ಪತ್ನಿ ಜೊತೆಗೆ ಡೈವೋರ್ಸ್ ಆಗಿದೆ, ಸಂಸಾರ ಸರಿಯಿಲ್ಲ ಎಂದು ಸುದ್ದಿ ಮಾಡಿದವರಿಗೆ ಲೈವ್ ಬಂದು ಖಡಕ್ ಉತ್ತರ ನೀಡಿದ ನಟ ಕಿರಿಕ್ ಕೀರ್ತಿ! ಅಷ್ಟಕ್ಕೂ ಏನಾಗಿದೆ ನೋಡಿ!!

ಬಿಗ್ ಬಾಸ್ ಖ್ಯಾತಿಯ ಕಿರಿಕ್ ಕೀರ್ತಿ ಈ ಹೆಸರು ಎಲ್ಲರಿಗೂ ಚಿರಪರಿಚಿತ. ಕನ್ನಡ ಭಾಷೆಯ ಪರವಾಗಿ ಹೋರಾಡುವವರಲ್ಲಿ ಕಿರಿಕ್ ಕೀರ್ತಿ ಹೆಸರು ಮುಂದೆ ಇರುತ್ತದೆ. ರೇಡಿಯೋ ಜಾಕಿಯಾಗಿ ಕೆಲಸ ಮಾಡಿದ್ದು, ಕನ್ನಡ ಭಾಷೆಯ ಮತ್ತು ಸಮಾಜಿಕ ಸಮಸ್ಯೆಗಳ ಸೋಶಿಯಲ್ ಮೀಡಿಯಾದಲ್ಲಿ ಅರಿವು ಮೂಡಿಸುವ ಕೆಲಸ ಮಾಡಿದ್ದಾರೆ. ಕಿಚ್ಚ ಸುದೀಪ್ ನಿರೂಪಣೆಯ ಬಿಗಬಾಸ್ ನಲ್ಲಿಯೂ ಭಾಗವಹಿಸಿದ್ದರು.

ಬಿಗ್ ಬಾಸ್ ಖ್ಯಾತಿಯ ಕಿರಿಕ್ ಕೀರ್ತಿ ಸೋಶಿಯಲ್ ಮೀಡಿಯಾದಲ್ಲೂ ಸಖತ್ ಆಯಕ್ಟಿವ್ ಆಗಿದ್ದಾರೆ. ಬಿಗ್ ಬಾಸ್ ಶೋ ಬಳಿಕ ಸಿಕ್ಕಾಪಟ್ಟೆ ಫೇಮಸ್ ಆಗಿರುವ ಕಿರಿಕ್ ಕೀರ್ತಿಯವರು ಈ ಹಿಂದೆಯಷ್ಟೇ ಮಗನ ಜೊತೆಗಿರುವ ಫೋಟೋ ಶೇರ್ ಮಾಡಿ, ವೈಯಕ್ತಿಕ ಜೀವನದಲ್ಲಾದ ಕೆಲವು ಘಟನೆಗಳಿಂದ ಡಿಪ್ರೆಷನ್‌ಗೆ ಹೋಗಿದ್ದೆ ಎನ್ನುವುದನ್ನು ಹೇಳಿದ್ದಾರೆ. ಅಲ್ಲದೇ ಜಿಹಾದಿಗಳ ಬೆದರಿಕೆ ಕರೆಗಳು ಕುಟುಂಬವನ್ನು ತುಂಬಾ ಡಿಸ್ಟರ್ಬ್ ಮಾಡಿತ್ತು ಎನ್ನುವುದನ್ನು ರಿವೀಲ್ ಮಾಡಿದ್ದಾರೆ.

ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದ ಕಿರಿಕ್ ಕೀರ್ತಿ, ” ನಿರ್ಧಾರ ಮಾಡಿಬಿಟ್ಟಿದ್ದೆ. ಜಗತ್ತಿಗೆ ವಿದಾಯ ಹೇಳಿಬಿಡಬೇಕು ಅಂತ. ಕಾರಣಗಳು ಹಲವು. ವೈಯಕ್ತಿಕ ಜೀವನದಲ್ಲಾದ ಕೆಲವು ಘಟನೆಗಳು ನನ್ನನ್ನು ಇನ್ನಿಲ್ಲದಂತೆ ಕುಗ್ಗಿಸಿತ್ತು. ಜೀವನದ ಮೇಲೊಂದು ಕೆಟ್ಟ ನಿರಾಸಕ್ತಿ ಬಂದಿತ್ತು. ಎಲ್ಲ ಪ್ರಯತ್ನಗಳೂ ಕೈಕೊಡ್ತಿತ್ತು. ಒಂದು ಕಡೆ ಜಿಹಾದಿಗಳ ಬೆದರಿಕೆ ಕರೆಗಳು ಕುಟುಂಬವನ್ನು ಡಿಸ್ಟರ್ಬ್ ಮಾಡಿತ್ತು.

ಸೋಷಿಯಲ್ ಮೀಡಿಯಾದಿಂದಲೂ ಸ್ವಲ್ಪ ದೂರವೇ ಇದ್ದೆ. ಆದ್ರೆ ಈಗ ಎಲ್ಲದಕ್ಕೂ ಹೆದರಿ ಹೋಗಿಬಿಟ್ರೆ ನನ್ನನ್ನು ಈ ಪರಿಸ್ಥಿತಿಗೆ ತಂದವರಿಗೆ ಉತ್ತರ ಕೊಡೋದು ಹೇಗೆ..? ನನ್ನ ನಂಬಿ ಇನ್ವೆಸ್ಟ್ ಮಾಡಿರೋರಿಗೆ ನ್ಯಾಯ ಸಿಗೋದು ಹೇಗೆ…? ನನ್ನ ಮಗನ ಭವಿಷ್ಯ ಕಟ್ಟೋದು ಹೇಗೆ..? ಈ ಪ್ರಶ್ನೆಗಳು ಕಾಡಿದ್ವು, ಟೈಪ್ ಮಾಡಿದ ಡೆತ್ ನೋಟ್ ಡಿಲೀಟ್ ಮಾಡ್ದೆ. 10 ನಿಮಿಷ ಧ್ಯಾನ ಮಾಡ್ದೆ.

ತಡವಾದ್ರೂ ಪರವಾಗಿಲ್ಲ ನನ್ನ ನಂಬಿದ ಎಲ್ಲರಿಗೂ ಅವರಿಟ್ಟ ನಂಬಿಕೆಯನ್ನು ಉಳಿಸಿಕೊಳ್ಳೋ ಹಾಗೆ ಸಾಧಿಸಬೇಕು ಅಂತ ಡಿಸೈಡ್ ಮಾಡ್ದೆ. ಮನಸ್ಸಲ್ಲಿದ್ದ ಕೆಟ್ಟ ಅಲೋಚನೆಗಳನ್ನು ಕಿತ್ತು ಬಿಸಾಕಿದ್ದೇನೆ. ಕೆಲವರನ್ನು ಕಳೆದುಕೊಂಡಿದ್ದರ ಹೊರತು ಬೇರೆ ಎಲ್ಲವನ್ನೂ ಟ್ರ್ಯಾಕಿಗೆ ತರುವ ಪ್ರಾಮಾಣಿಕ ಪ್ರಯತ್ನ ಮಾಡ್ತೀನಿ. ನಿಮ್ಮ ಬೆಂಬಲ‌ ಜೊತೆಗಿರಲಿ. ಡಿಪ್ರೆಷನ್‌ನಿಂದ ಮತ್ತೆ ವಾಪಾಸ್ ಬರಲು ಸಹಕರಿಸಿ. ಮತ್ತೆ ನನ್ನ ಮುಖದ ಮೇಲಿನ ನಗು ವಾಪಾಸ್ ತರುವ ತನಕ ಪ್ರಯತ್ನ‌ ನಿರಂತರ.

ಇದು ಹೇಳಿಕೊಳ್ಳಬಾರದ ವಿಷಯ. ಆದ್ರೆ ಹೇಳಿಕೊಂಡರಷ್ಟೆ ಸಮಾಧಾನ’ ಎಂದು ನೋವನ್ನು ತೋಡಿಕೊಂಡಿದ್ದಾರೆ.ಇತ್ತ ಪ್ರೀತಿಸಿ ಮದುವೆಯಾಗಿದ್ದ ಕಿರಿಕ್ ಕೀರ್ತಿ ಹಾಗೂ ಅರ್ಪಿತಾ ರವರ ದಾಂಪತ್ಯ ಜೀವನ ಮುರಿದು ಬಿದ್ದಿದೆ ಎನ್ನಲಾಗುತ್ತಿದೆ. ಸಾಮಾಜಿಕ ಜಾಲತಾಣಗಳಲ್ಲಿ ಇಬ್ಬರೂ ಸಾಲು ಸಾಲು ಪೋಸ್ಟ್ ಹಾಕುತ್ತಿರುವುದು ಇವರಿಬ್ಬರ ದಾಂಪತ್ಯ ಜೀವನ ಸರಿಯಿಲ್ಲ ಎನ್ನುವುದನ್ನು ಹೇಳುತ್ತಿದೆ.

ಕಿರಿಕ್ ಕೀರ್ತಿ ಹಾಗೂ ಅರ್ಪಿತಾ ದೂರವಾಗಿದ್ದು,ಇವರಿಬ್ಬರ ಪೋಸ್ಟ್ ಗಳು ಇವರಿಬ್ಬರೂ ದೂರವಾಗಿದ್ದಾರೆ ಎನ್ನುವುದನ್ನು ಹೇಳುತ್ತಿದೆ. ಇತ್ತ ಅರ್ಪಿತಾ ಸಾಮಾಜಿಕ ಜಾಲತಾಣದಲ್ಲಿ ತಮ್ಮ ಹೆಸರಿನ ಜೊತೆಗೆ ಇದ್ದ ಕೀರ್ತಿ ಎನ್ನುವ ಪದವನ್ನು ತೆಗೆದುಹಾಕಿದ್ದಾರೆ. ಕಳೆದ ಆರೇಳು ತಿಂಗಳು ಗಳಿಂದ ಇವರಿಬ್ಬರೂ ಒಟ್ಟಿಗೆ ಇಲ್ಲ ಎನ್ನಲಾಗುತ್ತಿದೆ.

ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ನೆಟ್ಟಿಗರು ನಾನಾ ರೀತಿ ಪೋಸ್ಟ್ ಮಾಡುತ್ತಿದ್ದು, ಲೈವ್ ಬಂದ ಕಿರಿಕ್ ಕೀರ್ತಿ ಖಡಕ್ ವಾರ್ನಿಂಗ್ ಕೊಟ್ಟಿದ್ದಾರೆ. ಈ ಬಗ್ಗೆ ಲೈವ್ ಬಂದಿರುವ ಕಿರಿಕ್ ಕೀರ್ತಿ ಸೋಶಿಯಲ್ ಮೀಡಿಯಾದಲ್ಲಿ ಇಲ್ಲ ಸಲ್ಲದ ಸುದ್ದಿ ಹರಡಿ ನೆಮ್ಮದಿ ಹಾಳು ಮಾಡುತ್ತಿರುವವರಿಗೆ, ತಮ್ಮ ವೈಯುಕ್ತಿಕ ಬದುಕಿನೊಳಗೆ ಹೊಕ್ಕು ಗೊತ್ತಿಲ್ಲದ ವಿಚಾರದ ಬಗ್ಗೆ ಪೋಸ್ಟ್ ಮಾಡ್ಬೇಡಿ. ನಮ್ಮನ್ನು ಬದುಕಲು ಬಿಡಿ ಎಂದು ಮನವಿ ಮಾಡುತ್ತಾ, ನೆಟ್ಟಿಗರಿಗೆ ಕ್ಲಾಸ್ ತೆಗೆದುಕೊಂಡಿದ್ದಾರೆ. ಬಿಗ್ ಬಾಸ್ ಖ್ಯಾತಿಯ ಕಿರಿಕ್ ಕೀರ್ತಿಯವರು ಲೈವ್ ಬಂದು ಎಚ್ಚರಿಕೆ ನೀಡಿರುವ ವಿಡಿಯೋವೊಂದು ವೈರಲ್ ಆಗಿದೆ.

Leave a Reply

Your email address will not be published. Required fields are marked *