Mahalkshmi about night : ಕಳೆದ ವರ್ಷ ವೈವಾಹಿಕ ಜೀವನಕ್ಕೆ ಕಾಲಿಟ್ಟ ಈ ಜೋಡಿಯೊಂದು ಸಿಕ್ಕಾಪಟ್ಟೆ ಸುದ್ದಿಯಲ್ಲಿತ್ತು. ಹೌದು ಆ ಜೋಡಿ ಬೇರೆ ಯಾರು ಅಲ್ಲ ಮಹಾಲಕ್ಷ್ಮಿ ಹಾಗೂ ರವೀಂದರ್. ಕಳೆದ ಸೆಪ್ಟೆಂಬರ್ 1 ರಂದು ವೈವಾಹಿಕ ಜೀವನಕ್ಕೆ ಕಾಲಿಟ್ಟ ಈ ನೂತನ ಜೋಡಿಯೂ ಮದುವೆಯ ವಿಚಾರವಾಗಿ ಸುದ್ದಿಯಾಗಿದ್ದರು. ವೈವಾಹಿಕ ಜೀವನಕ್ಕೆ ಕಾಲಿಟ್ಟ ಬಳಿಕ ಸಿಕ್ಕಾಪಟ್ಟೆ ಟ್ರೋಲ್ ಆದ ನಿರೂಪಕಿ ಮಹಾಲಕ್ಷ್ಮಿ ಹಾಗೂ ನಿರ್ಮಾಪಕ ರವೀಂದರ್ ಇಬ್ಬರಿಗೂ ಕೂಡ ಇದು ಎರಡನೇ ಮದುವೆಯಾಗಿದೆ.
ಮಹಾಲಕ್ಷ್ಮಿ ಈ ಹಿಂದೆ ಅನಿಲ್ ಎಂಬಾತನನ್ನು ಮದುವೆಯಾಗಿದ್ದು, ಒಬ್ಬ ಮಗನಿದ್ದಾನೆ. ಆದರೆ ಈ ಇಬ್ಬರೂ ಕೂಡ ವೈವಾಹಿಕ ಜೀವನದಿಂದ ಬೇರೆ ಬೇರೆಯಾದರು. ಇತ್ತ ರವೀಂದರ್ ಕೂಡ ಪತ್ನಿಯಿಂದ ಬೇರ್ಪಟ್ಟು ಒಂಟಿ ಜೀವನ ನಡೆಸುತ್ತಿದ್ದರು. ಹೀಗಿರುವಾಗ ರವೀಂದರ್ ನಿರ್ಮಾಣದ ಸಿನಿಮಾದಲ್ಲಿ ಮಹಾಲಕ್ಷ್ಮಿ ನಟಿಸಿದ್ದರು. ಆ ಸಿನಿಮಾದಿಂದ ಇವರಿಬ್ಬರಿಗೂ ಸ್ನೇಹ ಬೆಳೆದಿತ್ತು. ಪರಸ್ಪರ ಪ್ರೀತಿಸುತ್ತಿದ್ದ ಮಹಾಲಕ್ಷ್ಮಿ ಮತ್ತು ರವೀಂದರ್ ಚಂದ್ರಶೇಖರನ್ ಕಳೆದ ವರ್ಷ ಸರ್ಪ್ರೈಸ್ ನೀಡುವ ಮೂಲಕ ಮದುವೆ ಮಾಡಿಕೊಂಡಿದ್ದರು. ಅಂದಹಾಗೆ ರವೀಂದರ್ ಅವರು ನಿರ್ಮಾಪಕರಾಗಿದ್ದಾರೆ.
ಇನ್ನು, ನಿರೂಪಕಿ ಕಮ್ ನಟಿಯಾಗಿ ಮಹಾಲಕ್ಷ್ಮಿಯವರು ಖ್ಯಾತಿ ಗಳಿಸಿಕೊಂಡಿದ್ದಾರೆ. ಹೌದು, ಮಹಾಲಕ್ಷ್ಮಿಯವರು ರವೀಂದರ್ ಚಂದ್ರಶೇಖರ್ ನಿರ್ಮಿಸಿದ್ದ ‘ವಿಡಿಯುಮ್ ವಾರೈ ಕಾಥಿರು’ ಸಿನಿಮಾದಲ್ಲೂ ನಟಿಸಿದ್ದರು. ಅದರ ಜೊತೆಗೆ ಕಿರುತೆರೆ ಲೋಕದಲ್ಲಿ ನಿರೂಪಕಿಯಾಗಿ ಸಕ್ರಿಯರಾಗಿದ್ದಾರೆ. ಅದಲ್ಲದೆ, ವಾಣಿ ರಾಣಿ, ಆಫೀಸ್, ಚೆಲ್ಲಮೇ, ಉಥಿರಿಪೂಕ್ಕಳ್, ಒರು ಕೈ ಒಸೈ ಸೇರಿದಂತೆ ಸಾಕಷ್ಟು ಧಾರಾವಾಹಿಗಳಲ್ಲಿ ಮಹಾಲಕ್ಷ್ಮೀ ನಟಿಸಿದ್ದಾರೆ.
ಇನ್ನು, ರವೀಂದರ್ ಚಂದ್ರಶೇಖರನ್ ಅವರು ನಟ್ಪುನ ಎನ್ನಡು ಥೆರಿಯುಮ, ಮುರುಂಗೈಕೈ ಚಿಪ್ಸ್, ವಿಡಿಯುಮ್ ವಾರೈ ಕಾಥಿರು ಮುಂತಾದ ಸಿನಿಮಾಗಳನ್ನು ನಿರ್ಮಾಣ ಮಾಡಿದ್ದಾರೆ. ವೈವಾಹಿಕ ಜೀವನದ ಸಾಕಷ್ಟು ವಿಚಾರಗಳಿಂದ ಟ್ರೋಲ್ ಆದ ಈ ಜೋಡಿ, ಅದರ ಜೊತೆಗೆ ನಟಿ ಮಹಾಲಕ್ಷ್ಮಿಯವರು ರವೀಂದರ್ ಅವರ ಆಸ್ತಿ ನೋಡಿ ಮದುವೆಯಾಗಿದ್ದಾರೆ ಎನ್ನಲಾಗಿತ್ತು. ಈ ಬಗ್ಗೆ ನಟಿ ಕಮ್ ನಿರೂಪಕಿ ಮಹಾಲಕ್ಷ್ಮಿ ಸ್ಪಷ್ಟನೆ ನೀಡಿದ್ದರು.
ಖಾಸಗಿ ಸುದ್ದಿ ವಾಹಿನಿಯ ಸಂದರ್ಶನದಲ್ಲಿ ಮಹಾಲಕ್ಷ್ಮೀಯವರಿಗೆ ಈ ವೇಳೆ ಹಣಕ್ಕಾಗಿ ಮದುವೆಯಾದ್ರಾ? ಎಂದು ಪ್ರಶ್ನೆಯೊಂದನ್ನು ಕೇಳಲಾಗಿತ್ತು. ಈ ಪ್ರಶ್ನೆಗೆ ಉತ್ತರ ನೀಡಿದ ಮಹಾಲಕ್ಷ್ಮೀ ನಾನು ಆರ್ಥಿಕವಾಗಿ ಸ್ವತಂತ್ರಳಾಗಿದ್ದಾನೆ ಮತ್ತು ನನ್ನ ಮಗನನ್ನು ನನ್ನದೇ ಹಣದಲ್ಲಿ ಬೆಳೆಸುವಷ್ಟು ಆರ್ಥಿಕವಾಗಿ ಸದೃಢಳಾಗಿದ್ದೇನೆ. ಮದುವೆ ಆಗದಿರಲು ಬಯಸಿದ್ದೇ ಆದರೆ, ರವೀಂದರ್ ಕೇಳಿದ ರೀತಿ ನನಗೆ ಇಷ್ಟವಾಯಿತು. ನೀವು ನನ್ನ ಪತ್ನಿಯಾಗುವಿರಾ? ಎಂದು ಮಸೇಜ್ ಮಾಡಿದರು.
ಮಸೇಜ್ ನೋಡಿದ ಬಳಿಕ ತುಂಬಾ ಸಮಯ ತೆಗೆದುಕೊಂಡು, ಯೋಚಿಸಿ, ಒಪ್ಪಿಗೆ ಸೂಚಿಸಿದೆ. ನನ್ನ ತಂದೆ ದೊಡ್ಡ ಕೊರಿಯೋಗ್ರಾಫರ್. ಬಾಹುಬಲಿ ಮತ್ತು ಆರ್ಆರ್ಆರ್ ಸಿನಿಮಾಗಳಿಗೆ ಕೊರಿಯೋಗ್ರಫಿ ಮಾಡಿದ್ದಾರೆ. ನಾನು ಕೂಡ ಸಿನಿ ಇಂಡಸ್ಟ್ರಿಯಲ್ಲಿದ್ದೇನೆ. ನಮ್ಮದು ಆರ್ಥಿಕವಾಗಿ ಸದೃಢವಾದ ಕುಟುಂಬ. ನನ್ನ ಜೀವನವನ್ನು ನಿಶ್ಚಿಂತೆಯಿಂದ ಸಾಗಿಸಲು ಬೇಕಾದ ಹಣ ನನ್ನ ಬಳಿ ಇದೆ. ಹೀಗಾಗಿಯೇ ಮದುವೆ ಆಗುವುದು ಬೇಡ.
ಅವರು ನಿರ್ಮಾಪಕ ಎಂಬ ಕಾರಣದಿಂದ ಈ ಪ್ರಶ್ನೆಗಳು ಕೇಳಿಬಂದಿವೆ. ಹೇಳಬೇಕೆಂದರೆ, ನಾನು ಅವರನ್ನು ವೈಯಕ್ತಿಕವಾಗಿ ಇಷ್ಟಪಟ್ಟೆ. ಅವರು ನಿರ್ಮಾಪಕರಲ್ಲದಿದ್ದರೂ ಅವರನ್ನು ಮದುವೆಯಾಗುತ್ತಿದ್ದೆ. ಅವರು ನನ್ನನ್ನು ಕೇಳಿದ ರೀತಿ ಬೇರೆಯವರು ಕೇಳಿದ್ದರೂ ನನ್ನ ನಿಲುವು ಅದೇ ಆಗುತ್ತಿತ್ತು. ಅವರು ನಿರ್ಮಾಪಕ ಎಂಬ ಕಾರಣಕ್ಕೆ ಜನ ಹೀಗೆ ಮಾತನಾಡುತ್ತಾರೆ. ನನ್ನನ್ನು ವೈಯಕ್ತಿಕವಾಗಿ ತಿಳಿದಿರುವ ಜನರಿಗೆ ನನ್ನ ಬಗ್ಗೆ ಚೆನ್ನಾಗಿ ತಿಳಿದಿದೆ ಎಂದಿದ್ದರು.
ವೈವಾಹಿಕ ಜೀವನಕ್ಕೆ ಕಾಲಿಟ್ಟ ಬಳಿಕ ಸೋಶಿಯಲ್ ಮೀಡಿಯಾದಲ್ಲಿ ಆಗಾಗ ತಮ್ಮ ಫೋಟೋ ಹಾಗೂ ವಿಡಿಯೋಗಳನ್ನು ಶೇರ್ ಮಾಡಿಕೊಳ್ಳುವ ಈ ದಂಪತಿಗಳು ಇದೀಗ ಮತ್ತೆ ಸುದ್ದಿಯಾಗಿದ್ದಾರೆ. ಬೆಡ್‌ರೂಮ್ ಫೋಟೋ ಹಂಚಿಕೊಂಡಿದ್ದು, ಈ ವಿಶೇಷ ಫೋಟೋವೊಂದು ನೆಟ್ಟಿಗರ ಗಮನ ಸೆಳೆಯುತ್ತಿದೆ. ಹೌದು, ಮಹಾಲಕ್ಷ್ಮಿ ಮಲಗುವ ಕೋಣೆಯ ಫೋಟೋವೊಂದನ್ನ ಶೇರ್ ಮಾಡಿದ್ದಾರೆ.ಈ ಫೋಟೋದಲ್ಲಿ ನಟಿ ನೈಟ್ ಡ್ರೆಸ್‌ನಲ್ಲಿ ಕಾಣಿಸಿಕೊಂಡಿದ್ದು, ಅದಲ್ಲದೇ ಬೇರೆ ಬೇರೆ ನೈಟ್ ಡ್ರೆಸ್ ಧರಿಸಿ ಮುದ್ದಾಗಿ ಪೋಸ್ ಕೊಟ್ಟಿದ್ದಾರೆ. ಈ ಫೋಟೋ ನೋಡಿ, ನೆಟ್ಟಿಗರು ಪ್ರಶ್ನೆ ಕೇಳುತ್ತಿದ್ದಾರೆ.
ಮಹಾಲಕ್ಷ್ಮಿಯವರಿಗೆ ಅಭಿಮಾನಿಗಳು ಯಾವಾಗ ಗುಡ್‌ನ್ಯೂಸ್ ಕೊಡುತ್ತೀರಿ ಎಂದು ಕಾಮೆಂಟ್ ಮಾಡಿ ಕೇಳುತ್ತಿದ್ದಾರೆ.ಮತ್ತೊಬ್ಬರು, ನೀವು ಯಾವಾಗ ಮಗುವಿಗೆ ಜನ್ಮ ಕೊಡುತ್ತೀರಿ. ನಿಮ್ಮ ಈ ಶುಭ ಸುದ್ದಿಗಾಗಿ ಕಾತರದಿಂದ ಕಾಯುತ್ತಿದ್ದೇನೆ ಎಂದಿದ್ದಾರೆ. ಮತ್ತೊಬ್ಬ ಬಳಕೆದಾರ, ಸರಳತೆ ಯಾವಾಗಲೂ ಮನುಷ್ಯನ ಗುರುತಾಗಿರಬೇಕು ಎಂದು ಬರೆದಿದ್ದಾರೆ. ಆದರೆ ಯಾವುದೇ ಟೀಕೆಗಳಿಗೂ ತಲೆ ಕೆಡಿಸಿಕೊಳ್ಳದೇ ಈ ಜೋಡಿ ಸುಖವಾಗಿ ಸಂಸಾರ ಮಾಡುತ್ತಿದ್ದಾರೆ.