ಕೇಂದ್ರ ಸರ್ಕಾರದಿಂದ ರೈತರಿಗೆ ಗುಡ್ ನ್ಯೂಸ್. ಮೋದಿ ಕಡೆಯಿಂದ ಭರ್ಜರಿ ಬಹುಮಾನ. ಇಲ್ಲಿದೆ ನೋಡಿ!!

ಕೇಂದ್ರ ಸರ್ಕಾರದಿಂದ ಅನ್ನದಾತರಿಗೆ ಸಿಹಿ ಸುದ್ದಿ :

ಕೇಂದ್ರ ಸರ್ಕಾರವು ರೈತರಿಗೆ ಹೊಸ ಯೋಜನೆಯನ್ನು ಒದಗಿಸುವುದರ ಮೂಲಕ ಶುಭ ಸುದ್ದಿಯನ್ನ ನೀಡಿದೆ, ಹೌದು ಕಿಸಾನ್ ಯೋಜನೆಯ ಫಲಾನುಭವಿಗಳಿಗೆ ಸರಕಾರ ಹೊಸ ಯೋಜನೆಯನ್ನು ರೂಪಿಸುವಲ್ಲಿ ನಿರತವಾಗಿದೆ. ಪೂರ್ತಿ ಲೇಖನವನ್ನ ಓದುವುದರ ಮೂಲಕ ನೀವು ಈ ಯೋಜನೆಯ ಬಗ್ಗೆ ವಿಸ್ತಾರವಾಗಿ ತಿಳಿದುಕೊಳ್ಳಬಹುದು.

ಕೇಂದ್ರ ಸಚಿವಾಲಯವು ಇತ್ತೀಚಿಗಷ್ಟೇ ಎ ಐ ಚಾರ್ಟ ಬಾಟ್ ಸೇವೆಯನ್ನ ಲಭ್ಯಗೊಳಿಸಿದ್ದು, ಕೇಂದ್ರ ಸರ್ಕಾರವು ರೂಪಿಸಿರುವ ಪಿ ಎಂ ಕಿಸಾನ್ ಯೋಜನೆಯ ಫಲಾನುಭವಿಗಳು ಚಾಟ್ ಬಾತ್ ಸೇವೆಯನ್ನು ಉಪಯೋಗಿಸುವುದರ ಮೂಲಕ ರೈತರು ಎಲ್ಲ ಮಾಹಿತಿಗಳನ್ನು ಪಡೆಯಬಹುದು ಎಂದು ಕೇಂದ್ರ ಕೃಷಿ ಖಾತೆ ಸಚಿವ ಕೈಲಾಶ್ ಚೌಧರಿ ಅವರು ಈ ಯೋಜನೆಗೆ ಚಾಲನೆಯನ್ನ ನೀಡುವುದರ ಮೂಲಕ ಸ್ಪಷ್ಟ ಪಡಿಸಿದ್ದಾರೆ.

ಈ ಹೊಸ ಚಾಟ್ ಬಾಟ್ ಯೋಜನೆ ರೈತರಿಗೆ ಹೆಚ್ಚು ಉಪಯುಕ್ತವಾಗಿದೆ ಎಂದು ಕೃಷಿ ಇಲಾಖೆ ಹೇಳಿಕೊಳ್ಳುವುದರ ಜೊತೆಗೆ AI ಚಾಟ್ ಬಾಟ್ ಸೇವೆಯ ಮೂಲಕ ಪಿಎಂ ಕಿಸಾನ್ ಯೋಜನೆಯ ದಕ್ಷತೆಯನ್ನು ತಿಳಿಸುತ್ತದೆ. ಎಕ್ಸೆ ಸ್ಟೆಪ್ ಫೌಂಡೇಶನ್ ಮತ್ತು ಭಾಷಿಣಿಯ ಬೆಂಬಲದೊಂದಿಗೆ ಚಾಟ್ ಬಾಟ ಅನ್ನು ಅಭಿವೃದ್ಧಿಪಡಿಸುವ ಮೂಲಕ ಕುಂದು ಕೊರತೆ ನಿರ್ವಹಣಾ ವ್ಯವಸ್ಥೆಯಲ್ಲಿ ರೈತರು ಸಾಕಷ್ಟು ಮಾಹಿತಿಯನ್ನು ಪಡೆಯಬಹುದು ಎಂದು ಪಿಎಂ ಕಿಸಾನ್ ಹೇಳಿದೆ.

ರೈತರು ತಮ್ಮ ಅರ್ಜಿಯ ಬಗ್ಗೆ,ಪಾವತಿಯ ವಿವರಗಳ ಬಗ್ಗೆ ಹಾಗೂ ಪಿಎಂ ಕಿಸಾನ್ ಯೋಜನೆಯ ನವೀಕರಣದ ಬಗ್ಗೆ ಮಾಹಿತಿಯನ್ನ ತಿಳಿದುಕೊಳ್ಳಬಹುದಾಗಿದೆ. ಅಷ್ಟೇ ಅಲ್ಲದೆ, ಇನ್ನು ಹಲವಾರು ಮಾಹಿತಿಯನ್ನ ತಿಳಿದುಕೊಳ್ಳಬಹುದು ಎಂದು ಹೇಳಲಾಗಿದೆ. ರೈತರು ಇಸ್ ಸೇವೆಯನ್ನು ಪಡೆಯಲು ಪಿಎಂ ಕಿಸಾನ್ ಆಪ್ ಅನ್ನ ಮೊಬೈಲ್ ನಲ್ಲಿ ಡೌನ್ಲೋಡ್ ಮಾಡಿಕೊಳ್ಳುವುದರ ಮೂಲಕ ಚಾಟ್ ಬಾಟ್ ಸೇವೆಯನ್ನ ಪಡೆಯಬಹುದು.

ರೈತರು ಎಲ್ಲ ಭಾಷೆಗಳಲ್ಲಿ ಲಭ್ಯವಿರುವ ಈ ಸೇವೆಯಲ್ಲಿ ಮಾಹಿತಿಯನ್ನು ಪಡೆದುಕೊಂಡು ನಿಖರವಾದ ನಿರ್ಧಾರವನ್ನು ತೆಗೆದುಕೊಳ್ಳುವಲ್ಲಿ ಸಹಾಯ ಮಾಡುತ್ತದೆ ಎಂದು ಸ್ಪಷ್ಟವಾಗಿದೆ. ಹೊಸದಾಗಿ ಪ್ರಾರಂಭಿಸಲಾದ ಈ ಚಾಟ್ ಬಾಟ್ ಸೇವೆಯಲ್ಲಿ ಇಂಗ್ಲೀಷ,ಹಿಂದಿ, ಬಂಗಾಳಿ ಓಡಿಯ ಹಾಗೂ ತಮಿಳು ಭಾಷೆ ಲಭ್ಯವಿದ್ದು, ಮುಂಬರುವ ದಿನಗಳಲ್ಲಿ ದೇಶದಲ್ಲಿ ಒಟ್ಟು 22 ಭಾಷೆಗಳಲ್ಲಿ ಲಭ್ಯವಾಗುತ್ತದೆ ಎಂದು ಮೂಲಗಳಿಂದ ತಿಳಿದುಬಂದಿದೆ.

ಪಿಎಂ ಕಿಸಾನ್ ಯೋಜನೆಯ 15ನೇ ಕಂತಿನ ಹಣ ನವೆಂಬರ್ ತಿಂಗಳಿನಲ್ಲಿ ರೈತರ ಬ್ಯಾಂಕ್ ಖಾತೆಗೆ ಜಮಾ ಆಗಲಿವೆ ಎಂದು ವರದಿಗಳು ತಿಳಿಸಿವೆ.

Leave a Reply

Your email address will not be published. Required fields are marked *