ಕನ್ನಡ ಸಿನಿಮಾರಂಗದಲ್ಲಿ ತಯಾರಾದ ಸಿನಿಮಾವೊಂದು ವಿಶ್ವದಾದಂತ್ಯ ಇಷ್ಟು ದೊಡ್ಡ ಮಟ್ಟಿಗೆ ಸದ್ದು ಮಾಡುತ್ತದೆ ಎಂದು ಯಾರು ಕೂಡ ಊಹೆಯೂ ಮಾಡಿರಲಿಲ್ಲ. ಸ್ಯಾಂಡಲ್‌ವುಡ್‌ನ ಕಾಂತಾರ ಸಿನಿಮಾ ದೇಶದಾದ್ಯಂತ ಹೊಸ ಸಂಚಲನವನ್ನೇ ಮೂಡಿಸಿತ್ತು. ಈ ಸಿನಿಮಾದಿಂದಾಗಿ ಕರಾವಳಿಯ ದೈವರಾಧನೆ ಹಾಗೂ ಭೂತಕೋಲಕ್ಕೆ ಭಾರತೀಯ ಸಿನಿಮಾರಂಗದವರು ಮೆಚ್ಚಿಕೊಂಡಿದ್ದರು.
ಕಾಂತಾರ ಸಿನಿಮಾದ ಬಳಿಕ ತುಳುನಾಡಿನ ದೈವಾರಾಧನೆ ಹಾಗೂ ಭೂತ ಕೋಲ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಆದರೆ ಇತ್ತೀಚೆಗಷ್ಟೇ ಘಟನೆಯೊಂದು ನಡೆದಿದೆ. ಮಹಿಳೆಯೊಬ್ಬರಿಗೆ ಮದುವೆ ಆಗಿರಲಿಲ್ಲ. ದೈವ ನರ್ತಕರ ಬಳಿ ಈ ಸಮಸ್ಯೆಗೆ ಪರಿಹಾರ ಕೇಳಿದ್ದಾಳೆ. ಆ ಹುಡುಗಿಯ ಸಮಸ್ಯೆಯನ್ನು ಕೇಳಿದ ನರ್ತಕ ಪರಿಹಾರವನ್ನು ನೀಡಿದ್ದರು.
ಈ ವಿಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಒಬ್ಬ ವ್ಯಕ್ತಿಯ ಮೇಲೆ ಕೆಂಡದ ಮಾಸ್ತಿ ಆಹ್ವಾಹನೆ ಆಗಿರುತ್ತದೆ. ಈ ವೇಳೆಯಲ್ಲಿ ಕೆಂಡದ ಮಾಸ್ತಿ ನುಡಿದಂತೆ ದೈವ ನರ್ತಕ ನುಡಿದಿದ್ದಾನೆ..ಈ ದೈವ ನರ್ತಕ ಕಳೆದ ಹತ್ತು ವರ್ಷಗಳಿಂದ ಹೆಂಡತಿಯನ್ನು ಕಳೆದುಕೊಂಡು ಒಂಟಿಯಾಗಿ ಜೀವನ ನಡೆಸುತ್ತಿದ್ದಾನೆ.
ಹೀಗಾಗಿ ಈ ದೈವ ನರ್ತಕನು ಪರಿಹಾರ ಕೇಳಿಕೊಂಡು ಬಂದ ಮಹಿಳೆಗೆ ನಾನು ಕೆಂಡದ ಮಾಸ್ತಿಯಾಗಿ, ಕಾಳಿ, ದುರ್ಗೆಯ ಸ್ವರೂಪವಾಗಿ ಹೇಳುತ್ತಿದ್ದೇನೆ. ಈ ಬಾಲಕನಿಗೆ ಈ ಬಾಲಕಿಯೇ ಸರಿಯಾದ ಜೋಡಿ ಇನ್ನು ಕೆಲವೇ ದಿನಗಳಲ್ಲಿ ಮಂತ್ರಾಲಯ ಅಥವಾ ಧರ್ಮಸ್ಥಳದಲ್ಲಿ ಇದೇ ಬಾಲಕನಿಂದ ಇದೇ ಬಾಲಕಿಯ ಕುತ್ತಿಗೆಗೆ ತಾಳಿ ಬೀಳುತ್ತೆ.
ಇದು ಸತ್ಯ ಇದು ಸತ್ಯ ಇದನ್ನು ಯಾರಿಂದಲೂ ತಪ್ಪಿಸಲು ಸಾಧ್ಯವಿಲ್ಲ ಎಂದು ದೈವ ನರ್ತಕ ಹೇಳಿದ್ದಾನೆ. ಇನ್ನು ಕೆಲವರು ಇದು ಕೆಂಡದ ಮಾಸ್ತಿಯೇ ನುಡಿಸಿದ ಮಾತು ಎಂದು ಹೇಳಿದರೆ ಕೆಲವರು ಇಲ್ಲಿ ಏನೋ ಸಮಸ್ಯೆ ಇದೆ ಎಂದು ಪ್ರತಿಕ್ರಿಯೆ ನೀಡಿದ್ದಾರೆ. ಆದರೆ ದೈವ ನರ್ತಕನು ತಾನೇ ಮದುವೆಯಾಗುತ್ತೇನೆ ಎಂದು ಹೇಳಿದ ವಿಡಿಯೋವೊಂದು ವೈರಲ್ ಆಗಿದೆ.