ಪ್ರೀತಿ (Love) ಯಲ್ಲಿ ಸುಲುಗೆ, ಮುನಿಸು, ಮನಸ್ತಾಪಗಳು ಸರ್ವೇ ಸಾಮಾನ್ಯ. ಆದರೆ ಈ ಪ್ರೀತಿಯಲ್ಲಿ ಬಿದ್ದ ಮೇಲೆ ಸಣ್ಣ ಪುಟ್ಟ ಮುನಿಸಿಗೆ ಸಂಬಂಧವನ್ನು ಹಾಳು ಮಾಡಿಕೊಳ್ಳುವುದು ಸರಿಯಲ್ಲ. ಕೆಲವೊಮ್ಮೆ ಇಬ್ಬರ ನಡುವಿನ ಮುನಿಸಿನಿಂದ ದು-ಡುಕಿನ ನಿರ್ಧಾರವನ್ನು ತೆಗೆದುಕೊಳ್ಳುವುದು ಕೂಡ ಸರಿಯಿಲ್ಲ. ಆದರೆ ಈ ಪ್ರೇಮಿಗಳ ವಿಚಾರದಲ್ಲಿ ಹಾಗಾಗಿಲ್ಲ. ಪ್ರೀತಿಸುತ್ತಿದ್ದ ಈ ಜೋಡಿಯ ಬದುಕು ಜಗಳದಲ್ಲಿ ಅಂತ್ಯ ಕಂಡಿದೆ.
ಹೌದು ಇಬ್ಬರೂ ಪ್ರೇಮಿಗಳಿಬ್ಬರು ಆಂಧ್ರದಿಂದ ಕರ್ನಾಟಕದ ಗಡಿಯ ಅರಣ್ಯ ಪ್ರದೇಶದಲ್ಲಿ ಸುತ್ತಾಡಲು ಬಂದಿದ್ದರು. ಸುತ್ತಾಡಿಕೊಂಡಿರುವ ಈ ಪ್ರೇಮಿಗಳ ನಡುವೆ ಉಂಟಾದ ಅದೊಂದು ಮ-ನಸ್ತಾಪವು ಈ ಜೋಡಿಯ ಬದುಕಿನ ಅಂತ್ಯಕ್ಕೆ ಕಾರಣವಾಗಿದೆ. ಸಣ್ಣ ಮು-ನಿಸಿನಿಂದಾಗಿ ಪ್ರಿಯಕರನೇ ಯುವತಿಯನ್ನು ಕೊ-ಲೆ ಮಾಡಿದ್ದಾನೆ ಎನ್ನಲಾಗಿದೆ ಹರ್ಷಿತ (Harshita) ಹಾಗೂ ಹೇಮಂತ್ (Hemanth) ಈ ಇಬ್ಬರೂ ಸಂಬಂಧಿಕರಾಗಿದ್ದು, ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿಸುತ್ತಿದ್ದರು.

ಆದರೆ ಹೀಗಿರುವಾಗ ಕಳೆದ ಕೆಲವು ದಿನಗಳಹಿಂದೆಯಷ್ಟೇ ಕೋಲಾರ ಜಿಲ್ಲೆ ಶ್ರೀನಿವಾಸಪುರ ತಾಲ್ಲೂಕು (Kolar District Shreenivasapura Taluk) ಆಂಧ್ರದ ಗಡಿಯಲ್ಲಿರುವ ಸುಣ್ಣಕಲ್ಲು ಅರಣ್ಯ ಪ್ರದೇಶಕ್ಕೆ ಬಂದಿದ್ದು, ಈ ವೇಳೆಯಲ್ಲಿ ಸಣ್ಣ ಕಾರಣಕ್ಕೆ ಈ ಇಬ್ಬರ ನಡುವೆ ಜ-ಗಳವೊಂದು ಆಗಿದೆ. ಕೋ-ಪದಿಂದ ಈ ಹೇಮಂತ್ ನು ಹರ್ಷಿತಾಳನ್ನು ಬಿಟ್ಟು ಅಲ್ಲಿಂದ ಹೊರಟು ಹೋಗಿದ್ದಾನೆ. ತನ್ನ ಪ್ರಿಯಕರನು ತನ್ನನ್ನು ಬಿಟ್ಟು ಹೋದ ಎಂದು ಕೋ-ಪಗೊಂಡು, ತನ್ನ ವೇಲ್ನಲ್ಲಿ ಅಲ್ಲೇ ಮರಕ್ಕೆ ನೇಣು ಬಿಗಿದುಕೊಂಡಿದ್ದಾಳೆ.
ಆದರೆ ಸ್ವಲ್ಪ ಸಮಯದ ನಂತರದಲ್ಲಿ ಹೇಮಂತ್ ವಾಪಸ್ ನೋಡುವಷ್ಟರಲ್ಲಿ ಹರ್ಷಿತಾ ಸಾ-ವನ್ನಪ್ಪಿರುವುದು ಖಚಿತವಾಗಿದೆ. ಕಿ-ರುಚಾಡಿದ ಈ ಹೇಮಂತ್ ಶ-ವವನ್ನು ಕೆಳಗಿಳಿಸಿದ್ದು ತನ್ನ ಪೊಷಕರಿಗೆ ಹಾಗೂ ರಾಯಲ್ಪಾಡು ಪೊಲೀಸ (Rayalpadu Police) ರಿಗೆ ಮಾಹಿತಿಯನ್ನು ನೀಡಿದ್ದಾನೆ.ಕೋಲಾರ ಜಿಲ್ಲೆ ಶ್ರೀನಿವಾಸಪುರ ತಾಲೂಕಿನ ರಾಯಲ್ಪಾಡು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆಯು ನಡೆದಿದೆ.
ರಾಯಲ್ಪಾಡು ಪೊಲೀಸ್ ಠಾಣಾ ವ್ಯಾಪ್ತಿಯ ಸುಣ್ಣಕಲ್ಲು ಅರಣ್ಯ ಪ್ರದೇಶ (Sunnakallu Forest) ದಲ್ಲಿ ಆಂಧ್ರದ ಪೀಲೇರು ಮೂಲದ ಯುವತಿಯೊಬ್ಬಳು ಸಾವನ್ನಪ್ಪಿದ ವಿಚಾರ ತಿಳಿಯುತ್ತಿದ್ದಂತೆ ರಾಯಲ್ಪಾಡು ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದಾರೆ.ಆ ವೇಳೆಯಲ್ಲಿ ಹರ್ಷಿತ ಮೃ-ತ ದೇಹದ ಬಳಿಯಲ್ಲೇ ಹರ್ಷಿತ ಪ್ರಿಯಕರ ಹಾಗೂ ಸಂಬಂಧಿ ಹೇಮಂತ್ ಎಂಬುವನು ಸಿಕ್ಕಿದ್ದಾನೆ. ಆ ರಾತ್ರಿಯೇ ಶ-ವವನ್ನು ಮರಣೋತ್ತರ ಪರೀಕ್ಷೆಗೆ ರವಾನೆ ಮಾಡಿದ್ದು, ರಾಯಲ್ಪಾಡು ಪೊಲೀಸರು ಮೃತ ಹರ್ಷಿತ ಕುಟುಂಬಸ್ಥರಿಗೆ ವಿಷಯವನ್ನು ತಿಳಿಸಿದ್ದಾರೆ.

ಈ ಪ್ರಕರಣಕ್ಕೆ ಸಂಬಂಧ ಪಟ್ಟಂತೆ ಪ್ರಿಯಕರ ಹೇಮಂತ್ನನ್ನು ವ-ಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.ಆದರೆ ಹರ್ಷಿತಾ ಪೊಷಕರು ಮಾತ್ರ ಹೇಮಂತ್ ಮೇಲೆ ಕೊ-ಲೆ ಆ-ರೋಪ ಮಾಡಿದ್ದಾರೆ. ಆದರೆ ಈ ಆರೋಪವನ್ನು ಹೇಮಂತ್ ತಂದೆ ವಿರೋ-ದಿಸಿದ್ದು, ಹರ್ಷಿತಾ ಟ್ರಿಪ್ ಹೋಗಬೇಕು ಎಂದು ಹೇಳಿದ ಹಿನ್ನೆಲೆ ಅವಳನ್ನು ಕರೆತಂದಿದ್ದ. ಆದರೆ ಅವರಿಬ್ಬರು ಇಲ್ಲಿಗೆ ಏಕೆ ಬಂದಿದ್ದರು ಅನ್ನೋದು ಗೊತ್ತಿಲ್ಲ. ಇದು ಅಚಾನಕ್ಕಾಗಿ ನಡೆದಿರುವ ಘಟನೆ. ನನ್ನ ಮಗ ಕೊಲೆ ಮಾಡಿಲ್ಲ ಎನ್ನುತ್ತಿದ್ದಾರೆ. ಆದರೆ ಒಟ್ಟಿನಲ್ಲಿ ಪ್ರೀತಿ ಪ್ರೇಮದಲ್ಲಿನ ಸಣ್ಣ ಮುನಿಸು ಬದುಕಿನ ಅಂ-ತ್ಯಕ್ಕೆ ಕಾರಣವಾಗಿದ್ದು ನಿಜಕ್ಕೂ ವಿಪರ್ಯಾಸ ಎನ್ನಬಹುದು.