ಮಾರುಕಟ್ಟೆಗೆ ಹೊಸ ಹೊಸ ವಿಶೇಷತೆಗಳನ್ನು ಒಳಗೊಂಡ ಉತ್ಪನ್ನಗಳು (Products) ಪ್ರವೇಶಿಸುತ್ತಿದ್ದು, ಗ್ರಾಹಕರ ಗಮನ ಸೆಳೆಯುತ್ತಿದೆ. ಅದರಲ್ಲಿಯು ಮಾರುಕಟ್ಟೆಯಲ್ಲಿ ವಿವಿಧ ವಿನ್ಯಾಸದ ಸ್ಮಾರ್ಟ್ ಫೋನ್ (Smart Phone) ಗಳು ಈಗಾಗಲೇ ಲಭ್ಯ ವಿದೆ. ಕಂಪೆನಿಗಳು ಗ್ರಾಹಕರ ಅಭಿರುಚಿಗೆ ತಕ್ಕಂತೆ ಸ್ಮಾರ್ಟ್ ಫೋನ್ ಗಳನ್ನು ಪರಿಚಯಿಸಿದೆ.
ಆದರೆ ಇದೀಗ ಮೋಟೋರೊಲ (Motorola) ಕಂಪೆನಿಯು ವಿಶೇಷತೆಗಳನ್ನು ಒಳಗೊಂಡ ಸ್ಮಾರ್ಟ್ ಫೋನ್ ಅನ್ನು ಪರಿಚಯಿಸಲು ಮುಂದಾಗಿದ್ದು, ಈ ಸ್ಮಾರ್ಟ್ ಫೋನ್ ನಲ್ಲಿ ಏನೆಲ್ಲಾ ವಿಶೇಷತೆಗಳಿವೆ ಎನ್ನುವುದನ್ನು ನೀವಿಲ್ಲಿ ಓದಿ ತಿಳಿದುಕೊಳ್ಳಬಹುದು. ಮೋಟೋರೊಲ ಈ ಸ್ಮಾರ್ಟ್ ಫೋನ್ ಅನ್ನು ವಾಚ್ (Watch) ನಂತೆ ಧರಿಸಬಹುದಾಗಿರುವುದು ಮತ್ತೊಂದು ವಿಶೇಷವೆನ್ನಬಹುದು.
ಹೌದು, ಟೆಕ್ ವರ್ಲ್ಡ್ 2023 ಈವೆಂಟ್ (Tec World 2023 Event) ನಲ್ಲಿ ಮೋಟೋರೊಲದ ಮೂಲ ಕಂಪನಿ ಲೆನೊವೊ (Lenovo) ಈ ಸ್ಮಾರ್ಟ್‌ಫೋನ್ ಅನ್ನು ಪ್ರದರ್ಶನ ಮಾಡಿದ್ದು, ಈ ಸ್ಮಾರ್ಟ್ ಫೋನ್ ಎಲ್ಲರ ಗಮನ ಸೆಳೆದಿದೆ. ಈ ಸ್ಮಾರ್ಟ್ ಫೋನ್ ಬಗ್ಗೆ ಹೇಳುವುದಾದರೆ HD+ POLED ಡಿಸ್ ಪ್ಲೇಯನ್ನು ಹೊಂದಿದ್ದು, ಇದು 6.9 ಇಂಚಿನದ್ದಾಗಿದ್ದು, ಮಡಿಚಿದಾಗ ಡಿಸ್ ಪ್ಲೇ ಗಾತ್ರವು 4.6 ಇಂಚು ಆಗುತ್ತದೆ.
ಇದರಲ್ಲಿ ಕೃತಕ ಬುದ್ಧಿಮತ್ತೆ ಹೊಂದಿರುವ ಕ್ಯಾಮೆರಾ ವು ಲಭ್ಯವಿದ್ದು, ಡಿಸ್ ಪ್ಲೇಯನ್ನು ಎಷ್ಟು ಮಡಿಚಿದರೂ ಕೂಡ ಈ ಸ್ಮಾರ್ಟ್ ಫೋನ್ ಗೆ ಯಾವುದೇ ತೊಂದರೆಯಾಗುವುದಿಲ್ಲ. ತಮ್ಮ ಡ್ರೆಸ್ ಗೆ ಮಾಚ್ ಆಗುವಂತೆ ಫೋಟೋಗಳು ಮತ್ತು ವಾಲ್ ಪೇಪರ್ ಅನ್ನು ಸೆಟ್ ಮಾಡಲು ಅವಕಾಶವಿದೆ.
ಅದಲ್ಲದೇ ಫೋಲ್ಡಬಲ್ ಡಿಸ್ ಪ್ಲೇಯನ್ನು ಹೊಂದಿರುವ ಈ ಫೀಚರ್ಸ್ ಗಳನ್ನು ಲೆನೊವೊ ಲ್ಯಾಪ್‌ಟಾಪ್ (Lenovo Laptop) ಗಳಲ್ಲಿ ತರಲು ಸಿದ್ಧತೆ ನಡೆಸಲಾಗಿದೆ. ಆದರೆ ಈ ಸ್ಮಾರ್ಟ್‌ಫೋನ್ ಬಿಡುಗಡೆಯ ದಿನಾಂಕ ಹಾಗೂ ಬೆಲೆಯ ಬಗೆಗಿನ ಯಾವುದೇ ಮಾಹಿತಿಯು ಲಭ್ಯವಿಲ್ಲ. ಆದರೆ ಬಿಡುಗಡೆಗೂ ಮುನ್ನವೇ ಈ ಸ್ಮಾರ್ಟ್ ಫೋನ್ ಫೀಚರ್ಸ್ ಗಳಿಂದ ಗ್ರಾಹಕರನ್ನು ಆಕರ್ಷಸಿದೆ.