ಬಿಗ್ ಬಾಸ್ ಅಂದ ತಕ್ಷಣ ಮೊದಲಿಗೆ ನೆನಪಾಗುವುದೇ ಕಿಚ್ಚ ಸುದೀಪ್. ಸುಮಾರು 10 ವರ್ಷಗಳ ಕಾಲ ಬಿಗ್ ಬಾಸ್ ಕಾರ್ಯಕ್ರಮವನ್ನು ಯಶಸ್ವಿಯಾಗಿ ಮುನ್ನಡೆಸಿಕೊಂಡು ಹೋಗುತ್ತಿರುವ ಸಾರಥಿಯೇ ಕಿಚ್ಚ ಸುದೀಪ್. ಕಿಚ್ಚ ಸುದೀಪ್ ನನ್ನ ಬಿಟ್ಟರೆ ಮತ್ತೆ ಯಾವ ನಟನೂ ಕೂಡ ಬಿಗ್ ಬಾಸ್ ವೇದಿಕೆಗೆ ಇಷ್ಟೊಂದು ಸೂಟ್ ಆಗಲ್ಲ ಎಂಬುದು ಹಲವರಿಗೆ ಅನಿಸಿಬಿಟ್ಟಿದೆ.
ಸುದೀಪ್ ಅವರ ಅದ್ಭುತ ನಿರೂಪಣೆ ಸ್ಟೈಲಿಶ್ ನಟನೆ ಮತ್ತು ವಿಭಿನ್ನ ಉಡುಗೆಗಳು ವೀಕ್ಷಕರ ಮನಸ್ಸನ್ನು ಸೆಳೆದಿದೆ. ಬಿಗ್ ಬಾಸ್ ವೇದಿಕೆಯಿಂದ ವಾಹಿನಿಯವರಿಗೆ ತುಂಬಾ ಲಾಭ ಇದೆ ಯ. ದಿನಕ್ಕೆ ಲಕ್ಷಗಟ್ಟಲೆ ಆದಾಯವನ್ನು ಕಲರ್ಸ್ ಕನ್ನಡ ಚಾನೆಲ್ ಪಡೆಯುತ್ತೆ. ಅಷ್ಟೇ ಅಲ್ಲದೆ ಸುದೀಪ ಅವರಿಗೆ ಐದು ವರ್ಷಕ್ಕೆ ಈಗಾಗಲೇ 20 ಕೋಟಿ ರೂಪಾಯಿಗಳನ್ನು ಸಂಭಾವನೆಯ ರೂಪದಲ್ಲಿ ಕೊಡಲಾಗಿದೆ.
ಇನ್ನು ಸುದೀಪ ಅವರ ಕಾಸ್ಟುಮ್ ಹಾಗೂ ಬಟ್ಟೆಯ ವಿಚಾರಕ್ಕೆ ಬಂದರೆ ನೀವು ನಿಜಕ್ಕೂ ಬಾಯಿ ಮೇಲೆ ಬೆರಳು ಇರ್ತೀರಾ. ಸುದೀಪ ಅವರು ಧರಿಸುವ ಜಾಕೆಟ್ ನ ಬೆಲೆ ಬರೋಬ್ಬರಿ 97,259, ಸುದೀಪ ಅವರ ಜಾಕೆಟ್ ಗಳನ್ನು ಕಸ್ಟಮ್ ಆಗಿ ಟೇಲರ್ ಒಬ್ಬರನ್ನು ಇಟ್ಟುಕೊಂಡು ತಯಾರು ಮಾಡಲಾಗುತ್ತೆ.
ಸುದೀಪ್ ಅವರ ಧರಿಸುವ ಯಾವುದೇ ಬಟ್ಟೆಗಳು ಯಾವುದೇ ಕಂಪನಿ ಅಥವಾ ಬ್ರಾಂಡ್ ನದ್ದು ಅಲ್ಲ. ಸುದೀಪ ಅವರಿಗೆ ಯಾವ ರೀತಿ ಚೆನ್ನಾಗಿ ಕಾಣುತ್ತೋ ಅದೇ ರೀತಿ ಅವರಿಗೆ ಹೋಲಿದು ಕೊಡಲಾಗುತ್ತೆ. ಸುದೀಪ್ ಧರಿಸಿದ ಶೂ ನ ಬೆಲೆ 94,700 ರೂ. ಇಷ್ಟು ದುಬಾರಿಯ ಬಟ್ಟೆ ಕಿಚ್ಚ ಧರಿಸುತ್ತಾರೆ ಎಂದು ಕೇಳಿದ ಫ್ಯಾನ್ಸ್ ಒಂದು ಕ್ಷಣ ಧಂಗಾಗಿದ್ದಾರೆ.