ಹೆಣ್ಣು ಸೃಷ್ಟಿಯ ಮೂಲ, ಕರುಣೆ, ಪ್ರೀತಿ, ಕಾಳಜಿ, ಮಮಕಾರದ ಪ್ರತೀಕ. ಆದರೆ ಹೆಣ್ಣಿನ ಮನಸ್ಸು ನಿಗೂಢ. ಸಾಮಾನ್ಯವಾಗಿ ಹೆಣ್ಣಿನ ಮನಸ್ಸನ್ನು ಅರಿಯುವುದು ತುಂಬಾ ಕಷ್ಟಕರವಾದ ಸಂಗತಿ..ಹೆಣ್ಣಿನ ಮನಸ್ಸಿನಲ್ಲೇನಿದೆ ಎಂದು ತಿಳಿಯಲು ಋಷಿ ಮಹರ್ಷಿಗಳಿಂದಲೇ ಸಾಧ್ಯವಾಗದೇ ಹೋದಾಗ ಹುಲುಮಾನವರಾದ ನಮಗೆ ತಿಳಿಯುವುದು ಅಸಾಧ್ಯವಾದ ಮಾತು.
ಆದರೆ ಸೋಲೊಪ್ಪಿಕೊಳ್ಳದ ವಿಜ್ಞಾನಿಗಳು ಈ ಬಗ್ಗೆ ಆಳವಾದ ಸಂಶೋಧನೆ ನಡೆಸಿದರೂ ಹೆಣ್ಣಿನ ಮನಸ್ಸಿನಾಳಕ್ಕೆ ಬಿಡಿ, ಮೇಲ್ಪದವರನ್ನೂ ದಾಟಲು ಸಾಧ್ಯವಾಗಿಲ್ಲ. ಹೆಣ್ಣು ಎಂದರೆ ಮಾಯೆ ಎಂದು ಪುರಾಣದಲ್ಲಿಯೇ ಹೇಳಲಾಗಿದೆ. ಶತಮಾನಗಳಿಂದಲೂ ಗಂಡಿಗೆ ಅರ್ಥವಾಗದ ಇವರ ಚಂಚಲ ಮನಸ್ಸು ಒಂದು ರಹಸ್ಯವಾಗಿಯೇ ಉಳಿದಿದೆ. ಈ ಕಾರಣದಿಂದಲೇ ಹಿರಿಯರು ನೀರಿನಲ್ಲಿ ಮೀನಿನ ಹೆಜ್ಜೆಯನ್ನಾದರೂ ಗುರುತಿಸಬಹುದು.
ಹೆಣ್ಣಿನ ಮನಸ್ಸಿನಲ್ಲೇನಿದೆ ಎಂದು ತಿಳಿಯಲು ಸಾಧ್ಯವಿಲ್ಲ ಎಂದು ಹೇಳಿದ್ದು. ಹೆಣ್ಣನ್ನು ಚಂಚಲೆ ಎನ್ನುವುದು ಇದೆ. ಆದರೆ ಹೆಣ್ಣು ಕೆಲವು ವಿಚಾರಗಳನ್ನು ಮನಸ್ಸಿನಲ್ಲಿಯೇ ಇಟ್ಟುಕೊಳ್ಳುತ್ತಾಳೆ. ರಹಸ್ಯಗಳನ್ನು ಕಾಪಾಡಿಕೊಳ್ಳುವುದರಲ್ಲಿ ಹೆಣ್ಣು ಸ್ವಲ್ಪ ಹಿಂದೆ ಎಂದು ಹೇಳುವವರು ಇದ್ದಾರೆ. ಆದರೆ ಹೆಣ್ಣು ಕೆಲವು ರಹಸ್ಯಗಳನ್ನು ಯಾರ ಬಳಿಯೂ ಹೇಳಿಕೊಳ್ಳುವುದಿಲ್ಲ ಎಂದರೆ ನಂಬಲೇಬೇಕು.
ಪ್ರತಿಯೊಬ್ಬರು ಕೂಡ ರಹಸ್ಯಗಳನ್ನು ಯಾರೊಂದಿಗೂ ಹಂಚಿಕೊಳ್ಳಲು ಬಯಸುವುದಿಲ್ಲ. ಅದರಲ್ಲಿಯೂ ಈ ಹೆಣ್ಣು ಕೆಲವೊಂದು ರಹಸ್ಯವನ್ನು ಗುಟ್ಟಾಗಿಯೇ ಇಡುತ್ತಾಳೆ. ಅದರಲ್ಲಿಯೂ ಮದುವೆಗೂ ಮುನ್ನ ಪ್ರೇಮ ಪ್ರಕರಣಗಳಿದ್ದರೆ, ಆ ವಿಚಾರವನ್ನು ಮಹಿಳೆಯರು ತಮ್ಮ ಗಂಡನಿಗೆ ಎಂದಿಗೂ ಹೇಳುವುದಿಲ್ಲ.
ಹಳೆ ಪ್ರೀತಿಯ ವಿಚಾರ ಬಾಯ್ಬಿಟ್ಟರೆ ಸಂಬಂಧವು ಹಾಳಾಗಬಹುದು ಎನ್ನುವ ಆತಂಕವಿರುತ್ತದೆ. ಅದರ ಜೊತೆಗೆ ಸಂಭೋಗದ ಸಮಯದಲ್ಲಿ ಮಹಿಳೆಯರು ಪರಾಕಾಷ್ಠೆ ಪಡೆಯದಿದ್ದರೂ, ಅವರು ಅದನ್ನು ಪಡೆದುಕೊಂಡಂತೆ ನಟಿಸುತ್ತಾರೆ. ಈ ಬಗ್ಗೆ ತನ್ನ ಪತಿಯು ಪ್ರಶ್ನೆ ಮಾಡಿದರೆ ಯಾವಾಗಲೂ ಸಕಾರಾತ್ಮಕ ಉತ್ತರವನ್ನೇ ನೀಡುತ್ತಾರೆ.
ಅಷ್ಟೇ ಅಲ್ಲದೇ ಯಾವುದೇ ಹೆಣ್ಣು ತನ್ನ ಹಳೆಯ ಸಂಬಂಧಗಳ ಬಗ್ಗೆ ಎಲ್ಲಿಯೂ ಕೂಡ ಬಹಿರಂಗಪಡಿಸುವುದಿಲ್ಲ. ತನ್ನ ಹಳೆಯ ನೆನಪುಗಳನ್ನು ನೆನಪಿಸಿಕೊಂಡು ತಾನೊಬ್ಬಳೇ ಸಂತಸ ಪಡುತ್ತಾಳೆ. ಇನ್ನು ತನಗೆ ಯಾವುದೇ ಕಾಯಿಲೆಯನ್ನು ಇದ್ದರೂ ಕೂಡ ಆ ಬಗ್ಗೆ ಯಾರ ಬಳಿಯೂ ಹೇಳಿಕೊಳ್ಳುವುದಿಲ್ಲ. ಹೌದು, ಮಹಿಳೆಯೂ ಅನಾರೋಗ್ಯದಿಂದ ಬಳಲುತ್ತಿದ್ದರೂ ಕೆಲಸ ಮಾಡುತ್ತಾಳೆ.
ಅದಲ್ಲದೇ ತನ್ನ ಸೌಂದರ್ಯವನ್ನು ಕಾಪಾಡಲು ಏನು ಮಾಡುತ್ತಾಳೆ ಎನ್ನುವುದನ್ನು ಎಲ್ಲಿಯೂ ಯಾರ ಬಳಿಯೂ ಬಾಯಿ ಬಿಡುವುದಿಲ್ಲ. ಅಷ್ಟೇ ಅಲ್ಲದೇ ತನ್ನ ಗೆಳೆಯನೊಂದಿಗೂ ಮೇಕಪ್ ರಹಸ್ಯಗಳನ್ನು ಹಂಚಿಕೊಳ್ಳುವುದಿಲ್ಲ. ಮಹಿಳೆಯರು ತಮ್ಮ ಸಂಗಾತಿಯ ಬಳಿ ಬ್ಯಾಂಕ್ ಖಾತೆಯಲ್ಲಿರುವ ಹಣ ಹಾಗೂ ಸಂಗಾತಿಗೆ ಗೊತ್ತಿಲ್ಲದೇ ಉಳಿತಾಯ ಮಾಡುತ್ತಿದ್ದರೂ ಕೂಡ ಅದನ್ನು ಹೇಳಿ ಕೊಳ್ಳುವುದಿಲ್ಲ. ಹೀಗಾಗಿ ಹೆಣ್ಣು ತನ್ನ ರಹಸ್ಯಗಳನ್ನು ಕಾಪಾಡಿಕೊಳ್ಳುವಲ್ಲಿ ಹೆಣ್ಣು ನಿಸ್ಸಿಮಳು ಎನ್ನಬಹುದು.