Kunigal harshita story : ಪ್ರಿಯಕರ ಜೊತೆಗೆ ಪ್ರೀತಿ ಪ್ರೇಮ, ಪತಿಯ ಕಥೆ ಮು ಗಿಸಲು ಪ್ರಿಯಕರನ ಜೊತೆ ಸೇರಿ ಸ್ಕೆಚ್ ಹಾಕಿದ್ದ ಖತರ್ನಾಕ್ ಪತ್ನಿ, ಮುಂದೇನಾಯ್ತು ಗೊತ್ತಾ.. ನಮ್ಮ ಸುತ್ತ ಮುತ್ತಲಿನಲ್ಲಿ ನಡೆಯುವ ಕೆಲವು ಘಟನೆ ಗಳು ಬೆಚ್ಚಿ ಬೀಳಿಸುವಂತೆ ಇರುತ್ತದೆ. ಹೌದು, ಇತ್ತೀಚೆಗಷ್ಟೇ ರಾತ್ರಿ ಬರ್ತಡೆ ಆಚರಿಸಿಕೊಂಡವನು ಬೆಳಗ್ಗೆ ನೋಡುವಾಗ ಶ-ವವಾಗಿ ಪತ್ತೆಯಾಗಿದ್ದ. ಈ ಘಟನೆ ಯೂ ಅ-ನುಮಾನವನ್ನು ಹುಟ್ಟು ಹಾಕಿದ್ದ ಕಾರಣ ತನಿಖೆ ನಡೆಸಿ ಎಲ್ಲಾ ಅ-ನುಮಾನಕ್ಕೆ ತೆರೆ ಎಳೆದಿದ್ದಾರೆ. ದೊಡ್ಡಮ್ಮನ ಮಗನ ಜೊತೆಗೆ ಸಂಬಂಧವನ್ನು ಇಟ್ಟುಕೊಂಡಿದ್ದ ಪತ್ನಿ ತನ್ನ ಪ್ರಿಯಕರನ ಜೊತೆ ಸೇರಿ ಗಂಡನ ಕಥೆ ಮು ಗಿಸಿದ್ದಾಳೆ.
ಪತ್ನಿ ಹರ್ಷಿತಾ (20) ಹಾಗೂ ಪ್ರಿಯಕರ ಸೇರಿದಂತೆ 7 ಜನರನ್ನು ಕುಣಿಗಲ್ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಅರೆ ತುಮಕೂರು ಜಿಲ್ಲೆ ಕುಣಿಗಲ್ ತಾಲೂಕಿನ ಸೀನಪ್ಪನಹಳ್ಳಿಯ ನಿವಾಸಿ ಮಂಜುನಾಥನು ಕೊ-ಲೆಯಾದ ವ್ಯಕ್ತಿ ಎನ್ನಲಾಗಿದೆ. ಅಂದಹಾಗೆ, ಫೆಬ್ರವರಿ 3 ರಂದು ರಾತ್ರಿ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದ ಮಂಜುನಾಥ್..
ಮರುದಿನ ಬೆಳಗ್ಗೆ ಕೆರೆಯಲ್ಲಿ ಶ-ವವಾಗಿದ್ದನು. ಐದಾರು ವರ್ಷಗಳ ಹಿಂದೆ ಮಂಜುನಾಥ್, ತನ್ನ ತಂದೆ ತಾಯಿ ಕಳೆದುಕೊಂಡಿದ್ದನು. ಹೀಗಿರುವಾಗ ಈಕೆಯ ಬದುಕಿನಲ್ಲಿ ಬಂದವಳೇ ಹರ್ಷಿತಾ. ಕಳೆದ ಹನ್ನೊಂದು ತಿಂಗಳ ಹಿಂದೆ ಹರ್ಷಿತಾಳ ಜೊತೆಗೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದ. ಮಂಜುನಾಥ್, ತನ್ನ ಅಜ್ಜಿ ಹಾಗೂ ಪತ್ನಿ ಹರ್ಷಿತಾ ಜೊತೆ ವಾಸವಾಗಿದ್ದು, ಸುಖವಾಗಿ ಸಂಸಾರವು ಸಾಗುತ್ತಿತ್ತು. ಈತ ವೃತ್ತಿಯಲ್ಲಿ ಅಡುಗೆ ಕಂಟ್ರಾಕ್ಟರ್ ಆಗಿದ್ದು, ಆರ್ಥಿಕವಾಗಿ ಏನು ಸಮಸ್ಯೆ ಇರಲಿಲ್ಲ.
ಆದರೆ ಮದುವೆಯಾಗಿದ್ದರೂ ದೊಡ್ಡಮ್ಮನ ಮಗ ರಘು ಜೊತೆ ಹರ್ಷಿತಾ ಸಂಬಂಧ ಇಟ್ಟುಕೊಂಡಿದ್ದಳು. ಪ್ರಿಯಕರ ರಘು ಮಂಜುನಾಥ್ ಮನೆಯಲ್ಲಿ ಇಲ್ಲದಿದ್ದಾಗ ಹರ್ಷಿತಾಳ ಮನೆಗೆ ಆಗಾಗ ಬಂದು ಹೋಗುತ್ತಿದ್ದನು. ಹರ್ಷಿತಾ ಹಾಗೂ ರಘು ತಲೆಯಲ್ಲಿ ಮಂಜುನಾಥ್ ಕಥೆ ಮುಗಿಸುವ ಐಡಿಯಾ ಒಂದು ಬಂದಿತ್ತು.
ಹೀಗಿರುವಾಗ ಇದೇ ಫೆಬ್ರವರಿ 3 ರಂದು ಬೆಂಗಳೂರಿನಲ್ಲಿ ಅಡುಗೆ ಕೆಲಸ ಮುಗಿಸಿ ತನ್ನ ಊರಿಗೆ ಮಂಜುನಾಥ್ ಬರುತ್ತಿದ್ದನು. ಸ್ನೇಹಿತರ ಜೊತೆಗೆ ಹುಟ್ಟುಹಬ್ಬ ಆಚರಿಸಿ ಮನೆಗೆ ವಾಪಾಸ್ ಆಗಿದ್ದನು. ಮನೆಗೆ ಬಂದ ಮಂಜುನಾಥ್ ಎಂದಿನಂತೆ ತನ್ನ ರೂಂನಲ್ಲಿ ಮಲಗಿದ್ದ, ಈ ವೇಳೆಯಲ್ಲಿ ಹರ್ಷಿತಾ ಹಾಗೂ ಆಕೆಯ ಪ್ರಿಯಕರ ರಘು ಮೊದಲೇ ಪ್ಲಾನ್ ಮಾಡಿಕೊಂಡಂತೆ, ಕಾರಿನಲ್ಲಿ ತನ್ನ ಜೊತೆ 6 ಜನ ಸ್ನೇಹಿತರನ್ನು ಕರೆಸಿದ್ದನು.
ಇತ್ತ ಮಂಜುನಾಥ್ ರೂಮ್ ನಲ್ಲಿ ಮಲಗಿದ್ದು, ಮನೆಯ ಹಿಂಬಾಗಿಲಿನಿಂದ ಮನೆಗೆ ಎಂಟ್ರಿ ಕೊಟ್ಟ ಆರು ಜನ ರಘು ಸ್ನೇಹಿತರು ಮಲಗಿದ್ದ ಮಂಜುನಾಥ್ ಕುತ್ತಿಗೆಗೆ ಹಗ್ಗ ಬಿ-ಗಿದು ಉ ಸಿರು ನಿಲ್ಲಿಸಿದ್ದಾರೆ. ಈ ಘಟನೆಯೂ ನಡೆಯುವಾಗ ಹರ್ಷಿತಾಳು ಅಲ್ಲೇ ಇದ್ದಳು.ಕೊನೆಗೆ ಕಿತ್ತನಾಮಂಗಲ ಕೆರೆಗೆ ಯಾವುದೇ ಡೌಟ್ ಬಾರದ ರೀತಿಯಲ್ಲಿ ಮಂಜುನಾಥ್ ಮೃ-ತದೇಹವನ್ನು ಎಸೆದಿದ್ದಾರೆ. ಈ ವೇಳೆಯಲ್ಲಿ ಪ್ಯಾಂಟ್ ನಲ್ಲಿ ಗಾಂ ಜಾ ತುಂಬಿ ಪರಾರಿಯಾಗಿದ್ದಾರೆ.
ಪೊಲೀಸರಿಗೆ ಅನುಮಾನ ಬರಬಾರದು ಎಂದು ಈ ರೀತಿ ಪ್ಲಾನ್ ಮಾಡಿದ್ದಾರೆ.ಅದಲ್ಲದೇ ಮಂಜುನಾಥ್ ಪತ್ನಿ ಹರ್ಷಿತಾ ಮನೆಯಲ್ಲೆ ಇದ್ದುಕೊಂಡು ಬೆಳಗ್ಗಿನ ಜಾವ ಮಂಜುನಾಥ್ ಮೊಬೈಲ್ಗೆ ಮೇಸೆಜ್ ಕೂಡಾ ಮಾಡಿದ್ದಾಳೆ. Wru, Call me ಎಂದು ಮೇಸೆಜ್ ಮಾಡಿ, ತನ್ನ ಮೇಲೂ ಅ-ನುಮಾನ ಬರಬಾರದು ಎಂದು ಹೀಗೆ ನಡೆದುಕೊಂಡಿದ್ದಾಳೆ. ಅಷ್ಟೇ ಅಲ್ಲದೇ,..
ಅಕ್ಕಪಕ್ಕದ ಮನೆಯವರಿಗೆ ಹಾಗೂ ಸಂಬಂಧಿಕರಿಗೆ ಕರೆ ಮಾಡಿ ಮಂಜುನಾಥ್ ಎಲ್ಲೂ ಕಾಣುತ್ತಿಲ್ಲ ಎಂದು ನಾಟಕ ಮಾಡಿದ್ದಾಳೆ.ಆದರೆ ಈ ಪ್ರಕರಣವನ್ನು ಬೇಧಿಸುವಲ್ಲಿ ಪೋಲಿಸರು ಯಶಸ್ವಿಯಾಗಿದ್ದಾರೆ. ಈ ಆರೋಪಿಗಳು ಸ್ನ್ಯಾಪ್ ಚಾಟ್ ಆಯಪ್ ಬಳಸಿಕೊಂಡು ಮಂಜುನಾಥ್ ಜೀವ ತೆಗೆಯಲು ಪ್ಲ್ಯಾನಿಂಗ್ ನಡೆಸಿದ್ದರು. ಹೌದು 6+1 ಎಂದು ಸ್ನ್ಯಾಪ್ ಚಾಟ್ ಆಯಪ್ನಲ್ಲಿ ಗ್ರೂಪ್ ಮಾಡಿಕೊಂಡಿದ್ದು, ತಮ್ಮ ಕೆಲಸವನ್ನು ಮಾಡಿ ಮುಗಿಸಿದ್ದರು.
ಇನ್ನು, ಎರಡು ಬಾರಿ ಕುಣಿಗಲ್ ಪೊಲೀಸ್ ಠಾಣೆಗೆ ಹರ್ಷಿತಾ ಹಾಗೂ ಪ್ರಿಯಕರ ರಘು ಬಂದಿದ್ದು, ತಮಗೆ ಏನು ಗೊತ್ತಿಲ್ಲದಂತೆ ಈ ಇಬ್ಬರೂ ಪೊಲೀಸರ ಮುಂದೆ ಹೈಡ್ರಾಮಾ ಆಡಿದ್ದಾರೆ. ಈ ವೇಳೆ ಮಂಜುನಾಥ್ ಮೊಬೈಲ್ನಲ್ಲಿ ಪೊಲೀಸರಿಗೆ ಪತ್ತೆಯಾಗಿದ್ದು, ಆ ಮೊಬೈಲ್ ನಲ್ಲಿದ್ದ ಪೋಟೋವೇ ಎಲ್ಲಾ ಸತ್ಯವನ್ನು ಬೆಳಕಿಗೆ ತಂದಿದೆ. ಅಂದಹಾಗೆ, ರಘು ಹೆಸರನ್ನ ತನ್ನ ಕೈ ಮೇಲೆ ಹೆಚ್ ಆರ್ ಎಂದು ಪೆನ್ನಿನಲ್ಲಿ ಬರೆದುಕೊಂಡ ಹರ್ಷಿತಾ ರಘು ಮೊಬೈಲ್ಗೆ ಈ ಪೋಟೋ ಕಳುಹಿಸಿದ್ದಳು. ಇದರ ಆಧಾರದ ಮೇಲೆ ಪೊಲೀಸರು ತನಿಖೆ ನಡೆಸಿದ್ದಾರೆ.
ತನಿಖೆಯ ವೇಳೆ ಈ ಕೊ-ಲೆ ಪ್ರಕರಣ ಹಿಂದಿನ ಸತ್ಯವು ಬೆಳಕಿಗೆ ಬಂದಿದೆ. ಹರ್ಷಿತಾ ಪ್ರಿಯಕರ ರಘು ಹಾಗೂ ಇನ್ನಿತ್ತರ ಆರೋಪಿಗಳು ಸ್ನ್ಯಾಪ್ ಚಾಟ್ ಆಯಪ್, ಟ್ವಿಟರ್, ಟೆಲಿಗ್ರಾಂ ಆಯಪ್ಗಳನ್ನು ಬಳಸಿ ಮಂಜುನಾಥ್ ಕಥೆ ಮುಗಿಸಲು ಪ್ಲಾನ್ ಮಾಡಿದ್ದರು. ಆದರೆ ಇದೀಗ ಕುಣಿಗಲ್ ಪೊಲೀಸರು ಹರ್ಷಿತಾ ಹಾಗೂ ಆಕೆಯ ಪ್ರೀಯಕರ ಸೇರಿ ಏಳೂ ಜನರ ಅರೆಸ್ಟ್ ಮಾಡಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಕುಣಿಗಲ್ ಪೊಲೀಸರು, ಹೆಚ್ಚಿನ ತನಿಖೆಯನ್ನು ನಡೆಸುತ್ತಿದ್ದಾರೆ.