Kichcha sudeep and darshan : ಸಿನಿಮಾರಂಗದಲ್ಲಿ ಸೆಲೆಬ್ರಿಟಿಗಳ ನಡುವೆ ಮನಸ್ತಾಪಗಳು ಬರುವುದು ಸರ್ವೇ ಸಾಮಾನ್ಯವಾದ ವಿಚಾರ.. ಒಂದು ಕಾಲದಲ್ಲಿ ದರ್ಶನ್ ಹಾಗೂ ಸುದೀಪ್ ನವರ ಸ್ನೇಹ ಕಂಡು ಎಲ್ಲರೂ ಖುಷಿ ಪಡುತ್ತಿದ್ದರು. ಅಷ್ಟು ಮಾತ್ರವಲ್ಲದೇ, ಒಬ್ಬರಿಗೊಬ್ಬರು ಬೆಂಬಲವಾಗಿ ನಿಲ್ಲುತ್ತಿದ್ದರು. ಏನಾದರೂ ಸಮಾರಂಭವಿದ್ದರೆ, ಒಂದೇ ವೇದಿಕೆಯಲ್ಲಿ ಕುಣಿಯುತ್ತಿದ್ದರು.
ಇದಕ್ಕೆ ಸಾಕ್ಷಿ ಎನ್ನುವಂತೆ ಕುಚಿಕು ಕುಚಿಕು ಎನ್ನುವ ಹಾಡಿಗೆ ಅದೆಷ್ಟೋ ವರ್ಷಗಳ ಹಿಂದೆ ವೇದಿಕೆಯೊಂದರಲ್ಲಿ ಡ್ಯಾನ್ಸ್ ಮಾಡಿದ್ದರು ವೈಮನಸ್ಸು ಎಂಬ ಪೆಡಂಭೂತ ಹೆಗಲೇರಿ ಕುಳಿತಿತೋ, ಅವತ್ತಿನಿಂದಲೇ ಇಬ್ಬರೂ ದೂರವಾಗಿಯೇ ಬಿಟ್ಟರು. ಸ್ನೇಹದಲ್ಲಿ ಬಿರುಕು ಮೂಡಿ ಐದು ವರ್ಷಗಳೇ ಆಗಿವೆ. ಐದು ವರ್ಷಗಳ ಹಿಂದೆ ದರ್ಶನ್ ” ಇನ್ಮುಂದೆ ನಾನು ಸುದೀಪ್ ಇಬ್ಬರೂ ಸ್ನೇಹಿತರಲ್ಲ.
ಒಂದೇ ಚಿತ್ರರಂಗದಲ್ಲಿ ಕೆಲಸ ಮಾಡುವ ಕಲಾವಿದರು ಅಷ್ಟೇ” ಎಂದು ಟ್ವೀಟ್ ಮಾಡಿದ್ದರು. ಅಂದಿನಿಂದ ಮುರಿದು ಬಿದ್ದ ಸ್ನೇಹ ಈಗ ಮತ್ತೆ ಸರಿಯಾಗುವ ಎಲ್ಲಾ ಸೂಚನೆಗಳು ಸಿಕ್ಕಿವೆ. ದರ್ಶನ್ ಮೇಲೆ ಚಪ್ಪಲಿ ಎಸೆದ ಪ್ರಕರಣದ ಬಳಿಕ ಸುದೀಪ್ ಪತ್ರ ಬರೆದು ಬೆಂಬಲ ನೀಡಿದ್ದರು. ಇನ್ನೊಂದು ಕಡೆ ದರ್ಶನ್ ಅದಕ್ಕೆ ಪ್ರತಿಕ್ರಿಯೆ ನೀಡಿದ್ದರು. ದರ್ಶನ್ ಮರು ಟ್ವೀಟ್ ಮಾಡಿದ ದಿನದಿಂದ ಇಬ್ಬರ ಅಭಿಮಾನಿಗಳೂ ಇಬ್ಬರನ್ನು ಒಂದೇ ವೇದಿಕೆ ಮೇಲೆ ನೋಡುವುದಕ್ಕೆ ಕಾಯುತ್ತಿದ್ದಾರೆ.
ಆದರೆ ಸದ್ಯಕ್ಕೆ ವೇಳೆ ಕಿಚ್ಚ, ರವಿಚಂದ್ರನ್, ದರ್ಶನ್ ಮೂವರ ಫೋಟೊ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.ಕ್ರಾಂತಿ’ ಸಿನಿಮಾ ಟ್ರೈಲರ್ ಬಿಡುಗಡೆಯಾಗುತ್ತಿರುವ ಬೆನ್ನಲ್ಲೇ ಸೋಶಿಯಲ್ ಮೀಡಿಯಾದಲ್ಲಿ ಸೆಲ್ಫಿ ಫೋಟೊವೊಂದು ಸಖತ್ ಸದ್ದು ಮಾಡುತ್ತಿದೆ. ಈ ಫೋಟೊದಲ್ಲಿ ಕಿಚ್ಚ ಸುದೀಪ್, ಕೇಜಿಸ್ಟಾರ್ ರವಿಚಂದ್ರನ್ ಹಾಗೂ ದರ್ಶನ್ ಅವರೊಂದಿಗೆ ಸೆಲ್ಫಿ ತೆಗೆದುಕೊಳ್ಳುತ್ತಿದ್ದಾರೆ.
Edit or Real!!??#dboss𓃵 #DBoss𓃰 #DBoss #kichhasudeep #Kichha #Kranti #KrantiRevolutionFromJan26 #KrantiTraileron7thJan #dbosskichha @dasadarshan @KicchaSudeep pic.twitter.com/qcOh2PfTPC
— Vikki (@Vikas_1319) January 5, 2023
ಈ ಫೋಟೋ ನೋಡಿದ ದರ್ಶನ್ ಫ್ಯಾನ್ಸ್ ಇಬ್ಬರೂ ಮತ್ತೆ ಒಂದಾಗೇ ಬಿಟ್ಟರು ಎಂದು ಖುಷಿ ಪಡುತ್ತಿದ್ದಾರೆ. ಅಭಿಮಾನಿಗಳು ಮಾತ್ರವಲ್ಲ, ಕ್ರೇಜಿಸ್ಟಾರ್ ರವಿಚಂದ್ರನ್ ಮನೆಯಲ್ಲಿ ಕುಚಿಕುಗಳು ಒಂದಾದ್ರು ಅಂತಾನೂ ನಂಬಿದ್ದಾರೆ. ಮತ್ತೊದೆಡೆ ಈ ಫೋಟೋ ರಿಯಲ್ ಹಾಗೂ ರೀಲ್ಸ್ ಎನ್ನುವ ಪ್ರಶ್ನೆಯೊಂದು ಹುಟ್ಟಿಕೊಂಡಿದೆ. ಆದರೆ ರವಿಚಂದ್ರನ್ ಅವರ ಜೊತೆಗೆ ಡಿ ಬಾಸ್ ಹಾಗೂ ಕಿಚ್ಚ ಸುದೀಪ್ ಕಾಣಿಸಿಕೊಂಡಿರುವ ಈ ಫೋಟೋ ರಿಯಲ್ ಅಲ್ಲ. ಅಭಿಮಾನಿಗಳು ಎಡಿಟ್ ಮಾಡಿದ ಫೋಟೊವಾಗಿದೆ.
ಈ ವಿಚಾರವು ದರ್ಶನ್ ಅವರ ಅಭಿಮಾನಿಗಳಿಗೆ ಕೊಂಚ ಬೇಸರವನ್ನು ಉಂಟು ಮಾಡಿದೆ. ಅಷ್ಟೇ ಅಲ್ಲದೇ, ಕ್ರಾಂತಿ’ ಟ್ರೈಲರ್ ಲಾಂಚ್‌ಗೆ ಕಿಚ್ಚ ಸುದೀಪ್ ಬರಬೇಕು ಅನ್ನೋದು ದರ್ಶನ್ ಅಭಿಮಾನಿಗಳ ಆಸೆಯಾಗಿತ್ತು. ಕಳೆದ ಕೆಲವು ದಿನಗಳಿಂದ ಡಿ ಬಾಸ್ ಫ್ಯಾನ್ಸ್ ಸೋಶಿಯಲ್ ಮೀಡಿಯಾದಲ್ಲಿ ಈ ಬಗ್ಗೆ ಅಭಿಮಾನಿಗಳು ಮನವಿ ಮಾಡಿಕೊಂಡಿದ್ದರು. ಇಂದು ಜನವರಿ 07 ನಡೆಯಲಿರುವ ‘ಕ್ರಾಂತಿ’ ಟ್ರೈಲರ್ ಬಿಡುಗಡೆ ಸಮಾರಂಭದಲ್ಲಿ ದರ್ಶನ್ ಜೊತೆ ವೇದಿಕೆ ಮೇಲೆ ಯಾರೆಲ್ಲಾ ಇರುತ್ತಾರೆ ಎನ್ನುವ ಕಾತುರ ಅಭಿಮಾನಿ ಗಳಲ್ಲಿದೆ. ಆದಷ್ಟು ಬೇಗ ಡಿ ಬಾಸ್ ಹಾಗೂ ಕಿಚ್ಚ ಸುದೀಪ್ ಒಂದಾಗಲಿದೆ ಎಂದು ಬಯಸುತ್ತಿದ್ದಾರೆ.