ಪ್ರೀತಿ (Love) ಎನ್ನುವುದೇ ಒಂದು ಸುಂದರವಾದ ಭಾವ. ನಮ್ಮ ಕಷ್ಟ ಸುಖ ದುಃಖಗಳಿಗೆ ಒಬ್ಬ ವ್ಯಕ್ತಿಯೂ ಜೊತೆಯಾಗಿದ್ದಾರೆ ಎನ್ನುವ ಭಾವವನ್ನು ಯಾವ ದುಡ್ಡು ಕೂಡ ಇರಲಾರದು. ಬದುಕಿಗೆ ಪ್ರೀತಿ, ಕಾಳಜಿ ತುಂಬಿದ ಮಾತುಗಳು ಮುಖ್ಯವಾಗಿದೆ. ಮನುಷ್ಯನಿಗೆ ಹಣ ಅಂತಸ್ತು ಇದ್ದು, ಪ್ರೀತಿ, ನೆಮ್ಮದಿಯಿಲ್ಲದೇ ಇದ್ದರೆ ಯಾವ ವ್ಯಕ್ತಿಯೂ ಖುಷಿಯಿಂದ ಬದುಕಲು ಸಾಧ್ಯವಿಲ್ಲ. ಹೀಗಾಗಿ ಪ್ರತಿಯೊಂದು ಜೀವಿಗೂ ಪ್ರೀತಿ, ಕಾಳಜಿ, ಧೈರ್ಯ ತುಂಬುವ ವ್ಯಕ್ತಿ ಇರಲೇಬೇಕು.ಪ್ರೀತಿ ಎಂದರೆ ಗಂಡು ಹೆಣ್ಣಿಗೆ ಮಾತ್ರ ಸೀಮಿತವಾಗಿಲ್ಲ. ಇಲ್ಲಿ ಎಲ್ಲಾ ಸಂಬಂಧಗಳು ಬರುತ್ತದೆ.
ಆದರೆ ಗಂಡು ಹೆಣ್ಣಿನ ಪ್ರೀತಿಯೇ ಭಿನ್ನ ಎನ್ನಲು ಕಣ್ಣಿಗೆ ಕಾಣದ ಪ್ರೀತಿಗೆ ಬೀಳಲು ಕಾರಣವೇ ಬೇಕಿಲ್ಲ. ಎರಡು ಮನಸ್ಸು ಗಳು ಒಪ್ಪಿದರೆ ಸಾಕು. ಕೆಲವು ಪ್ರೀತಿಯ ಸಂಬಂಧಗಳು ಮದುವೆಯ ಹಂತಕ್ಕೆ ತಲುಪುತ್ತದೆ. ಇನ್ನು ಕೆಲವು ಸಂಬಂಧಗಳು ದು-ರಂತ ಅಂತ್ಯವನ್ನು ಕಾಣುತ್ತದೆ. ಇದೀಗ ವೈರಲ್ ಆಗಿರುವ ಪ್ರೇಮಿಯೊಬ್ಬನು ವಿಡಿಯೋ ನೋಡಿದರೆ ಎಂತಹವರಿಗಾದರೂ ಕೂಡ ಕರುಳು ಚುರ್ ಎನ್ನದೇ ಇರದು.ರೇಬಿಸ್ (Rabies) ಕಾಯಿಲೆಯಿಂದ ಬಳಲುತ್ತಿದ್ದ ಯುವಕನೊಬ್ಬ ತನ್ನ ಮನದರಸಿಗೆ ವಿಡಿಯೋ ಮಾಡಿ, ತನ್ನ ಅಂತ್ಯಕ್ರಿಯೆಗೆ ಆಹ್ವಾನಿಸಿದ್ದಾನೆ.
ಅಷ್ಟೇ ಲೈವ್ (Live) ನಲ್ಲಿ ಜೀವ ಬಿಟ್ಟಿರುವ ವಿಡಿಯೋವೊಂದು ವೈರಲ್ ಆಗಿವೆ. ಹೌದು, ಹೃದಯವಿದ್ರಾವಕ ಘಟನೆಯೂ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲೂಕಿನ ದಾಬಸ್ಪೇಟೆ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.ಸೋಂಪುರ ಹೋಬಳಿಯ ದಾಸೇನಹಳ್ಳಿ ಗ್ರಾಮದ 22 ವರ್ಷದ ಕಿರಣ್ (Kiran) ಎನ್ನುವ ಯುವಕನಿಗೆ ಎರಡು ತಿಂಗಳ ಹಿಂದೆ ನಾಯಿ ಕಚ್ಚಿತ್ತು. ಆದರೆ ನಾಯಿ ಕ-ಚ್ಚಿದ್ದಕ್ಕೆ ಚಿಕಿತ್ಸೆಯನ್ನು ಪಡೆದುಕೊಂಡಿರಲಿಲ್ಲ.
ಹೀಗಿರುವಾಗ ಆತನಿಗೆ ನಿಮ್ಹಾನ್ಸ್ ಆಸ್ಪತ್ರೆ (Nimhans Hospital) ಯಲ್ಲಿ ಚಿಕಿತ್ಸೆ ನೀಡಿದ್ದಾರೆ. ಆದರೆ ಈ ಚಿಕಿತ್ಸೆಯೂ ಫಲಕಾರಿಯಾಗದೇ ಕೊ-ನೆಯುಸಿರಿಳೆದಿದ್ದಾನೆ. ಆದರೆ ಸಾ- ಯುವ ಕೊನೆಯ ಘಳಿಗೆಯಲ್ಲಿ ತನ್ನ ಪ್ರಿಯತಮೆಗೆ ವಿಡಿಯೋ ಮಾಡಿದ್ದಾನೆ.ಈ ವಿಡಿಯೋದಲ್ಲಿ ಯುವಕನು ಹೇಳುವ ಮಾತುಗಳು ಎಂತಹ ಕಲ್ಲು ಹೃದಯದವರನ್ನು ಕರಗಿಸುತ್ತದೆ. ಈ ವಿಡಿಯೋದಲ್ಲಿ, ‘ನಾನಿನ್ನು ಹೆಚ್ಚು ದಿನಗಳು ಬದುಕುವುದಿಲ್ಲ. ನಿನ್ನನ್ನು ಮದುವೆಯಾಗಿ ಒಟ್ಟಿಗೆ ಕೊನೆವರೆಗೂ ಇರುವ ಅದೃಷ್ಟ ನನಗಿಲ್ಲ. ನಿಮ್ಮನ್ನೆಲ್ಲ ಬಿಟ್ಟು ಹೋಗುತ್ತಿದ್ದೇನೆ.
ನಿಮ್ಮ ಅಪ್ಪ ಹೇಳಿದ ಹಾಗೆ ಒಳ್ಳೆಯ ಹುಡುಗನನ್ನು ನೋಡಿ ಮದುವೆ ಆಗು.ನಿನಗೆ ಹುಟ್ಟಿದ ಮಗುವಿಗೆ ನನ್ನ ಹೆಸರೇ ಇಡಬೇಕು, ಇದು ನನ್ನ ಆಕಸ್ಮಿಕ ಸಾವು. ದಯವಿಟ್ಟು ಅಂತ್ಯಕ್ರಿಯೆಗೆ ಬಂದು ಹೋಗಬೇಕು, ಯುಮನಾ ಹಾಗೂ ನಿನ್ನ ತಾಯಿಯನ್ನು ಕರೆದುಕೊಂಡು ಬಾ…ಒಳ್ಳೆಯದಾಗಲಿ ನಿಮ್ಮ ಕುಟುಂಬಕ್ಕೆ. ಚೆನ್ನಾಗಿರಿ’ ಎಂದು ಕೈ ಮುಗಿದು ಕೊನೆಯುಸಿರೆಳೆದಿದ್ದಾನೆ. ಈ ಯುವಕನ ವಿಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದ್ದು, ನೆಟ್ಟಿಗರು ಬೇಸರ ವ್ಯಕ್ತಪಡಿಸುತ್ತಿದ್ದಾರೆ.