ಭಾರತೀಯ ಸಂಸ್ಕೃತಿಯಲ್ಲಿ ಗಂಡ ಹೆಂಡತಿ ಸಂಬಂಧಕ್ಕೆ ಬಹು ಎತ್ತರದ ಸ್ಥಾನವನ್ನು ನೀಡಲಾಗಿದೆ. ಹುಟ್ಟಿನಿಂದ ಬಂದ ಬಂಧವಲ್ಲದೇ ಇದ್ದರೂ ಕೂಡ ಹುಟ್ಟಿನ ನಂತರ ಜೊತೆಗೂ ಸಂಬಂಧದಲ್ಲಿ ಕೊನೆಯವರೆಗೂ ಗಂಡು ಹೆಣ್ಣಿಗೆ ಆಸರೆಯಾಗಿರುತ್ತಾನೆ. ಆದರೆ ಸ್ವಾರ್ಥ ತುಂಬಿದ ಪ್ರಪಂಚದಲ್ಲಿ ಗಂಡ ಹೆಂಡತಿ ಸಂಬಂಧವು ಅರ್ಥವನ್ನು ಕಳೆದುಕೊಳ್ಳುತ್ತಿದೆ. ಇತ್ತೀಚೆಗಷ್ಟೇ ಗುಜರಾತ್‌ನ ಅಹಮದಾಬಾದ್ ಪೊಲೀಸರು ಮಹಿಳೆ ಮತ್ತು ಆಕೆಯ ಪ್ರಿಯಕರನನ್ನು ಬಂಧಿಸಿದ್ದರು.
ಐದು ಲಕ್ಷಕ್ಕೆ ಪತಿಯನ್ನು ಕೊ-ಲ್ಲುವುದಕ್ಕೆ ಪ್ರಿಯಕರನೊಂದಿಗೆ ಮಹಿಳೆ ಒಪ್ಪಂದ ಮಾಡಿಕೊಂಡಿದ್ದು, ಎಷ್ಟು ವಿಪರ್ಯಾಸ ಎನ್ನುವುದು ಈ ಘಟನೆಯ ಓದಿದರೆ ಗೊತ್ತಾಗುತ್ತದೆ.ಹೌದು, ಅಹಮದಾಬಾದ್‌ನ ಮಾಣೆಕ್ ಬಾಗ್ ಪ್ರದೇಶದಲ್ಲಿ ವಾಸಿಸುತ್ತಿರುವ ಪ್ರಮೋದ್ ಪಟೇಲ್ (43) ಕಿಂಜಲ್ ಪಟೇಲ್ (25) ಎಂಬ ಮಹಿಳೆಯನ್ನು ವಿವಾಹವಾಗಿದ್ದರು. ಈ ದಂಪತಿಗೆ ನಾಲ್ಕು ವರ್ಷದ ಮಗನಿದ್ದನು. ಪ್ರಮೋದ್ ಈಗಾಗಲೇ ಎರಡು ವಿವಾಹ ನೀಡಿದ್ದು, ಆ ಎರಡು ವಿವಾಹ ಕೂಡ ವಿಫಲವಾಗಿತ್ತು.
ಮೂರನೇ ಬಾರಿಗೆ ಕಿಂಜಲ್ ಅವರನ್ನು ವಿವಾಹವಾಗಿದ್ದರು. ಹಿಮ್ಮತ್ ನಗರ ಜಿಲ್ಲೆಯ ದಬಾಲ್ ಗ್ರಾಮಕ್ಕೆ ಕಿಂಜಾಲ್ ಅವರು ವೈಯಕ್ತಿಕ ಕೆಲಸಗಳ ಮೇಲೆ ಆಗಾಗ ಹೋಗುತ್ತಿದ್ದರು. ಅಲ್ಲಿ ಅಮರತ್ ಎಂಬ ವ್ಯಕ್ತಿಯನ್ನು ಭೇಟಿಯಾಗುತ್ತಿದ್ದಳು. ಕಾಲಕ್ರಮೇಣವಾಗಿ ಈ ಪರಿಚಯವು ಪ್ರೀತಿಗೆ ತಿರುಗಿತ್ತು. ಪತಿಗೆ ತಿಳಿಯದಂತೆ ಈ ಕಿಂಜಲ್ ಪ್ರಿಯಕರನನ್ನು ಭೇಟಿಯಾಗಿ ಮೋಜು ಮಸ್ತಿ ಮಾಡುತ್ತಿದ್ದಳು. ಪತಿ ಪ್ರಮೋದ್ ಪಟೇಲ್ ಅವರ ಕೆಲಸಕ್ಕೆ ಹೋದಾಗ ಕಿಂಜಾಲ್ ದಬಾಲ್ ಗೆ ಹೋಗುತ್ತಿದ್ದರು.
ಹೀಗಿರುವಾಗ ಕಿಂಜಲ್ ಹಾಗೂ ಅಮರತ್ ಅವರ ಸಂಬಂಧ ಎರಡೂವರೆ ವರ್ಷಗಳ ಕಾಲ ಮುಂದುವರೆದಿತ್ತು.ಹೀಗಿರುವಾಗ ಈ ಘಟನೆ ನಡೆಯುವ ಎಂಟು ತಿಂಗಳ ಹಿಂದೆಯೇ ಯೋಜನೆವೊಂದು ರೂಪಿಸಲಾಗಿತ್ತು. ಕಿಂಜಾಲ್ ತನ್ನ ಪತಿಯನ್ನು ಕೊ-ಲ್ಲಲು ಯೋಜನೆ ಮಾಡಿಕೊಂಡಿದ್ದಳು. ಈ ವಿಚಾರವನ್ನು ತನ್ನ ಪ್ರಿಯಕರ ಅಮರತ್ ಗೆ ಹೇಳಿದ್ದಳು, ಇಬ್ಬರಿಗೂ ಈ ರೀತಿ ಮಾಡುವುದು ಸರಿ ಎನಿಸಿತ್ತು.
ಅಮರತ್ ತನ್ನ ಸ್ನೇಹಿತ ರಾಜಸ್ಥಾನದ ಸುರೇಶ್‌ಗೆ ಈ ವಿಷಯ ತಿಳಿಸಿದ್ದನು.5 ಲಕ್ಷ ನೀಡುವುದಾಗಿ ತಿಳಿಸಿದ್ದು, ಅದಕ್ಕೆ ಸುರೇಶ್ ಒಪ್ಪಿದ್ದನು. ಈ ಅಮರತ್ ಸುರೇಶ್ ಗೆ ಪ್ರಮೋದ್ ಕೆಲಸ ಮಾಡುವ ನರ್ಸರಿ ತೋರಿಸಿದ್ದನು. ಸುರೇಶ ಇನ್ನಿಬ್ಬರಿಗೆ ಈ ಪ್ಲಾನ್ ಹೇಳಿದ್ದು, ಸುರೇಶ್ ಜೊತೆಗೆ ಕೈ ಜೋಡಿಸಲು ಮುಂದಾಗಿದ್ದರು. ಯಾರಿಗೂ ಅ-ನುಮಾನ ಬರದಂತೆ ಕೆಲಸ ಮಾಡಲು ಸರಿಯಾದ ಸಮಯಕ್ಕಾಗಿ ಕಾಯುತ್ತಿದ್ದರು. ಇತ್ತ ಕಿಂಜಲ್ ಪ್ರಮೋದ್ ನ ಚಲನವಲನಗಳನ್ನು ಆಗಾಗ ಅಮರತ್ ಗೆ ಹೇಳುತ್ತಿದ್ದಳು.
ಹೀಗಿರುವಾಗ ಸೆಪ್ಟೆಂಬರ್ 3 ರಂದು ಪ್ರಮೋದ್ ಪತ್ನಿ ಕಿಂಜಲ್ ಗೆ ಕರೆ ಮಾಡಿ ತಡವಾಗಿ ಮನೆಗೆ ಬರುವುದಾಗಿ ಹೇಳಿದ್ದನು.ಪತಿಯೂ ತಡವಾಗಿ ಬರುತ್ತಾನೆ ಎಂದು ಕಿಂಜಲ್ ಅವರು ಅಮರತ್‌ಗೆ ಹೇಳಿದ್ದಳು. ಅದೇ ರಾತ್ರಿ ಕಿಂಜಲ್ ತನ್ನ ಸಂಬಂಧಿಕರಿಗೆ ಕರೆ ಮಾಡಿ ತನ್ನ ಪತಿ ಮನೆಗೆ ಹಿಂತಿರುಗಲಿಲ್ಲ ಎಂದಿದ್ದಳು. ಇತ್ತ ಅಮರತ್ ಸುರೇಶ್‌ಗೆ ಪ್ರಮೋದ್ ತಡವಾಗಿ ಮನೆ ಸೇರುತ್ತಾನೆ ಎನ್ನುವ ಬಗ್ಗೆ ಅಪ್‌ಡೇಟ್ ನೀಡಿದ್ದನು. ಈ ವೇಳೆಯಲ್ಲಿ ಪ್ರಮೋದ್ ತನ್ನ ಇಬ್ಬರು ಸಹೋದ್ಯೋಗಿಗಳೊಂದಿಗೆ ತಾನು ಕೆಲಸ ಮಾಡುತ್ತಿದ್ದ ಕಾಪುವಿಗೆ ಹೋಗಿದ್ದನು.
ನರ್ಸರಿಯಿಂದ ಹೊರಬಂದು ಮನೆಗೆ ಹೋಗಿದ್ದ ಪ್ರಮೋದ್ ಮಾರ್ಗಮಧ್ಯೆ ಅಂದರೆ ಮೊಹಮ್ಮದ್‌ಪುರದಲ್ಲಿ ಕೊ-ಲೆ ಮಾಡಲಾಗಿತ್ತು. ಮರುದಿನ ಪೊಲೀಸರು ಅಪರಿಚಿತ ಮೃ-ತದೇಹ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದರು. ತನಿಖೆಯಲ್ಲಿ ಪ್ರಮೋದ್ ಎನ್ನುವುದು ಪೊಲೀಸರಿಗೆ ತಿಳಿದಿತ್ತು. ಆತನ ಪತ್ನಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗಿತ್ತು. ತಾನು ಕೊ-ಲೆ ಮಾಡಿರುವುದಾಗಿ ಕಿಂಜಲ್ ತಪ್ಪೊಪ್ಪಿಕೊಂಡಿದ್ದಳು. ಆಕೆಯ ಗೆಳೆಯ ಅಮರತ್ ನನ್ನು ಪೊಲೀಸರು ಬಂಧಿಸಿದ್ದರು. ಕೊ-ಲೆ ಮಾಡಿದ ಕೂಲಿ ಆರೋಪಿಗಳ ಪ-ತ್ತೆಗೆ ಪೊಲೀಸರು ಬಲೆ ಬೀಸಿದ್ದರು.