ಬೆಳಗ್ಗೆ ಎದ್ದ ತಕ್ಷಣ ಈ ವಸ್ತುಗಳನ್ನು ತಪ್ಪದೇ ನೋಡಿ, ಈ ವಸ್ತುಗಳು ಶುಭದ ಸೂಚಕವಂತೆ! ಇಲ್ಲಿದೆ ನೋಡಿ ಮಾಹಿತಿ

ಪ್ರತಿಯೊಬ್ಬರು ಕೂಡ ಎದ್ದ ಕೂಡಲೇ ಈ ದಿನ ಒಳ್ಳೆಯ ರೀತಿ ಇರಲಿ ಅಂದುಕೊಳ್ಳುತ್ತಾರೆ. ಹೀಗಾಗಿ ಬೆಳಗ್ಗೆ ಎದ್ದ ಕೂಡಲೇ ದೇವರನ್ನು ನೆನೆಯುತ ತಮ್ಮ ಕೆಲಸ ಕಾರ್ಯಗಳನ್ನು ಶುರು ಮಾಡುತ್ತಾರೆ. ಆದರೆ ಬೆಳಗ್ಗೆ ಎದ್ದ ಕೂಡಲೇ ಈ ಎಲ್ಲಾ ವಸ್ತುಗಳನ್ನು ನೋಡಿದರೆ ಶುಭ ಸೂಚಕ ಎನ್ನುವುದು ಅನೇಕರಿಗೆ ತಿಳಿದಿರುವುದಿಲ್ಲ. ಗೊತ್ತಿದ್ದರೂ ಕೂಡ ಆ ವಸ್ತುಗಳ ಬಗ್ಗೆ ಸರಿಯಾದ ಮಾಹಿತಿಯೂ ಇರುವುದಿಲ್ಲ. ಹಾಗಾದ್ರೆ ಆ ಕುರಿತಾದ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ಓದಿ ತಿಳಿದುಕೊಳ್ಳಿ.

ಮುಂಜಾನೆ ಎದ್ದಾಕ್ಷಣ ಬಿಳಿ ಬಣ್ಣದ ವಸ್ತುಗಳಾದ ಹಾಲು (Milk) ಅಥವಾ ಮೊಸರ (Curd) ನ್ನು ನೋಡುವುದು ಶುಭಕರವಾಗಿದೆ. ಶುದ್ಧತೆಯ ಪ್ರತೀಕವಾಗಿರುವ ಈ ಎರಡು ವಸ್ತುಗಳು ಅದೃಷ್ಟ (Luck) ವನ್ನು ತರುತ್ತವೆ ಎನ್ನಲಾಗುತ್ತವೆ. ಎದ್ದ ಕೂಡಲೇ ಮನಸ್ಸಿಗೆ ಹಾಗೂ ಕಿವಿಗೆ ಮುದ ನೀಡುವ ಶಬ್ದಗಳನ್ನು ಕೇಳುವುದರಿಂದ ಆ ದಿನ ಒಳ್ಳೆಯದಾಗಿರುತ್ತದೆ. ಅದಲ್ಲದೇ, ಗಂಟೆಯ ಶಬ್ಧ ಇಲ್ಲವಾದರೆ ಶಂಖದಿಂದ ಬರುವ ಧ್ವನಿಯನ್ನು ಕೇಳಿಸಿಕೊಂಡರೆ ಮನಸ್ಸಿಗೆ ಹಿತ ನೀಡುತ್ತದೆ.

ಇನ್ನು ಈ ಕಬ್ಬ (Sugar Cane) ನ್ನು ಶುಭ ಸಂಕೇತವಾಗಿದ್ದುವಾಗಿದ್ದು ಬೆಳಗ್ಗೆ ಎದ್ದ ಕೂಡಲೇ ಈ ಕಬ್ಬನ್ನು ನೋಡಿ ದಿನವನ್ನು ಆರಂಭಿಸಿದರೆ ಆ ದಿನ ಅದೃಷ್ಟದಾಯಕವಾಗಿರುತ್ತದೆ, ಯಾವುದೇ ಹಣದ ಸಮಸ್ಯೆಗಳು ಬರುವುದಿಲ್ಲ ಎನ್ನಲಾಗಿದೆ. ಈ ಕಬ್ಬು ಮಂಗಳಕರವಾಗಿದ್ದು, ಲಕ್ಷ್ಮಿ ಮತ್ತು ವಿಷ್ಣು ದೇವನಿಗೆ ಪ್ರಿಯವಾದ ವಸ್ತುಗಳನ್ನು ಒಂದಾಗಿದೆ. ಗೂಬೆಯನ್ನು ಅಶುಭ ಎಂದು ಹೇಳುವುದನ್ನು ಕೇಳಿದ್ದೇವೆ.

ಆದರೆ ಗೂಬೆಯೂ ಲಕ್ಷ್ಮಿ ದೇವಿಯ ವಾಹನವಾಗಿದ್ದು ಬೆಳಗ್ಗೆ ಎದ್ದ ತಕ್ಷಣವೇ ಗೂಬೆಯನ್ನು ನೋಡಿದರೆ ಲಕ್ಷ್ಮಿ ಕೃಪೆಯಿಂದ ಆ ದಿನ ಹಣವು ಹರಿದು ಬರುತ್ತವೆ ಎನ್ನಲಾಗುತ್ತದೆ. ಮುಂಜಾನೆಯ ವೇಳೆಯಲ್ಲಿ ಕೆಂಪು ಸೀರೆಯುಟ್ಟ ಹಾಗೂ ಅಲಂಕಾರ ಮಾಡಿಕೊಂಡ ಸುಮಂಗಲಿಯನ್ನು ನೋಡಿದರೆ ಶುಭ ಸೂಚಕ. ಆ ದಿನ ಯಾವುದೇ ಕೆಲಸಕ್ಕೆ ಹೋದರೂ ಅದರಲ್ಲಿ ಯಶಸ್ಸು ಸಿಗುತ್ತದೆಯಂತೆ.

ಅದರೊಂದಿಗೆ ಕನ್ಯೆಯೊಬ್ಬಳು ಮುಂಜಾನೆ ಒಂದು ರೂಪಾಯಿ ನಾಣ್ಯವನ್ನು ನೀಡಿದರೆ ಆ ನಾಣ್ಯವು ಅದೃಷ್ಟದ ಸಂಕೇತವಾಗಿದೆ. ಯಾರಾದರೂ ಕೊಟ್ಟರೆ ಒಲ್ಲೆ ಎನ್ನದೇ ಆ ಒಂದು ರೂಪಾಯಿ ಸ್ವೀಕರಿಸಿದರೆ ಆ ದಿನ ಒಳ್ಳೆಯದಾಗಿರುತ್ತದೆ.ಅಷ್ಟೇ ಅಲ್ಲದೇ ಶಂಖ, ಹೂವು, ತೆಂಗಿನಕಾಯಿ, ಹಂಸ, ನವಿಲು ಹಾಗೂ ಕಸ ಗುಡಿಸುವ ಕಾರ್ಮಿಕರನ್ನು ನೋಡುವುದು ಶುಭದ ಸಂಕೇತವಾಗಿದೆ.

ಬೆಳಗ್ಗೆ ಎದ್ದ ಕೂಡಲೇ ಗೋಮಾತೆಯನ್ನು ನೋಡುವುದು ಶುಭ ಸೂಚಕ. ಗೋಮಾತೆಯಲ್ಲಿ ಮುಕ್ಕೋಟಿ ದೇವರುಗಳು ನೆಲೆಸಿರುವ ಕಾರಣ ಗೋವಿನ ಆಶೀರ್ವಾದ ಪಡೆಯುವುದರಿಂದ ಎಲ್ಲಾ ಕೆಲಸಗಳು ಸಲೀಸಾಗಿ ಆಗುತ್ತದೆ ಎನ್ನಲಾಗಿದೆ.

Leave a Reply

Your email address will not be published. Required fields are marked *