2023ರ ಹೊಸ ವರ್ಷ ಈ ರಾಶಿಯವರಿಗೆ ಸಿಕ್ಕಾಪಟ್ಟೆ ಲಕ್ಕಿ. ಇವರು ಅಂದುಕೊಂಡದ್ದು ಕ್ಷಣಾರ್ಧದಲ್ಲಿ ನೆರೆವೇರಲಿದೆ !!!

Lucky zodiac signs : ಹೊಸ ವರ್ಷ ಪ್ರಾರಂಭವಾಗಲು ಸ್ವಲ್ಪ ಸಮಯ ಮಾತ್ರ ಉಳಿದಿದೆ. 2023ರ ವರ್ಷ ಯಾವ ರಾಶಿಯವರಿಗೆ ಶುಭ, ಯಾರಿಗೆ ಅಶುಭ ಎಂದು ತಿಳಿಯುವ ಕುತೂಹಲ ಎಲ್ಲರಲ್ಲೂ ಇದ್ದೇ ಇರುತ್ತದೆ. 2023 ರಲ್ಲಿ ಗ್ರಹಗಳು ಮತ್ತು ನಕ್ಷತ್ರಪುಂಜಗಳ ಸ್ಥಾನವನ್ನು ನೋಡಿದರೆ, ಈ ವರ್ಷವು 5 ರಾಶಿಯವರಿಗೆ ಶುಭಫಲಗಳನ್ನು ಹೊತ್ತು ತರಲಿದೆ. ಈ ರಾಶಿಯವರು ತಮ್ಮ ವೃತ್ತಿಜೀವನದಲ್ಲಿ ಭಾರೀ ಯಶಸ್ಸು ಪಡೆಯಲಿದ್ದಾರೆ. ಹಣಕಾಸಿನ ದೃಷ್ಟಿಯಿಂದಲೂ ಈ ವರ್ಷ ಸಾಕಷ್ಟು ನೆಮ್ಮದಿ ನೀಡಲಿದೆ.

Table of Contents

2023 ರ ಅದೃಷ್ಟ ರಾಶಿಗಳು :

ಮಿಥುನ ರಾಶಿ – ವಾರ್ಷಿಕ ಜಾತಕದ ಪ್ರಕಾರ, 2023 ವರ್ಷವು ನಿಮಗೆ ಅದೃಷ್ಟದ ವರ್ಷಗಳಲ್ಲಿ ಒಂದಾಗಿರಲಿದೆ. ಈ ವರ್ಷ ನೀವು ಅಂದು ಕೊಂಡ ಕೆಲಸಗಳನ್ನು ಸಾಧಿಸುತ್ತೀರಿ. ನಿಮ್ಮ ಗುರಿಯನ್ನು ಸುಲಭವಾಗಿ ತಲುಪುವುದು ಸಾಧ್ಯವಾಗುತ್ತದೆ. ಬಡ್ತಿ ಪಡೆಯುವ ನಿಮ್ಮ ಕನಸು ನನಸಾಗುತ್ತದೆ. ವೃತ್ತಿ ಜೀವನದಲ್ಲಿ ಉನ್ನತ ಸ್ಥಾನಕ್ಕೆ ಏರುವ ಮೂಲಕ ಸಂತೋಷದಿಂದ ಇರುತ್ತೀರಿ. ಅವಿವಾಹಿತರಿಗೆ ಮದುವೆ ನಿಶ್ಚಯವಾಗಬಹುದು. ಈ ವರ್ಷ ನಿಮ್ಮ ಪ್ರತಿಭೆಯನ್ನು ಸಂಪೂರ್ಣವಾಗಿ ಬಳಸಿಕೊಳ್ಳಲು ನಿಮಗೆ ಸಾಧ್ಯವಾಗುತ್ತದೆ. ಆರ್ಥಿಕ ಸ್ಥಿತಿ ಬಲವಾಗಿರುತ್ತದೆ.

ತುಲಾ ರಾಶಿ – 2023 ರ ವರ್ಷವು ತುಲಾ ರಾಶಿಯವರಿಗೆ ವೃತ್ತಿ, ಪ್ರೀತಿ ಮತ್ತು ಹಣದ ವಿಷಯದಲ್ಲಿ ತುಂಬಾ ಶುಭವಾಗಿರಲಿದೆ. ನೀವು ಅನೇಕ ಹೊಸ ಅವಕಾಶಗಳನ್ನು ಪಡೆಯುತ್ತೀರಿ. ವೃತ್ತಿಜೀವನದಲ್ಲಿ ದೊಡ್ಡ ಮಟ್ಟದ ಯಶಸ್ಸನ್ನು ಪಡೆಯುವಿರಿ. ನಿಮ್ಮ ಪಾಲಿನ ದೊಡ್ಡ ಕನಸೊಂದು ಈ ಬಾರಿ ನನಸಾಗುವುದು. ಆರ್ಥಿಕ ಸ್ಥಿತಿ ಉತ್ತಮವಾಗಲಿದೆ. ಹೊಸ ಮಾರ್ಗಗಳಲ್ಲಿ ಹಣ ಗಳಿಸುವಿರಿ. ಕೌಟುಂಬಿಕ ಜೀವನ ಸುಖಮಯವಾಗಿರುತ್ತದೆ.

2023 year Lucky zodiac signs

ವೃಶ್ಚಿಕ ರಾಶಿ – ಮುಂಬರುವ ವರ್ಷವು ಈ ರಾಶಿಯ ಜನರಿಗೆ ಅನೇಕ ಉಡುಗೊರೆಗಳನ್ನು ತರುತ್ತಿದೆ. ವೃತ್ತಿಜೀವನದಲ್ಲಿ ಅನೇಕ ಹೊಸ ಅವಕಾಶಗಳು ಎದುರಾಗಲಿವೆ. ಈ ಅವಕಾಶಗಳ ಲಾಭವನ್ನು ಪಡೆದುಕೊಳ್ಳಿ. ಎಲ್ಲಾ ಕೆಲಸಗಳಲ್ಲಿಯೂ ಅದೃಷ್ಟ ನಿಮ್ಮ ಕೈ ಹಿಡಿಯಲಿದೆ. ಅಂದುಕೊಂಡ ಕೆಲಸವನ್ನು ಸಾಧಿಸಿಬಿಡಿ. ಉದ್ಯೋಗಾಕಾಂಕ್ಷಿಗಳು ಹೊಸ ಉದ್ಯೋಗವನ್ನು ಪಡೆಯಬಹುದು. ಬಡ್ತಿ ಸಿಗುವ ಸಂಭವವಿದೆ. ಈ ಸಮಯವು ಉದ್ಯಮಿಗಳಿಗೂ ಉತ್ತಮವಾಗಿರುತ್ತದೆ. ಒಂಟಿಯಾಗಿರುವವರ ಬಾಳಲ್ಲಿ ಸಂಗಾತಿಯ ಆಗಮನವಾಗಬಹುದು. ಪ್ರೀತಿಯ ಜೀವನ ಅದ್ಭುತವಾಗಿರುತ್ತದೆ.

Lucky zodiac signs
Lucky zodiac signs

ಸಿಂಹ ರಾಶಿ : ಈ ರಾಶಿಯವರಿಗೆ ಜನವರಿ ತಿಂಗಳಿಂದಲೇ ಸುವರ್ಣ ದಿನಗಳು ಪ್ರಾರಂಭವಾಗುತ್ತವೆ. ಜನವರಿ 17 ರಂದು ಶನಿಗ್ರಹ ತನ್ನ ರಾಶಿಯನ್ನು ಬದಲಾಯಿಸಿ ಕುಂಭ ರಾಶಿಯನ್ನು ಪ್ರವೇಶಿಸಲಿದೆ. ಶನಿಯ ರಾಶಿ ಬದಲಾವಣೆ ಸಿಂಹ ರಾಶಿಯವರ ಮೇಲೆ ಧನಾತ್ಮಕ ಪರಿಣಾಮ ಬೀರಲಿದೆ. ಈ ರಾಶಿಯವರ ಆರ್ಥಿಕ ಸ್ಥಿತಿ ಸುಧಾರಿಸಲಿದೆ. ಕೆಲಸ ಮಾಡುತ್ತಿರಲಿ ಅಥವಾ ವ್ಯವಹಾರ ಮಾಡುತ್ತಿರಲಿ ಸಿಂಹ ರಾಶಿಯವರಿಗೆ ಯಶಸ್ಸು ಕಟ್ಟಿಟ್ಟ ಬುತ್ತಿ.

ಕುಂಭ ರಾಶಿ : ಗುರು ಗ್ರಹವು ಕುಂಭ ರಾಶಿಯವರ ಕೈ ಹಿಡಿಯಲಿದೆ. ಗುರು ಗ್ರಹದ ರಾಶಿ ಬದಲಾವಣೆ ಕುಂಭ ರಾಶಿಯವರಿಗೆ ಅದೃಷ್ಟ ಬೆಳಗುತ್ತದೆ.  ಯಾವ ಕೆಲಸಕ್ಕೆ ಕೈ ಹಾಕಿದರೂ ಯಶಸ್ಸು ಸಿಗುತ್ತದೆ. ಹೂಡಿಕೆ ಮಾಡುವುದಾದರೆ ಈ ವರ್ಷ ಒಳ್ಳೆಯ ಸಮಯ. ಈ ವರ್ಷ ಮಾಡಿದ  ಹೂಡಿಕೆಯಲ್ಲಿ ಭಾರೀ ಲಾಭ ಪಡೆಯುವುದು ಸಾಧ್ಯವಾಗುತ್ತದೆ.  ಆದಾಯ ಹೆಚ್ಚಲಿದೆ.

Leave a Reply

Your email address will not be published. Required fields are marked *