ನಮ್ಮ ಸುತ್ತ ಮುತ್ತಲಲ್ಲಿ ನಡೆಯುವ ಘಟನೆಗಳು ನಮ್ಮ ಕಣ್ಣೆ ನಂಬದಷ್ಟು ಶಾಕ್ ತರುವಂತಹದ್ದಾಗಿರುತ್ತದೆ. ಹೌದು ದಿನಬೆಳಗಾದರೆ ಸುದ್ದಿ ಮಾಧ್ಯಮಗಳಲ್ಲಿ ಕೊ-ಲೆ, ಸು-ಲಿಗೆ, ದ-ರೋಡೆ, ಆತ್ಮ-ಹತ್ಯೆ ಇಂತಹ ಸುದ್ದಿಗಳನ್ನೇ ಕೇಳುತ್ತಿರುತ್ತೇವೆ. ಆದರೆ ಪತ್ನಿಯ ಮೇಲೆ ಅನುಮಾನಗೊಂಡ ಪತಿಯೂ ಪತ್ನಿಯ ಕಥೆ ಮುಗಿಸಿದ ಪ್ರಕರಣವೂ ಬೆಳಕಿಗೆ ಬಂದಿದೆ. ಹೌದು, ರಮೇಶ್ (45) ಚೆನ್ನೈನ ಕಾಲಡಿಪೇಟೆಯ ಅಂಬೇಡ್ಕರ್ ಕ್ರಾಸ್ ಸ್ಟ್ರೀಟ್‌ಗೆ ಸೇರಿದವರು. ಖಾಸಗಿ ಕ್ಲಬ್‌ನಲ್ಲಿ ಕೆಲಸ ಮಾಡುತ್ತಿದ್ದರು.
ಶಾಲಾ ಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದ ಇವರ ಪತ್ನಿ ಅಲಮೇಲು (42) ನಿರುದ್ಯೋಗಿಯಾಗಿದ್ದು, ಮನೆಯಲ್ಲಿಯೇ ಇದ್ದರು. ಈ ದಂಪತಿಗಳಿಗೆ ಮೋನಿಶಾ ಮತ್ತು ವಸುಂದ್ರ ಎಂಬ ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ಘಟನೆ ನಡೆದ ದಿನ ಬೆಳಗ್ಗೆ ಎಂದಿನಂತೆ ಹೆಣ್ಣುಮಕ್ಕಳಿಬ್ಬರೂ ಕಾಲೇಜಿಗೆ ತೆರಳಿದ್ದರು. ಮನೆಯಲ್ಲಿ ರಮೇಶ್ ಮತ್ತು ಅವರ ಪತ್ನಿ ಅಲಮೇಲು ಮಾತ್ರ ಇದ್ದರು.
ಈ ವೇಳೆ ಅಲಮೇಲು ಅವರ ಕಿ’ರುಚಾಟ ಕೇಳಿ ಅಕ್ಕಪಕ್ಕದ ಮನೆಯವರು ಓಡಿ ಬಂದಿದ್ದು, ಬಾಗಿಲು ಒಳಗಡೆ ಲಾಕ್ ಆಗಿತ್ತು. ಆದರೆ ಬಾಗಿಲು ಒಡೆದು ಒಳ ಪ್ರವೇಶಿಸಲು ಯತ್ನಿಸಿದ್ದರು. ಇದಾದ ಸ್ವಲ್ಪ ಸಮಯದ ನಂತರ ರಮೇಶ್ ಮನೆಯಿಂದ ಹೊರಗೆ ಬಂದು ಪರಾ ರಿಯಾಗಿದ್ದಾನೆ. ಅಕ್ಕಪಕ್ಕದವರು ಮನೆಯೊಳಗೆ ಹೋಗಿ ನೋಡಿದಾಗ ಅಲಮೇಲು ರ-ಕ್ತದ ಮಡುವಿನಲ್ಲಿ ಮೃ-ತಪಟ್ಟಿರುವುದು ಕಂಡು ಬೆಚ್ಚಿಬಿದ್ದಿದ್ದಾರೆ.
ಈ ಬಗ್ಗೆ ಕುಂದೂರು ಪೊಲೀಸರಿಗೆ ಮಾಹಿತಿ ನೀಡಿದ್ದು, ಮಾಹಿತಿ ಪಡೆದ ಕುಂದ್ರತ್ತೂರು ಪೊಲೀಸರು ಸ್ಥಳಕ್ಕೆ ಧಾವಿಸಿದ್ದಾರೆ. ಅಲಮೇಲು ಅವರ ಮೃ-ತದೇಹವನ್ನು ಹೊರತೆಗೆದು ಮ-ರಣೋತ್ತರ ಪರೀಕ್ಷೆಗಾಗಿ ಕ್ರೋಂಪೇಟೆ ಸರ್ಕಾರಿ ಆಸ್ಪತ್ರೆಗೆ ರವಾನಿಸಿದ್ದಾರೆ. ತಲೆಮರೆಸಿಕೊಂಡಿದ್ದ ರಮೇಶ್ ಪೊಲೀಸ್ ಠಾಣೆಗೆ ಬಂದು ಶರಣಾಗಿದ್ದಾನೆ.
ಆತನ ವಿರುದ್ಧ ನಡೆಸಿರುವ ಪ್ರಾಥಮಿಕ ತನಿಖೆಯಲ್ಲಿ ಪತ್ನಿಯ ವರ್ತನೆಯಿಂದ ಜಗಳ ಆರಂಭವಾಗಿ ಕೊನೆಗೆ ರಮೇಶ್ ಅಲಮೇಲು ಹ-ತ್ಯೆ ಮಾಡಿರುವುದು ಬೆಳಕಿಗೆ ಬಂದಿದೆ. ಪೊಲೀಸರು ರಮೇಶ್ ವಿರುದ್ಧ ಕೊ-ಲೆ ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ. ಅನುಮಾನವೆಂಬ ಭೂತ ದಾಂಪತ್ಯ ಜೀವನವನ್ನು ಹಾಳು ಮಾಡಿದ್ದು, ಇದೀಗ ಇಬ್ಬರೂ ಮಕ್ಕಳು ತಾಯಿಯಿಲ್ಲದೇ ತಬ್ಬಲಿಯಾಗುವಂತೆ ಮಾಡಿದೆ.