ಪತ್ನಿಗೆ ಈ ವಿಚಾರ ಗೊತ್ತಾದರೆ ನನ್ನ ಸಾ-ಯಿಸಿಯೇ ಬಿಡುತ್ತಾಳೆ ಎಂದಿದ್ದೇಕೆ ಸ್ಟಾರ್ ಆಟಗಾರ ಕೆ ಎಲ್ ರಾಹುಲ್ ಗೊತ್ತಾ? ತಿಳಿದರೆ ಅಚ್ಚರಿ ಪಡ್ತೀರಾ!

ಭಾರತದ ವಿಕೆಟ್ ಕೀಪರ್ ಕಂ ಬ್ಯಾಟರ್ ಕೆಎಲ್ ರಾಹುಲ್ (KL Rahul) ಅವರು ವೃತ್ತಿ ಜೀವನ ಹಾಗೂ ವೈವಾಹಿಕ ಜೀವನವನ್ನು ಸಖತ್ ಎಂಜಾಯ್ ಮಾಡುತ್ತಿದ್ದಾರೆ. ಹೌದು, ಕಳೆದ ವರ್ಷ ಜನವರಿಯಲ್ಲಿ ಕೆ ಎಲ್ ರಾಹುಲ್ ಮತ್ತು ಬಾಲಿವುಡ್ ನಟಿ ಅಥಿಯಾ ಶೆಟ್ಟಿ (Athiya Shetty) ಯವರ ಜೊತೆಗೆ ಹೊಸ ಜೀವನಕ್ಕೆ ಕಾಲಿಟ್ಟರು. ಆದರೆ ಇದೀಗ ಪತ್ನಿಯ ಕುರಿತಾಗಿ ಕೆಲವು ಸತ್ಯಗಳನ್ನು ಬಾಯಿಬಿಟ್ಟಿದ್ದಾರೆ.

ಪ್ರಸ್ತುತ ರಾಹುಲ್ ದಕ್ಷಿಣ ಆಫ್ರಿಕಾದಲ್ಲಿ ಟೆಸ್ಟ್ ಸರಣಿ ಆಡುತ್ತಿದ್ದು, ವೃತ್ತಿ ಜೀವನದ ಕಡೆಗೆ ಹೆಚ್ಚು ಗಮನ ಹರಿಸುತ್ತಿದ್ದಾರೆ. ಆದರೆ ಕಳೆದ ಕೆಲವು ತಿಂಗಳ ಹಿಂದೆಯಷ್ಟೇಷ್ಟೇ ಗಾ-ಯಕ್ಕೆ ತುತ್ತಾಗಿದ್ದರು. ಹೀಗಾಗಿ ಗಾಯದಿಂದ ಚೇತರಿಸಿಕೊಳ್ಳಲು ಸಾಕಷ್ಟು ಸಮಯ ತೆಗೆದುಕೊಂಡಿದ್ದು, ಈ ಸಮಯದಲ್ಲಿ ಪತಿಯ ಜೊತೆಗೆ ಅಥಿಯಾ ಶೆಟ್ಟಿಯವರು ಸಾಥ್ ನೀಡಿದ್ದರು. ಹೀಗಾಗಿ ಕೆ ಎಲ್ ರಾಹುಲ್ ಅವರು ಸಂದರ್ಶನವೊಂದರಲ್ಲಿ ಈ ಬಗ್ಗೆ ಮಾತನಾಡಿದ್ದಾರೆ.

ಅದಲ್ಲದೇ ಪತ್ನಿಗೆ ಕೆಲವು ವಿಚಾರಗಳನ್ನು ಹೇಳದೇನೇ ರಹಸ್ಯವಾಗಿ ಇಟ್ಟಿರುವುದ ಬಗ್ಗೆಯು ಬಹಿರಂಗ ಪಡಿಸಿದ್ದಾರೆ. ಇತ್ತೀಚೆಗಷ್ಟೇ ಸ್ಟಾರ್ ಸ್ಪೋರ್ಟ್ಸ್‌’ (Star Sports) ಗೆ ನೀಡಿದ ಸಂದರ್ಶನವೊಂದರಲ್ಲಿ ಮಾತನಾಡಿ ಟೀಮ್ ಇಂಡಿಯಾದ ಸ್ಟಾರ್ ಆಟಗಾರ ಕೆ ಎಲ್ ರಾಹುಲ್, “ಅಥಿಯಾ ಕಷ್ಟದ ಸಮಯದಲ್ಲಿ ನನ್ನೊಂದಿಗೆ ಇದ್ದಳು. ಯಾವಾಗಲೂ ಇರುತ್ತಾಳೆ. ಹೆಚ್ಚಿನ ದಿನಗಳಲ್ಲಿ ನನಗಿಂತ ಹೆಚ್ಚು ಕೋಪಗೊಳ್ಳೋದು ಅವರು, ಆಗ ನಾನು ಆಕೆಯನ್ನು ಸಮಾಧಾನ ಪಡಿಸುತ್ತಿದ್ದೆ.

ಆದರೆ ಅಂತಹ ಪರಿಸ್ಥಿತಿ ನಾನು ಎದುರಿಸಿದ್ದನ್ನು ಅಥಿಯಾ ನೋಡಿದ್ದು ಅದೇ ಮೊದಲು. ನಮ್ಮಿಬ್ಬರಿಗೂ ಕಷ್ಟವಾಗಿತ್ತು. ಆದರೆ ನಮಗೆ ಬೇಕಾದ ಸಮಯವನ್ನೂ ನೀಡುತ್ತಿದ್ದೆ, ನೆಗೆಟಿವಿಟಿ ಇದ್ದರೂ ಸಹ, ಸಂತೋಷದಿಂದ ಜೀವನದಲ್ಲಿ ಸಣ್ಣಪುಟ್ಟ ವಿಷಯಗಳನ್ನು ಆನಂದಿಸಿದೆ. ಈ ಸಮಯದಲ್ಲಿ ನನ್ನ ಜೊತೆ ನನ್ನ ಪತ್ನಿ ಸಮಯ ಕಳೆಯುತ್ತಿದ್ದಳು.

ಅದಲ್ಲದೇ, ಮೈದಾನದಲ್ಲಿದ್ದಾಗ ಆಕೆಯ ಬಗ್ಗೆ ನಾನು ಯೋಚನೆಯೇ ಮಾಡುವುದಿಲ್ಲ. ಈ ವಿಷಯ ತಿಳಿದರೆ, ಆಕೆ ನನ್ನನ್ನು ನಿಜವಾಗಿಯೂ ಸಾಯಿಸುತ್ತಾಳೆ. ಇದು ಕೇವಲ ಕ್ರಿಕೆಟ್ ಬಗ್ಗೆ ಮಾತ್ರ. ಆದರೆ ಅವಳು ತನ್ನ ಜೀವನವನ್ನು ನನಗಾಗಿ ಅರ್ಪಿಸುತ್ತಾಳೆ. ಬಹಳಷ್ಟು ಪ್ರೀತಿಯನ್ನು ನೀಡುತ್ತಾಳೆ” ಎಂದಿದ್ದಾರೆ.

Leave a Reply

Your email address will not be published. Required fields are marked *