮಹಿಳೆಯರ ಟೊಮೊಟೊದ ಸಹವಾಸಬೇಡವೇ ಬೇಡ ಎನ್ನುತ ದುಬಾರಿ ಬೆಲೆಯ ಟೊಮೊಟೊವನ್ನು ಭಾರವಾದ ಮನಸ್ಸಿನಿಂದ ಖರೀದಿ ಮಾಡುತ್ತಿದ್ದಾರೆ.

ಇತ್ತ ಟೊಮೊಟೊ ಬೆಳೆಗಾರರ ಮುಖದಲ್ಲಿ ಮಂದಹಾಸವು ಮೂಡಿದೆ. ಟೊಮೊಟೊ ಬೆಲೆಯು ಹೆಚ್ಚಾದ ಹಿನ್ನೆಲೆಯಲ್ಲಿ ತಾವು ಬೆಳೆದ ಟೊಮೊಟೊ ಮಾರಾಟ ಮಾಡಿ ಲಾಭ ಗಳಿಸುತ್ತಿದ್ದಾರೆ. ಇದೀಗ ಕೋಲಾರ (Kolara) ದಲ್ಲಿ ಮೂವರು ಸಹೋದರರು ಟೊಮ್ಯಾಟೋ ಬೆಳೆದು ಕೋಟ್ಯಾಧಿಪತಿಗಳಾಗಲಿದ್ದಾರೆ. ಆದರೆ ಈಗಾಗಲೇ ಇಲ್ಲೊಬ್ಬರು ರೈತ ದಂಪತಿಗಳು ಒಂದೇ ತಿಂಗಳಲ್ಲಿ ಟೊಮ್ಯಾಟೋ ಮಾರಿ ಕೋಟ್ಯಧೀಶರಾಗಿ, ಟೊಮೊಟೊ ಬೆಳೆಯು ಈ ದಂಪತಿಗಳಿಗೆ ಅದೃಷ್ಟವನ್ನು ತಂದುಕೊಟ್ಟಿದೆ.

ಮಹಾರಾಷ್ಟ್ರ (Maharastra) ದ ಪುಣೆ (Pune) ಜಿಲ್ಲೆಯ ರೈತ, 36 ವರ್ಷದ ಈಶ್ವರ್ ಗಾಯ್ಕರ್ (Eshwar Gaykar) ಟೊಮೊಟೊ ಬೆಳೆದು ಕೃಷಿಯಲ್ಲಿ ಯಶಸ್ಸು ಕಂಡ ರೈತ. ಈಗಾಗಲೇ ಒಂದು ತಿಂಗಳಲ್ಲಿ 17,000 ಕ್ರೇಟ್ ಟೊಮೆಟೊ ಮಾರಾಟ ಮಾಡಿ ಬರೋಬ್ಬರಿ 2.8 ಕೋಟಿ ರೂಪಾಯಿಯನ್ನು ಗಳಿಸಿಕೊಂಡಿದ್ದಾರೆ. ಇನ್ನುಳಿದಂತೆ 4,000 ಕ್ರೇಟ್‌ನಷ್ಟು ಟೊಮೆಟೊ ಕಟಾವಿಗೆ ಬರಲಿದ್ದು, ಈ ಟೊಮೊಟೊ ಮಾರಾಟ ಮಾಡಿದರೆ ಒಟ್ಟು 3.5 ಕೋಟಿ ರೂಪಾಯಿಯನ್ನು ಗಳಿಸಿದಂತೆ ಆಗುತ್ತದೆ.

ಹೌದು, ಈಶ್ವರ್ ಗಾಯ್ಕರ್‌ (Eshwar Gaykar) ಗೆ 18 ಎಕರೆ ಜಮೀನನ್ನು ಹೊಂದಿದ್ದಾರೆ. ಈ ಜಮೀನಿನಲ್ಲಿ 12 ಎಕರೆಯಲ್ಲಿ ಟೊಮ್ಯಾಟೋ ಬೆಳೆಯಲಾಗಿದ್ದು ಯಶಸ್ಸು ಕಂಡಿದ್ದಾರೆ. ಈ ಹಿಂದೆ ಬೆಳೆದ ಟೊಮೊಟೊ ಬೆಳೆಯಿಂದಾಗಿ ನಷ್ಟವನ್ನು ಅನುಭವಿಸಿದ್ದರು. ಆದರೆ ಈ ಬಾರಿಯ ಟೊಮೊಟೊ ಬೆಳೆಯಲ್ಲಿ ಬಂದ ಲಾಭವು ಈಶ್ವರ್ ಗಾಯ್ಕರ್ ಮುಖದಲ್ಲಿ ನಗು ತರಿಸಿದೆ.

ಟೊಮೊಟೊ ಮಾರಿ ಕೋಟ್ಯಾಧಿಪತಿಯಾಗಿರುವ ಆಗಿರುವ ರೈತ ಈಶ್ವರ್ ಗಾಯ್ಕರ್ ಪ್ರತಿಕ್ರಿಯೆ ನೀಡಿದ್ದು, ‘ ನಮ್ಮ ಕುಟುಂಬದ ಬಳಿ 18 ಎಕರೆ ಜಮೀನು ಇದ್ದು, ಅದರಲ್ಲಿ 12 ಎಕರೆಯಲ್ಲಿ ನಾನು 2017ರಿಂದಲೂ ಟೊಮೆಟೊ ಕೃಷಿ ಮಾಡಿಕೊಂಡು ಬಂದಿದ್ದೇನೆ. 2021ರಲ್ಲಿ ಹೀಗೆ ಟೊಮೆಟೊ ಬೆಳೆದು ಸರಿಸುಮಾರು 20 ಲಕ್ಷ ರೂ. ನಷ್ಟ ಅನುಭವಿಸಿದ್ದೆ. ಆದರೆ, ಈಗ ಒಳ್ಳೆಯ ಬೆಲೆ ಬಂದಿರುವುದರಿಂದ ಉತ್ತಮ ಆದಾಯ ಬಂದಿದೆ. ನಿಜಕ್ಕೂ ಖುಷಿಯಾಗುತ್ತಿದೆ. ನಾನು ಪ್ರತಿ ಕ್ರೇಟ್ ಟೊಮೆಟೊವನ್ನು 770-2,311 ರೂ. ದರದಲ್ಲಿ ಮಾರಾಟ ಮಾಡಿದ್ದೇನೆ. ಇನ್ನೂ 4,000 ಕ್ರೇಟ್ ಟೊಮೆಟೊ ಕಟಾವಿಗೆ ಬರಲಿದ್ದು, ಇದೇ ರೀತಿಯ ಒಳ್ಳೆಯ ರೇಟ್ ನಿರೀಕ್ಷಿಸಿದ್ದೇನೆ” ಎಂದಿದ್ದಾನೆ.

Leave a Reply

Your email address will not be published. Required fields are marked *