ಕನ್ನಡತಿ ಧಾರಾವಾಹಿಯ ಖ್ಯಾತಿಯ ನಟ ಕಿರಣ್ ರಾಜ್ ಅವರ ಮುದ್ದಾದ ಕುಟುಂಬ ಹೇಗಿದೆ ಗೊತ್ತಾ? ಅಪರೂಪದ ಫೋಟೋಗಳು ವೈರಲ್!!

ಕನ್ನಡತಿ ಧಾರಾವಾಹಿಯ ಖ್ಯಾತಿಯ ನಟ ಕಿರಣ್ ರಾಜ್ ಅವರ ಮುದ್ದಾದ ಕುಟುಂಬ ಹೇಗಿದೆ ಗೊತ್ತಾ? ಅಪರೂಪದ ಫೋಟೋಗಳು ವೈರಲ್

ಕನ್ನಡ ಕಿರುತೆರೆ ಲೋಕದಲ್ಲಿ ಎಲ್ಲರ ಮನಸ್ಸು ಗೆದ್ದುಕೊಂಡಿದ್ದ ಧಾರಾವಾಹಿಗಳಲ್ಲಿ ಒಂದು ಕನ್ನಡತಿ (Kannadati). ಪ್ರೇಕ್ಷಕ ವರ್ಗಕ್ಕೆ ಇಷ್ಟವಾಗಿದ್ದ ಈ ಧಾರಾವಾಹಿಯಲ್ಲಿ ನಾಯಕ ನಟನಾಗಿ ಕಿರಣ್ ರಾಜ್ (Kiran Raj) ಅವರು ನಟಿಸಿದ್ದರು. ನಟ ಕಿರಣ್ ರಾಜ್ ಅವರಿಗೆ ಈ ಧಾರಾವಾಹಿಯಿಂದ ಹೆಸರು ಹಾಗೂ ಖ್ಯಾತಿ ಎರಡು ಸಿಕ್ಕಿತು.

ಕನ್ನಡತಿಯಲ್ಲಿ ಒಂದಲ್ಲ ಒಂದು ಟ್ವಿಸ್ಟ್ ಪ್ರೇಕ್ಷಕರನ್ನು ಕುತೂಹಲವನ್ನು ಹೆಚ್ಚಿಸಿತ್ತು. ಆದರೆ ಈ ಧಾರಾವಾಹಿಯೂ ಕುತೂಹಲ ಕೆರಳಿಸುತ್ತಿರುವಾಗಲೇ ಕಿರಣ್ ರಾಜ್ ಅವರು ಪೋಸ್ಟ್ ವೊಂದನ್ನು ಶೇರ್ ಮಾಡಿಕೊಂಡಿದ್ದರು. ಈ ಹಿಂದೆಯಷ್ಟೇ ಕಿರಣ್ ರಾಜ್ ಅವರು ತಮ್ಮ ಇನ್ಸ್ಟಾಗ್ರಾಮ್ ಖಾತೆ (Instagram Account) ಯಲ್ಲಿ ಪ್ರತಿ ಅಂತ್ಯಕ್ಕೂ ಹೊಸ ಮುನ್ನುಡಿ ಇದ್ದೆ ಇರುತ್ತದೆ. ಪ್ರತಿ ಆರಂಭಕ್ಕೂ ಅಂತ್ಯ ಇರುತ್ತದೆ ಎಂದು ಬರೆದುಕೊಂಡಿದ್ದರು.

ಆದರೆ ನಟ ಕನ್ನಡತಿಯ ಧಾರಾವಾಹಿಯೂ ಅಂತ್ಯವಾಗುವುದರ ಸುಳಿವು ನೀಡಿದರ ಎನ್ನುವ ಅನುಮಾನ ಮೂಡುತ್ತಿದ್ದಂತೆ ಸೀರಿಯಲ್ ತಂಡ ಎಲ್ಲಾ ಗೊಂದಲಕ್ಕೂ ತೆರೆ ಎಳೆಯುವ ಪ್ರಯತ್ನ ಮಾಡಿತ್ತು. ಆದರೆ ಕೊನೆಗೂ ಕನ್ನಡತಿ ಧಾರಾವಾಹಿಯೂ ಮುಕ್ತಾಯವಾಗಿ ಕೆಲವು ತಿಂಗಳೇ ಆಗಿ ಹೋಗಿವೆ. ಕನ್ನಡತಿ ಧಾರಾವಾಹಿಯಲ್ಲಿ ಹರ್ಷ (Harsha) ನಾಗಿ ಎಲ್ಲರ ಮನಸ್ಸು ಗೆದ್ದುಕೊಂಡಿದ್ದವರು ಈ ಕಿರಣ್ ರಾಜ್. ಇದೀಗ ನಟ ಕಿರಣ್ ರಾಜ್ ಅವರ ಕುಟುಂಬದ ಜೊತೆಗಿನ ಫೋಟೋವೊಂದು ವೈರಲ್ ಆಗಿವೆ.

ಈ ಫೋಟೋದಲ್ಲಿ ನಟ ಕಿರಣ್ ರಾಜ್ ಅವರು ತಾಯಿ ತಂದೆ ಹಾಗೂ ಸಹೋದರಿಯ ಜೊತೆಗೆ ಕಾಣಿಸಿಕೊಂಡಿದ್ದಾರೆ. ಈ ಫೋಟೋಗೆ ಮೆಚ್ಚುಗೆ ವ್ಯಕ್ತಪಡಿಸಿದ್ದು, ನೂರಕ್ಕೂ ಅಧಿಕ ಲೈಕ್ಸ್ ಗಳು ಬಂದಿದೆ. ನಟ ಕಿರಣ್ ರಾಜ್ ಅವರು ತೆಲುಗು ಮತ್ತು ಹಿಂದಿಯಲ್ಲಿನ ಕೆಲವು ಧಾರಾವಾಹಿ ಹಾಗೂ ಚಿತ್ರಗಳಲ್ಲಿ ನಟಿಸಿದ್ದಾರೆ. ಹಿಂದಿಯಲ್ಲಿ ಲವ್ ಬೈ ಚಾನ್ಸ್ (Love Bye Chance), ಯೇ ರಿಸ್ತಾ ಕ್ಯಾ ಕೆಹಲಾತಾ ಹೈ (Ye Rista Kya Kehalata Hai), ಹೀರೋಸ್ (Heros) ಮುಂತಾದ ಸೀರಿಯಲ್ ಗಳಲ್ಲಿ ನಟಿಸಿರುವ ಕಿರಣ್ ಕನ್ನಡದಲ್ಲಿ ದೇವತೆ (Devathe), ಕಿನ್ನರಿ (Kinnari), ಕನ್ನಡತಿ (Kannadati) ಮುಂತಾದ ಸೀರಿಯಲ್ ಗಳಲ್ಲಿ ನಟಿಸಿದ್ದಾರೆ.

ಆದರೆ ಕನ್ನಡದ ಕನ್ನಡತಿ ಧಾರಾವಾಹಿ ನಟ ಕಿರಣ್ ರಾಜ್ ಅವರಿಗೆ ಬ್ರೇಕ್ ನೀಡಿತು. ಕಿರಣ್ ಮಾರ್ಚ್ 22 (March 22) , ಅಸತೋಮ ಸದ್ಗಮಯ (Asatoma Sadgamaya), ಜೀವ್ನಾನೇ ನಾಟ್ಕ ಸ್ವಾಮಿ (Jivanane Natka Swami) ಚಿತ್ರಗಳಲ್ಲಿ ನಾಯಕನಾಗಿ ನಟಿಸಿದ್ದಾರೆ. ಇನ್ನು ತೆಲುಗುವಿನಲ್ಲಿ ನುವ್ವೇ ನಾ ಪ್ರಾಣಂ (Nuvve Naa Pranam), ವಿಕ್ರಮ್ ಗೌಡ (Vikram Gowda) ಮುಂತಾದ ಚಿತ್ರಗಳಲ್ಲಿ ನಾಯಕನಾಗಿ ನಟಿಸಿದ್ದಾರೆ. ಕನ್ನಡತಿ ಧಾರಾವಾಹಿ ಮುಗಿದ ಮೇಲೆ ಮೇಲೆ ಕಿರಣ್ ರಾಜ್ ಅವರು ರಾನಿ (Raani)ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ.

Leave a Reply

Your email address will not be published. Required fields are marked *