ಮಾರುಕಟ್ಟೆಯಲ್ಲಿ ಬಿಡುಗಡೆಯಾದ ‘ಮೇಡ್ ಇನ್ ಇಂಡಿಯಾ’ ವಾಷಿಂಗ್‌ ಮೆಷಿನ್‌, ಏನಿದರ ವಿಶೇಷತೆಗಳು ಗೊತ್ತಾ?

ಇತ್ತೀಚೆಗಿನ ಕೆಲವು ವರ್ಷಗಳಲ್ಲಿ ಜನರು ಎಲ್ಲಾ ಕೆಲಸ ಕಾರ್ಯಗಳಿಗೂ ಕೂಡ ಯಂತ್ರಗಳನ್ನು ಅವಲಂಬಿಸಿಕೊಂಡಿದ್ದಾರೆ. ಹೀಗಾಗಿ ಯಂತ್ರಗಳ ಸಹಾಯವಿಲ್ಲದೇ ಯಾವ ಕೆಲಸಗಳು ಕೂಡ ನಡೆಯುವುದಿಲ್ಲ. ಮನೆ ಕೆಲಸಕ್ಕೂ ಯಂತ್ರಗಳನ್ನು ಬಳಸುವ ಮಟ್ಟಿಗೆ ಬಂದು ತಲುಪಿದ್ದೇನೆ. ಅದರಲ್ಲಿಯು ನಗರದಂತಹ ಪ್ರದೇಶದಲ್ಲಿ ಬಟ್ಟೆ ತೊಳೆಯುವ ವಾಷಿಂಗ್‌ ಮೆಷಿನ್‌ (Washing Mechine) ಬಳಕೆ ಮಾಡುತ್ತಿರುವವರೇ ಹೆಚ್ಚು.

ಇತ್ತೀಚೆಗಿನ ದಿನಗಳಲ್ಲಿ ಕಂಪೆನಿಗಳು ಕೂಡ ವಿವಿಧ ಫೀಚರ್ಸ್ (Features)ಗಳನ್ನು ಒಳಗೊಂಡ ವಾಷಿಂಗ್‌ ಮೆಷಿನ್‌ಗಳನ್ನು ಮಾರುಕಟ್ಟೆಯಲ್ಲಿ ಪರಿಚಯಿಸಿದೆ. ಇದೀಗ ‘ಮೇಡ್ ಇನ್ ಇಂಡಿಯಾ’ (Made in India) ವಾಷಿಂಗ್‌ ಮೆಷಿನ್‌ ಅನ್ನು ಮಾರುಕಟ್ಟೆಯಲ್ಲಿ ಪರಿಚಯಿಸಲಾಗಿದೆ. ಹೈಯರ್ ಅಪ್ಲೈಯೆನ್ಸಸ್ ಇಂಡಿಯಾ (Haier India) ತನ್ನ ಹೊಸ 959 ಡೈರೆಕ್ಟ್ ಮೋಷನ್ ಮೋಟಾರ್ ಫುಲ್‌ ಆಟೋಮ್ಯಾಟಿಕ್ ಫ್ರಂಟ್ ಲೋಡ್ ವಾಷಿಂಗ್ ಮೆಷಿನ್‌ (HW90-DM14959CBKU1) ಅನ್ನು ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಿದೆ.

ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಲಾಗಿರುವ 959 ಡೈರೆಕ್ಟ್ ಮೋಷನ್ ಮೋಟಾರ್ ಫುಲ್‌ ಆಟೋಮ್ಯಾಟಿಕ್ ಫ್ರಂಟ್ ಲೋಡ್ ವಾಷಿಂಗ್ ಮೆಷಿನ್‌ ನಲ್ಲಿ ವಿಶೇಷವಾದ ಫೀಚರ್ಸ್‌ ಲಭ್ಯವಿದೆ. ಅದರಲ್ಲೂ ಕಂಪನಗಳು ಮತ್ತು ಶಬ್ದವನ್ನು ಕಡಿಮೆ ಮಾಡಲು ಅತ್ಯಾಧುನಿಕ ಡೈರೆಕ್ಟ್ ಮೋಷನ್ ಮೋಟಾರ್ ತಂತ್ರಜ್ಞಾನವನ್ನು ಬಳಸಲಾಗಿದೆ.

AI-DBS (ಡೈನಾಮಿಕ್ ಬ್ಯಾಲೆನ್ಸ್ ಸಿಸ್ಟಮ್) ಸಾಫ್ಟ್‌ವೇರ್ ಆಯ್ಕೆಯು ಇದರಲ್ಲಿ ಕಾಣಬಹುದಾಗಿದೆ. ಕಡಿಮೆ ಸ್ಥಳದಲ್ಲಿ ಈ ವಾಷಿಂಗ್ ಮೆಷಿನ್ ಅನ್ನು ಇಡಬಹುದಾಗಿದೆ. ಇದರಲ್ಲಿ ಮೊದಲ ಹೆಚ್ಚುವರಿ ದೊಡ್ಡ 525 mm ಸೂಪರ್ ಡ್ರಮ್ ಆಯ್ಕೆ ಪಡೆದುಕೊಂಡಿದೆ. ಹೀಗಾಗಿ ಬಟ್ಟೆಗಳಿಗೆ ಹೆಚ್ಚಿನ ಸ್ಥಳಾವಕಾಶವನ್ನು ನೀಡಲಾಗುತ್ತದೆ. ಅದರ ಜೊತೆಗೆ, ಲೋಡ್ ಮಾಡುವ ಕಾರ್ಯ ಹಾಗೂ ಬಟ್ಟೆಯಲ್ಲಿ ಹೊರತೆಗೆಯುವ ಕಾರ್ಯವನ್ನು ಮತ್ತಷ್ಟು ಸರಳಗೊಳಿಸಲಾಗಿದೆ.

ಈ ವಾಷಿಂಗ್ ಮೆಷಿನ್ ನಲ್ಲಿ ಆಂಟಿ-ಬ್ಯಾಕ್ಟೀರಿಯಲ್ ಟೆಕ್ನಾಲಜಿ, ಡ್ಯುಯಲ್ ಸ್ಪ್ರೇ ತಂತ್ರಜ್ಞಾನ ಮತ್ತು ಪುರಿಸ್ಟೀಮ್ ಅನ್ನು ಅಳವಡಿಕೆ ಮಾಡಲಾಗಿರುವುದು ವಿಶೇಷ.ಇದರಲ್ಲಿ ಪಿಲ್ಲೋ ಶೇಪ್ ಡ್ರಮ್ ಅನ್ನು ಹೊಂದಿದ್ದು, ಡ್ರಮ್‌ನ ವಿನ್ಯಾಸವು ಮೃದುವಾದ ಚಲನೆಯನ್ನು ಸುಲಭಗೊಳಿಸಲು ಸಣ್ಣ ರಂಧ್ರಗಳನ್ನು ಕಾಣಬಹುದು.

ಇಂಟಿಗ್ರೇಟೆಡ್ ವೈ-ಫೈ ಕಂಟ್ರೋಲ್ ಲಭ್ಯವಿದ್ದು,ಸ್ಮಾರ್ಟ್‌ಫೋನ್‌ನಲ್ಲಿಯೇ ಕಂಟ್ರೋಲ್‌ ಮಾಡಬಹುದಾಗಿರುವುದು ಮತ್ತೊಂದು ವಿಶೇಷ. ವಾಷಿಂಗ್‌ ಮೆಷಿನ್‌ 9 ಕೆಜಿ ಸಾಮರ್ಥ್ಯ ಹೊಂದಿದ್ದು, 5 ಸ್ಟಾರ್ ಎನರ್ಜಿ ರೇಟಿಂಗ್‌ ವಿದ್ಯುತ್ ಬಳಕೆಯು ಕಡಿಮೆಯಾಗಲಿದೆ. ಈ ಮೆಷಿನ್ ಮೇಲೆ 20 ವರ್ಷಗಳ ಖಾತರಿಯೊಂದಿಗೆ 5 ವರ್ಷಗಳ ಸಮಗ್ರ ಖಾತರಿ ಬೆನಿಫಿಟ್ಸ್ ಗಳು ಲಭ್ಯವಿದ್ದು, ಕೇವಲ 56,990ರೂ ಗೆ ಗ್ರಾಹಕರಿ ಖರೀದಿಗೆ ಲಭ್ಯವಿದೆ.

Leave a Reply

Your email address will not be published. Required fields are marked *