ಹನಿಮೂನ್‌ನಲ್ಲಿ ಪತಿ ಆನಂದನನ್ನು ಮುಗಿಸಿದ ಪತ್ನಿ.ಇದರ ಹಿಂದಿನ ಕಾರಣ ಏನು? ಈ ಭಯಾನಕ ಮಡದಿ ಮಾಡಿದ ಪ್ಲಾನ್ ಹೇಗಿತ್ತು ನೋಡಿ!!

Maharashtra deeksha and anand : ಕಾಲ ಕೆಟ್ಟೋಗಿದೆ, ಯಾವ ಹುತ್ತದಲ್ಲಿ ಯಾವ ಹಾವು ಇರುತ್ತದೆ ಎಂದು ನಂಬುವುದು ಕಷ್ಟವೇ. ಅದರಲ್ಲಿಯೂ ಸಂಸಾರದ ವಿಚಾರಕ್ಕೆ ಬಂದಾಗ ಸತಿ ಪತಿಗಳು ಅರ್ಥ ಮಾಡಿಕೊಂಡು ಬಾಳುವುದು ಅಗತ್ಯ. ಇತ್ತೀಚೆಗಿನ ದಿನಗಳಲ್ಲಿ ಗಂಡನಿಗೆ ಗೊತ್ತಿಲ್ಲದೇನೇ ಹೆಂಡತಿ, ಹೆಂಡತಿಗೆ ಗೊತ್ತಿಲ್ಲದೇನೇ ಗಂಡ ಅ_ಕ್ರಮ ಸಂಬಂಧವನ್ನು ಇಟ್ಟುಕೊಳ್ಳುತ್ತಿದ್ದು, ಕೊನೆಗೆ ಸಂಸಾರವು ದಾರುಣ ಅಂತ್ಯ ಕಾಣುವ ಮೂಲಕ ಕೊನೆಯಾಗುತ್ತದೆ.

ಇಂತಹದ್ದೇ ಮಹಾರಾಷ್ಟ್ರದ ಪುಣೆಯಲ್ಲಿ ಆ_ಘಾತಕಾರಿ ಘಟನೆಯೊಂದು ನಡೆದಿದೆ. ಮದುವೆಯಾದ 7 ದಿನಗಳ ನಂತರ, ಪತ್ನಿಯೂ ಪತಿಯನ್ನು ಕಥೆಯನ್ನೇ ಮುಗಿಸಿದ್ದಾಳೆ. 2018 ರಲ್ಲಿ ಮೇ 26 ರಂದು ಮದುವೆಯಾದ ದಿನದಂದು ದೀಕ್ಷಾ ಆನಂದ್ ಅವರು ಸುಂದರವಾಗಿ ಕಂಗೊಳಿಸಿದ್ದರು. ಶೀಘ್ರದಲ್ಲೇ ಅವಳು ತನ್ನ ಪತಿಯ ಜೀವವನ್ನು ಮುಗಿಸುತ್ತಾಳೆ ಎಂದು ಅಲ್ಲಿದ್ದವರು ಯಾರು ಕೂಡ ಊಹೆ ಮಾಡಿರಲಿಲ್ಲ.

ಮದುವೆಯಾದ ಏಳು ದಿನಗಳ ನಂತರ ಹನಿಮೂನ್ ಗೆಂದು ದಂಪತಿಗಳು ಮಹಾಬಲೇಶ್ವರಕ್ಕೆ ಹೋಗಿದ್ದರು. ಈ ಸಂತೋಷದ ಸಂದರ್ಭವು ಅವನು ತೆಗೆದುಕೊಳ್ಳುವ ಕೊನೆಯ ಕ್ಷಣ ಎನ್ನುವುದು ಪತಿ ಆನಂದನಿಗೆ ತಿಳಿದಿರಲಿಲ್ಲ. ಪತಿಯ ಜೀ-ವ ತೆಗೆಯಲು ದೀಕ್ಷಾ ಮತ್ತು ಸಹಚರರಿಂದ ಈಗಾಗಲೇ ಯೋಜಿಸಲಾಗಿತ್ತು. ಆ ಸಹಚರನು ಅವಳ ಪ್ರೇಮಿಯಾಗಿದ್ದನು. ಈ ಘಟನೆಯ ಬಳಿಕ ಆರಂಭಿಕ ತನಿಖೆಯಲ್ಲಿ, ದೀಕ್ಷಾ ತನ್ನ ಪತಿ ಆನಂದ್‌ನನ್ನು ಮುಗಿಸಿರುವುದಾಗಿ ತಪ್ಪೊಪ್ಪಿಕೊಂಡಿದ್ದಾಳೆ. ಈ ದೀಕ್ಷಾ ಬೇರೊಬ್ಬನನ್ನು ಪ್ರೀತಿಸುತ್ತಿದ್ದಳು.

ಪುಣೆ ಮೂಲದ ಯುವಕ ನಿತಿನ್ ಮಲ್ಕರ್ ಜೊತೆ ವಿವಾಹೇತರ ಸಂಬಂಧ ಹೊಂದಿದ್ದಳು. ಅವಳು ಆ ನಿತಿನ್ ಎಂಬಾತನನ್ನು ಮದುವೆಯಾಗಲು ಕೂಡ ಬಯಸಿದ್ದಳು. ಆದರೆ, ದೀಕ್ಷಾ ಮನೆಯವರು ಈ ಸಂಬಂಧವನ್ನು ಒಪ್ಪದ ಕಾರಣ ಒತ್ತಡಕ್ಕೆ ಮಣಿದು ಆನಂದ್ ಜೊತೆಗೆ ಮದುವೆ ಮಾಡಿಸಿದ್ದರು. ಆದರೆ ಕೊನೆಗೆ ಕುಟುಂಬದವರ ಒತ್ತಡಕ್ಕೆ ಮಣಿದು ಖುಷಿಯಿಂದಲೇ ಮದುವೆಯಾದರು.

ಮದುವೆ ಮುಗಿಸಿ ಹನಿಮೂನ್ ಗೆ ಮಹಾಬಲೇಶ್ವರ ಮಾರ್ಗವಾಗಿ, ದಂಪತಿಗಳು ಕಾರಿನಲ್ಲಿ ಪ್ರಯಾಣಿಸುತ್ತಿದ್ದರು. ಈ ಮೊದಲೇ ಮಾಡಿದ್ದ ಪ್ಲಾನ್ ಪ್ರಕಾರ ದೀಕ್ಷಾ ತನಗೆ ಅನಾರೋಗ್ಯವಿದೆ ಎಂದು ಪತಿಗೆ ತಿಳಿಸಿದ್ದಳು. ಅಷ್ಟೇ ಅಲ್ಲದೇ ಅರ್ಧದಾರಿಯಲ್ಲಿ ವಾಂತಿ ಬರುತ್ತಿದೆ ಎಂದ ಪತ್ನಿಯ ಮಾತು ಕೇಳಿ ಆನಂದ್ ಕಾರನ್ನು ರಸ್ತೆಯಲ್ಲಿ ನಿಲ್ಲಿಸಿದ.

ಈ ವೇಳೆ ಹಿಂದೆ ಬೈಕ್‌ನಲ್ಲಿ ಬಂದ ವ್ಯಕ್ತಿಗಳ ಗುಂಪೊಂದು ಆನಂದ್ ಮೇಲೆ ಮಾರಣಾಂತಿಕ ಹ-ಲ್ಲೆ ನಡೆಸಿದ್ದು, ಈ ಘಟನೆಯೂ ಪುಣೆಯ ಜನರನ್ನು ಬೆಚ್ಚಿಬೀಳಿಸಿತ್ತು. ಕೊ ಲೆ ಆರೋಪದ ಮೇಲೆ ಸತಾರಾ ಕ್ರೈಂ ಬ್ರಾಂಚ್ ಪತ್ನಿ ಮತ್ತು ಆಕೆಯ ಪ್ರಿಯಕರನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದರು.

Leave a Reply

Your email address will not be published. Required fields are marked *