Lakshmi priya and ramesh : ಕೋಲಾರದ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಗೆ ಒಳಪಡುವ ನಾಯಕರ ಹಳ್ಳಿಯ ಅರಣ್ಯ ಭಾಗದಲ್ಲಿ ಮಹಿಳೆಯೊಬ್ಬಳ ಶ-ವ ಪತ್ತೆಯಾಗಿತ್ತು. ಆಕೆಯ ಕಾಲು ಒಂದನ್ನು ಬಿಟ್ಟು ಉಳಿದ ದೇಹದ ಭಾಗಗಳು ಸು-ಟ್ಟು ಕರಕಲಾಗಿತ್ತು. ಘಟನೆಯ ವಿಷಯ ತಿಳಿದ ಪೊಲೀಸರು ಸ್ಥಳಕ್ಕೆ ಧಾವಿಸಿದರು.
ಮೊದಲಿಗೆ ಪತ್ತೆ ಹಚ್ಚುವುದು ಕ್ಲಿಷ್ಟವಾಗಿ ಕಂಡರೂ, ನಂತರದ ವಿಚಾರಣೆಯಲ್ಲಿ ಬೇಗನೆ ಆರೋಪಿಯನ್ನು ಹಿಡಿದು ಬಂಧಿಸಿ ಪ್ರಕರಣವನ್ನು ಭೇದಿಸಿದ್ದಾರೆ. ನಾಯಕರ ಹಳ್ಳಿಯ ಬಳಿ ಅದೊಂದು ನಿರ್ಜನ ಪ್ರದೇಶದಲ್ಲಿ ಅರೆಬೆಂದ ಸ್ಥಿತಿಯಲ್ಲಿ ಶ-ವ ಪತ್ತೆಯಾಗಿತ್ತು. ಅರಣ್ಯ ಭಾಗದಲ್ಲಿ ಸಿಕ್ಕ ಮಹಿಳೆಯ ಮೃ-ತ ದೇಹದ ಕಾಲೊಂದನ್ನು ಬಿಟ್ಟು ಉಳಿದ ಎಲ್ಲಾ ಭಾಗಗಳು ಸು-ಟ್ಟು ಕರಕಲಾಗಿತ್ತು.
ಘಟನೆಯಾದ ಸ್ಥಳದಲ್ಲಿ ಸೇರಿದ್ದ ಜನರು ಕಂಗಾಲಾಗಿ ನೋಡುತ್ತಿದ್ದರು. ಇತ್ತ ಕೋಲಾರದ ಎಸ್ ಪಿ ನಾರಾಯಣ್ ಅವರು ತಮ್ಮ ಸಿಬ್ಬಂದಿಗಳ ಜೊತೆ ಸೇರಿ ಶ-ವವನ್ನು ಪರಿಶೀಲಿಸುತ್ತಿದ್ದರು. ಗುರುತು ಹಚ್ಚಲು ಸಾಧ್ಯವಾಗದ ಮೃ-ತ ದೇಹವು ಎಂಥವರನ್ನು ಬೆಚ್ಚಿ ಬೀಳಿಸುವಂತಿತ್ತು. ದೇಹವು ಬೆಂಕಿಯಲ್ಲಿ ಸುಟ್ಟಿದ್ದರಿಂದ ಗುರುತು ಹಚ್ಚುವುದು ಪರಿಶೀಲನೆಯ ಪ್ರಾರಂಭಿಕ ಹಂತದಲ್ಲಿ ಕಷ್ಟವಾಗಿತ್ತು.
ಈ ಅನಾಮಧೇಯ ಶ-ವವು ಪತ್ತೆಯಾಗುವ ವೇಳೆಯಲ್ಲಿಯೇ ಶ್ರೀನಿವಾಸಪುರ ಪೊಲೀಸ್ ಠಾಣೆಯಲ್ಲಿ ಮಹಿಳೆಯೊಬ್ಬಳು ನಾಪತ್ತೆಯಾಗಿರುವ ಬಗ್ಗೆ ವಿಚಾರಣೆ ನಡೆಸುತ್ತಿರುತ್ತಾರೆ. ಈ ಬಗ್ಗೆ ಮಾಹಿತಿ ಪಡೆದ ಎಸ್ ಪಿ ನಾರಾಯಣ್ ಅವರು ನಾಪತ್ತೆಯಾಗಿದ್ದ ಮಹಿಳೆಯ ಕೊ-ಲೆಯಾಗಿರಬಹುದು ಎಂದು ಅನುಮಾನದಿಂದ ಕಾರ್ಯಾಚರಣೆಯನ್ನು ಮುನ್ನಡೆಸಿದರು.
ಮೊಬೈಲ್ ಹಾಗೂ ಶ-ವದ ಗುರುತು ಪತ್ತೆ ಮಾಡಲಾದಾಗ ಅಲ್ಲಿ ನಾಪತ್ತೆಯಾಗಿರುವ ಮಹಿಳೆಗೆ ಇಲ್ಲಿ ಕೊ-ಲೆಯಾಗಿರುವುದು ಖಚಿತವಾಗುತ್ತದೆ.ಆಕೆಯ ಮೊಬೈಲ್ ಟವರ್ ಲೊಕೇಶನ್ ಹಾಗೂ ಹಿಂದಿನ ದಿನ ಯಾರೊಂದಿಗೆ ಇದ್ದಳು ಎಂಬ ಎಲ್ಲಾ ಮಾಹಿತಿಯನ್ನು ಪಡೆದಾಗ, ಆಕೆಯ ಸ್ನೇಹಿತ ರಮೇಶ್ ನನ್ನು ವಿಚಾರಣೆಗೆ ಒಳಪಡಿಸಲಾಗುತ್ತದೆ.
ಸರಿಯಾದ ತನಿಖೆಯ ಬಳಿ ರಮೇಶ್ ಆರೋಪಿ ಎಂದು ಸಾಬೀತಾಗಿ ಬಂಧಿಸಲಾಯಿತು.ಶ್ರೀನಿವಾಸಪುರ ಪಟ್ಟಣದ ಲಕ್ಷ್ಮೀ ಪ್ರಿಯಾ ಹರ್ಬಲ್ ಬ್ಯೂಟಿ ಪಾರ್ಲರ್ ಕಣ್ಣು ನಡೆಸುತ್ತಿದ್ದ 27 ವರ್ಷದ ಶೋಭಾಳ ಮೊದಲ ಗಂಡ ಅದಾಗಲೇ ಮೃ’ತಪಟ್ಟಿದ್ದು, ವೆಂಕಟರಾಮ್ ಎಂಬುವರ ಜೊತೆ ಎರಡನೇ ವಿವಾಹವಾಗಿತ್ತು. ವೆಂಕಟರಾಮ್ ಹಾಗೂ ರಮೇಶ್ ಸ್ನೇಹಿತರು.
ಹಾಗಾಗಿ ಶೋಭಾ ರಮೇಶ್ ನೊಂದಿಗೆ ಕೃಷಿ ಹಾಗೂ ಕೆಲ ಹಣಕಾಸಿನ ವ್ಯವಹಾರಗಳನ್ನು ನಡೆಸುತ್ತಿದ್ದಳು. ಬ್ಯೂಟಿ ಪಾರ್ಲರ್ ನಡೆಸುತ್ತಾ ಮಹಿಳೆಯರ ಅಂದ ಹೆಚ್ಚಿಸುವ ಕಾರ್ಯನಿರ್ವಹಿಸುತ್ತಿದ್ದ ಶೋಭಾ ಗುರುತುಹಿಡಿಯಲು ಸಾಧ್ಯವಾಗದ ರೀತಿಯಲ್ಲಿ ಕೊ’ಲೆಯಾಗಿರಲು ಕಾರಣವೇನೆಂದು ಪೊಲೀಸರ ಹೆಚ್ಚಿನ ತನಿಖೆಯ ಬಳಿಕ ತಿಳಿಯಬೇಕಿದೆ.