ವಿಡಿಯೋ ಮಾಡ್ತೀನಿ ಎಲ್ಲ ಸತ್ಯ ಹೇಳ್ತೀನಿ.. ಡಿ’ವೋರ್ಸ್ ಆದ ಮೇಲೆ ಕಿರಿಕ್ ಕೀರ್ತಿ ಹೇಳಿದ್ದೇನು ನೋಡಿ!!

ಕಿರಿಕ್ ಕೀರ್ತಿ (Kirik Keerthi) ಯಾರಿಗೆ ತಾನೇ ಗೊತ್ತಿಲ್ಲ ಹೇಳಿ? ರೇಡಿಯೋ ಜಾಕಿ (Radio Jockey) ಯಾಗಿ ಕೆಲಸ ಮಾಡಿರುವ ಕಿರಿಕ್ ಕೀರ್ತಿ ಬಿಗ್ ಬಾಸ್ ಸ್ಪರ್ಧಿಯಾಗಿದ್ದರು ಕೂಡ. ಸೋಶಿಯಲ್ ಮೀಡಿಯಾ (Social Media) ದಲ್ಲಿ ಸಿಕ್ಕಾಪಟ್ಟೆ ಆಕ್ಟಿವ್ ಆಗಿರುವ ಕಿರಿಕ್ ಕೀರ್ತಿ ಕಳೆದ ಕೆಲವು ದಿನಗಳಿಂದ ಸುದ್ದಿಯಲ್ಲಿದ್ದಾರೆ. ವೈಯುಕ್ತಿಕ ಬದುಕಿನಲ್ಲಿ ಬಿರುಕು ಮೂಡಿದ್ದು ಈ ಮೂಲಕ ಸುದ್ದಿಯಾಗಿದ್ದರು.

ಬಿಗ್ ಬಾಸ್ ಕನ್ನಡ ಖ್ಯಾತಿಯ ಕಿರಿಕ್ ಕೀರ್ತಿ ತಮ್ಮ ವೈಯುಕ್ತಿಕ ಜೀವನದ ವಿ-ಚ್ಛೇಧನ (Divorce) ದ ಬಗ್ಗೆ ಅಧಿಕೃತವಾಗಿ ಘೋಷಿಸಿದ್ದರು. ಇದೀಗ ಮತ್ತೆ ಹೊಸದೊಂದು ಪೋಸ್ಟ್ ಮಾಡಿದ್ದು, ತಮ್ಮ ಜೀವನದಲ್ಲಿ ಏನಾಗುತ್ತಿದೆ ಎಂದು ಅಭಿಮಾನಿಗಳಿಗೆ ತಿಳಿಸುವ ಪ್ರಯತ್ನ ಮಾಡಿದ್ದಾರೆ.

ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿರುವ ಕಿರಿಕ್ ಕೀರ್ತಿ (Kirik Keerthi) ಯವರು, “ಅಬ್ಬಬ್ಬಾ… ಕಳೆದ 4-5 ತಿಂಗಳಿಂದ ಕಳೆದ ಒಂದೊಂದು ದಿನಗಳು ಒಂದೊಂದು ಯುಗ ಅನಿಸಿಬಿಟ್ಟಿತ್ತು. ಅದೇನೋ ಹೇಳ್ತಾರಲ್ಲ, ಶನಿ ಹೆಗಲೇರಿದ್ದಾರೆ ಅಂತ, ಹಾಗಾಗಿತ್ತು. ಎಲ್ಲದಕ್ಕೂ ಅಡೆತಡೆ… ಎಲ್ಲವೂ ಕೈಗೆಟುಕುವುದರೊಳಗೆ ಕಿಲೋಮೀಟರ್ ದೂರ ಹೋಗೀಬಿಡ್ತಿತ್ತು. ಯಾರು ನನ್ನವರು, ಯಾರು ನನ್ನವರಲ್ಲ ಅಂತ ಅರ್ಥ ಮಾಡಿಕೊಳ್ಳೋಕೆ ತುಂಬಾ ಸಮಯ ಹಿಡೀತು. ಆದ್ರೆ ಏನನ್ನಾದ್ರೂ ಕೊಡೋಕೆ ಮುಂಚೆ ಭಗವಂತ ಸಿಕ್ಕಾಪಟ್ಟೆ ಕಿತ್ತುಕೊಳ್ತಾನಂತೆ”.

“ಹಾಗೆ ಸಾಕಷ್ಟು ಕಿತ್ತುಕೊಂಡು ಕೊನೆಗೂ ನನಗೆ ಭಗವಂತ ಕೃಪೆ ತೋರೋಕೆ ನಿರ್ಧಾರ ಮಾಡಿದ್ದಾರೆ. ಕಣ್ಣೀರು, ಬೇಜಾರು, ನೋವುಗಳಿಗೆ ಪುಲ್ ಸ್ಟಾಪ್ ಇಟ್ಟು ಬದುಕಿಸೋ ನಿರ್ಧಾರ ಮಾಡಿದಂತಿದೆ. ಸಾಕಷ್ಟು ದಿನದಿಂದ ಒದ್ದಾಡಿದ್ದಕ್ಕೆ ಕೊನೆಗೂ ಪರಿಹಾರ ಕೊಡೋಕೆ ಭಗವಂತ ಡಿಸೈಡ್ ಮಾಡಿದ್ದಾರೆ. ಎಷ್ಟೋ ಜನರ ಜೊತೆ ಮಾತಾಡಿಲ್ಲ. ಸಾವಿರಾರು ಕಾಲ್ ಎತ್ತಿಲ್ಲ. ಮೆಸೇಜ್‌ಗಳನ್ನು ನೋಡಿ ರಿಪ್ಲೆ ಮಾಡಿಲ್ಲ. ಸಾಕಪ್ಪಾ ಸಾಕು ಅನಿಸಿಬಿಟ್ಟಿತ್ತು. ಈ ಟೈಮಲ್ಲಿ ನೊಂದುಕೊಂಡವರಿಗೆ, ಬೈದುಕೊಂಡವರಿಗೆ ಕ್ಷಮೆ ಕೇಳ್ತೀನಿ”.

“ನನ್ನ ಲೈಫಲ್ಲೂ ನನ್ನ ದಿನಗಳು ಬರ್ತಿದೆ.‌. ನಾನಾಗೇ ನಿಮಗೆ ಕಾಲ್ ಮಾಡೋ ದಿನಗಳು ಬರ್ತಿದೆ. ನಿಮ್ಮೊಂದಿಗೆ ಕೂತು ನಗ್ತಾ ಮಾತಾಡೋ ಟೈಮ್ ಬರ್ತಿದೆ‌‌‌. ಸೋಷಿಯಲ್ ಮೀಡಿಯಾದಿಂದಲೂ ದೂರ ಇದ್ದವನು ಮತ್ತೆ ಒಂದೊಂದೇ ಖುಷಿ ಹಂಚಿಕೊಳ್ಳೋ ಕಾಲ ಬರ್ತಿದೆ‌. ಒಂಥರಾ ಕುಬ್ಹವಾಗಿದ್ದ ಹೃದಯದಲ್ಲಿ ಲವಲವಿಕೆ ಬರುವಂತಾಗಲಿದೆ…

Everything going to be perfect soon. ವೀಡಿಯೋ ಮಾಡಿ ಅದನ್ನು ನಿಮ್ಮ‌ ಜೊತೆ ಹಂಚಿಕೊಳ್ತೀನಿ. ನಿಟ್ಟುಸಿರು ಬಿಟ್ಟು ಸಂಭ್ರಮಿಸ್ತೀನಿ. Its just matter of time. I am sorry for all these days. ಅದೆಷ್ಟೋ ಜೀವಗಳ ಹಾರೈಕೆ, ಆಶೀರ್ವಾದ ಸದ್ಯದಲ್ಲೇ ಫಲಿಸಲಿದೆ. Yes…I am coming back. ಧನ್ಯವಾದ ನಿಮಗೆಲ್ಲಾ” ಎಂದು ಬರೆದುಕೊಂಡಿದ್ದಾರೆ.

Leave a Reply

Your email address will not be published. Required fields are marked *