ಸಿನಿಮಾಗಳಲ್ಲಿ ಬ್ಯುಸಿಯಾಗಿರುವುದರ ಜೊತೆಗೆ ಸೋಶಿಯಲ್ ಮೀಡಿಯಾದಲ್ಲಿಯೂ ಸಿಕ್ಕಾಪಟ್ಟೆ ಆಕ್ಟಿವ್ ಆಗಿರುವ ನಟ ನಟಿಯರು ಇದ್ದಾರೆ. ಅದಲ್ಲದೇ, ಹೆಚ್ಚಿನ ಸೆಲೆಬ್ರಿಟಿಗಳು ಸೋಶಿಯಲ್ ಮೀಡಿಯಾದಲ್ಲಿ ತುಂಡುಗೆಯಲ್ಲಿ ಕಾಣಿಸಿಕೊಳ್ಳುವುದಿದೆ. ಅದರ ಜೊತೆಗೆ ಫೋಟೋ ಹಾಗೂ ವಿಡಿಯೋಗಳ ಮೂಲಕ ವೈಯುಕ್ತಿಕ ಬದುಕಿನ ಬಗ್ಗೆ ಅಪ್ಡೇಟ್ ನೀಡುವ ಸೆಲೆಬ್ರಿಟಿಗಳಿದ್ದಾರೆ. ಅಂತಹವರ ಸಾಲಿಗೆ ನಟಿ ಕೃಷಿ ತಾಪಂಡ ( Krishi Taapanda) ಕೂಡ ಸೇರಿಕೊಳ್ಳುತ್ತಾರೆ.
ಕೃಷಿ ತಾಪಂಡ ಮಾಡಿರೋದು ಬೆರಳೆಣಿಕೆಯಷ್ಟು ಸಿನಿಮಾ ಮಾತ್ರವಾದರೂ ಕೂಡ ಸಿಕ್ಕಾಪಟ್ಟೆ ಫೇಮಸ್. ತನ್ನ ನಗುವಿನಿಂದಲೇ ಎಲ್ಲರ ಮನಸ್ಸನ್ನು ಗೆಲ್ಲುವ ಚೆಲುವೆಗೆ ಅಭಿಮಾನಿಗಳು ಸಾಕಷ್ಟು ಸಂಖ್ಯೆಯಲ್ಲಿದ್ದಾರೆ. ಕೃಷಿ ತಾಪಂಡ ಸದಾ ಲವ-ಲವಿಕೆಯಿದ್ದು, ನಗು ಮೊಗದ ಚೆಲುವೆ ಎಂದರೆ ತಪ್ಪಾಗಲ್ಲ. ಹೌದು, ತಮಿಳಿನ Nae ಸಿನಿಮಾ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟರು.
ಆದಾದ ಬಳಿಕ ಕಹಿ (Kahi), ಎರಡು ಕನಸು (Eradu Kanasu), ಇರ (Era), ಕನ್ನಡಕ್ಕಾಗಿ ಒಂದನ್ನು ಒತ್ತಿ (Kannadakkagi Ondannu otti), ಭರಾಟೆ (Bharate), ಲಂಕೆ (Lanke), ಬ್ಲ್ಯಾಂಕ್ (Blank), ರೂಪಾಯಿ (Rupee) ಮುಂತಾದ ಸಿನಿಮಾಗಳಲ್ಲಿ ನಟಿಸಿದ್ದಾರೆ. ಕೃಷಿ ತಾಪಂಡ ಸಿನಿಮಾಗಳ ಜೊತೆಗೆ ಫೋಟೋಗಳ ಬಗ್ಗೆನೂ ಭಾರೀ ಕ್ರೇಜ್ ಹೊಂದಿದ್ದು, ಆಗಾಗ ಫೋಟೋ ಶೂಟ್ (Photo Shoot) ಮಾಡಿಸಿಕೊಳ್ಳುತ್ತಿರುತ್ತಾರೆ.
ಇದೀಗ ಮುದ್ದು ಮುಖದ ಚೆಲುವೆ ಕೃಷಿ ತಾಪಂಡ ವರ್ಕ್ ಔಟ್ ವಿಡಿಯೋವೊಂದನ್ನು ಶೇರ್ ಮಾಡಿಕೊಂಡಿದ್ದಾರೆ. ಈ ವಿಡಿಯೋದಲ್ಲಿ ನಟಿಯು ವರ್ಕ್ ಔಟ್ (Work out) ಮಾಡುತ್ತಿರುವುದನ್ನು ನೋಡಬಹುದು. ಇತ್ತೀಚೆಗಷ್ಟೇ ನಟಿ ಕೃಷಿ ತಾಪಂಡ ತಮ್ಮ ಕುಟಂಬದವರೊಟ್ಟಿಗೆ ಮೈಸೂರಿ (Mysore) ನಲ್ಲಿ ಹೊಸ ಮನೆ ಗೃಹ ಪ್ರವೇಶ ಮಾಡಿದ್ದಾರೆ. ಮೈಸೂರಿನಲ್ಲಿ ಕಟ್ಟಿದ ನೂತನ ಕನಸಿನ ಮನೆಗೆ ಪ್ರವೇಶ ಮಾಡಿದ್ದು, ತಂದೆ, ತಾಯಿ ಮತ್ತು ಸಹೋದರನ ಜೊತೆಗೆ ನೂತನ ಮನೆಯ ಪೂಜೆಯ ಮಾಡಿದ್ದಾರೆ.
ಸೋಶಿಯಲ್ ಮೀಡಿಯಾದಲ್ಲಿ ಗೃಹ ಪ್ರವೇಶದ ಫೋಟೋಗಳನ್ನು ಕೃಷಿ ಹಂಚಿಕೊಂಡಿದ್ದು, ಹೊಸ ಮನೆ, ಹೊಸ ಆರಂಭ ಎಂಬ ಬರಹ ಬರೆದುಕೊಂಡಿದ್ದಾರೆ. ಈ ಫೋಟೋಗೆ ಎಲ್ಲರೂ ಮೆಚ್ಚುಗೆ ವ್ಯಕ್ತಪಡಿಸಿದ್ದು, ನಟಿ ಅನುಪಮಾ ಗೌಡ (Actress Anupama Gowda), ಮಾನ್ವಿತಾ ಕಾಮತ್ (Manvitha Kamath) ಅವರು ಶುಭಾಶಯ ತಿಳಿಸಿದ್ದಾರೆ. ಇತ್ತ ನಟಿ ಕೃಷಿ ತಾಪಂಡ ಕೈಯಲ್ಲಿ ಸಾಲು ಸಾಲು ಸಿನಿಮಾಗಳಿದ್ದು ಬ್ಯುಸಿಯಾಗಿದ್ದಾರೆ.
View this post on Instagram