ಐಪಿಎಲ್ ಕಪ್ ಗೆದ್ದರೂ ಕೂಡ ದುಃಖವನ್ನು ಮರೆಯಲು ಭಗವದ್ಗೀತೆ ಪುಸ್ತಕವನ್ನು ಹಿಡಿದ ಎಂ ಎಸ್ ಧೋನಿ , ಈ ಫೋಟೋದಲ್ಲಿ ಏನಿದೆ ಗೊತ್ತಾ?.. ಭಾರತೀಯ ಕ್ರಿಕೆಟ್ ಆಟಗಾರ ಎಂ ಎಸ್ ಧೋನಿ (M S Dhoni) ಯವರು ಎಲ್ಲರಿಗೂ ಕೂಡ ಚಿರಪರಿಚಿತ. ಕ್ರಿಕೆಟ್ ಪ್ರಿಯರ ಮನಸ್ಸು ಗೆದ್ದಿರುವ ಎಂ ಎಸ್ ಧೋನಿಯವರು ಅಭಿಮಾನಿಗಳು ದೊಡ್ಡ ಸಂಖ್ಯೆಯಲ್ಲಿದ್ದಾರೆ. ಈ ಹಿಂದೆ ಐಪಿಎಲ್ ಸಮಯದಲ್ಲಿ ಎಂಎಸ್ ಧೋನಿಯವರ ಎಡ ಮೊಣಕಾಲು ಗಾಯವಾಗಿತ್ತು. ಅದಲ್ಲದೇ ಧೋನಿ ಅನೇಕ ಬಾರಿ ನೋವಿನಿಂದ ಮೈದಾನದಲ್ಲಿ ಕುಂಟುತ್ತಿದ್ದ ದೃಶ್ಯಗಳು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡಿತ್ತು.
ಆದರೆ ಇದೀಗ ಚೆನ್ನೈ ಐಪಿಎಲ್ ಚಾಂಪಿಯನ್ ಆದ ಎರಡೇ ದಿನದಲ್ಲಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರೆ. ಈ ಹಿಂದೆ ವೈದ್ಯರ ಸಲಹೆಯ ಬಳಿಕ ಆಪರೇಷನ್ಗೆ ಒಳಗಾಗಬೇಕೆ ಬೇಡವೇ ಎಂಬುದನ್ನು ನಿರ್ಧರಿಸಲಾಗುವುದು ಎಂದು ತಿಳಿಸಿದ್ದರು. ವೈದ್ಯರ ಸಲಹೆಯಂತೆ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡಿದ್ದಾರೆ.
ಹೌದು, ಐಪಿಎಲ್ ಫೈನಲ್ ಮುಗಿದ ಕೂಡಲೇ ಎಂ ಎಸ್ ಧೋನಿ ಮುಂಬೈನ ಕೋಕಿಲಾಬೆನ್ ಆಸ್ಪತ್ರೆಗೆ ಹೋಗಿ ಮೇ 31 ರಂದು ಮೊಣಕಾಲಿನ ಪರೀಕ್ಷೆಯನ್ನು ಮಾಡಿಸಿಕೊಂಡಿದ್ದರು. ಒಂದು ದಿನದ ಬಳಿಕ ಜೂನ್ 1 ರ ಬೆಳಿಗ್ಗೆ ಧೋನಿಗೆ ಮೊಣಕಾಲು ಶಸ್ತ್ರಚಿಕಿತ್ಸೆ ಮಾಡಲಾಗಿದೆ.
ಬಲ್ಲ ಮೂಲಗಳ ಮೂಲಕ ಧೋನಿಯ ಆಪರೇಷನ್ ಅನ್ನು ಡಾ.ದಿನ್ ಶಾ ಪರ್ದಿವಾಲಾ (Dr. Din Shah Pardiwala) ಮಾಡಿದ್ದಾರೆ. ಸದ್ಯಕ್ಕೆ ಮೊಣಕಾಲಿನ ಶಸ್ತ್ರಚಿಕಿತ್ಸೆಯ ನಂತರ ಆಸ್ಪತ್ರೆಯಲ್ಲಿದ್ದು, ವಿಶ್ರಾಂತಿ ಪಡೆದುಕೊಳ್ಳುತ್ತಿದ್ದಾರೆ. ಈ ಶಸ್ತ್ರ ಚಿಕಿತ್ಸೆಯ ಬಳಿಕ ಚೇತರಿಸಿಕೊಳ್ಳಲು ಕೆಲವು ತಿಂಗಳುಗಳ ಸಮಯ ತೆಗೆದುಕೊಳ್ಳಲಿದ್ದಾರೆ ಎನ್ನಲಾಗಿದೆ.
ಮೊಣಕಾಲಿನ ಶಸ್ತ್ರ ಚಿಕಿತ್ಸೆಗೂ ಮೊದಲು ಟೀಮ್ ಇಂಡಿಯಾ ಆಟಗಾರ ಎಂಎಸ್ ಧೋನಿಯ ಫೋಟೋವೊಂದು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಈ ಫೋಟೋದಲ್ಲಿ ಕಾರಿನಲ್ಲಿ ಕುಳಿತಿರುವ ಧೋನಿ ತಮ್ಮ ಕೈನಲ್ಲಿ ಭಗವದ್ಗೀತೆಯನ್ನು ಹಿಡಿದುಕೊಂಡಿದ್ದಾರೆ. ಈ ಫೋಟೋ ಕಂಡು ಫ್ಯಾನ್ಸ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.