ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಆಗಿರುವ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಗೃಹಲಕ್ಷ್ಮಿ ಯೋಜನೆಯ ಗೊಂದಲಗಳನ್ನು ಇದೀಗ ನಿವಾರಣೆ ಮಾಡಿದ್ದಾರೆ.. ಯಾರಿಗೆಲ್ಲ ಗೃಹಲಕ್ಷ್ಮಿ ಯೋಜನೆಯ ಹಣ ಇನ್ನೂ ಕೂಡ ಖಾತೆಗೆ ಜಮಾ ಆಗಿಲ್ಲ ಅವರೆಲ್ಲ ಇನ್ಮೇಲೆ ಚಿಂತೆ ಮಾಡುವ ಅವಶ್ಯಕತೆ ಇಲ್ಲ.. ಇದೀಗ ಯೋಜನೆಯೆ ಎಲ್ಲಾ ಗೊಂದಲವನ್ನು ನಿವಾರಣೆ ಮಾಡಿದ್ದಾರೆ ಮತ್ತು ಯೋಜನೆಯನ್ನು ಇನ್ಮೇಲೆ ಇನ್ನೂ ಸರಳವಾಗಲಿಸಲಾಗುತ್ತಿದೆ..
ಧಾರವಾಡದಲ್ಲಿ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಇದೀಗ ಎಲ್ಲಾ ಗೊಂದಲಕ್ಕೆ ಸ್ಪಷ್ಟನೆ ನೀಡಿದ್ದಾರೆ. ಈಗಾಗಲೇ ಒಂದು ಕೋಟಿ 90 ಲಕ್ಷ ಜನರಿಗೆ ಗ್ರಹಲಕ್ಷ್ಮಿ ಹಣ ಈಗಾಗಲೇ ಖಾತೆಗೆ ಜಮಾ ಆಗಿದೆ. .. ಇನ್ನೇನು ಐದು ಆರು ಲಕ್ಷ ಜನರಿಗೆ ಮಾತ್ರ ಈ ಯೋಜನೆಯ ಹಣ ಜಮಾ ಆಗಬೇಕಿದೆ.. ಈ 5-6 ಲಕ್ಷ ಜನರಿಗೆ ಇನ್ನೂ ಜಮಾ ಆಗದೆ ಇರಲು ಕಾರಣ ಏನೆಂದರೆ ಅನುದಾನದ ಕೊರತೆ ಅಲ್ಲವಂತೆ.. ಕೇವಲ ತಾಂತ್ರಿಕ ದೋಷದಿಂದ ವಿಳಂಬಾಗುತ್ತಿದೆ ಏಂದು ಲಕ್ಷ್ಮಿ ಹೆಬ್ಬಾಳ್ಕರ್ ಸ್ಪಷ್ಟನೆ ನೀಡಿದ್ದಾರೆ.
ಸುಮಾರು 15 ಲಕ್ಷ ಜನ ಆಧಾರ್ ಕಾರ್ಡ್ ಲಿಂಕ್ ಆಗದೆ ಇರುವ ಬ್ಯಾಂಕ್ ಡೀಟೇಲ್ಸ್ ಗಳನ್ನು ನೀಡಿದ್ದರು.. ಇದರಿಂದ ತಾಂತ್ರಿಕ ದೋಷ ಉಂಟಾಗಿ ವಿಳಂಬ ಆಗಿದೆ. ಎಲ್ಲಾ ತಾಂತ್ರಿಕ ದೋಷಗಳು ಇದೀಗ ಕ್ಲಿಯರ್ ಆಗುತ್ತಿದೆ ಇನ್ನೇನು ಕೆಲವೇ ದಿನಗಳಲ್ಲಿ ಪ್ರತಿಯೊಬ್ಬರಿಗೂ ಯೋಜನೆಯ ಹಣ ಜಮಾ ಆಗುತ್ತದೆ ಎಂದು ಆಶ್ವಾಸನೆ ನೀಡಿದ್ದಾರೆ.
ಕಾಂಗ್ರೆಸ್ ಸರ್ಕಾರ ಘೋಷಿಸಿದ ಯಾವುದೇ ಯೋಜನೆಗೂ ಇಲ್ಲಿಯವರೆಗೆ ಅನುದಾನದ ಕೊರತೆಯಾಗಿಲ್ಲ. ಎಲ್ಲಾ ಅನುದಾನವನ್ನು ಮುಖ್ಯಮಂತ್ರಿಗಳು ಬಿಡುಗಡೆ ಮಾಡಿದ್ದಾರೆ. ಮತ್ತು ನಾವು ಯಾವುದೇ ರೀತಿಯ ಅಭಿವೃದ್ಧಿಯನ್ನು ನಿಲ್ಲಿಸಿಲ್ಲ.. ಇಂದಿನ ಸರ್ಕಾರ ಎಲ್ಲವನ್ನು ಯದ್ವ ತದ್ವ ಮಾಡಿತ್ತು. ಇದೀಗ ನಮ್ಮ ಹತ್ತಿರ ಅಭಿವೃದ್ಧಿ ಬಗ್ಗೆ ಪ್ರಶ್ನೆ ಮಾಡುತ್ತಿದ್ದಾರೆ ಎಂದು ವಿರೋಧ ಪಕ್ಷದವರನ್ನು ಕೂಡ ಲಕ್ಷ್ಮಿ ಹೆಬ್ಬಾಳಕರ್ ಅವರು ತರಾಟೆಗೆ ತೆಗೆದುಕೊಂಡಿದ್ದಾರೆ..