ಬಿಗ್ ಬಾಸ್ ಫಿನಾಲೆ ಮುಗಿದ ಬಳಿಕ ರಕ್ಷಕ್ ಬುಲೆಟ್‌ ಗೆ ಬುದ್ಧಿ ಮಾತು ಹೇಳಿ ಉಡುಗೊರೆ ಕೊಟ್ಟ ಕಿಚ್ಚ ಸುದೀಪ್! ಗಿಫ್ಟ್ ಏನು ಗೊತ್ತಾ??..

ಬಿಗ್ ಬಾಸ್ ಮನೆಯಿಂದ ಹೊರ ಬಂದ ಬಳಿಕ ಖಾಸಗಿ ವಾಹಿನಿಯ ಸಂದರ್ಶನಗಳಲ್ಲಿ ತಮ್ಮ ಅನುಭವಗಳನ್ನು ಹಂಚಿಕೊಳ್ಳುವುದು ಸಹಜ. ಈ ಬಾರಿಯ ಬಿಗ್ ಬಾಸ್ ಕನ್ನಡ ಸೀಸನ್‌ 10 (Bigg Boss Sisan 10) ಶೋನಲ್ಲಿ ಭಾಗವಹಿಸಿದ್ದ ರಕ್ಷಕ್ ಬುಲೆಟ್ (Rakshak Bulet) ಅವರು ನಾಲಿಗೆ ಲಗಾಮು ಇಲ್ಲದ್ದಂತೆ ಮಾತನಾಡಿದ್ದರು.

ಹೀಗಾಗಿ ರಕ್ಷಕ್ ಅವರಿಗೆ ಗ್ರ್ಯಾಂಡ್ ಫಿನಾಲೆ ವೇದಿಕೆಯಲ್ಲಿ ಕಿಚ್ಚ ಸುದೀಪ್ ಅವರು ಟಾಂಗ್ ಕೊಟ್ಟಂತೆ ಮಾತನಾಡಿದ್ದರು. ಬಿಗ್ ಬಾಸ್ ಸೀಸನ್ 10 ರಲ್ಲಿ ಬುಲೆಟ್ ಪ್ರಕಾಶ್ ಅವರ ಪುತ್ರ ರಕ್ಷಕ್ ಅವರು ಕೆಲವು ವಾರಗಳ ಕಾಲ ಇದ್ದರು. ಮನೆಯಲ್ಲಿ ಇದ್ದ ಸಮಯದಲ್ಲಿ ತಮಗೆ ಏನು ಅನಿಸುತ್ತಿದ್ದೇಯೋ ಹಾಗೆ ಮಾತನಾಡುತ್ತಿದ್ದರು.

ಆದರೆ ಬಿಗ್ ಬಾಸ್ ಮನೆಯಿಂದ ಹೊರ ಬಂದ ಬಳಿಕ ರಕ್ಷಕ್ ಅವರು ಸಂದರ್ಶನಗಳಲ್ಲಿ ತಮ್ಮ ಅನುಭವವನ್ನು ಹಂಚಿಕೊಂಡಿದ್ದರು. ಅಷ್ಟೇ ಅಲ್ಲದೇ ಇದೇ ವೇಳೆಯಲ್ಲಿ ಸುದೀಪ್ ಬಗ್ಗೆ ಮಾತನಾಡಿ ಟ್ರೋಲ್ ಕೂಡ ಆಗಿದ್ದರು.ಬಿಗ್ ಬಾಸ್ ಸೀಸನ್ 10 ರ ಗ್ರ್ಯಾಂಡ್ ಫಿನಾಲೆ ವೇದಿಕೆಯಲ್ಲಿ ಏನು ಆಗಲೇ ಇಲ್ಲ ಎನ್ನುವಂತೆ ಕಿಚ್ಚ ಸುದೀಪ್ (Kiccha Sudeep) ಅವರ ಮುಂದೆ ಕುಳಿತುಕೊಂಡಿದ್ದರು.

ಮೈಕ್ ಸಿಕ್ಕೊಡನೆ ಕಿಚ್ಚ ಸುದೀಪ್ ಅವರ ಬಳಿ ಕ್ಷಮೆ ಕೇಳಿದರು. ಈ ಶೋ ಮುಗಿದ ಬಳಿಕ ಕಿಚ್ಚ ಸುದೀಪ್ ಅವರು ರಕ್ಷಕ್ ಅವರಿಗೆ ಕೆಲವು ಸಲಹೆಗಳನ್ನು ನೀಡಿದ್ದಾರೆ.ಸುದೀಪ್ ಬಿಗ್ ಬಾಸ್ ಫಿನಾಲೆ ಆದ್ಮೇಲೆ ರಕ್ಷಕ್ ಬುಲೆಟ್‌ ಮುಂದೆ ತಮ್ಮ ಸ್ನೇಹದ ಕುರಿತು ಹಂಚಿಕೊಳ್ಳುತ್ತಾ, ನಿಮ್ಮ ತಂದೆ ಮತ್ತು ನಾನು ಒಳ್ಳೆ ಸ್ನೇಹಿತರು ಅಂತಲೇ ಹೇಳಿಕೊಂಡಿದ್ದಾರೆ.

ಇಂಡಸ್ಟ್ರಿಗೆ ಕಾಲಿಟ್ಟಿರುವ ರಕ್ಷಕ್ ಬುಲೆಟ್‌, ಸಿನಿಮಾರಂಗದಲ್ಲಿ ಹೇಗಿರಬೇಕು ಅನ್ನೋದನ್ನು ಕಲಿಯಬೇಕು ಎಂದಿದ್ದಾರೆ. ಕಿಚ್ಚ ಸುದೀಪ್ ಅವರ ಮಾತುಗಳನ್ನು ಕೇಳಿಸಿಕೊಂಡ ರಕ್ಷಕ್ ಬುಲೆಟ್, ಈ ಬಗ್ಗೆ ತಮ್ಮ ಅನುಭವವನ್ನ ತಮ್ಮ ಸ್ಟೇಟಸ್‌ ನಲ್ಲಿ ಹಾಕಿಕೊಂಡಿದ್ದಾರೆ. ಕೊನೆಗೆ ಸುದೀಪ್ ಬೆಲೆ ಕಟ್ಟಲಾಗದ ಒಂದು ಗಿಫ್ಟ್ ಕೊಟ್ಟಿರುವ ವಿಚಾರವನ್ನು ರಿವೀಲ್ ಮಾಡಿದ್ದಾರೆ.

ರಕ್ಷಕ್ ಅವರಿಗೆ ಒಂದು ಸ್ಪೆಷಲ್ ಬೆಲೆ ಬಾಳುವ ಬ್ಲ್ಯೂಬೆರಿ ಕನ್ನಡಕವನ್ನು ಗಿಫ್ಟ್ ಆಗಿಯೇ ಕೊಟ್ಟಿದ್ದಾರೆ ಎನ್ನಲಾಗಿದೆ. ತಂದೆಯ ಸ್ಥಾನದಲ್ಲಿ ನಿಂತು ಮಗನನ್ನು ತಿದ್ದುವಂತೆ ತಿದ್ದಿ ಉಡುಗೊರೆಯನ್ನು ನೀಡಿದ್ದು ಕಿಚ್ಚನ ಮನಸ್ಸು ಎಂತಹದ್ದು ಎನ್ನುವುದನ್ನು ಸಾರಿ ಸಾರಿ ಹೇಳುತ್ತದೆ.

Leave a Reply

Your email address will not be published. Required fields are marked *