ಗಂಡನನ್ನು ಬಿಟ್ಟು ಪ್ರಿಯಕರನ ಜೊತೆ ಕಳ್ಳಾಟ ಆಡುತ್ತಿದ್ದ ಮಹಿಳೆ! ನಂತರ ಪ್ರಿಯಕರ ಏನು ಮಾಡಿದ ಗೊತ್ತಾ ? ಹೀಗೂ ಆಗುತ್ತೇ ನೋಡಿ !!!

Kerala marriage affair news : ಭಿನ್ನಾಭಿಪ್ರಾಯ, ಮನಸ್ತಾಪ, ಜಗಳ ಇದು ಎಲ್ಲಾ ಸಂಬಂಧಗಳಲ್ಲೂ ಸರ್ವೇ ಸಾಮಾನ್ಯ. ಆದರೆ ಎಲ್ಲವನ್ನು ಸರಿದೂಗಿಸಿ ಕೊಂಡು ಹೋಗುವ ಜಾಣ್ಮೆ ಸತಿ ಪತಿ ಇಬ್ಬರಲ್ಲಿ ಇರಲೇ ಬೇಕು. ಒಬ್ಬರ ಮನಸ್ಥಿತಿಗಳು, ಹೊಂದಾಣಿಕೆ ಸ್ವಭಾವ ಬೇರೆಯಾದರೆ ಸಂಸಾರ ಎಂಬ ಬಂಡಿ ವಿರುದ್ಧವಾಗಿ ಚಲಿಸುವುದರಲ್ಲಿ ಯಾವುದೇ ಸಂದೇಹವಿಲ್ಲ. ಸತಿ ಪತಿ ಇಬ್ಬರೂ ಹೊಂದಿಕೊಂಡು ಬದುಕುವ ಕಾಲವೊಂದಿತ್ತು.

ಪತಿಯೇ ಪರದೈವ ಎನ್ನುವ ಪತ್ನಿ ಸಿಕ್ಕರೆ ಅದಕ್ಕಿಂತ ಪುಣ್ಯ ಮತ್ತೊಂದಿಲ್ಲ. ಆದರೆ ಇದೀಗ ಮದುವೆ ಸಂಬಂಧಗಳು ಮುರಿದು ಬೀಳುತ್ತಿದೆ. ಹೌದು ಮದುವೆಗಳು ಅರ್ಥವನ್ನು ಕಳೆದುಕೊಂಡು ಬಿಟ್ಟಿದೆ. ಅದರ ಜೊತೆಗೆ ವೈವಾಹಿಕ ಬದುಕಿನಲ್ಲಿ ಭಿನ್ನಾಭಿಪ್ರಾಯಗಳು, ಬಿರುಕು, ಮೂರನೇ ವ್ಯಕ್ತಿಯ ಪ್ರವೇಶ ಸಂಸಾರದಲ್ಲಿ ಸಾಮಾನ್ಯವಾಗಿ ಬಿಟ್ಟಿದೆ. ಸಂಬಂಧದಲ್ಲಿ ಸ್ವಲ್ಪ ಮಟ್ಟಿಗಿನ ಬಿರುಕು ಕಂಡರೂ ವಿಚ್ಛೇಧನದ ಮೊರೆ ಹೋಗುತ್ತಿರುವವರ ಸಂಖ್ಯೆಯೇ ಹೆಚ್ಚು.

ಮದುವೆ ಆಗಿ ಕೈ ಹಿಡಿದ ಗಂಡ ಅಥವಾ ಹೆಂಡತಿ ಪರರ ಸಂಗ ಮಾಡಿ ಮೋಸ ಮಾಡುತ್ತಿರುವ ಪ್ರಕರಣಗಳು ಹೆಚ್ಚಾಗುತ್ತಲೇ ಇದೆ. ಆದರೆ ಇಲ್ಲೊಬ್ಬ ವ್ಯಕ್ತಿಯೂ ಹಾಡು ಹಗಲಲ್ಲಿಯೇ ಕೊ-ಲೆ ಮಾಡಿ ತಪ್ಪಿಸಿಕೊಳ್ಳದೇನೇ ಅಲ್ಲೇ ಇದ್ದನು. ಈ ಘಟನೆಯೊಂದು ಕೇರಳದ ತಿರುವನಂತಪುರಂ ವಜೈಲದಲ್ಲಿ ನಡೆದಿದೆ. ಅಷ್ಟಕ್ಕೂ ಆತನು ಮಹಿಳೆಯನ್ನು ಹಾಡಹಗಲೇ ಆಕೆಯ ಕಥೆ ಮುಗಿಸುವುದರ ಹಿಂದಿನ ಕಾರಣ ತಿಳಿದರೆ ಅಚ್ಚರಿಯಾಗುತ್ತದೆ.

ಕೊ-ಲೆಯಾದವಳ ಹೆಸರು ಸಿಂಧು, ಆಕೆಗೆ ಸರಿಸುಮಾರು 46 ವರ್ಷ ವಯಸ್ಸು. ಮದುವೆಯಾಗಿ ಗಂಡನಿಂದ ದೂರಯಿದ್ದು, ಮಗಳ ಜೊತೆಗೆ ಜೀವನ ನಡೆಸುತ್ತಿದ್ದಾಳೆ. ಪತಿಯಿಂದ ದೂರ ಇದ್ದ ಆಕೆಯನ್ನು ಪ್ರಿಯಕರನೇ ಕೊ- ಲೆ ಮಾಡಿದ್ದು, ಆದರೆ ಇದೀಗ ಪೊಲೀಸರ ಅತಿಥಿಯಾಗಿದ್ದಾನೆ. ಸಿಂಧು ಪ್ರಿಯಕರ ರಾಜೇಶ್ ಕಿಲಿಮನೂಲಿನಲ್ಲಿ ಜ್ಯೂಸ್ ಅಂಗಡಿ ನಡೆಸುತ್ತಿದ್ದನು.

ಆತನಿಗೆ ನಂದಿಯೋಡು ನಿವಾಸಿ ಸಿಂಧು ಜೊತೆಗೆ ಹನ್ನೆರಡು ವರ್ಷದಿಂದ ಸಂಬಂಧ ಹೊಂದಿದ್ದನು. ಈ ಸಂಬಂಧವೇ ಆತನನ್ನು ಬೇಡದ ಕೃತ್ಯಕ್ಕೆ ತೊಡಗಿಸಿಕೊಳ್ಳಲು ದಾರಿ ಮಾಡಿಕೊಟ್ಟಿದೆ. ಅಂದಹಾಗೆ, ಸಿಂಧು ಹಾಗೂ ರಾಜೇಶ್ ಸಾಕಷ್ಟು ವರ್ಷಗಳಿಂದ ಜೊತೆಯಾಗಿದ್ದರು. ಆದರೆ ಕಳೆದ ಕೆಲವು ತಿಂಗಳ ಹಿಂದೆ ಇವರಿಬ್ಬರೂ ಬೇರೆ ಬೇರೆಯಾಗಿದ್ದರು. ಸಿಂಧು ಬೇರೆಯಾಗುತ್ತಾಳೆ ಎಂದು ತಿಳಿದ ಕೂಡಲೇ ರಾಜೇಶ್ ಆಕೆಯ ಮನವೊಲಿಸಲು ಪ್ರಯತ್ನ ಪಟ್ಟಿದ್ದಾನೆ.

ಆದರೆ ಮಾತ್ರ ರಾಜೇಶ್ ಮಾತಿಗೆ ಒಪ್ಪದೇ ತನ್ನ ನಿರ್ಧಾರವನ್ನು ದೃಢ ಪಡಿಸಿದ್ದಳು. ಇದರಿಂದ ಕೋಪಗೊಂಡ ರಾಜೇಶ್ ಆಕೆಯ ಕಥೆ ಮುಗಿಸಿದ್ದಾನೆ. ಈ ವಿಚಾರವನ್ನು ಪರೂರ್ಕಡ ಸ್ಟೇಷನ್ ಅಧಿಕಾರಿ ಸಾಯಿನಾಥ್ ಜಿ ರಾಜೇಶ್ ಮಾಹಿತಿ ನೀಡಿದ್ದಾರೆ. ಹೌದು ರಾಜೇಶ್ ತನ್ನನ್ನು ಬಸ್ಸಿನಲ್ಲಿ ಹಿಂಬಾಲಿಸುವುದಾಗಿ ಬೆಳಗ್ಗೆ ತನ್ನ ಸಹೋದರಿಗೆ ಕರೆ ಮಾಡಿ ತಿಳಿಸಿದ್ದಳು.

ಆದರೆ ಹಾಡಹಗಲೇ ಮಚ್ಚಿನಿಂದ ತನ್ನ ಪ್ರೇಯಸಿ ಸಿಂಧುವಿನ ಕೊ-ಲೆ ಮಾಡಿದ್ದಾನೆ ಎಂದು ಪ್ರತ್ಯಕ್ಷ ದರ್ಶಿ ಹೇಳಿದ್ದಾರೆ. ತನಗೆ ಇನ್ನು ಸಿಂಧು ಸಿಗುವುದಿಲ್ಲ ಎಂದು ತಿಳಿದು ಈ ರೀತಿಯ ಕೃತ್ಯ ಎಸಗಿದ್ದಾನೆ. ಆದರೆ ಇದೀಗ ರಾಜೇಶ್ ಪೊಲೀಸರ ಅತಿಥಿಯಾಗಿರುವುದು ನಿಜಕ್ಕೂ ವಿಪರ್ಯಾಸ.

Leave a Reply

Your email address will not be published. Required fields are marked *